ಇಂಡೋ-ಚೈನೀಸ್‌ ಭೇಲ್‌

Team Udayavani, Nov 23, 2019, 4:29 AM IST

1 ಪಾತ್ರೆ ನೀರು
ಎಣ್ಣೆ-ಅಗತ್ಯವಿದ್ದಷ್ಟು
ಹಕ್ಕ ನೂಡಲ್ಸ್‌-1 ಪ್ಯಾಕ್‌
ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ
ಈರುಳ್ಳಿಯ ಬಿಳಿಭಾಗ-2 ಚಮಚ
ಕ್ಯಾಬೇಜ್‌-1 ಕಪ್‌
ಸಣ್ಣಗೆ ಹಚ್ಚಿದ ಕ್ಯಾರೆಟ್‌-ಅರ್ಧ ಕಪ್‌
ಸಣ್ಣಗೆ ಹಚ್ಚಿದ ಕ್ಯಾಪ್ಸಿಕಮ್‌-ಅರ್ಧ ಕಪ್‌
ಸೋಯಾ ಸಾಸ್‌-1 ಚಮಚ
ಟೊಮೇಟೋ ಸಾಸ್‌-3 ಚಮಚ
ವಿನೆಗರ್‌-ಅರ್ಧ ಚಮಚ
ಶೆಜ್‌ವಾನ್‌ ಚಟ್ನಿ-2 ಟೇಬಲ್‌ ಚಮಚ
ಉಪ್ಪು ರುಚಿಗೆ ತಕ್ಕಷ್ಟು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ನೀರನ್ನು ಕುದಿಸಬೇಕು. ಕುದಿದ ನೀರಿಗೆ ಒಂದು ಚಮಚ ಎಣ್ಣೆ ಹಾಕಿ ಕಲಸಿ. 1 ಪ್ಯಾಕ್‌ ಹಕ್ಕ ನೂಡಲ್ಸ್‌ ಅದಕ್ಕೆ ಹಾಕಿ 5 ನಿಮಿಷ ಕುದಿಸಿ. ಬಳಿಕ ನೀರನ್ನೆಲ್ಲ ಬಸಿಯಿರಿ. ಇನ್ನೊಂದು ಪಾತ್ರೆಯಲ್ಲಿ ಎಣ್ಣೆಯನ್ನು ಕುದಿಸಲು ಇಡಿ. ಕುದಿದ ಎಣ್ಣೆಗೆ ನೀರು ಬಸಿದ ನೂಡಲ್ಸ್‌ನ್ನು ಹಾಕಿ ಕೆಂಪಗಾಗುವ ತನಕ ಕರಿಯಿರಿ. ಬಳಿಕ ಕೆಂಪಾದ ನೂಡಲ್ಸ್‌ನ್ನು ಒಂದು ಪಾತ್ರೆಯಲ್ಲಿ ತೆಗೆದಿಡಿ. ಇನ್ನು ಪ್ರತ್ಯೇಕ ಪಾತ್ರೆಯಲ್ಲಿ ಮೂರು ಟೇಬಲ್‌ ಸ್ಪೂನ್‌ ಎಣ್ಣೆಯನ್ನು ಹಾಕಿ ಕುದಿಸಿರಿ. ಎಣ್ಣೆ ಕುದಿದ ಬಳಿಕ ಅದಕ್ಕೆ 1 ಚಮಚ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ, 2 ಚಮಚ ಈರುಳ್ಳಿಯ ಬಿಳಿಭಾಗವನ್ನು ಹಾಕಿ ಕರಿಯಿರಿ. ಒಂದು ಕಪ್‌ ಕ್ಯಾಬೇಜ್‌, ಸಣ್ಣಗೆ ತೆಳ್ಳಗೆ ಹೆಚ್ಚಿದ ಅರ್ಧ ಕಪ್‌ ಕ್ಯಾರೆಟ್‌, ಅರ್ಧ ಕಪ್‌ ಕ್ಯಾಪ್ಸಿಕಮ್‌ನ್ನು ಹಾಕಿ ಮತ್ತೆ ದೊಡ್ಡ ಉರಿಯಲ್ಲಿ 3 ನಿಮಿಷ ಕರಿಯಿರಿ. ರುಚಿಗೆ ತಕ್ಕಷ್ಟು ಉಪ್ಪು ಇದಕ್ಕೆ ಹಾಕಿಕೊಳ್ಳಿ. ಬಳಿಕ 1 ಚಮಚ ಸೋಯಾ ಸಾಸ್‌, 3 ಚಮಚ ಟೊಮೇಟೋ ಸಾಸ್‌, ಅರ್ಧ ಚಮಚ ವಿನೆಗರ್‌, ಶೆಜ್ವಾನ್‌ ಚಟ್ನಿ 2 ಟೇಬಲ್‌ ಚಮಚ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಅದನ್ನು ಒಂದು ಪಾತ್ರೆಗೆ ಹಾಕಿ ಆಗಲೇ ಹುರಿದಿಟ್ಟ ನೂಡಲ್ಸ್‌ನ್ನು ತುಂಡು ಮಾಡಿ ಚೆನ್ನಾಗಿ ಕಲಸಿ. ಇಂಡೋ-ಚೈನೀಸ್‌ ಭೇಲ್‌ ರೆಡಿ.

