ಮ್ಯಾಂಗೋ ಕೋಕನಟ್‌ ಬರ್ಫಿ

Team Udayavani, Dec 7, 2019, 4:58 AM IST

ಬೇಕಾಗುವ ಸಾಮಗ್ರಿಗಳು
ತೆಂಗಿನ ತುರಿ -1 ಕಪ್‌
ಮಾವಿನ ಹಣ್ಣಿನ ಹೋಳುಗಳು-1 ಕಪ್‌
ಹಾಲು-1 ಕಪ್‌
ಸಕ್ಕರೆ-1 ಕಪ್‌
ಏಲಕ್ಕಿ -1 ಟೀ ಸ್ಪೂನ್‌
ಡ್ರೈ ಫ್ರುಟ್ಸ್‌ -(ಬೇಕಾದಷ್ಟು)
ಪಿಸ್ತಾ-ಸ್ವಲ್ಪ
ತುಪ್ಪ – ಸ್ವಲ್ಪ

ಮಾಡುವ ವಿಧಾನ:
ಕಾದ ಕಡಾಯಿಗೆ ತೆಂಗಿನ ತುರಿಯನ್ನು ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೆ ಅದನ್ನು ಬಿಸಿ ಮಾಡಿ. ಅನಂತರ ಅದಕ್ಕೆ ಹಾಲು, ಸ್ವಲ್ಪ ತುಪ್ಪ, ಸಕ್ಕರೆ ಹಾಗೂ ಮಾವಿನ ಹಣ್ಣಿನ ಹೋಳುಗಳನ್ನು ಸೇರಿಸಿ ಚೆನ್ನಾಗಿ ಕಲಸಿ ಮಧ್ಯಮ ಉರಿಯಲ್ಲಿ ಕುದಿಸಿ. ಇಲ್ಲದೆ ಇದ್ದರೆ ಮ್ಯಾಂಗೋ ಫ್ಲೇವರ್‌ಗಳನ್ನು ಕೂಡ ಬಳಸಬಹುದು. ಸುಮಾರು 18- 20 ನಿಮಿಷಗಳ ಕಾಲ ಈ ಪಾಕವನ್ನು ಚೆನ್ನಾಗಿ ತಿರುವುತ್ತಿರಿ. ಅದು ನಿಧಾನವಾಗಿ ಗಟ್ಟಿಗೊಳ್ಳತೊಡಗಿದ ಅನಂತರ ಅದನ್ನು ಕೆಳಗಿಟ್ಟು ಅದಕ್ಕೆ ಏಲಕ್ಕಿ, ಪಿಸ್ತಾ ಪೌಡರ್‌ ಮತ್ತು ಡ್ರೈಫ್ರುಟ್ಸ್‌ ಗಳನ್ನು ಸೇರಿಸಿ ಮಿಕ್ಸ್‌ ಮಾಡಿ. ನಂತರ ಒಂದು ಬಟ್ಟಲಿಗೆ ತುಪ್ಪ ಹಚ್ಚಿ ಈ ಪಾಕವನ್ನು ಅದರಲ್ಲಿ ಹಾಕಿ ಕೊಂಚ ಹೊತ್ತು ಫ್ರೀಜರ್‌ನಲ್ಲಿಟ್ಟರೆ ಘಮಘಮಿಸುವ ರುಚಿಕರ ಮ್ಯಾಂಗೋ ಕೋಕನಟ್‌ ಬರ್ಫಿ ರೆಡೀ ಟು ಸರ್ವ್‌.

-   ಭುವನಾ ಪುತ್ತೂರು

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಮಕರ ಸಂಕ್ರಾಂತಿಯು ಹಿಂದೂಗಳ ವಿಶೇಷ ದಿನವಾಗಿದ್ದು, ಈ ದಿನ ಎಲ್ಲ ಊರುಗಳಲ್ಲೂ ವಿಶೇಷ ತಿಂಡಿಗಳನ್ನು ಮಾಡುತ್ತಾರೆ. ದೇವರ ಪ್ರಸಾದವಾಗಿ ಅಥವಾ ಹಬ್ಬದ ಸಂಭ್ರಮಕ್ಕಾಗಿ...

  • ಉಡುಪಿ ಶ್ರೀಕೃಷ್ಣಮಠದಲ್ಲಿ ಮಕರಸಂಕ್ರಾಂತಿ ಮರುದಿನ ಚೂರ್ಣೋತ್ಸವಕ್ಕೆ ಕೆಲವೊಂದು ಭಕ್ಷ್ಯಗಳು ವಿಶೇಷ. ಭೋಜನದ ವೇಳೆ ಅಶ್ವತ್ಥಾಮಾಚಾರ್ಯರು ಬರುತ್ತಾರೆಂಬ...

  • ಬೇಕಾಗುವ ಸಾಮಾಗ್ರಿ ಪಾಲಕ್‌ ಸೊಪ್ಪು-50 ಎಲೆ ಹಸಿ ಮೆಣಸಿನ ಕಾಯಿ-1 ಹಸಿ ಶುಂಠಿ-1 ಪುದೀನಾ ಎಲೆ-ಎಂಟು ಕೊತ್ತಂಬರಿ ಸೊಪ್ಪು-ಅರ್ಧ ಕಪ್‌ ಗೋಧಿ ಹಿಟ್ಟು-1.5 ಕಪ್‌ ಓಮದ...

  • ಮಾದ್ಲಿ ಬೇಕಾಗುವ ಸಾಮಗ್ರಿಗಳು ಗೋಧಿ ಹಿಟ್ಟು: 1 ಕಪ್‌ ಬೆಲ್ಲ: 2/1 ಕಪ್‌ ತೆಂಗಿನಕಾಯಿ: 2 ಚಮಚ ಗಸಗಸೆ: 1 ಚಮಚ ಹುರಿದ ನೆಲಗಡಲೆ: 2 ಚಮಚ ಪುಟಾಣಿ: 1 ಚಮಚ ಏಲಕ್ಕಿ: ಎರಡು...

  • ಬೇಕಾಗುವ ಸಾಮಗ್ರಿಗಳು ಪಾಲಕ್‌ ಸೋಪ್ಪು- 1 ಕಪ್‌ ಬೇಯಿಸಿದ ತೊಗರಿ ಬೇಳೆ-1 ಕಪ್‌ ಜೀರಿಗೆ -ಕಾಲು ಚಮಚ ಶುಂಠಿ-ಬೆಳ್ಳುಳ್ಳಿ ಪೇಸ್ಟ್‌ - 1 ಚಮಚ ಕೆಂಪು ಮೆಣಸಿನ ಹುಡಿ-1...

ಹೊಸ ಸೇರ್ಪಡೆ