ರಿಡರ್ಸ್ ರೆಸಿಪಿ: ಕಪ್‌ ಶವರ್ಮ

Team Udayavani, Jun 6, 2019, 6:00 AM IST

ಬೇಕಾಗುವ ಸಾಮಗ್ರಿಗಳು

••ಮೈದಾ: 2 ಕಪ್‌
••ಕಾರ್ನ್ಫ್ಲೋರ್‌: 2 ಚಮಚ
••ಉಪ್ಪು, : ರುಚಿಗೆ
••ಎಣ್ಣೆ: 1 ಕಪ್‌ (ತೆಂಗಿನೆಣ್ಣೆ ಬೇಡ)
••ಈರುಳ್ಳಿ: 5
• ಕರಿಮೆಣಸು: 1 ಟೀ ಸ್ಪೂನ್‌,
••ಎಲುಬಿಲ್ಲದ ಕೋಳಿ ಮಾಂಸ: 2 ಕಪ್‌
•ಶುಂಠಿ ಬೆಳ್ಳುಳ್ಳಿ ಪೇಸ್ಟ್‌ :1 ಚಮಚ
••ತುಪ್ಪ: 1 ಚಮಚ
••ಸೋಯಾಸಾನ್‌: 1 ಟೀ ಸ್ಪೂನ್‌
••ಮೊಟ್ಟೆ: 1
••ಲಿಂಬೆರಸ: 4 ಟೀ ಸ್ಪೂನ್‌
•• ಸಕ್ಕರೆ: 1 ಚಿಟಿಕೆ
• ಬೆಳ್ಳುಳ್ಳಿ ಎರಡು ಎಸಳು,
••ಕ್ಯಾಬೇಜ್‌ 1 ತುಂಡು ತುರಿದದ್ದು
••ಕತ್ತರಿಸಿದ ಕೊತ್ತಂಬರಿ ಸೊಪ್ಪು 1 ಹಿಡಿ

ತಯಾರಿಸುವ ವಿಧಾನ
ಒಂದು ಬೌಲ್ಗೆ ಮೈದಾ, ಕಾರ್ನ್ ಫ್ಲೋರ್‌, ಉಪ್ಪು ಬೆರೆಸಿ ಚಪಾತಿ ಹಿಟ್ಟಿನ ಹದಕ್ಕೆ ಕಲಸಿ. ಆನಂತರ ಇದರಚಿಕ್ಕ ಚಿಕ್ಕ ಉಂಡೆ ಮಾಡಿ ಲಟ್ಟಿಸಿ. ಲೋಟದ ಅಡಿ ಭಾಗಕ್ಕೆ (ಕವುಚಿ) ಇಟ್ಟು ಒತ್ತುತ್ತಾ ಕಪ್‌ ಶೇಪ್‌ಗೆ ತಂದು ಕುದಿಯುವ ಎಣ್ಣೆಯಲ್ಲಿ ಮೆಲ್ಲನೆ ಲೋಟವನ್ನು ಹಿಡಿಯಿರಿ. ಬಳಿಕ ಪೋರ್ಕಿನ ಸಹಾಯದಿಂದ ಎಣ್ಣೆಗೆ ಜಾರುವಂತೆ ಮಾಡಿ, ಲೋಟದಿಂದ ಎಣ್ಣೆಗೆ ಬಿದ್ದ ಕಪ್‌ ಅನ್ನು ಸರಿಯಾಗಿ ಕಾಯಿಸಿ. ಅನಂತರ ತೊಳೆದಿಟ್ಟ ಕೋಳಿ ಮಾಂಸಕ್ಕೆೆ ಒಂದು ಚಮಚ ಮೆಣಸಿನ ಹುಡಿ, ಉಪ್ಪು, ನಿಂಬೆರಸ, ಅರ್ಧ ಟೀ ಚಮಚ ಅರಿಸಿನ ಬೆರೆಸಿಡಿ. ಒಂದು ಪ್ಯಾನ್‌ಗೆ ಎರಡು ಚಮಚ ಎಣ್ಣೆ ಹಾಕಿ ಬೆರೆಸಿಟ್ಟ ಕೋಳಿ ಹಾಕಿ ಹುರಿಯಿರಿ. ಉರಿ ಸಣ್ಣಗಿರಲಿ. ಕಾಯಿಸಿದ ಕೋಳಿ ಮಾಂಸವನ್ನು ತೆಗೆದು ಉಳಿದ ಎಣ್ಣೆಗೆ ತುಪ್ಪ ಸೇರಿಸಿ ಕತ್ತರಿಸಿದ ಈರುಳ್ಳಿ ಹಾಕಿ ಕಾಯಿಸಿ. ಅದಕ್ಕೆ ಶುಂಠಿ, ಬೆಳ್ಳುಳ್ಳಿ ಪೇಸ್ಟ್‌, ಕರಿಮೆಣಸು ಹುಡಿ ಹಾಕಿ ಹುರಿದಿಟ್ಟ ಕೋಳಿ ಮಾಂಸವನ್ನು ಚಿಕ್ಕದಾಗಿ ಕತ್ತರಿಸಿ ಹಾಕಿ. ಉಪ್ಪು, ಸೋಯಾ ಸಾಸ್‌ ಹಾಕಿ ಮಿಶ್ರ ಮಾಡಿ. ಐದು ನಿಮಿಷ ಮುಚ್ಚಿಡಿ. ಬಳಿಕ ಮುಚ್ಚಳ ತೆರೆದು ಉಪ್ಪು ಪರೀಕ್ಷಿಸಿ. ಬಳಿಕ ನೀರು ಆರುವ ತನಕ ಬೇಯಿಸಿ.

