ಬೇಸಗೆಗೆ ತಂಪು ಖಾದ್ಯ


Team Udayavani, Mar 23, 2019, 7:34 AM IST

23-march-9.jpg

ಬೇಸಗೆ ಈಗಾಗಲೇ ಶುರುವಾಗಿದೆ. ಬಿಸಿಯ ಶಾಖಕ್ಕೆ ಚರ್ಮದ ಜತೆಗೆ ದೇಹದ ಒಳಗೂ ಬಿಸಿಯ ಅನುಭವವಾಗುತ್ತದೆ. ಈ ಸಮಯದಲ್ಲಿ ಮಸಾಲೆ ಪದಾರ್ಥಗಳಿಂದ ಆದಷ್ಟು ದೂರವಿರಬೇಕು. ಕೇವಲ ತಂಪು ಪಾನೀಯಗಳನ್ನು ಕುಡಿದ ಮಾತ್ರಕ್ಕೆ ದೇಹಕ್ಕೆ ತಂಪಾಗುವುದಿಲ್ಲ. ಕೆಲವು ಆಹಾರಗಳನನ್ನು ಸೇವಿಸಿದಾಗಲೂ ದೇಹದ ಬಿಸಿ ಕಡಿಮೆಯಾಗುತ್ತದೆ. ಅಂತಹ ಕೆಲವು ಆಹಾರಗಳು ಇಲ್ಲಿವೆ.

ಕಲ್ಲಂಗಡಿ ಹಣ್ಣಿನ ಕುಲ್ಫಿ
ಬೇಕಾಗುವ ಸಾಮಗ್ರಿಗಳು:

ಕತ್ತರಿಸಿ ಬೀಜ ತೆಗೆದ ಕಲ್ಲಂಗಡಿ ಹಣ್ಣು: 2 ಕಪ್‌
ಪುದಿನಾ ಎಲೆ: 4/5
 ಸಕ್ಕರೆ: 3 ಕಪ್‌
 ಉಪ್ಪು: ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಮೊದಲು ಮಿಕ್ಸಿ ಜಾರಿಗೆ ಕತ್ತರಿಸಿದ ಕಲ್ಲಂಗಡಿಹಣ್ಣಿನ ಚೂರುಗಳನ್ನು ಹಾಕಿ ಅದಕ್ಕೆ ಪುದೀನಾ ಎಲೆ, ಸಕ್ಕರೆ, ಉಪ್ಪು ಹಾಕಿ ಚೆನ್ನಾಗಿ ಅರೆಯಬೇಕು. ಅನಂತರ ಆ ಮಿಶ್ರಣಕ್ಕೆ ಉಳಿದಿದ್ದ ಕಲ್ಲಂಗಡಿ ಹಣ್ಣನ್ನು ಸೇರಿಸಿ ಕುಲ್ಫಿ ಪಾತ್ರ ಅಥವಾ ಪ್ಲಾಸ್ಟಿಕ್‌ ಗ್ಲಾಸ್‌ಗೆ ಆ ಮಿಶ್ರಣವನ್ನು ಹಾಕಿ 4 ಗಂಟೆ ಫ್ರಿಡ್ಜ್ ನಲ್ಲಿ ಇಡಬೇಕು. ಆಮೇಲೆ ಅದಕ್ಕೆ ಸ್ಟಿಕ್‌ನ್ನು ಜೋಡಿಸಬೇಕು. ಅನಂತರ ಒಂದೆರೆಡು ಗಂಟೆ ಫ್ರಿ ಡ್ಜ್ ನಲ್ಲಿಟ್ಟು ಕಲ್ಲಂಗಡಿ ಹಣ್ಣಿನನ ಕುಲ್ಫಿ ಸವಿಯಲು ಸಿದ್ಧವಾಗುತ್ತದೆ.

ಟೊಮೆಟೊ ದೋಸೆ
ಬೇಕಾಗುವ ಸಾಮಗ್ರಿಗಳು

 ದೋಸೆ ಹಿಟ್ಟು : 1 ಕಪ್‌
 ಟೊಮೆಟೊ: 2
 ಈರುಳ್ಳಿ: 1
 ಶುಂಠಿ, ಬೆಳ್ಳುಳ್ಳಿ: ಸ್ವಲ್ಪ
 ಒಣ ಮೆಣಸಿನಕಾಯಿ: 6
 ಉಪ್ಪು: ರುಚಿಗೆ ತಕ್ಕಷ್ಟು
 ಜೀರಿಗೆ: ಅರ್ಧ ಚಮಚ

