ಫ‌ಟಾಫ‌ಟ್‌ ಫ‌ಲಾಹಾರ


Team Udayavani, Sep 22, 2018, 2:36 PM IST

22-sepctember-13.jpg

ನಾಳೆ ಲಂಚ್‌ ಬಾಕ್ಸ್‌ಗೆ ಏನು ತಿಂಡಿ ಮಾಡಬಹುದು?.. ಇದು ದಿನವೂ ಎಲ್ಲ ರನ್ನೂ ಕಾಡುವ ಪ್ರಶ್ನೆ. ಬೆಳಗ್ಗಿನ ಅವಸರದಲ್ಲಿ ಫ‌ಟಾಫ‌ಟ್‌ ಆಗುವ ಐಟಮ್‌ಗಳಾದರೆ ಒಳ್ಳೆಯದು. ಅದನ್ನೇ ಮಧ್ಯಾಹ್ನದ ಬಾಕ್ಸ್‌ ಗೂ ತೆಗೆದುಕೊಂಡು ಹೋಗುವಂತಾದರೆ ಮತ್ತೂ ಒಳ್ಳೆಯದು. ಹೀಗೆ, ಅವಸರದಲ್ಲಿ ಮಾಡಬಹುದಾದ ಅನ್ನದ ಅಡುಗೆ ರೆಸಿಪಿಗಳು ಇಲ್ಲಿವೆ..

ಕರಿಬೇವಿನ ಅನ್ನ
ಬೇಕಾಗುವ ಸಾಮಗ್ರಿಗಳು
ಅನ್ನ- 1 ಕಪ್‌, ಕರಿಬೇವಿನ ಸೊಪ್ಪು- 1/2 ಕಪ್‌, ತೆಂಗಿನ ತುರಿ- 1/2 ಕಪ್‌, ಸ್ವಲ್ಪ ಇಂಗು, ಸ್ವಲ್ಪ ಅರಿಸಿನ, ಖಾರಕ್ಕೆ ತಕ್ಕಷ್ಟು ಬ್ಯಾಡಗಿ ಮೆಣಸು, ಬೆಳ್ಳುಳ್ಳಿ- 5- 6 ಎಸಳು, ಹುಣಸೆ ಹಣ್ಣು, ಉದ್ದು- 1 ಚಮಚ, ಸಾಸಿವೆ- 1/2 ಚಮಚ, ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ-1, ಸಣ್ಣಗೆ ಹೆಚ್ಚಿದ ಟೊಮೆಟೊ- 1 (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಬಳಸಬಹುದು).

ಮಾಡುವ ವಿಧಾನ
ಮೊದಲು ಮಿಕ್ಸಿ ಜಾರಿಗೆ ತೆಂಗಿನ ತುರಿ, ಬ್ಯಾಡಗಿ ಮೆಣಸು, ಹುಣಸೆ ಹಣ್ಣು, ಕರಿಬೇವು, ಅರಿಸಿ ನ ಬೆಳ್ಳುಳ್ಳಿ ಹಾಕಿ ಗಟ್ಟಿಯಾಗಿ ರುಬ್ಬಿಕೊಳ್ಳಿ. ಈಗ ಒಂದು ಬಾಣಲೆಗೆ ಎಣ್ಣೆ ಹಾಕಿ, ಅದಕ್ಕೆ ಉದ್ದು, ಸಾಸಿವೆ ಹಾಕಿ ಚಟಪಟ ಅನ್ನುವಾಗ ಇಂಗು ಹಾಕಿ. ಅನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ಇದು ಫ್ರೈ ಆದ ಮೇಲೆ ಟೊಮೆಟೊ ಹಾಕಿ ಚೆನ್ನಾಗಿ ಫ್ರೈ ಮಾಡಿ. (ಸಣ್ಣಗೆ ಹೆಚ್ಚಿದ ಬೇರೆ ತರಕಾರಿಗಳನ್ನು ಹಾಕಬಹುದು.) ಅದಕ್ಕೆ ರುಬ್ಬಿದ ಮಸಾಲೆ ಹಾಕಿ, ಹಸಿ ವಾಸನೆ ಹೋಗುವ ವರೆಗೆ ಫ್ರೈ ಮಾಡಿ. ಈಗ ಮೊದಲೇ ಮಾಡಿಟ್ಟ ಅನ್ನ ಹಾಕಿ ಮಿಕ್ಸ್‌ ಮಾಡಿ, ಸ್ವಲ್ಪ ತುಪ್ಪ ಹಾಕಿ ಒಮ್ಮೆ ಚೆನ್ನಾಗಿ ಕೈಯಾಡಿಸಿ. 

