ಧಾರವಾಡ ಪೇಡಾ

Team Udayavani, Jun 1, 2019, 6:00 AM IST

ಕರ್ನಾಟಕದಲ್ಲಿ ಅನೇಕ ಸಿಹಿ ಖಾದ್ಯಗಳಿವೆ. ಹೋಳಿಗೆ, ಲಡ್ಡು ಹೀಗೆ ಹಲವು ವಿಧದ ಸಿಹಿ ತಿನಿಸುಗಳು ಬಾಯಲ್ಲಿ ನೀರೂರಿಸುವಂತಹದ್ದು. ಧಾರವಾಡಕ್ಕೆ ಭೌಗೋಳಿಕ ಸೂಚಿಯ ಟ್ಯಾಗ್‌ ನೀಡುವ ಸಿಹಿ ತಿನಿಸು ಈ ಧಾರವಾಡ ಪೇಡಾ. ಬಾಯಿಗೆ ಹಾಕಿಕೊಂಡರೆ ಕರಗುವ ಈ ಪೇಡಾ ಧಾರವಾಡವನ್ನು ಮತ್ತಷ್ಟು ಫೇಮಸ್‌ ಮಾಡಿದೆ. ಈ ಸಿಹಿಗೆ 175 ವರ್ಷಗಳ ಇತಿಹಾಸವೂ ಇದೆ. 19ನೇ ಶತಮಾನದಲ್ಲಿ ಉತ್ತರ ಪ್ರದೇಶದ ಉನಾವೋ ಎಂಬ ಊರಿನಿಂದ ಧಾರವಾಡಕ್ಕೆ ಬಂದ ಠಾಕೂರ್‌ ಕುಟುಂಬ ಈ ಪೇಡಾದ ಸೃಷ್ಟಿಕರ್ತರು. ರಾಮ್‌ ರತನ್‌ ಸಿಂಗ್‌ ಠಾಕೂರ್‌ ಈ ಪೇಡಾಗಳನ್ನು ತಯಾರಿಸಿ, ಸ್ಥಳೀಯ ಊರುಗಳಿಗೆ ಮಾರಿದ ಮೊದಲ ವ್ಯಕ್ತಿ. 5 ದಶಕಗಳಲ್ಲಿ ಧಾರವಾಡ ಮಾತ್ರವಲ್ಲದೇ ಹುಬಳ್ಳಿ, ಬೆಂಗಳೂರು, ಹಾವೇರಿಯಲ್ಲೂ ಈ ಪೇಡಾ ಫೇಮಸ್‌ ಆಯಿತು.

ಬೇಕಾಗುವ ಪದಾರ್ಥಗಳು
••ಹಾಲು: 2 ಲೀಟರ್‌
••ನಿಂಬೆ ರಸ: 2 ಟೇಬಲ್ ಸ್ಪೂನ್‌
••ತುಪ್ಪ: 1 ಟೇಬಲ್ ಸ್ಪೂನ್‌
••ಸಕ್ಕರೆ : 6 ಟೇಬಲ್ ಸ್ಪೂನ್‌
••ಏಲಕ್ಕಿ ಪುಡಿ: ಕಾಲು ಟೇಬಲ್ ಸ್ಪೂನ್‌
•••ಪುಡಿ ಮಾಡಿದ ಸಕ್ಕರೆ: 5 ಟೀ ಸ್ಪೂನ್‌ (ಪೇಡಾದ ಮೇಲೆ ಹಾಕಲು)
ಮಾಡುವ ವಿಧಾನ

ಮೊದಲಿಗೆ ಹಾಲಿನಿಂದ ಪನ್ನಿರ್‌ ತಯಾರಿಸಿಕೊಳ್ಳಬೇಕು. ಗ್ಯಾಸ್‌ ಮೇಲೆ ಪಾತ್ರೆ ಇಟ್ಟು ಹಾಲು ಹಾಕಿ ಕುದಿಸಬೇಕು. ಹಾಲು ಕುದಿಯುತ್ತಾ ಗುಳ್ಳೆಗಳು ಬಂದಾಗ ಅದಕ್ಕೆ ಸ್ವಲ್ಪ ಸ್ವಲ್ಪವೇ ನಿಂಬೆಹಣ್ಣಿನ ರಸ ಹಾಕಬೇಕು. ನಿಂಬೆ ರಸ ಹಾಕಿ ತಿರುವುತ್ತಾ ಇರಬೇಕಾದರೇ ಹಾಲು ಒಡೆಯಲಾರಂಭಿಸಿ ಪನ್ನಿರ್‌ ಸಿದ್ದವಾಗುತ್ತದೆ. ಗ್ಯಾಸ್‌ ಆಫ್ ಮಾಡಿ ಹತ್ತಿ ಬಟ್ಟೆಯಲ್ಲಿ ಪನ್ನೀರಿ ಹಾಕಿ ಪನ್ನೀರಿನಲ್ಲಿರುವ ನೀರಿನಾಂಶವನ್ನೆಲ್ಲ ತೆಗೆದು ಸಿದ್ದ ಪಡಿಸಿಕೊಳ್ಳಬೇಕು.