ಮಾಡುವ ವಿಧಾನ: ಅಕ್ಕಿ, ಉದ್ದಿನ ಬೇಳೆ, ಕಡಲೆ ಬೇಳೆ, ಮೆಂತೆ ಹಾಕಿ ಹಿಟ್ಟನ್ನು ಹಿಂದಿನ ದಿನ ಅರೆದಿಡಬೇಕು. ಗ್ಯಾಸ್‌ನಲ್ಲಿ ಒಂದು ಪ್ಯಾನ್‌ ಇಟ್ಟು ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ ಜೀರಿಗೆ, ಶುಂಠಿ, ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ, ಒಣಮೆಣಸಿನ ಕಾಯಿ ಹಾಕಿ ಚೆನ್ನಾಗಿ ಹುರಿಯಬೇಕು. ಅನಂತರ ಅದನ್ನು ಮಿಕ್ಸಿ ಜಾರಿಗೆ ಹಾಕಿ ಸ್ವಲ್ಪ ಉಪ್ಪು ಹಾಕಿ ಅರೆಯಬೇಕು.ಈ ಮಿಶ್ರಣವನ್ನು ದೋಸೆ ಹಿಟ್ಟಿಗೆ ಸೇರಿಸಬೇಕು. ಗ್ಯಾಸ್‌ನ ಮೇಲೆ ಕಾವಲಿಯಿಟ್ಟು ತೆಳುವಾಗಿ ದೋಸೆ ಹರಡಬೇಕು.

ಎಳ್ಳು ಜ್ಯೂಸ್‌
ಬೇಕಾಗುವ ಸಾಮಗ್ರಿಗಳು:
 ಎಳ್ಳು: 4/1ಕಪ್‌
 ಹಾಲು: 2 ಕಪ್‌
 ಸಕ್ಕರೆ: ಅರ್ಧಕಪ್‌
 ಏಲಕ್ಕಿ: ಸ್ವಲ್ಪ

ಮಾಡುವ ವಿಧಾನ: ಒಂದು ಪಾತ್ರೆಗೆ ಎಳ್ಳು ಮತ್ತು ಏಲಕ್ಕಿ ಹಾಕಿ ಚೆನ್ನಾಗಿ ಹುರಿದುಕೊಳ್ಳಬೇಕು. ಒಂದು ಮಿಕ್ಸಿ ಜಾರಿಗೆ ಹುರಿದ ಎಳ್ಳು ಮತ್ತು ಏಲಕಿಯನ್ನು ಹಾಕಿ ಚೆನ್ನಾಗಿ ಹುಡಿಮಾಡಬೇಕು. ಅನಂತರ ಹಾಲು ಸೇರಿಸಿ ಮತ್ತೂಮ್ಮೆ ತಿರುಗಿಸಬೇಕು. ಅದನ್ನು ಗ್ಲಾಸಿಗೆ ಹಾಕಿ, ಫ್ರಿಡ್ಜ್ ನಲ್ಲಿ ಒಂದು ಗಂಟೆ ಇಟ್ಟಾಗ ಎಳ್ಳು ಜ್ಯೂಸ್‌ ಸವಿಯಲು ಸಿದ್ಧವಾಗುತ್ತದೆ.

ದೊಡ್ಡ ಪತ್ರೆ ತಂಬುಳಿ
ಬೇಕಾಗುವ ಸಾಮಗ್ರಿಗಳು

 ದೊಡ್ಡಪತ್ರೆ ಎಲೆ: 1
 ತುಪ್ಪ: 2 ಚಮಚ
 ಮೆಣಸು: 10
 ಮೊಸರು: ಅರ್ಧ ಕಪ್‌
 ತೆಂಗಿನ ತುರಿ: ಅರ್ಧಕಪ್‌
 ಜೀರಿಗೆ: ಅರ್ಧ ಚಮಚ
 ಉಪ್ಪು: ರುಚಿಗೆ ತಕ್ಕಷ್ಟು
 ನೀರು: ಸ್ವಲ್ಪ
 ಒಗ್ಗರಣೆಗೆ ಜೀರಿಗೆ ಮತ್ತು ಸಾಸಿವೆ ಸ್ವಲ್ಪ.

ಮಾಡುವ ವಿಧಾನ:
ಮೊದಲು ಒಂದು ಪ್ಯಾನ್‌ಗೆ ಸ್ವಲ್ಪ ತುಪ್ಪ ಹಾಕಿ ಅದಕ್ಕೆ ಮೆಣಸು, ಜೀರಿಗೆ, ದೊಡ್ಡಪತ್ರೆ ಎಲೆ
ಹಾಕಿ ಚೆನ್ನಾಗಿ ಹುರಿಯಬೇಕು. ಅದಕ್ಕೆ ಹುರಿದ ತೆಂಗಿನ ತುರಿಯನ್ನು ಹಾಕಬೇಕು. ಅನಂತರ ಈ
ಮಿಶ್ರಣವನ್ನು ಒಂದು ಮಿಕ್ಸಿ ಜಾರಿಗೆ ಹಾಕಿ, ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಅರೆಯಬೇಕು. ಅನಂತರ ಅದಕ್ಕೆ ಮೊಸರು ಹಾಕಿ ಒಂದು ಸಲ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ಹಾಕಿಡಿ. ಗ್ಯಾಸ್‌ನ ಮೇಲೆ ಒಗ್ಗರಣೆ ಪಾತ್ರೆಯಿಟ್ಟು ಅದಕ್ಕೆ ತುಪ್ಪ ಹಾಕಿ ಬಿಸಿಯಾಗುವಾಗ ಜೀರಿಗೆ ಮತ್ತು ಸಾಸಿವೆ ಹಾಕಿ ಅದು ಕೆಂಪಾಗುವಾಗ ಅದನ್ನು ತಂಬುಳಿಗೆ ಸೇರಿಸಿ. ದೊಡ್ಡಪತ್ರೆ ತಂಬುಳಿ ಸವಿಯಲು ಸಿದ್ಧವಾಗುತ್ತದೆ.

