ಬಸಳೆ ತಂಬುಳಿ

Team Udayavani, Nov 9, 2019, 4:00 AM IST

ಆರೋಗ್ಯ ಎನ್ನುವುದು ಪ್ರತಿಯೊಬ್ಬರಿಗೂ ಬೇಕಾದದ್ದು, ಮಾಡುವ ಅಡುಗೆಗಳು ಆರೋಗ್ಯ ಹೆಚ್ಚಿಸುವುದಕ್ಕಿಂತ ಆರೋಗ್ಯ ಕುಂಠಿತಗೊಳಿಸುತ್ತವೆ ಹಾಗಾಗಿ ಆದಷ್ಟು ಒಳ್ಳೆಯ ಅಡುಗೆಗಗಳನ್ನು ಮಾಡಿ ಆರೋಗ್ಯ ಕಾಪಾಡಿಕೊಳ್ಳುವುದು ಉತ್ತಮ.

ಬೇಕಾಗುವ ಸಾಮಗ್ರಿ
ಬಸಳೆ ಸೊಪ್ಪು-10 ಎಲೆ
ಮೊಸರು ಅಥವಾ ಮಜ್ಜಿಗೆ- 1/2 ಕಪ್‌
ತೆಂಗಿನ ತುರಿ-1/2 ಕಪ್‌
ಹಸಿ ಮೆಣಸಿನಕಾಯಿ-3
ಉಪ್ಪು- ರುಚಿಗೆ ತಕ್ಕಷ್ಟು
ಎಣ್ಣೆ- ಸ್ವಲ್ಪ
ಒಗ್ಗರಣೆಗೆ- ಸಾಸಿವೆ ಕರಿಬೇವು
ಜೀರಿಗೆ- ಅರ್ಧ ಚಮಚ
ಶುಂಠಿ- ಚೂರು

ಮಾಡುವ ವಿಧಾನ
ಬಸಳೆ ಸೊಪ್ಪನ್ನು ತೊಳೆದು ಅನಂತರ ಕತ್ತರಿಸಿಕೊಂಡು, 1 ಚಮಚ ಎಣ್ಣೆಯಲ್ಲಿ ಬಾಡಿಸಿಕೊಳ್ಳಿ. ಅನಂತರ ಬಸಳೆ ಸೊಪ್ಪು, ಜೀರಿಗೆ, ಶುಂಠಿ, ತೆಂಗಿನ ಕಾಯಿ, ಹಸಿ ಮೆಣಸಿನ ಕಾಯಿ ಸೇರಿಸಿ ರುಬ್ಬಿಕೊಳ್ಳಬೇಕು. ಬಾಣಲೆಗೆ ಎಣ್ಣೆ ಹಾಕಿ ಒಗ್ಗರಣೆ ಹಾಕಿಕೊಳ್ಳಿ. ಈ ಒಗ್ಗರಣೆಗೆ ರುಬ್ಬಿದ ಮಿಶ್ರಣವನ್ನು ಹಾಕಿ ಮಿಕÕ… ಮಾಡಿ . ಇದಕ್ಕೆ ಅರ್ಧ ಕಪ್‌ ಮಜ್ಜಿಗೆ ಅಥವಾ ಮೊಸರು ಸೇರಿಸಿದರೆ ಬಸಳೆ ಸೊಪ್ಪಿನ ತಂಬುಳಿ ಸವಿಯಲು ಸಿದ್ಧ.

ಬಸಳೆ ಬೋಂಡ
ಬೇಕಾಗುವ ಸಾಮಗ್ರಿ
ಬಸಳೆ ಸೊಪ್ಪಿನ ಎಲೆ-25
ಕಡಲೆ ಹಿಟ್ಟು-ಕಾಲು ಕೆ.ಜಿ.
ಒಣ ಮೆಣಸಿನ ಪುಡಿ-2 ಚಮಚ
ಅಡುಗೆ ಸೋಡಾ ಪುಡಿ-ಅರ್ಧ ಚಮಚ
ಅರಿಶಿನ ಪುಡಿ-1 ಚಮಚ
ಉಪ್ಪು-ರುಚಿಗೆ ತಕ್ಕಷ್ಟು.

