ಕ್ವಿಕ್‌ ಕುಕ್‌

Team Udayavani, Sep 18, 2019, 5:00 AM IST

“ಅಮ್ಮಾ, ಬೇಗ ಏನಾದ್ರೂ ತಿನ್ನೋಕೆ ಕೊಡು. ನಿನ್ನೆ ಕೊಟ್ಟ ಸ್ನ್ಯಾಕ್ಸ್‌ ಬೇಡ’…ಮಕ್ಕಳದ್ದು ದಿನಾ ಇದೇ ರಾಗ. ತಿನ್ನಲು ಕೊಡುವುದೇನೋ ಸರಿ, ಆದರೆ ಬೇಗ ಕೊಡು, ನಿನ್ನೆ ಕೊಟ್ಟದ್ದು ಬೇಡ ಅಂದರೆ ಹೇಗೆ ಅನ್ನುವುದು ಅಮ್ಮಂದಿರ ಗೋಳು. ಅಂಥ ಅಮ್ಮಂದಿರಿಗಾಗಿ ಕ್ವಿಕ್‌ ಆಗಿ ತಯಾರಿಸಬಹುದಾದ ರೆಸಿಪಿಗಳು ಇಲ್ಲಿವೆ.

1. ಹುರಿಗಡಲೆ ಉಂಡಿ
ಬೇಕಾಗುವ ಸಾಮಗ್ರಿ: ಹುರಿಗಡಲೆ (ಪುಟಾಣಿ)- 2 ಲೋಟ, ಬೆಲ್ಲದ ಪುಡಿ- ಒಂದು ಕಪ್‌, ಒಣಕೊಬ್ಬರಿ- ಕಾಲು/ಅರ್ಧ ಕಪ್‌,
ಏಲಕ್ಕಿ ಪುಡಿ, ತುಪ್ಪ- ಮೂರು ಚಮಚ.

ಮಾಡುವ ವಿಧಾನ: ಹುರಿಗಡಲೆಯನ್ನು ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಿ. ಬಾಣಲೆಯಲ್ಲಿ ತುಪ್ಪ ಹಾಕಿ ಬಿಸಿ ಮಾಡಿ, ಅದಕ್ಕೆ ಬೆಲ್ಲದ ಪುಡಿ ಹಾಕಿ ಸಣ್ಣ ಉರಿಯಲ್ಲಿ ಕರಗಿಸಿ. ಬೆಲ್ಲ ಪೂರ್ತಿಯಾಗಿ ಕರಗಿದ ನಂತರ ಹುರಿಗಡಲೆ ಪುಡಿ, ಒಣಕೊಬ್ಬರಿ ತುರಿ ಮತ್ತು ಏಲಕ್ಕಿ ಪುಡಿ ಹಾಕಿ ಮಗುಚಿ, ಗ್ಯಾಸ್‌ ಆಫ್ ಮಾಡಿ. ಬಿಸಿ ಇರುವಾಗಲೇ ಕೈಗೆ ತುಪ್ಪ ಸವರಿಕೊಂಡು ಉಂಡೆ ಕಟ್ಟಿ. ಕೇವಲ ರುಚಿಯಷ್ಟೇ ಅಲ್ಲ, ಆರೋಗ್ಯಕ್ಕೂ ಈ ತಿನಿಸು ಹಿತಕರ.

2. ಭೇಲ್‌ಪುರಿ
ಬೇಕಾಗುವ ಸಾಮಗ್ರಿ: ಮಂಡಕ್ಕಿ, ಅಚ್ಚಖಾರದ ಪುಡಿ, ಅರಿಶಿನ ಪುಡಿ, ಚಾಟ್‌ ಮಸಾಲೆ, ಉಪ್ಪು, ಎಣ್ಣೆ, ಲಿಂಬೆಹಣ್ಣು, ಓಂಪುಡಿ, ಖಾರಸೇವು, ಕೊತ್ತಂಬರಿ ಸೊಪ್ಪು.