ಶೇಂಗಾ ಅನ್ನ
ಬೇಕಾಗುವ ಸಾಮಗ್ರಿಗಳು
ಅನ್ನ- 1 ಕಪ್‌, ಸ್ವಲ್ಪ ಹುರಿದು ಸಿಪ್ಪೆ ತೆಗೆದ ಶೇಂಗಾ- 1/2 ಕಪ್‌, ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ- 1, ಉದ್ದು- 1 ಚಮಚ, ಕಡ್ಲೆಬೇಳೆ – 1ಚಮಚ, ಜೀರಿಗೆ- 1 ಚಮಚ, ಸಾಸಿವೆ- 1ಚಮಚ, ಎಳ್ಳು – 1ಚಮಚ, ಬ್ಯಾಡಗಿ ಮೆಣಸು- 6, ತೆಂಗಿನ ತುರಿ- ಕಾಲು ಕಪ್‌, ಕರಿಬೇವಿನ ಎಸಳು- 6, ಚಿಟಿಕೆ ಇಂಗು, ತುಪ್ಪ- 2 ಚಮಚ, ರುಚಿಗೆ ತಕ್ಕಷ್ಟು ಉಪ್ಪು (ಬೇಕಿದ್ದರೆ ಬೆಳ್ಳುಳ್ಳಿ ಹಾಕಬಹುದು).

ಮಾಡುವ ವಿಧಾನ
ಬಾಣಲೆಗೆ ಸ್ವಲ್ಪ ಎಣ್ಣೆ ಹಾಕಿ, ಅದುಕಾದ ಅನಂತರ ಶೇಂಗಾ, ಉದ್ದಿನ ಬೇಳೆ, ಕಡ್ಲೆಬೇಳೆ, ಜೀರಿಗೆ, ಸಾಸಿವೆ, ಎಳ್ಳು, ಬ್ಯಾಡಗಿ ಮೆಣಸು, ಬೆಳ್ಳುಳ್ಳಿ, ತೆಂಗಿನ ತುರಿಯನ್ನು ಒಂದಾದ ಮೇಲೆ ಒಂದರಂತೆ ಹಾಕಿ ಫ್ರೈ ಮಾಡಿ. ಈಗ ಇದನ್ನು ಮಿಕ್ಸಿಗೆ ಹಾಕಿ ಪೌಡರ್‌ ಮಾಡಿ. ಇನ್ನೊಮ್ಮೆ ಬಾಣಲೆಗೆ ಸ್ವಲ್ಪ ಜಾಸ್ತಿ ಎಣ್ಣೆ ಹಾಕಿ ಕಾಲು ಕಪ್‌ (ಉಳಿದ) ಶೇಂಗಾ, ಹೆಚ್ಚಿದ ಈರುಳ್ಳಿ, ಕರಿಬೇವು, ಇಂಗು ಹಾಕಿ ಫ್ರೈ ಮಾಡಿ. ಈಗ ಅದಕ್ಕೆ ಮೊದಲೇ ಮಾಡಿಟ್ಟ ಅನ್ನ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಮೇಲಿಂದ ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ. 