-   ಸುಶೀಲಾ


ಈ ವಿಭಾಗದಿಂದ ಇನ್ನಷ್ಟು

  • ನಾವು ಸೇವಿಸುವ ಆಹಾರ ಪದಾರ್ಥಗಳಿಗೆ ಹೋಲಿಸಿದರೆ ಈಶಾನ್ಯ ಭಾರತದ ಮಂದಿ ಸೇವಿಸುವ ಆಹಾರಗಳು ಕೊಂಚ ಭಿನ್ನವಾಗಿ ನಿಲ್ಲುತ್ತವೆ. ಕೇವಲ ಮಾಂಸಾಹಾರದಲ್ಲಿ ಮಾತ್ರವಲ್ಲದೆ...

  • ಬೇಕಾಗುವ ಸಾಮಗ್ರಿಗಳು ತೆಂಗಿನ ತುರಿ -1 ಕಪ್‌ ಮಾವಿನ ಹಣ್ಣಿನ ಹೋಳುಗಳು-1 ಕಪ್‌ ಹಾಲು-1 ಕಪ್‌ ಸಕ್ಕರೆ-1 ಕಪ್‌ ಏಲಕ್ಕಿ -1 ಟೀ ಸ್ಪೂನ್‌ ಡ್ರೈ ಫ್ರುಟ್ಸ್‌ -(ಬೇಕಾದಷ್ಟು) ಪಿಸ್ತಾ-ಸ್ವಲ್ಪ ತುಪ್ಪ...

  • ತಮಿಳುನಾಡಿನ ಅತಿ ಪ್ರಸಿದ್ಧ ಖಾದ್ಯಗಳಲ್ಲಿ ಒಂದಾಗಿದೆ. ಇದರಲ್ಲಿ ಸಿಹಿ ಮತ್ತು ಖಾರ ಎರಡೂ ವಿಧಗಳು ಲಭ್ಯವಿವೆ. ಬೇಕಾಗುವ ಸಾಮಗ್ರಿಗಳು ಅಕ್ಕಿ- 1 ಕಪ್‌ ಹೆಸರುಬೇಳೆ-...

  • ರುಚಿಯಾದ ಆಹಾರಗಳು ಹೆಚ್ಚಿನವು ದೇಹದ ಆರೋಗ್ಯವನ್ನು ಕೆಡಿಸುತ್ತವೆ ಎಂಬ ಅಭಿಪ್ರಾಯವಿದೆ. ಆದರೆ ನಾಲಿಗೆಗೆ ರುಚಿ ದೊರಕಿಸುವುದರೊಂದಿಗೆ ದೇಹದ ಆರೋಗ್ಯವನ್ನು...

  • ಬೇಕಾಗುವ ಸಾಮಗ್ರಿಗಳು ಪುನರ್ಪುಳಿ/ಕೋಕಂ-5-6 ತೆಂಗಿನ ತುರಿ- ಅರ್ಧ ಕಪ್‌ ಹಸಿ ಮೆಣಸು 1 ಅಥವಾ 2 ಮಜ್ಜಿಗೆ- 2 ಕಪ್‌, ಬೆಲ್ಲ-1 ಚಮಚ ಜೀರಿಗೆ-1 ಚಮಚ ಸಾಸಿವೆ-1 ಚಮಚ ಎಣ್ಣೆ-1...

ಹೊಸ ಸೇರ್ಪಡೆ