ನಾಗರಿಕ ಸೇವೆ ಪರೀಕ್ಷೆ ಎದುರಿಸಲು ಸಿದ್ಧರಾಗಿ


Team Udayavani, Mar 27, 2019, 1:05 PM IST

27-March-10
ನಾಗರಿಕ ಸೇವೆಗಳ ಪರೀಕ್ಷೆಗಳನ್ನು ಬರೆಯುವುದು ಎಂದರೆ ಕಬ್ಬಿಣದ ಕಡಲೆ ಎಂಬ ತಿಳುವಳಿಕೆ ಎಲ್ಲರಲ್ಲೂ ಇದೆ. ಆದರೆ ಕಷ್ಟ ಪಟ್ಟು ಓದಿದರೆ ಪರೀಕ್ಷೆ ಎದುರಿಸುವುದು ದೊಡ್ಡ ವಿಚಾರವಲ್ಲ ಎಂಬುದನ್ನು ಪರೀಕ್ಷೆಯಲ್ಲಿ ಉತ್ತೀರ್ಣರಾದ ಅನೇಕ ಮಂದಿ ಹೇಳುತ್ತಾರೆ.
ಕೇಂದ್ರ ಲೋಕ ಸೇವಾ ಆಯೋಗದ ನಾಗರಿಕ ಸೇವೆಗಳ ಪರೀಕ್ಷೆ (ಯುಪಿಎಸ್‌ಸಿ) ಪರೀಕ್ಷೆ ಎದುರಿಸಲು ಆನ್‌ಲೈನ್‌ನಲ್ಲಿ ಅರ್ಜಿ ಆಹ್ವಾನಿಸಲಾಗುತ್ತದೆ. ಮೊದಲ ಬಾರಿಗೆ ಪೂರ್ವ ಭಾವಿ ಪರೀಕ್ಷೆ ಇರುತ್ತದೆ. ತಲಾ 200 ಅಂಕಗಳ ಎರಡು ಸಾಮಾನ್ಯ ಅಧ್ಯಯನ ಪ್ರಶ್ನೆ ಪತ್ರಿಕೆಗಳು ಇರುತ್ತದೆ. ಇವು ಬಹು ಆಯ್ಕೆ ವಸ್ತು ನಿಷ್ಠತೆಯ ಪ್ರಶ್ನೆಗಳು. ಸರಿಯಾದ ಉತ್ತರವನ್ನು ಪ್ರತ್ಯೇಕ ಹಾಳೆಯೊಂದರಲ್ಲಿ ಕೇವಲ ಗುರುತಿಸಬೇಕಾಗುತ್ತದೆ. ಇದು ಅರ್ಹತೆಯ ಪರೀಕ್ಷೆಯಾಗಿರುತ್ತದೆ. ಇಲ್ಲಿನ ಅಂಕಗಳನ್ನು ಅಂತಿಮ ರ್‍ಯಾಂಕ್‌ ನಿರ್ಧರಿಸಲು ಪರಿಗಣಿಸುವುದಿಲ್ಲ. ಬಳಿಕ ಮುಖ್ಯ ಪರೀಕ್ಷೆ ಇರುತ್ತದೆ. ಇದರಲ್ಲಿ ಐಚ್ಛಿಕ ವಿಷಯ ಹಾಗೂ ಸಾಮಾನ್ಯ ಅಧ್ಯಯನಕ್ಕೆ ಸಂಬಂಧಿಸಿದ ಪ್ರಶ್ನೆಗಳಿರುತ್ತವೆ. ಕೊನೆಯದಾಗಿ ಸಂದರ್ಶನ ಇರುತ್ತದೆ.
ಐಎಎಸ್‌, ಐಪಿಎಸ್‌ ಪರೀಕ್ಷೆಗಳ ಬಗ್ಗೆ ಎಲ್ಲರಿಗೂ ತಿಳಿದಿದ್ದು, ಐಇಎಸ್‌ ಹಾಗೂ ಐಎಸ್‌ಎಸ್‌ ಪರೀಕ್ಷೆಗಳ ಬಗ್ಗೆ ಹೆಚ್ಚು ಜನರಿಗೆ ಮಾಹಿತಿ ಇಲ್ಲ. ಇಂಡಿಯನ್‌ ಎಕಾನಾಮಿಕ್‌ ಸರ್ವಿಸ್‌ (ಐಇಎಸ್‌) ಪರೀಕ್ಷೆ ಬರೆದು ಉತ್ತೀರ್ಣರಾದಲ್ಲಿ ಆರ್ಥಿಕ ವಿಶ್ಲೇಷಣೆಗಳನ್ನು ನೀಡುವ ಕೆಲಸವನ್ನು ಮಾಡಲಾಗುತ್ತದೆ. ಯಾವುದೇ ಸರಕಾರಕ್ಕೆ ಆರ್ಥಿಕ ವಿಚಾರಗಳಿಗೆ ಸಂಬಂಧಿಸಿದ ಸಲಹೆ ಸೂಚನೆಗಳನ್ನು ನೀಡುವ ಹಾಗೂ ಆಡಳಿತವನ್ನು ಬಲಿಷ್ಠಗೊಳಿಸಲು ಬೇಕಾದ ಸೂಚನೆಗಳನ್ನು ನೀಡುವ ಜವಾಬ್ದಾರಿ ಇವರಿಗೆ ಇರುತ್ತದೆ. ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಐಇಎಸ್‌ ಹಾಗೂ ಐಎಸ್‌ಎಸ್‌ (ಇಂಡಿಯನ್‌ ಸ್ಟಟಿಕಲ್‌ ಸರ್ವಿಸ್‌) ಪರೀಕ್ಷೆಗಳನ್ನು ಆಯೋಜಿಸುತ್ತದೆ. ಮೊದಲು ಲಿಖಿತ ಪರೀಕ್ಷೆ ಬಳಿಕ ಸಂದರ್ಶನ ಇರುತ್ತದೆ. ಎರಡರಲ್ಲೂ ಉತ್ತೀರ್ಣರಾದವರು ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ.
ಹೆಚ್ಚಾಗಿ ಒಂದು ಸಲ ಪರೀಕ್ಷೆ ಬರೆದು ಉತ್ತೀರ್ಣರಾಗಿಲ್ಲ ಎಂದು ಕೈ ಚೆಲ್ಲುವವರು ಅನೇಕರಿರುತ್ತಾರೆ. ಆದರೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ನಿರಂತರ ಬರೆಯುತ್ತಿದ್ದರೆ ಮಾತ್ರ ನಮ್ಮ ಅನುಭವ ಹೆಚ್ಚಾಗುವುದು. ಜತೆಗೆ ಪರೀಕ್ಷೆ ಎದುರಿಸುವ ಕಲೆ ತಿಳಿಯುವುದು. ಹೀಗಾಗಿ ಕೇಂದ್ರ ಲೋಕ ಸೇವಾ ಆಯೋಗ ನಡೆಸುವ ಪರೀಕ್ಷೆಗಳನ್ನು ನಿರಂತರ ಎದುರಿಸುತ್ತಿದ್ದರೆ ಮಾತ್ರ ಉತ್ತಮ ಅಂಕ ಗಳಿಕೆ ಸಾಧ್ಯವಾಗುತ್ತದೆ.
ನಿರ್ದಿಷ್ಟ ಗುರಿ ಇರಲಿ
ಸತತ ಪ್ರಯತ್ನ, ನಿಖರತೆ, ನಿರ್ದಿಷ್ಟ ಗುರಿ ಇದ್ದರೆ ಇಂತಹ ಪರೀಕ್ಷೆಗಳನ್ನು ಎದುರಿಸಬಹುದು. ಯುಪಿಎಸ್‌ಸಿ, ಐಎಸ್‌ಎಸ್‌, ಐಇಎಸ್‌ ಪರೀಕ್ಷೆಗಳನ್ನು ಎದುರಿಸಲು ಕೋಚಿಂಗ್‌ ಗೆ ಹೋಗಬೇಕು ಎಂದೆನಿಲ್ಲ. ಕೋಚಿಂಗ್‌ನಲ್ಲಿ ಟಿಪ್ಸ್‌ ಗಳು ಮಾತ್ರ ಸಿಗುತ್ತವೆ. ಪರೀಕ್ಷೆಯಲ್ಲಿ ಉತ್ತೀರ್ಣರಾಗಬೇಕಾದವರು ಕಷ್ಟ ಪಟ್ಟು ಪರೀಕ್ಷೆ ಎದುರಿಸಬೇಕು.
– ವಿಕ್ರಮ್‌ ರೈ, ಸ್ಪರ್ಧಾತ್ಮಕ
ಪರೀಕ್ಷೆ ತರಬೇತುದಾರ 
ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