ಟೊಮೆಟೊ ಬಾತ್‌ 
ಬೇಕಾಗುವ ಸಾಮಗ್ರಿಗಳು
ಟೊಮೆಟೊ- 2, ಜೀರಿಗೆ- 1/2 ಚಮಚ, ಸೋಂಪು- 1/2 ಚಮಚ, ಬೆಳ್ಳುಳ್ಳಿ – 5 ಎಸಳು, ಶುಂಠಿ- ಅರ್ಧ ಇಂಚು, ಸಣ್ಣಗೆ ಹೆಚ್ಚಿದ ಈರುಳ್ಳಿ- ಒಂದು ಕಪ್‌, ಕೊತ್ತಂಬರಿ ಸೊಪ್ಪು, ಉಪ್ಪು, ಅಚ್ಚ ಖಾರದ ಪುಡಿ, ಇಂಗು ಸ್ವಲ್ಪ, ಗರಂ ಮಸಾಲ- ಅರ್ಧ ಚಮಚ, ಅಕ್ಕಿ-1 ಕಪ್‌, ತುಪ್ಪ ಒಂದು ಚಮಚ, ನೀರು.
ಮಾಡುವ ವಿಧಾನ
ಮೊದಲು ಟೊಮೆಟೊವನ್ನು ಬೇಯಿಸಿಕೊಳ್ಳಿ. ಅನಂತರ ಒಂದು ಮಿಕ್ಸಿ ಜಾರ್‌ ಗೆ ಶುಂಠಿ, ಬೆಳ್ಳುಳ್ಳಿ, ಸೊಂಪು ಹಾಕಿ ರುಬ್ಬಿಕೊಳ್ಳಿ. ಈಗ ಅದೇ ಜಾರ್‌ಗೆ ಬೇಯಿಸಿದ ಟೊಮೆಟೊ, ಅಚ್ಚ ಖಾರದ ಪುಡಿ, ಗರಂ ಮಸಾಲ ಹಾಕಿ ರುಬ್ಬಿ. ಕುಕ್ಕರ್‌ಗೆ ಸ್ವಲ್ಪ ಎಣ್ಣೆ ಹಾಕಿ, ಅದಕ್ಕೆ ಜೀರಿಗೆ, ಇಂಗು ಹಾಕಿ. ಅನಂತರ ಈರುಳ್ಳಿ ಹಾಕಿ ಚೆನ್ನಾಗಿ ಫ್ರೈ ಮಾಡಿ. ರುಬ್ಬಿದ ಮಸಾಲಾ ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಈಗ ತೊಳೆದ ಅಕ್ಕಿ, ಉಪ್ಪು, ಎರಡು ಕಪ್‌ ನೀರು ಹಾಕಿ ಕುಕ್ಕರ್‌ ಅನ್ನು ಮೂರು ವಿಷಲ್‌ ಕೂಗಿಸಿ. ತಣ್ಣಗಾದ ಮೇಲೆ ಮುಚ್ಚಳ ತೆರೆದು ಕೊತ್ತಂಬರಿ ಸೊಪ್ಪು ಮತ್ತು ತುಪ್ಪ ಹಾಕಿ ಚೆನ್ನಾಗಿ ಕೈಯಾಡಿಸಿ. 

ಕೊತ್ತಂಬರಿ ಸೊಪ್ಪಿನ ಅನ್ನ
ಬೇಕಾಗುವ ಸಾಮಗ್ರಿಗಳು

ಅನ್ನ – 1 ಕಪ್‌, ಈರುಳ್ಳಿ- 1, ಲವಂಗ- 4, ಚಕ್ಕೆ – 2, ಹಸಿಮೆಣಸು – 2, ಕೊತ್ತಂಬರಿ ಸೊಪ್ಪು – 1 ಹಿಡಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ – 1 ಚಮಚ, ಗೋಡಂಬಿ- ಅರ್ಧ ಕಪ್‌, ಹೆಚ್ಚಿದ ಟೊಮೆಟೊ- 1, ಹಸಿ ಬಟಾಣಿ ಸ್ವಲ್ಪ, (ಬೇಕಿದ್ದರೆ ಬೇರೆ ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಹಾಕಿ), ಎಣ್ಣೆ, ಉಪ್ಪು, ತುಪ್ಪ. 

ಮಾಡುವ ವಿಧಾನ
ಮಿಕ್ಸಿ ಜಾರ್‌ಗೆ ಹೆಚ್ಚಿದ ಈರುಳ್ಳಿ, ಲವಂಗ, ಚಕ್ಕೆ, ಹಸಿಮೆಣಸು, ಕೊತ್ತಂಬರಿ ಸೊಪ್ಪು ಹಾಕಿ ರುಬ್ಬಿಕೊಳ್ಳಿ. ಒಂದು ಬಾಣಲೆಗೆ ಎಣ್ಣೆ ಹಾಕಿ, ಶುಂಠಿ, ಬೆಳ್ಳುಳ್ಳಿ ಪೇಸ್ಟ್ , ಹೆಚ್ಚಿದ ಈರುಳ್ಳಿ ಹಾಕಿ ಫ್ರೈ ಮಾಡಿ. ಈಗ ಸಣ್ಣಗೆ ಹೆಚ್ಚಿದ ಟೊಮೆಟೊ ಹಾಕಿ ಫ್ರೈ ಮಾಡಿ, ಬಟಾಣಿ (ಬೇಯಿಸಿದ್ದು) ಹಾಕಿ. (ಬೇಕಿದ್ದರೆ ಬೇರೆ ತರಕಾರಿಗಳನ್ನು ಹಾಕಬಹುದು). ಈಗ ರುಬ್ಬಿದ ಮಸಾಲೆ ಮತ್ತು ಉಪ್ಪು ಹಾಕಿ ಹಸಿ ವಾಸನೆ ಹೋಗುವವರೆಗೆ ಫ್ರೈ ಮಾಡಿ. ಮೊದಲೇ ಮಾಡಿಟ್ಟ ಅನ್ನ ಮಿಕ್ಸ್‌ ಮಾಡಿ ಚೆನ್ನಾಗಿ ಕೈಯಾಡಿಸಿ. ಈಗ ತುಪ್ಪದಲ್ಲಿ ಗೋಡಂಬಿಯನ್ನು ಹೊಂಬಣ್ಣ ಬರುವವರೆಗೆ ಫ್ರೈ ಮಾಡಿ ಅನ್ನದ ಮೇಲೆ ಹಾಕಿ.

