ನಗರದ ಅಂಡರ್‌ಪಾಸ್‌, ಫ್ಲೈ ಓವರ್‌ಗೂ ಸಿಗಲಿ ಹೊಸ ಸ್ಪರ್ಶ

Team Udayavani, Mar 31, 2019, 1:22 PM IST

ನಗರದ ಪರಿಕಲ್ಪನೆಯೇ ಹಾಗೆ ಹೊಸತನಕ್ಕೆ ಪ್ರತಿ ಕ್ಷಣವನ್ನೂ ಒಗ್ಗಿಸಿಕೊಳ್ಳಬೇಕಾಗುತ್ತದೆ. ಇಲ್ಲಿ ಯಾವುದೂ ಹಳತು ಎಂದು ನೋಡುವ ಭಾವ ಇಲ್ಲ, ಎಲ್ಲದರಲ್ಲೂ ಹೊಸತನ್ನೇ ಆವಿಷ್ಕರಿಸುವ ಕಲೆ ಮೇಲಿಂದ ಮೇಲೆ ದಿನೇ ದಿನೇ ಬರುತ್ತವೆ. ಯಾವುದೋ ಉಪಯೋಗಕ್ಕೆ ಬಾರದ ವಸ್ತುಗಳಿಗೆ ಹೇಗೆ ಹೊಸ ಟಚ್‌ ನೀಡಬೇಕು ಎಂದು ಆಲೋಚಿಸುವ ಒಂದು ವರ್ಗವೇ ಇದೆ. ಆ ಸೃಜನಾತ್ಮಕ ವರ್ಗದವರಿಗೆ ಇಲ್ಲಿನ ಹೊಳಹುಗಳು ಇನ್ನಷ್ಟು ಸೃಜನಾತ್ಮಕ ಅಂಶಗಳನ್ನು ತೆರೆದುಕೊಳ್ಳಬಹುದು. ನಗರದಲ್ಲಿ ಇಂತಹ ಸೃಜನಾತ್ಮಕ ಕ್ರಿಯೆಗೆ ಒಗ್ಗಿಕೊಳ್ಳುವಂತಹ ಅನೇಕ ಅವಕಾಶಗಳು ತೆರೆದುಕೊಳ್ಳುತ್ತವೆ. ಆದರೆ ಇದನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳಬೇಕಿದೆ.

ನಗರಾಭಿವೃದ್ಧಿಯಲ್ಲಿ ಹೆಚ್ಚು ಸ್ಥಳಾವಕಾಶವನ್ನು ತಿಂದು ಬಿಡುವುದು ಫ್ಲೈಓವರ್‌ಗಳು ಅಥವಾ ಮೆಟ್ರೋ ಮಾರ್ಗಗಳು. ಇಂಥ ಸ್ಥಳಗಳು ನಮಗೆ ಸಾಕಷ್ಟು ಕಡೆ ಕಾಣಸಿಗುತ್ತವೆ. ಈ ರೀತಿಯ ವಲಯಗಳನ್ನು ಗುರುತಿಸಿ ನಗರ ಸೌಂದರ್ಯವನ್ನು ಬೆಳೆಸುವ ಕರ್ತವ್ಯ ಪ್ರತಿಯೊಬ್ಬರದ್ದೂ ಆಗಿದೆ. ಅಂಡರ್‌ ಪಾಸ್‌, ಫ್ಲೈಓವರ್‌ಗಳ ವ್ಯರ್ಥ ಜಾಗಗಳು ವಿದೇಶಗಳಲ್ಲೆಲ್ಲ ಹೇಗೆ ಸದ್ಬಳಕೆಯಾಗಿವೆ ಎಂದು ನೋಡಲು ಹೊರಟಾಗ ಕಾಣಸಿಕ್ಕಿದ್ದು ಅನೇಕ ಕುತೂಹಲಕಾರಿ ಅಂಶಗಳು.