ಮಿಕ್ಸಿಯ ಚಿಕ್ಕ ಜಾರ್‌ಗೆ ಮೊಟ್ಟೆ, ಉಪ್ಪು, ಸಕ್ಕರೆ, ಲಿಂಬೆರಸ, ಬೆಳ್ಳುಳ್ಳಿ ಬೆರೆಸಿ ತಿರುಗಿಸಿ. ಬಳಿಕ ಮುಚ್ಚಳ ತೆಗೆದು ತುಸು ಎಣ್ಣೆ ಬೆರೆಸಿ ತಿರುಗಿಸಿ. ಸ್ವಲ್ಪಸ್ವಲ್ಪ ಎಣ್ಣೆ ಬೆರೆಸುತ್ತಾ ಈ ಪ್ರಕ್ರಿಯೆ ಮುಂದುವರೆಸಿ. ಮಿಶ್ರಣ ಬೆಣ್ಣೆಯಂತಾಗುವ ತನಕ ಇದೇ ರೀತಿ ಮಾಡಿದಾಗ ಮಯೋನಿಸ್‌ಸಾಸ್‌ ಸಿದ್ಧವಾಗುತ್ತದೆ. ಕತ್ತರಿಸಿದ ಈರುಳ್ಳಿ, ತುರಿದ ಕ್ಯಾಬೇಜ್‌, ಹೆಚ್ಚಿದ ಕೊತ್ತಂಬರಿ ಸೊಪ್ಪು ಎಲ್ಲವನ್ನು ಬೆರೆಸಿ. ಲಿಂಬೆರಸ ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಬೆರೆಸಿ ಮಿಶ್ರಣ ಮಾಡಿ ಸಲಾಡ್‌ ತಯಾರಿಸಿಟ್ಟುಕೊಳ್ಳಿ. ಬಳಿಕ ಕಪ್‌ಗೆ ಒಂದು ಚಮಚ ಖೀಮ ಮಸಾಲೆ ಹಾಕಿ, ಸಲಾಡ್‌ ಒಂದು ಚಮಚ ಹಾಕಿ. ಆನಂತರ ಮಯೋನಿಸ್‌ ಸಾಸ್‌ ಹಾಕಿ ಸರ್ವ್‌ ಮಾಡಿ.

-  ಮರ್ಯಮ್‌ ಇಸ್ಮಾಈಲ್‌, ಉಳ್ಳಾಲಬೈಲ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್‌ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ...

  • ಬೇಕಾಗುವ ಸಾಮಗ್ರಿ ಬಾಸ್ಮತಿ ಅಕ್ಕಿ- 1 ಕಪ್‌ ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್‌ ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್‌. ನೀರುಳ್ಳಿ- 1ರಿಂದ 2 ಶುಂಠಿ- 3 ಬೆಳ್ಳುಳ್ಳಿ-...