ಟಾಪ್ ನ್ಯೂಸ್

1-sddsad

ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ: ನಲಪಾಡ್ ವಿವಾದಾತ್ಮಕ ಹೇಳಿಕೆ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

4araga

ರಾಜ್ಯದ ಸಂಸ್ಕೃತಿ, ಭಾಷೆಯ ರಕ್ಷಣೆಗೆ ನಮ್ಮ ಸರಕಾರ ಕಟಿಬದ್ದವಾಗಿದೆ: ಆರಗ ಜ್ಞಾನೇಂದ್ರ

24

ಕುಣಿಗಲ್: ಭಿಕ್ಷಾಟನೆ; ಮೂರು ಮಂದಿ ರಕ್ಷಣೆ

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

ತಪ್ಪಿದ ದುರಂತ…ವಿಮಾನ 37 ಸಾವಿರ ಅಡಿ ಎತ್ತರದಲ್ಲಿರುವಾಗ ಇಬ್ಬರು ಪೈಲಟ್ ನಿದ್ರೆಗೆ ಶರಣು!

3arrest

ಮಂಗಳೂರು: ಕೆಎಂಎಫ್‌ನಲ್ಲಿ ಕೆಲಸ ಕೊಡಿಸುವುದಾಗಿ ನೂರಾರು ಮಂದಿಗೆ ವಂಚನೆ; ನಾಲ್ವರು ಅರೆಸ್ಟ್‌

1-ddssadsa

ಶಸ್ತ್ರಾಸ್ತ್ರ ಸಾಗಾಟ:ಜಮ್ಮು-ಕಾಶ್ಮೀರ ಜೈಲಿನಲ್ಲಿ ಶಂಕಿತ ಉಗ್ರ ಹೃದಯಾಘಾತದಿಂದ ಸಾವುಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

ತಪ್ಪಿದ ಭಯೋತ್ಪಾದಕ ದಾಳಿ? ರಾಯ್ ಗಢ್ ನಲ್ಲಿ AK 47, ಸ್ಫೋಟಕ ತುಂಬಿದ್ದ ಬೋಟ್ ಪತ್ತೆ

udayavani youtube

ಎಲ್ಲಿದ್ದೀರಾ ಸ್ವಾಮಿ ಕಾಂಗ್ರೆಸ್ ನವರು..? ಕೈ ನಾಯಕರ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ

udayavani youtube

ಕೊಡಗಿನಲ್ಲಿ ಸಿದ್ದರಾಮಯ್ಯಗೆ ಘೇರಾವ್ ಹಾಕಿದ ಬಿಜೆಪಿ ಯುವಮೋರ್ಚಾ ; ಕಪ್ಪುಪಟ್ಟಿ ಪ್ರದರ್ಶನ

udayavani youtube

udayavani youtube

ಸಂಸದೀಯ ಮಂಡಳಿ, ಚುನಾವಣಾ ಸಮತಿಯಲ್ಲಿ BSYಗೆ ಮಹತ್ವದ ಸ್ಥಾನ

ಹೊಸ ಸೇರ್ಪಡೆ

5protest

ಕೈದಿಗಳಿಗೆ ಕ್ಷಮಾದಾನ-ಖಂಡನೆ

1-sddsad

ನಾವು ಶಶಿಕಲಾ‌ ಜೊಲ್ಲೆಗೆ ಹುಟ್ಟಿದವರಲ್ಲ: ನಲಪಾಡ್ ವಿವಾದಾತ್ಮಕ ಹೇಳಿಕೆ

vbdsfb

ನೆಮ್ಮದಿಗಿಂತ ದೊಡ್ಡ ಸಂಪತ್ತು ಮತ್ತೊಂದಿಲ್ಲ

sfdbgsfgnb

ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ

eshu 2

ಶಿವಮೊಗ್ಗ, ಭದ್ರಾವತಿಯಲ್ಲಿ ಗಲಾಟೆ ನಾನೇ ಮಾಡಿದ್ದು!: ಈಶ್ವರಪ್ಪ ಕಿಡಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.