ಬ್ರಾಹ್ಮೀ ಎಲೆಯ ಚಟ್ನಿ

Team Udayavani, Feb 15, 2020, 5:11 AM IST

ಬೇಕಾಗುವ ಸಾಮಗ್ರಿ
ಹಸಿ ಮೆಣಸಿನ ಕಾಯಿ-2
ಬ್ರಾಹ್ಮಿ ಎಲೆ-1 ಕಪ್‌
ಉದ್ದಿನ ಬೇಳೆ-ಒಂದೂವರೆ ಚಮಚ
ಹುಣಿಸೇ ಬೀಜ-ಸ್ವಲ್ಪ
ಉಪ್ಪು-ರುಚಿಗೆ ತಕ್ಕಷ್ಟು
ತೆಂಗಿನಕಾಯಿ-ಅರ್ಧ ಕಪ್‌
ಸಾಸಿವೆ-ಸ್ವಲ್ಪ
ಒಣಮೆಣಸು-ಒಂದು

ಮಾಡುವ ವಿಧಾನ:
ಎರಡು ಹಸಿ ಮೆಣಸಿನ ಕಾಯಿಯನ್ನು ಮಿಕ್ಸಿ ಜಾರಿಗೆ ಹಾಕಿ, ಸ್ವತ್ಛಗೊಳಿಸಿದ ಒಂದು ಕಪ್‌ ಬ್ರಾಹ್ಮಿ ಎಲೆ (ತಿಮರೆ) ಹಾಕಿ, ಹುರಿದಿಟ್ಟುಕೊಂಡಿರುವ ಒಂದು ಚಮಚ ಉದ್ದಿನ ಬೇಳೆ ಹಾಕಿ, ರುಚಿಗೆ ತಕ್ಕಷ್ಟು ಹುಣಿಸೆ ಹಣ್ಣು,ಉಪ್ಪು ಹಾಕಿ ಸ್ವಲ್ಪ ನೀರು ಹಾಕಿ ತುರಿತುರಿಯಾಗಿ ರುಬ್ಬಿ. ಆನಂತರ ಅದಕ್ಕೆ ಅರ್ಧ ಕಪ್‌ ತೆಂಗಿನಕಾಯಿ ಹಾಕಿ ಪುನಃ ರುಬ್ಬಿ. ಸ್ವಲ್ಪ ತುರಿತುರಿಯಾಗಿ ಇರಲಿ. ಎಣ್ಣೆ ಬಿಸಿ ಮಾಡಿ ಸಾಸಿವೆ, ಒಣಮೆಣಸಿನ ತುಂಡು, ಉದ್ದಿನ ಬೇಳೆ ಹಾಕಿ ಹುರಿದು ಅದನ್ನು ರುಬ್ಬಿಟ್ಟುಕೊಂಡ ಚಟ್ನಿ ಮೇಲೆ ಹಾಕಿ. ಈ ಚಟ್ನಿಯನ್ನು ದೋಸೆ ಅಥವಾ ಅನ್ನದೊಂದಿಗೆ ಸವಿಯಬಹುದು.

ದಿಢೀರ್‌ ಸಿಹಿ ಇಡ್ಲಿ

ಬೇಕಾಗುವ ಸಾಮಗ್ರಿ
ರವೆ: ಒಂದೂವರೆ ಕಪ್‌
ಮೊಸರು: 1 ಮುಕ್ಕಾಲು ಕಪ್‌
ಕರಗಿಸಿದ ಬೆಲ್ಲ: ಅರ್ಧ ಕಪ್‌
ಉಪ್ಪು: ಅರ್ಧ ಚಮಚ
ಅಡುಗೆ ಸೋಡಾ ಕಾಲು ಚಮಚ