ಅನಂತರ ಒಂದು ಚಮಚ ತುಪ್ಪ ಹಾಕಿ ಪನ್ನೀರಿನ ಬಣ್ಣ ಬದಲಾಗುವವರೆ ಹುರಿದುಕೊಳ್ಳಿ. ಬಳಿಕ 6 ಟೇಬಲ್ ಸ್ಪೂನ್‌ ಸಕ್ಕರೆ ಮತ್ತು 1 ಟೇಬಲ್ ಸ್ಪೂನ್‌ ಹಾಲು ಹಾಕಿ ಚೆನ್ನಾಗಿ ಕಲಡಿಸಿ. ಗ್ಯಾಸ್‌ ನಿಧಾನವಾಗಿರಿಸಿ ಸಕ್ಕರೆ ಕರಗಿಸಿಕೊಳ್ಳಿ. ಈ ಹೂರಣ ಕಂದು ಬಣ್ಣಕ್ಕೆ ತಿರುಗುವವರೆಗೆ ಕೈಯಾಡಿಸುತ್ತಾ ಇರಿ. ಹಾಲಿನಾಂಶ ಕಡಿಮೆಯಾಗುತ್ತಿದ್ದಂತೆ ಮತ್ತೆ ಒಂದು ಟೇಬಲ್ ಸ್ಪೂನ್‌ ಹಾಲು ಸೇರಿಸಿ ಗೋಲ್ಡನ್‌ ಕಂದು ಬಣ್ಣ ಬರುವವರೆಗೆ ಹುರಿದುಕೊಳ್ಳಬೇಕು. ಈ ಮಿಶ್ರಣವನ್ನು ಮಿಕ್ಸರ್‌ಗೆ ಹಾಕಿ ನೀರು ಅಥವಾ ಹಾಲು ಹಾಕದೇ ಹುಡಿ ಮಾಡಿಕೊಳ್ಳಿ. ಮತ್ತೆ ಕಡಾಯಿಗೆ 3 ಟೇಬಲ್ ಸ್ಪೂನ್‌ ಹಾಲು ಹಾಕಿ ಹುಡಿಯನ್ನು ಕಡು ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಒಂದು ವೇಳೆ ಈ ಮಿಶ್ರಣ ಮತ್ತಷ್ಟು ಒಣಗಿದರೇ ಸೀದು ಹೋಗದಂತೆ ಹಾಲು ಹಾಕಿ ಹುರಿದುಕೊಳ್ಳಬಹುದು. ಆನಂತರ 1/4 ಟೇಬಲ್ ಸ್ಪೂನ್‌ ಏಲಕ್ಕಿ ಹುಡಿ ಹಾಕಿ ಚನ್ನಾಗಿ ಮಿಶ್ರಣ ಮಾಡಿ. ಗ್ಯಾಸ್‌ ಆಫ್ ಮಾಡಿ ತಣ್ಣಗಾಗುವವರೆಗೂ ಕಾದು ಸಣ್ಣದಾದ ಉಂಡೆ ಮಾಡಿಕೊಂಡು ಉಂಡೆಯನ್ನು ಸಕ್ಕರೆ ಹುಡಿಯನ್ನು ಉರುಳಿಸಿದರೆ ರುಚಿಯಾದ ಧಾರವಾಡ ಪೇಡಾ ಸವಿಯಲು ಸಿದ್ದ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್‌ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ...

  • ಬೇಕಾಗುವ ಸಾಮಗ್ರಿ ಬಾಸ್ಮತಿ ಅಕ್ಕಿ- 1 ಕಪ್‌ ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್‌ ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್‌. ನೀರುಳ್ಳಿ- 1ರಿಂದ 2 ಶುಂಠಿ- 3 ಬೆಳ್ಳುಳ್ಳಿ-...

  • ಪೇಥಾ ಆಗ್ರಾದ ಪ್ರಸಿದ್ಧ ಸ್ವೀಟ್‌ ಆಗಿದ್ದು, ಇಲ್ಲಿಯ ಈ ಸ್ವೀಟ್‌ ಸವಿಯಲು ಜನರು ದೂರದ ಊರುಗಳಿಂದ ಬರುತ್ತಾರೆ. ಇದನ್ನು ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ...

  • ಬೇಕಾಗುವ ಸಾಮಗ್ರಿ ಹಸಿ ಮೆಣಸಿನ ಕಾಯಿ-2 ಬ್ರಾಹ್ಮಿ ಎಲೆ-1 ಕಪ್‌ ಉದ್ದಿನ ಬೇಳೆ-ಒಂದೂವರೆ ಚಮಚ ಹುಣಿಸೇ ಬೀಜ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ತೆಂಗಿನಕಾಯಿ-ಅರ್ಧ...

  • ಸಿಹಿ ತಿನಿಸು ಹಬ್ಬ, ಆಚರಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಪಾಯಸ, ಹೋಳಿಗೆ ಹಬ್ಬದ ವಿಶೇಷ ಅಡುಗೆ ಪಟ್ಟಿಯಲ್ಲಿ ಸೇರಿದ್ದು ಏನಾದರೂ ಹೊಸತು ಹಬ್ಬದೂಟಕ್ಕೆ...

ಹೊಸ ಸೇರ್ಪಡೆ

  • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...

  • ಈ ವಾರ ಬೆಂಗಳೂರಿನಲ್ಲಿ ಪ್ರತೀವರ್ಷದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ದೇಶವಿದೇಶಗಳ ಚಿತ್ರಗಳನ್ನೂ...

  • ಉಡುಪಿ: ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನವೀಕರಣ ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾ ಯಾಗ, ಶೈವೋ ತ್ಸವ, ರಂಗಪೂಜೆ ಮಹೋತ್ಸವವು ಫೆ. 24ರಿಂದ 29ರ...

  • ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ...

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...