ರಿಮೇಕ್‌ ಅಂಡರ್‌ ಪಾಸ್‌
ರಿಮೇಕ್‌ ಅಂಡರ್‌ ಪಾಸ್‌ಗಳ ಸ್ಥಳಗಳು ವಿದೇಶಗಳಲ್ಲಿ ಯೋಜಿತವಾಗಿ ಕಾರ್ಯರೂಪಕ್ಕೆ ತಂದಿದ್ದಾರೆ. ಇಲ್ಲಿನ ಫ್ಲೈಓವರ್‌, ಅಂಡರ್‌ ಪಾಸ್‌ಗಳಾಗಿ ಉಳಿಯದೆ ಜನರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ನನೆಗುದಿಗೆ ಬಿದ್ದಿರುವ ಅಂಡರ್‌ ಪಾಸ್‌ಗಳಲ್ಲಿ ಸೈಕಲ್‌ ದಾರಿಗಳು ನಿರ್ಮಾಣವಾಗಿವೆ. ತುಂಬಾ ಉದ್ದವಿರುವಂತಹ ಅಂಡರ್‌ ಪಾಸ್‌ಗಳಲ್ಲಿ ನಗರದ ಸುತ್ತಮುತ್ತ ಇರುವ ನಾಗರಿಕರು ಸೇರಿ ತಮಗೆ ಬೇಕಾದ ಪುಟ್ಟ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ. ಇನ್ನು ಕೆಲವು ಕಡೆ ವಿದ್ಯುತ್‌ ದೀಪಗಳಿಂದ ನಗರದ ಸೌಂದರ್ಯಕ್ಕೆ ಇನ್ನಷ್ಟು ಮೆರುಗು ನೀಡುತ್ತಿವೆ.

ಕಾಂಕ್ರೀಟ್‌ ಕಂಬಗಳಿಗೆ ಚಿತ್ತಾರಗಳನ್ನು ಬರೆದು ಆಕರ್ಷಣೀಯಗೊಳಿಸಲಾಗಿದೆ. ಅಡ್ಡಾದಿಡ್ಡಿ, ಸರಿಯಾಗಿ ಕ್ರಮದಲ್ಲಿ ಇಲ್ಲದ ಅಂಡರ್‌ಪಾಸ್‌ ಗಳಲ್ಲಿ ಹೊಸ ವಿನ್ಯಾಸದ ಪಾದಚಾರಿ ರಸ್ತೆಗಳು ಮೂಡಿ ಬರುತ್ತವೆ. ಹೀಗೆ ಅಂಡರ್‌ ಪಾಸ್‌ಗಳು ಜನರ ಪಾರ್ಕ್ ಗಳಾಗಿ, ಮನೋರಂಜನ ಕಾರ್ಯಕ್ರಮಗಳಿಗಾಗಿ, ವಾಹನ ಪಾರ್ಕಿಂಗ್‌ಗಾಗಿ,ಕಲೆಯ ವೇದಿಕೆಯಾಗಿ ಬಳಸುವ ವಿದೇಶಿಗರ ಈ ಜಾಣತನ ನಮ್ಮಲ್ಲೂ ಅಳವಡಿಕೆಯಾಗಬೇಕಿದೆ.

ನಮ್ಮ ಮಂಗಳೂರಿಗೂ ಬರಲಿ
ವಿದೇಶದಲ್ಲಿ ಅಳವಡಿಕೆಯಾದ ಈ ಪದ್ಧತಿ ಕೆಲವೊಂದನ್ನು ನಮ್ಮ ಸಂಘ ಸಂಸ್ಥೆಗಳು ಮಾಡಿವೆ. ಆದರೆ ಇನ್ನೂ ಹೊಸತನವನ್ನು ಇದರಲ್ಲಿ ತರಬೇಕಿದೆ. ಮಂಗಳೂರು ಭಾಗದಲ್ಲಿ, ಹೊರವಲಯದಲ್ಲಿ ಈಗ ಇರುವ ಮತ್ತು ಮುಂದೆ ನಿರ್ಮಾಣವಾಗಲಿರುವ ಅಂಡರ್‌ಪಾಸ್‌, ಫ್ಲೈ ಓವರ್‌ಗಳನ್ನು ಆಕರ್ಷಣೀಯಗೊಳಿಸಲು ಈ ಕ್ರಮಗಳನ್ನು ಅನುಸರಿಸಿದರೆ ನಮ್ಮ ಮಂಗಳೂರು ಸ್ವಚ್ಛ, ಸುಂದರ ನಗರವಾಗುವದರಲ್ಲಿ ಸಂದೇಹವಿಲ್ಲ.

ವಿಶ್ವಾಸ್‌ ಅಡ್ಯಾರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