  • ಪೇಥಾ ಆಗ್ರಾದ ಪ್ರಸಿದ್ಧ ಸ್ವೀಟ್‌ ಆಗಿದ್ದು, ಇಲ್ಲಿಯ ಈ ಸ್ವೀಟ್‌ ಸವಿಯಲು ಜನರು ದೂರದ ಊರುಗಳಿಂದ ಬರುತ್ತಾರೆ. ಇದನ್ನು ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ...

  • ಬೇಕಾಗುವ ಸಾಮಗ್ರಿ ಹಸಿ ಮೆಣಸಿನ ಕಾಯಿ-2 ಬ್ರಾಹ್ಮಿ ಎಲೆ-1 ಕಪ್‌ ಉದ್ದಿನ ಬೇಳೆ-ಒಂದೂವರೆ ಚಮಚ ಹುಣಿಸೇ ಬೀಜ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ತೆಂಗಿನಕಾಯಿ-ಅರ್ಧ...

  • ಸಿಹಿ ತಿನಿಸು ಹಬ್ಬ, ಆಚರಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಪಾಯಸ, ಹೋಳಿಗೆ ಹಬ್ಬದ ವಿಶೇಷ ಅಡುಗೆ ಪಟ್ಟಿಯಲ್ಲಿ ಸೇರಿದ್ದು ಏನಾದರೂ ಹೊಸತು ಹಬ್ಬದೂಟಕ್ಕೆ...

ಹೊಸ ಸೇರ್ಪಡೆ

  • ಮಡಿಕೇರಿ: ದಕ್ಷಿಣ ಕೊಡಗಿನ ವಿವಿಧಡೆ ಹುಲಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗುತ್ತಿರುವ ವಿಷಯ ಹಸಿರಾಗಿರು ವಾಗಲೇ ಬಿಟ್ಟಂಗಾಲ ಸಮೀಪದ ವಿ.ಬಾಡಗದಲ್ಲಿ ಹುಲಿ ಹೆಜ್ಜೆ...

  • ಈ ವಾರ ಬೆಂಗಳೂರಿನಲ್ಲಿ ಪ್ರತೀವರ್ಷದಂತೆ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗುತ್ತಿದೆ. ಸುಮಾರು 200ಕ್ಕಿಂತಲೂ ಹೆಚ್ಚಿನ ದೇಶವಿದೇಶಗಳ ಚಿತ್ರಗಳನ್ನೂ...

  • ಉಡುಪಿ: ಪಡುಅಲೆವೂರು ಶ್ರೀ ದುರ್ಗಾಪರಮೇಶ್ವರೀ ದೇಗುಲದ ನವೀಕರಣ ಬ್ರಹ್ಮಕಲಶಾಭಿಷೇಕ ಪೂರ್ವಕ ಶತಚಂಡಿಕಾ ಯಾಗ, ಶೈವೋ ತ್ಸವ, ರಂಗಪೂಜೆ ಮಹೋತ್ಸವವು ಫೆ. 24ರಿಂದ 29ರ...

  • ಗರ್ಭಧಾರಣೆ ಎಂಬುದು ಶಿಶು ಜನನವನ್ನು ನಿರೀಕ್ಷಿಸುತ್ತಿರುವ ತಾಯಿ ಮಾತ್ರವಲ್ಲದೆ ಇಡೀ ಕುಟುಂಬವೇ ಹರ್ಷೋಲ್ಲಾಸದಲ್ಲಿ ಇರುವ ಸಮಯ. ಗರ್ಭಧಾರಣೆಯ ಒಂಬತ್ತು ತಿಂಗಳುಗಳ...

  • ಪ್ಲಾಸ್ಟಿಕ್‌ ಇಂದು ಮನುಷ್ಯನ ಜೀವನದ ಅವಿಭಾಜ್ಯ ಅಂಗವಾಗಿದೆ ಎಂದರೆ ತಪ್ಪಾಗಲಾರದು. ಕಡಿಮೆ ವೆಚ್ಚದಲ್ಲಿ ತಯಾರಿಕೆ ಹಾಗೂ ಕೈಗೆಟಕುವ ದರದಲ್ಲಿ ಈ ಪ್ಲಾಸ್ಟಿಕ್‌...