ಮಾಡುವ ವಿಧಾನ:
ಮೊದಲಿಗೆ ಬಸಳೆ ಎಲೆಗಳನ್ನು ತೊಳೆದು ಬಟ್ಟೆಯಲ್ಲಿ ಚೆನ್ನಾಗಿ ಒರೆಸಿಡಿ. ಅನಂತರ ಬೋಂಡ ಮಸಾಲೆ ಮಾಡಿಕೊಳ್ಳಬೇಕು. ಕಡಲೆ ಹಿಟ್ಟಿಗೆ ಒಣ ಮೆಣಸಿನ ಪುಡಿ, ಅಡುಗೆ ಸೋಡಾ, ಉಪ್ಪು, ಅರಶಿನ ಮತ್ತು ಸ್ವಲ್ಪ ನೀರು ಹಾಕಿ ಚೆನ್ನಾಗಿ ಕಲಸಿ ಹತ್ತು ನಿಮಿಷ ಹಾಗೆಯೇ ಇಡಿ. ಅನಂತರ ಒಂದೊಂದು ಬಸಳೆ ಎಲೆಗಳನ್ನು ಈ ಮಿಶ್ರಣದಲ್ಲಿ ಅದ್ದಿ ಕಾದ ಎಣ್ಣೆಯಲ್ಲಿ ಕರಿಯಿರಿ. ಬಸಳೆ ಬೋಂಡ ಸವಿಯಲು ಸಿದ್ಧ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫ‌ುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ....

  • ಬೇಕಾಗುವ ಸಾಮಗ್ರಿ ರಾಗಿ- 1 ಕಪ್‌ ಸಕ್ಕರೆ- 1 ಕಪ್‌ ಹಾಲು- 1 ಕಪ್‌ ನೀರು- 1 ಕಪ್‌ ಏಲಕ್ಕಿ- ಸ್ವಲ್ಪ ತುಪ್ಪ- ಸ್ವಲ್ಪ ಮಾಡುವ ವಿಧಾನ ರಾಗಿಯನ್ನು ರಾತ್ರಿ ನೀರಿನಲ್ಲಿ...

  • ಬಂಗಾಳಿಯವರು ಸಿಹಿ ಪ್ರಿಯರು. ಅವರ ದೈನಂದಿನ ಆಹಾರ ಕ್ರಮದಲ್ಲಿ ಒಂದಾದರೂ ಸಿಹಿ ತಿನಿಸು ಇರಲೇಬೇಕು. ಅವರ ತಿಂಡಿ-ಊಟಗಳಲ್ಲಿ ಸಿಹಿ ತಿಂಡಿ ಇಲ್ಲದಿದ್ದರೆ ಆ ದಿನ ಪೂರ್ಣಗೊಳ್ಳುವುದಿಲ್ಲ...

  • ಹಬ್ಬ ಬಂತೆಂದರೆ ಸಾಕು, ಏನು ಮಾಡುವುದು? ಎಂಬುದು ಹೆಂಗಸರಿಗೆ ಯಾವಾಗಲೂ ಇರುವ ಸಮಸ್ಯೆ. ಮಾಡಿದ್ದೇ ಮಾಡಿದರೆ ಮನೆಯಲ್ಲಿ ತಿನ್ನುವವರು ಯಾರೂ ಇಲ್ಲ ಎಲ್ಲರೂ ಏನಾದರೂ...

  • ಬೇಕಾಗುವ ಸಾಮಗ್ರಿ ಜೋಳದ ಹಿಟ್ಟು -1 ಕಪ್‌ ಕೆನೆ ಹಾಲು-1 ಕಪ್‌ ಪಚ್ಚ ಬಾಳೆಹಣ್ಣು - 1 ಬೇಕಿಂಗ್‌ ಸೋಡಾ/ l ಅಡುಗೆ ಸೋಡಾ l 1/2 ಟೀ ಚಮಚ ಬೆಲ್ಲ -ಸ್ವಲ್ಪ ತುಪ್ಪ -ಸ್ವಲ್ಪ ಡ್ರೈಫ್ರೂಟ್ಸ್‌...

ಹೊಸ ಸೇರ್ಪಡೆ