ಬೆಂಡೆಕಾಯಿ ಮೊಸರು ಬಜ್ಜಿ
ಬೇಕಾಗುವ ಸಾಮಗ್ರಿಗಳು:

ಎಳೆ ಬೆಂಡೆಕಾಯಿ: 8
ಹಸಿ ಮೆಣಸಿನಕಾಯಿ: 5
ಮೊಸರು: 1 ಕಪ್‌
ತುಪ್ಪ: ಸ್ವಲ್ಪ
ಉಪ್ಪು: ರುಚಿಗೆ ತಕ್ಕಷ್ಟು
ಒಗ್ಗರಣೆಗೆ ಸಾಸಿವೆ, ಜೀರಿಗೆ,
ಒಣ ಮೆಣಸಿನಕಾಯಿ
ಮಾಡುವ ವಿಧಾನ:
ಬೆಂಡೆಕಾಯಿಯನ್ನು ಸಣ್ಣಗೆ ಹೆಚ್ಚಿಕೊಂಡು ಕೆಂಬಣ್ಣ ಬರುವವರೆಗೆ ತುಪ್ಪದಲ್ಲಿ ಚೆನ್ನಾಗಿ ಹುರಿದುಕೊಳ್ಳಬೇಕು. ಬಳಿಕ ಒಂದು ಪಾತ್ರೆಯಲ್ಲಿ ಮೊಸರು ಹಾಕಿಕೊಂಡು ಬೆಂಡೆಕಾಯಿಯನ್ನು ಅದಕ್ಕೆ ಹಾಕಬೇಕು. ಬಳಿಕ ಮೆಣಸಿನಕಾಯಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಬೇಕು. ಅನಂತರ ಒಂದು ಪಾತ್ರಗೆ ಸ್ವಲ್ಪ ತುಪ್ಪ ಹಾಕಿ ಬಿಸಿಯಾಗುವಾಗ ಸಾಸಿವೆ, ಜೀರಿಗೆ, ಒಣಮೆಣಸಿನಕಾಯಿ ಹಾಕಿ ಒಗ್ಗರಣೆ ಮಾಡಿ ಬೆಂಡೆಕಾಯಿ ಮೊಸರು ಬಜ್ಜಿಗೆ ಸೇರಿಸಬೇಕು.

ಸುಶ್ಮಿತಾ ಶೆಟ್ಟಿ

ಟಾಪ್ ನ್ಯೂಸ್

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

Russia War: ಉಕ್ರೇನ್‌ ಮೇಲೆ ರಷ್ಯಾ ಭೀಕರ ದಾಳಿ-17 ಮಂದಿ ಮೃತ್ಯು; ನೆರವಿಗಾಗಿ ಮನವಿ

7-thekkatte

Thekkatte ಶ್ರೀರಾಮ ಭಜನಾ ಮಂದಿರದಲ್ಲಿ ರಾಮನವಮಿ: ರಾವಣ ದಹನ ಮತ್ತು ಓಕುಳಿ ಉತ್ಸವ ಸಂಪನ್ನ

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್

ನನ್ನ ಪತ್ನಿಗೆ ಏನಾದರೂ ಆದರೆ…: ಸೇನಾ ಮುಖ್ಯಸ್ಥರಿಗೆ ಎಚ್ಚರಿಕೆ ನೀಡಿದ ಇಮ್ರಾನ್ ಖಾನ್


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

8-pavagada

Pavagada: ಬೈಕ್ ಗೆ ‌ಕಾಡು ಹಂದಿ ‌ಡಿಕ್ಕಿಯಾಗಿ ಸವಾರ ಸಾವು

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Koppala; ಬಿಜೆಪಿಯಲ್ಲಿ ಸೌಜನ್ಯತೆ ಇಲ್ಲವೆನಿಸಿ ಕಾಂಗ್ರೆಸ್ ಸೇರಿದೆ: ಸಂಗಣ್ಣ ಕರಡಿ

Virat Kohli and Rohit to open in t20 world cup; report

T20 World Cup; ರೋಹಿತ್‌, ವಿರಾಟ್‌ ಆರಂಭಿಕರು? ಅಚ್ಚರಿಯ ಮುಖಗಳಿಲ್ಲ?

The Very Best Payment Techniques for Online Casinos

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಿಹಾರದ ವಲಸೆ ಕಾರ್ಮಿಕ ಮೃತ್ಯು

Jammu and Kashmir: ಉಗ್ರರ ಗುಂಡಿನ ದಾಳಿಗೆ ಬಲಿಯಾದ ವಲಸೆ ಕಾರ್ಮಿಕ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.