ಸಿರಿಯಾದ ಮೇಲೆ ಇಸ್ರೇಲ್ ವೈಮಾನಿಕ ದಾಳಿ… 5 ಹಿಜ್ಬುಲ್ ಸದಸ್ಯರು ಸೇರಿ 38 ಮಂದಿ ಹತ

20-

Crime: ಗುದದ್ವಾರಕ್ಕೆ ಗಾಳಿ: ಸ್ನೇಹಿತನ ದುರ್ಮರಣ: ಕೃತ್ಯವೆಸಗಿದಾತನ ಬಂಧನ

Bidar; The man jumps into the water tank

Bidar; ಪತ್ನಿಯ ಅನೈತಿಕ ಸಂಬಂಧಕ್ಕೆ ಮನನೊಂದು ನೀರಿನ ಟ್ಯಾಂಕ್ ಗೆ ಬಿದ್ದು ಪತಿ ಆತ್ಮಹತ್ಯೆ

19-gobi

Gobi Manchurian ಬ್ಯಾನ್‌ ಎಫೆಕ್ಟ್: ಚಾಟ್ಸ್‌ ಮಾರಾಟ ಕುಸಿತ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

ದಕ್ಷ ಬೋಧಕ ವರ್ಗ ಕೋರ್ಸ್‌ಗಳು ವಿಶಿಷ್ಟ  , ಸರಳ

vydyakeeya

ವೈದ್ಯಕೀಯ ವ್ಯಾಸಂಗಕ್ಕೆ ಫ್ಲೆಕ್ಸಿಬಲ್‌ ಟಚ್‌

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

ಸಾರ್ವಜನಿಕ ಆಡಳಿತ ಆಸಕ್ತಿಯಿದ್ದರೆ ಅವಕಾಶಗಳು ಹಲವು

stand-up-comedy

ಆಧುನಿಕರ ಆಕರ್ಷಣೆ ಸ್ಟ್ಯಾಂಡಪ್‌ ಕಾಮಿಡಿ!

novel

ಕೃಷಿ ಬದುಕಿನ ಸೂಕ್ಷ್ಮ ನೋಟ ನೀಡುವ ಅಗೆದೆಷ್ಟೂ ನಕ್ಷತ್ರ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

partner kannada movie

Kannada Cinema; ಸ್ನೇಹಿತರ ಸುತ್ತ ‘ಪಾರ್ಟ್ನರ್‌’: ಟ್ರೇಲರ್‌, ಆಡಿಯೋದಲ್ಲಿ ಹೊಸಬರ ಚಿತ್ರ

1-eqqwqw

Mukhtar Ansari ಸಾವಿನ ಪ್ರಕರಣ: ನ್ಯಾಯಾಂಗ ತನಿಖೆಗೆ ಆದೇಶಿಸಿದ ಕೋರ್ಟ್

ವಿಕಸಿತ ಭಾರತದಂತಹ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಇನ್ನೆಷ್ಟು ವರ್ಷ ಆಳ್ವಿಕೆ ಮಾಡಿದರೂ ಬಾರದು

ವಿಕಸಿತ ಭಾರತದಂತ ಬಲಾಢ್ಯ ಕಲ್ಪನೆ ಕಾಂಗ್ರೆಸ್ ಎಷ್ಟು ವರ್ಷ ಆಳ್ವಿಕೆ ಮಾಡಿದರೂ ಸಾಧ್ಯವಾಗದು

it

Congress ಬಳಿಕ ಸಿಪಿಐಗೂ 11 ಕೋಟಿ ರೂ.ಬಾಕಿಗಾಗಿ ಐಟಿ ನೋಟಿಸ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೆಟಿಯಾದ ಜಗದೀಶ್ ಶೆಟ್ಟರ್

Belagavi; ಬಸವಜಯ ಮೃತ್ಯುಂಜಯ ಸ್ವಾಮೀಜಿ ಭೇಟಿಯಾದ ಜಗದೀಶ್ ಶೆಟ್ಟರ್

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.