ಮಾಡುವ ವಿಧಾನ: ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ ಅದಕ್ಕೆ ಅರಿಶಿನ ಪುಡಿ, ಖಾರದ ಪುಡಿ ಹಾಕಿ ಸ್ಟೌ ಆರಿಸಿ. ನಂತರ ಮಂಡಕ್ಕಿ, ಉಪ್ಪು, ಲಿಂಬೆರಸ, ಚಾಟ್‌ ಮಸಾಲೆ, ಖಾರಸೇವು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ, ಕೊತ್ತಂಬರಿ ಸೊಪ್ಪು ಮತ್ತು ಓಂಪುಡಿಯಿಂದ ಅಲಂಕರಿಸಿ. (ಬೇಕಿದ್ದರೆ ಈರುಳ್ಳಿ ಮತ್ತು ಟೊಮೇಟೊವನ್ನು ಕೂಡ ಸೇರಿಸಬಹುದು)

3. ಅವಲಕ್ಕಿ ಪುಳಿಯೋಗರೆ
ಬೇಕಾಗುವ ಸಾಮಗ್ರಿ: ಮೀಡಿಯಂ ಅವಲಕ್ಕಿ – ಎರಡು ಬಟ್ಟಲು, ಹುಣಸೆ ಹಣ್ಣಿನ ರಸ- ಮೂರು ಚಮಚ, ಕಡ್ಲೆಬೀಜ (ನೆಲಗಡಲೆ), ಕರಿಬೇವು, ಉಪ್ಪು, ಅರಿಶಿನ ಪುಡಿ, ಇಂಗು, ಪುಳಿಯೋಗರೆ ಮಸಾಲೆ- ಮೂರು ಚಮಚ, ಕೊತ್ತಂಬರಿ ಸೊಪ್ಪು, ಎಣ್ಣೆ, ಸಾಸಿವೆ.

ಮಾಡುವ ವಿಧಾನ: ಅವಲಕ್ಕಿಯನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಯಲ್ಲಿ ಎಣ್ಣೆ ಹಾಕಿ ಸಾಸಿವೆ ಸಿಡಿಸಿ. ಕರಿಬೇವು, ನೆಲಗಡಲೆ, ಇಂಗು ಹಾಕಿ ನಂತರ ಹುಣಸೆಹಣ್ಣಿನ ರಸ, ಅರಿಶಿನಪುಡಿ ಹಾಕಿ ಒಂದು ನಿಮಿಷದ ನಂತರ ಪುಳಿಯೋಗರೆ ಮಸಾಲೆ ಹಾಕಿ. ಆ ಮಿಶ್ರಣಕ್ಕೆ ಅವಲಕ್ಕಿ ಮತ್ತು ಉಪ್ಪು ಹಾಕಿ ಕೈಯಾಡಿಸಿ. ಮೇಲೆ ಸ್ವಲ್ಪ ಕೊತ್ತಂಬರಿ ಸೊಪ್ಪು ಮತ್ತು ಕಾಯಿತುರಿ ಹಾಕಿದರೆ ವಿಶಿಷ್ಟ ಬಗೆಯ ಅವಲಕ್ಕಿ ಪುಳಿಯೋಗರೆ ರೆಡಿ. ಹುಣಸೆಹಣ್ಣಿನ ಬದಲು ಲಿಂಬೆಹಣ್ಣಿನ ರಸ ಬಳಸಬಹುದು.

4. ಚಪಾತಿ ಉಪ್ಪಿಟ್ಟು
ಬೇಕಾಗುವ ಸಾಮಗ್ರಿ: ಚಪಾತಿ- 3, ಈರುಳ್ಳಿ-1, ಹಸಿ ಮೆಣಸು-2, ಟೊಮೇಟೊ-1, ಒಗ್ಗರಣೆಗೆ-ಉದ್ದಿನ ಬೇಳೆ, ಜೀರಿಗೆ, ಕಡಲೇ ಬೇಳೆ, ಕರಿಬೇವು, ಕೊತ್ತಂಬರಿ ಸೊಪ್ಪು, ಎಣ್ಣೆ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ಚಪಾತಿಗಳನ್ನು ಚಿಕ್ಕದಾಗಿ ಮುರಿದುಕೊಳ್ಳಿ. ಬಾಣಲೆಗೆ ಎಣ್ಣೆ ಹಾಕಿ ಕರಿಬೇವು, ಜೀರಿಗೆ, ಹಸಿಮೆಣಸು, ಉದ್ದು, ಕಡಲೇಬೇಳೆ ಹಾಕಿ ಒಗ್ಗರಣೆ ಮಾಡಿ. ಹೆಚ್ಚಿದ ಈರುಳ್ಳಿ ಮತ್ತು ಟೊಮೇಟೊ ಸೇರಿಸಿ ಹುರಿಯಿರಿ. ನಂತರ ನೀರು, ಉಪ್ಪು ಮತ್ತು ಕೊತ್ತಂಬರಿ ಸೊಪ್ಪು ಹಾಕಿ ಕುದಿಸಿ. ಇದಕ್ಕೆ ಚಪಾತಿ ತುಂಡುಗಳನ್ನು ಹಾಕಿ, ಉಪ್ಪಿಟ್ಟಿನ ಹದಕ್ಕೆ ಗಟ್ಟಿಯಾಗುವವರೆಗೆ ಸಣ್ಣ ಉರಿಯಲ್ಲಿ ಕುದಿಸಿದರೆ ಚಪಾತಿ ಉಪ್ಪಿಟ್ಟು ರೆಡಿ. ಬೇಕಿದ್ದರೆ ಬೀನ್ಸ್‌, ಬಟಾಣಿ, ಕ್ಯಾರೆಟ್‌ಗಳನ್ನು ಕೂಡಾ ಸೇರಿಸಬಹುದು. (ಅಕ್ಕಿರೊಟ್ಟಿಯಿಂದಲೂ ಉಪ್ಪಿಟ್ಟು ಮಾಡಬಹುದು)
-ಅಕ್ಷದ ಅನಂತ್‌ ಜೋಶಿ, ಗೋವಾ