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಒಂದೂವರೆ ಕಪ್‌ ಆಗುವಷ್ಟು ರವೆಯನ್ನು ಸಣ್ಣ ಉರಿಯಲ್ಲಿ 3ರಿಂದ 4 ನಾಲ್ಕು ನಿಮಿಷಗಳವರೆಗೆ ಹುರಿಯಿರಿ. ಹುರಿದ ರವೆಯನ್ನು ಒಂದು ಪಾತ್ರೆಗೆ ಹಾಕಿ. ನಂತರ ಅದಕ್ಕೆ ಒಂದು ಕಪ್‌ ಮೊಸರನ್ನು ಹಾಕಿ. ರವೆ ಮತ್ತು ಮೊಸರನ್ನು ಚೆನ್ನಾಗಿ ಕಲಸಿಕೊಳ್ಳಿ. ಸುಮಾರು ಮುಕ್ಕಾಲು ಕಪ್‌ ಆಗುವಷ್ಟು ಮೊಸರನ್ನು ಹಾಕಿ ಪುನಃ ಚೆನ್ನಾಗಿ ಕಲಸಿಕೊಳ್ಳಿ. ಹಿಟ್ಟಿನ ಹದವನ್ನು ಪರಿಶೀಲಿಸಿ ಹಾಗೆಯೇ ಮೊಸರಿನ ಪ್ರಮಾಣವನ್ನು ಬದಲಿಸಿಕೊಳ್ಳಬಹುದು. ಅರ್ಧ ಕಪ್‌ ಕರಗಿಸಿ ಇಟ್ಟ ಬೆಲ್ಲವನ್ನು ಹಾಕಿ ಚೆನ್ನಾಗಿ ಕಲಸಿ. (1 ಕಪ್‌ ಬೆಲ್ಲವನ್ನು ಒಂದು ಪಾತ್ರೆಗೆ ಹಾಕಿ ಅರ್ಧ ಕಪ್‌ ಆಗುವಷ್ಟು ನೀರನ್ನು ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ಈ ಸಿರಪ್‌ ಅನ್ನು ಶೋಧಿಸಿ ಫ್ರಿಜ್‌ನಲ್ಲಿಟ್ಟುಕೊಂಡರೆ ಬೇಕಾದಾಗ ಬಳಸಬಹುದು).
ಹಿಟ್ಟಿಗೆ ಅರ್ಧ ಚಮಚ ಉಪ್ಪು ಹಾಗೂ ಚಿಟಿಕೆ ಅಡುಗೆ ಸೋಡಾ ಹಾಕಿ ಚೆನ್ನಾಗಿ ಕಲಸಿಕೊಳ್ಳಿ. ಇಡ್ಲಿ ಪಾತ್ರೆಗಳಿಗೆ ಎಣ್ಣೆ ಉದ್ದಿಕೊಂಡು ಹಿಟ್ಟನ್ನು ಹಾಕಿ ದೊಡ್ಡ ಉರಿಯಲ್ಲಿ 15 ನಿಮಿಷಗಳವರೆಗೆ ಬೇಯಿಸಿ. ಈ ರುಚಿಕರವಾದ ಸಿಹಿ ಇಡ್ಲಿಗಳನ್ನು ಖಾರವಾದ ಚಟ್ನಿ ಜತೆ ಬಡಿಸಿ.

– ರುಚಿ ಮಂಗಳೂರು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು ಸೌತೆಕಾಯಿ ಹಲ್ವ ಬೇಕಾಗುವ ಸಾಮಗ್ರಿಗಳು - 1 ಸಿಪ್ಪೆ ತೆಗೆದ ಮಂಗಳೂರು ಸೌತೆಕಾಯಿ -  ಗೋಡಂಬಿ-10 - ಪಿಸ್ತಾ-8 - ಬಾದಾಮಿ -8(1ಕಪ್‌) - ಸಕ್ಕರೆ -1ಕಪ್‌ -  ತುಪ್ಪ...

  • ಬೇಕಾಗುವ ಪದಾರ್ಥಗಳು ದೋಸೆ ಅಕ್ಕಿ -2.5 ಕಪ್‌ ಅಥವಾ ಅರ್ಧ ಕೆಜಿ. ಹಸಿ ತೆಂಗಿನ ಕಾಯಿ ತುರಿ-ಅರ್ಧ ಕಪ್‌ ಬ್ಯಾಡ್ಗಿ ಮೆಣಸಿನ ಕಾಯಿ-6 ರಿಂದ 7 ಕೊತ್ತಂಬರಿ ಬೀಜ -4 ಚಮಚ ಈರುಳ್ಳಿ...

  • ಬೇಕಾಗುವ ಸಾಮಗ್ರಿ - ಗೋಧಿ ಹಿಟ್ಟು- 3 ಕಪ್‌ - ಮೆಂತ್ಯ ಎಲೆಗಳು-1 ಕಪ್‌ - ನುಣ್ಣಗೆ ಕತ್ತರಿಸಿದ ಶುಂಠಿ-1 ಟೀ ಸ್ಪೂನ್‌ - ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ-1 ಟೀ...

  • ಬೇಕಾಗುವ ಸಾಮಗ್ರಿ - ಈರುಳ್ಳಿ: ಒಂದು ಕಪ್‌ - ಶುಂಠಿ: ಸ್ವಲ್ಪ - ಹಸಿಮೆಣಸು: ಸ್ವಲ್ಪ - ಶೇಂಗಾ, ಗೋಡಂಬಿ: ಸ್ವಲ್ಪ - ಬಿಳಿ ಎಳ್ಳು: ಅರ್ಧ ಚಮಚ - ಕರಿಬೇವು ಸೊಪ್ಪು:...

  • ಸೂಪ್‌ ಎಂದ ಕೂಡಲೇ ಎಲ್ಲರ ಬಾಯಲ್ಲೂ ನೀರೂರುತ್ತದೆ. ರೆಸ್ಟೋರೆಂಟ್‌ಗಳಲ್ಲಿ, ಪ್ರಮುಖ ಹೊಟೇಲ್‌ಗ‌ಳಲ್ಲಿ ಒಂದು ಒಳ್ಳೆಯ ಊಟಕ್ಕೆ ಅದ್ಭುತವಾದ ಪ್ರಾರಂಭ ನೀಡುವ ಈ...

ಹೊಸ ಸೇರ್ಪಡೆ