ಅವಲಕ್ಕಿಯಿಂದ ಗರಿ ಗರಿಯಾದ ಚೌಚೌ

Team Udayavani, Nov 23, 2019, 4:32 AM IST

ಬೇಕಾಗುವ ಸಾಮಗ್ರಿಗಳು
ಎಣ್ಣೆ -ಸ್ವಲ್ಪ
3 ಕಪ್‌ ದಪ್ಪ ಅವಲಕ್ಕಿ
ಶೇಂಗಾ ಬೀಜ-ಅರ್ಧ ಕಪ್‌
ಬಾದಾಮಿ ಬೀಜ-ಕಾಲು ಕಪ್‌
ಗೋಡಂಬಿ-ಕಾಲು ಕಪ್‌
ಕಡಲೆ ಬೇಳೆ-2 ದೊಡ್ಡ ಚಮಚ
ಕರಿಬೇವಿನ ಎಲೆ-4 ಎಸಳು
ಅರಶಿನ ಪುಡಿ-ಕಾಲು ಚಮಚ
ಮೆಣಸಿನ ಹುಡಿ-ಅರ್ಧ ಚಮಚ
ಪುಡಿಮಾಡಿರುವ ಸಕ್ಕರೆ-3 ಕಪ್‌
ಉಪ್ಪು ರುಚಿಗೆ ತಕ್ಕಷ್ಟು

ಒಂದು ದೊಡ್ಡ ಬಾಣಲೆಗೆ ಎಣ್ಣೆ ಹಾಕಿಕೊಳ್ಳಬೇಕು. ರಂಧ್ರಗಳಿರುವ ಅರೆಪು ಚಮಚ ತೆಗೆದುಕೊಂಡು ಅದಕ್ಕೆ ಅವಲಕ್ಕಿ ಹಾಕಿ ಆ ಚಮಚವನ್ನು ಎಣ್ಣೆಯಲ್ಲಿ ಮುಳುಗಿಸಿ ಮೇಲಿನಿಂದ ಅವಲಕ್ಕಿಯನ್ನು ಗರಿಗರಿಯಾಗುವ ತನಕ ಹುರಿದುಕೊಳ್ಳಬೇಕು. ಕರಿದ ಅವಲಕ್ಕಿಯನ್ನು ಪ್ಲೇಟ್‌ವೊಂದರಲ್ಲಿ ಹಾಕಿಟ್ಟುಕೊಳ್ಳಬೇಕು. ಬಳಿಕ ಅದೇ ಎಣ್ಣೆಯಲ್ಲಿ ಅರ್ಧ ಕಪ್‌ ಶೇಂಗಾ ಬೀಜ ಹಾಕಿ ಕೆಂಪಾಗುವ ತನಕ ಹುರಿದುಕೊಳ್ಳ ಬೇಕು. ಅದೇ ರೀತಿ ಕಾಲು ಕಪ್‌ ಬಾದಾಮಿ ಬೀಜ, ಕಾಲು ಕಪ್‌ ಗೋಡಂಬಿ, 2 ದೊಡ್ಡ ಚಮಚ ಕಡಲೆ ಬೇಳೆಯನ್ನು ಕರಿದುಕೊಳ್ಳಬೇಕು. ಅನಂತರ 4 ಎಸಳು ಕರಿಬೇವಿನ ಎಲೆಯನ್ನೂ ಕರಿದುಕೊಳ್ಳಬೇಕು.

ಬಳಿಕ ಹುರಿದಿಟ್ಟ ಅವಲಕ್ಕಿಗೆ ಕಾಲು ಚಮಚ ಅರಶಿನ ಪುಡಿ, ರುಚಿಗೆ ತಕ್ಕಷ್ಟು ಉಪ್ಪು, ಅರ್ಧ ಚಮಚ ಮೆಣಸಿನ ಹುಡಿ, ಪುಡಿ ಮಾಡಿರುವ ಸಕ್ಕರೆ 3 ಚಮಚ ಹಾಕಿ ಹುರಿದಿರುವ ಬೇವಿನ ಸೊಪ್ಪು ಹಾಕಿ ಚೆನ್ನಾಗಿ ಮಿಶ್ರಣ ಮಾಡಬೇಕು. ಬಳಿಕ ಶೇಂಗಾ ಬೀಜ, ಕಡಲೇಬೇಳೆ, ಬಾದಾಮಿ, ಗೋಡಂಬಿಯನ್ನು ಹಾಕಿ ಅರ್ಧ ಕಪ್‌ ದಪ್ಪ ಸೇವು ಹಾಕಿ ಮಿಕ್ಸ್‌ ಮಾಡಿ. ದೊಡ್ಡ ಭರಣಿಯಲ್ಲಿ ಹಾಕಿ ಗಾಳಿಯಾಡದ ಜಾಗದಲ್ಲಿ ಇಡಿ. 20 ದಿನಗಳ ಕಾಲ ಬಳಕೆ ಮಾಡಬಹುದು.


ಈ ವಿಭಾಗದಿಂದ ಇನ್ನಷ್ಟು

  • ಚಳಿಗಾಲ ಶುರುವಾಗುತ್ತಿದ್ದಂತೆ ಸಂಜೆ ವೇಳೆಗೆ ಬಿಸಿ ಬಿಸಿ ಚಹಾದ ಜತೆ ಸವಿಯಲು ಏನಾದರೂ ಇದ್ದರೆ ಚೆನ್ನಾಗಿತ್ತು ಎನ್ನುವವರು ಮನೆಯಲ್ಲಿ ವಿಧವಿಧವಾದ ತಿಂಡಿಗಳನ್ನು...

  • 1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್‌-1 ಪ್ಯಾಕ್‌ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್‌-1 ಕಪ್‌ ಸಣ್ಣಗೆ...

  • ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್‌- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ - 60 ಗ್ರಾಂ ಏಲಕ್ಕಿ - 3 ತುಪ್ಪ ಬಾದಾಮ್‌ ಪೌಡರ್‌ - 2 ಚಮಚ ಮಾಡುವ ವಿಧಾನ: ಒಂದು...

  • ಬೇಕಾಗುವ ಸಾಮಗ್ರಿ ಅಕ್ಕಿಹಿಟ್ಟು: 1 ಕಪ್‌ ಉಪ್ಪು: ಸ್ವಲ್ಪ ತೆಂಗಿನ ತುರಿ: 1 ಕಪ್‌ ಕಡಲೆ ಪದಾರ್ಥಕ್ಕೆ: ನೆನೆಸಿಟ್ಟ ಕಡಲೆ: 1 ಕಪ್‌ ಎಣ್ಣೆ: ಸ್ವಲ್ಪ ಏಲಕ್ಕಿ, ಜೀರಿಗೆ:...

  • ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫ‌ುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ....

ಹೊಸ ಸೇರ್ಪಡೆ