-ಅಕ್ಷದ ಅನಂತ್‌ ಜೋಶಿ, ಗೋವಾ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮಂಗಳೂರು ಸೌತೆಕಾಯಿ ಹಲ್ವ ಬೇಕಾಗುವ ಸಾಮಗ್ರಿಗಳು - 1 ಸಿಪ್ಪೆ ತೆಗೆದ ಮಂಗಳೂರು ಸೌತೆಕಾಯಿ -  ಗೋಡಂಬಿ-10 - ಪಿಸ್ತಾ-8 - ಬಾದಾಮಿ -8(1ಕಪ್‌) - ಸಕ್ಕರೆ -1ಕಪ್‌ -  ತುಪ್ಪ...

  • ಬೇಕಾಗುವ ಪದಾರ್ಥಗಳು ದೋಸೆ ಅಕ್ಕಿ -2.5 ಕಪ್‌ ಅಥವಾ ಅರ್ಧ ಕೆಜಿ. ಹಸಿ ತೆಂಗಿನ ಕಾಯಿ ತುರಿ-ಅರ್ಧ ಕಪ್‌ ಬ್ಯಾಡ್ಗಿ ಮೆಣಸಿನ ಕಾಯಿ-6 ರಿಂದ 7 ಕೊತ್ತಂಬರಿ ಬೀಜ -4 ಚಮಚ ಈರುಳ್ಳಿ...

  • ಬೇಕಾಗುವ ಸಾಮಗ್ರಿ - ಗೋಧಿ ಹಿಟ್ಟು- 3 ಕಪ್‌ - ಮೆಂತ್ಯ ಎಲೆಗಳು-1 ಕಪ್‌ - ನುಣ್ಣಗೆ ಕತ್ತರಿಸಿದ ಶುಂಠಿ-1 ಟೀ ಸ್ಪೂನ್‌ - ನುಣ್ಣಗೆ ಕತ್ತರಿಸಿದ ಬೆಳ್ಳುಳ್ಳಿ-1 ಟೀ...

  • ಬೇಕಾಗುವ ಸಾಮಗ್ರಿ - ಈರುಳ್ಳಿ: ಒಂದು ಕಪ್‌ - ಶುಂಠಿ: ಸ್ವಲ್ಪ - ಹಸಿಮೆಣಸು: ಸ್ವಲ್ಪ - ಶೇಂಗಾ, ಗೋಡಂಬಿ: ಸ್ವಲ್ಪ - ಬಿಳಿ ಎಳ್ಳು: ಅರ್ಧ ಚಮಚ - ಕರಿಬೇವು ಸೊಪ್ಪು:...

  • ಸೂಪ್‌ ಎಂದ ಕೂಡಲೇ ಎಲ್ಲರ ಬಾಯಲ್ಲೂ ನೀರೂರುತ್ತದೆ. ರೆಸ್ಟೋರೆಂಟ್‌ಗಳಲ್ಲಿ, ಪ್ರಮುಖ ಹೊಟೇಲ್‌ಗ‌ಳಲ್ಲಿ ಒಂದು ಒಳ್ಳೆಯ ಊಟಕ್ಕೆ ಅದ್ಭುತವಾದ ಪ್ರಾರಂಭ ನೀಡುವ ಈ...

ಹೊಸ ಸೇರ್ಪಡೆ