ಪಾಲಕ್ ದಾಲ್
Team Udayavani, Jan 4, 2020, 4:30 AM IST
ಬೇಕಾಗುವ ಸಾಮಗ್ರಿಗಳು
ಪಾಲಕ್ ಸೋಪ್ಪು- 1 ಕಪ್
ಬೇಯಿಸಿದ ತೊಗರಿ ಬೇಳೆ-1 ಕಪ್
ಜೀರಿಗೆ -ಕಾಲು ಚಮಚ
ಶುಂಠಿ-ಬೆಳ್ಳುಳ್ಳಿ ಪೇಸ್ಟ್ – 1 ಚಮಚ
ಕೆಂಪು ಮೆಣಸಿನ ಹುಡಿ-1 ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ -1 ರಿಂದ 2
ಮಾಡುವ ವಿಧಾನ:
ಬಾಣಲೆಗೆ ಎಣ್ಣೆ ಅಥವಾ ತುಪ್ಪ ಹಾಕಿ ಜೀರಾ ಹಾಕಿ ಹುರಿದು ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಬಾಡಿಸಿ, ಶುಂಠಿ-ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ ಟೊಮೇಟೋ ಹಾಕಿ ಇನ್ನೊಮ್ಮೆ ಚೆನ್ನಾಗಿ ಫ್ರೈ ಮಾಡಿ ಅನಂತರ ಇದಕ್ಕೆ ಅರಶಿನ, ಮೆಣಸಿನ ಪುಡಿ, ಗರಂ ಮಸಾಲ ಪುಡಿ, ಉಪ್ಪು ಸಕ್ಕರೆ ಹಾಕಿ ಚೆನ್ನಾಗಿ ಬಾಡಿಸಿ. ಅನಂತರ ಹೆಚ್ಚಿದ ಪಾಲಕ್ ಹಾಕಿ ಬಾಡಿಸಿ, ಇದಕ್ಕೆ ಬೇಯಿಸಿದ ತೊಗರಿಬೇಳೆ ಹಾಕಿ ಬೇಕಾದಷ್ಟು ನೀರು ಹಾಕಿ ಒಂದು ಕುದಿ ಬಂದ ಅನಂತರ ಕೆಳಗಿಳಿಸಿ. ಚಪಾತಿ ಅನ್ನದೊಂದಿಗೆ ಸ್ವಲ್ಪ ತುಪ್ಪ ಹಾಕಿ ಸವಿಯಲು ಕೊಡಿ.
ಶ್ವೇತಾ ಅವಿನಾಶ್, ಬಿಜೈ, ಮಂಗಳೂರು