ಕೇರಳ ಪುಟ್ಟು, ಕಡಲೆ ಪದಾರ್ಥ

Team Udayavani, Nov 23, 2019, 4:00 AM IST

ಬೇಕಾಗುವ ಸಾಮಗ್ರಿ
ಅಕ್ಕಿಹಿಟ್ಟು: 1 ಕಪ್‌
ಉಪ್ಪು: ಸ್ವಲ್ಪ
ತೆಂಗಿನ ತುರಿ: 1 ಕಪ್‌

ಕಡಲೆ ಪದಾರ್ಥಕ್ಕೆ:
ನೆನೆಸಿಟ್ಟ ಕಡಲೆ: 1 ಕಪ್‌
ಎಣ್ಣೆ: ಸ್ವಲ್ಪ
ಏಲಕ್ಕಿ, ಜೀರಿಗೆ: ಸ್ವಲ್ಪ
ಈರುಳ್ಳಿ: ಒಂದು
ಬೆಳ್ಳುಳ್ಳಿ: 4ಎಸಳು
ಟೊಮೇಟೊ: 1
ತೆಂಗಿನ ತುರಿ: ಅರ್ಧ
ಕರಿಬೇವು: 5
ಮೆಣಸಿನ ಹುಡಿ: 4 ಚಮಚ
ಕೊತ್ತಂಬರಿ ಹುಡಿ: ಅರ್ಧ ಚಮಚ
ಅರಶಿನ: 1/4 ಚಮಚ
ಹಸಿಮೆಣಸು: ಎರಡು

ಮೊದಲು ಒಂದು ಪಾತ್ರೆಗೆ ಅಕ್ಕಿ ಹುಡಿ ಹಾಕಿ ಅದಕ್ಕೆ ಸ್ವಲ್ಪ ಉಪ್ಪು ಹಾಕಿ ಚೆನ್ನಾಗಿ ಮಿಶ್ರಮಾಡಬೇಕು. ಅನಂತರ ಅದಕ್ಕೆ ಸ್ವಲ್ಪ ನೀರು ಚಿಮುಕಿಸಿ ಅಕ್ಕಿ ಹುಡಿ ನೆನೆಯುವಂತೆ ಮಾಡಬೇಕು. ಅನಂತರ ಪುಟ್ಟು ಮಾಡುವ ಕೊಳವೆಯಾಕೃತಿಯ ಪಾತ್ರೆಗೆ ತೆಂಗಿನ ತುರಿ ಹಾಗೂ ಅಕ್ಕಿ ಹುಡಿಯನ್ನು ಲೇಯರ್‌ ಲೇಯರ್‌ಗಳಾಗಿ ಹಾಕಿ ಬೇಯಿಸಬೇಕು. ಕಡಲೆ ಪದಾರ್ಥ ಮಾಡಲು ಮೊದಲು ನೆನೆಸಿಟ್ಟ ಕಡಲೆಯನ್ನು ಬೇಯಿಸಬೇಕು. ಅನಂತರ ಒಂದು ಪಾತ್ರೆಗೆ ಸ್ವಲ ಎಣ್ಣೆ ಹಾಕಿ ಅದು ಬಿಸಿಯಾಗುವಾಗ ಜೀರಿಗೆ, ಏಲಕಿ,R ಈರುಳ್ಳಿ, ಬೆಳ್ಳುಳ್ಳಿ ಹಾಕಿ ಹುರಿದುಕೊಳ್ಳಬೇಕು. ಅನಂತರ ಅದಕ್ಕೆ ಟೊಮೇಟೊ, ಮೆಣಸಿನ ಹುಡಿ, ಅರಶಿನ, ಕೊತ್ತಂಬರಿ ಹುಡಿ, ತೆಂಗಿನ ತುರಿ ಹಾಕಿ ಮಿಶ್ರ ಮಾಡಿ ನುಣ್ಣಗೆ ರುಬ್ಬಿಕೊಳ್ಳಬೇಕು. ಅನಂತರ ಒಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಬಿಸಿ ಮಾಡಿ ಅದಕ್ಕೆ ಈರುಳ್ಳಿ ಹಾಗೂ ಹಸಿಮೆಣಸು ಹಾಕಿ ಕೆಂಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ಅರೆದ ಮಸಾಲೆ ಹಾಗೂ ಬೇಯಿಸಿದ ಕಡಲೆಯನ್ನು ಹಾಕಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಬೇಕು. ಪುಟ್‌ ಹಾಗೂ ಕಡಲೆಪದಾರ್ಥದ ಕಾಂಬಿನೇಷನ್‌ ಸೂಪರ್‌.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು


ಈ ವಿಭಾಗದಿಂದ ಇನ್ನಷ್ಟು

  • ಚಳಿಗಾಲ ಶುರುವಾಗುತ್ತಿದ್ದಂತೆ ಸಂಜೆ ವೇಳೆಗೆ ಬಿಸಿ ಬಿಸಿ ಚಹಾದ ಜತೆ ಸವಿಯಲು ಏನಾದರೂ ಇದ್ದರೆ ಚೆನ್ನಾಗಿತ್ತು ಎನ್ನುವವರು ಮನೆಯಲ್ಲಿ ವಿಧವಿಧವಾದ ತಿಂಡಿಗಳನ್ನು...

  • ಬೇಕಾಗುವ ಸಾಮಗ್ರಿಗಳು ಎಣ್ಣೆ -ಸ್ವಲ್ಪ 3 ಕಪ್‌ ದಪ್ಪ ಅವಲಕ್ಕಿ ಶೇಂಗಾ ಬೀಜ-ಅರ್ಧ ಕಪ್‌ ಬಾದಾಮಿ ಬೀಜ-ಕಾಲು ಕಪ್‌ ಗೋಡಂಬಿ-ಕಾಲು ಕಪ್‌ ಕಡಲೆ ಬೇಳೆ-2 ದೊಡ್ಡ ಚಮಚ ಕರಿಬೇವಿನ...

  • 1 ಪಾತ್ರೆ ನೀರು ಎಣ್ಣೆ-ಅಗತ್ಯವಿದ್ದಷ್ಟು ಹಕ್ಕ ನೂಡಲ್ಸ್‌-1 ಪ್ಯಾಕ್‌ ಸಣ್ಣಗೆ ಹಚ್ಚಿದ ಬೆಳ್ಳುಳ್ಳಿ-1 ಚಮಚ ಈರುಳ್ಳಿಯ ಬಿಳಿಭಾಗ-2 ಚಮಚ ಕ್ಯಾಬೇಜ್‌-1 ಕಪ್‌ ಸಣ್ಣಗೆ...

  • ಬೇಕಾಗುವ ಸಾಮಗ್ರಿಗಳು ಖೋಯಾ- 100 ಗ್ರಾಂ ಬಾದಾಮ್‌- 60 ಗ್ರಾಂ ಪಿಸ್ತಾ -6ಂ ಗ್ರಾಂ ಸಕ್ಕರೆ - 60 ಗ್ರಾಂ ಏಲಕ್ಕಿ - 3 ತುಪ್ಪ ಬಾದಾಮ್‌ ಪೌಡರ್‌ - 2 ಚಮಚ ಮಾಡುವ ವಿಧಾನ: ಒಂದು...

  • ಇಂದಿನ ಆಹಾರ ಪದಾರ್ಥಗಳಲ್ಲಿ ಆರೋಗ್ಯಕ್ಕೆ ಪೂರಕವಾಗಿರುವಂತಹ ಯಾವುದೇ ಗುಣಗಳಿರುವುದಿಲ್ಲ, ಫಾಸ್ಟ್‌ಫ‌ುಡ್‌ಗಳಲ್ಲಿ ಒಳಿತಿಗಿಂತ ಕೆಡುಕೇ ಅಧಿಕವಾಗಿರುತ್ತದೆ....

ಹೊಸ ಸೇರ್ಪಡೆ