ನಾಗರಪಂಚಮಿಗೆ ವಿಶೇಷ ಖಾದ್ಯಗಳು


Team Udayavani, Jul 27, 2019, 5:00 AM IST

v-17

ನಾಗರಪಂಚಮಿಗೆ ತುಳುನಾಡಿನಲ್ಲಿ ವಿಶೇಷವಾದ ಪ್ರಾಮುಖ್ಯತೆಯಿದೆ. ನಾಗದೇವರನ್ನು ಆರಾಧಿಸುವ ಈ ಹಬ್ಬದಲ್ಲಿ ಹಬ್ಬದೂಟಕ್ಕೂ ಅಷೇ ಪ್ರಾಮುಖ್ಯತೆಯಿದೆ. ಹಬ್ಬದ ಸಂದರ್ಭದಲ್ಲಿ ಹೊಸತನವನ್ನು ತಯಾರಿಸಲಿಚ್ಛಿಸುವವರಿಗೆ ಇಲ್ಲಿದೆ ಕೆಲವು ವಿಶೇಷ ಹಬ್ಬದಡಿಗೆಗಳು. ಅಡುಗೆಯಲ್ಲಿ ಎಷ್ಟೇ ಬಗೆಗಳಿದ್ದರೂ ಅದು ಪರಿಪೂರ್ಣವಾಗುವುದು ಸಿಹಿ ಇದ್ದಾಗಲೇ. ಅದಕ್ಕಾಗಿ ಇಲ್ಲಿದೆ ಕೆಲವು ಸಿಹಿತಿನಿಸುಗಳು.

ರಾಗಿ ಹಾಲ್ಬಾಯಿ
ಬೇಕಾಗುವ ಸಾಮಗ್ರಿಗಳು
ರಾಗಿ : ಅರ್ಧ ಕಪ್‌
ತೆಂಗಿನ ತುರಿ: ಕಾಲು ಕಪ್‌
ಬೆಲ್ಲ: ಅರ್ಧ ಕಪ್‌
ಏಲಕ್ಕಿ ಪುಡಿ: ಒಂದು ಚಿಟಿಕೆ

ಮಾಡುವ ವಿಧಾನ
ರಾಗಿಯನ್ನು ತೊಳೆದು ಮೂರ್‍ನಾಲ್ಕು ಗಂಟೆಗಳ ಕಾಲ ನೆನೆಯಲು ಬಿಡಿ. ಬೆಲ್ಲಕ್ಕೆ ಕಾಲು ಕಪ್‌ನಿàರು ಹಾಕಿ ಕುದಿಸಿಡಿ. ನೆನೆಸಿದ ರಾಗಿಗೆ ತೆಂಗಿನ ತುರಿ ಹಾಗೂ ಅಗತ್ಯವಿದ್ದಷ್ಟು ನೀರು ಸೇರಿಸಿ ನಯವಾಗಿ ಅರೆಯಿರಿ.ಅರೆದ ಅನಂತರ ,ಬಟ್ಟೆ ಅಥವಾ ಜರಡಿಯ ಸಹಾಯದಿಂದ ಸೋಸಿ. ಉಳಿದ ವಿಶ್ರಣಕ್ಕೆ ಪುನಃ ನೀರು ಸೇರಿಸಿ ಅರೆಯಿರಿ.ಹೀಗೆ 2 ಬಾರಿ ಅರೆದು ಸೋಸಿ, ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ತೆಗೆಯಬೇಕು. ಒಂದು ದಪ್ಪ ತಳದ ಬಾಣಲೆಗೆ ಸೋಸಿದ ರಾಗಿ ಮತ್ತು ತೆಂಗಿನಕಾಯಿ ಹಾಲನ್ನು ಸುರಿದು ಉಳಿದ ನೀರು ಹಾಗೂ ಕುದಿಸಿದ ಬೆಲ್ಲದ ನೀರನ್ನು ಸೇರಿಸಿ ಕುದಿಸಬೇಕು. ಗಟ್ಟಿಯಾದ ಕೂಡಲೇ ತುಪ್ಪ ಮತ್ತು ಏಲಕ್ಕಿ ಪುಡಿ ಸೇರಿಸಿ. ಮಧ್ಯಮ ಉರಿಯಲ್ಲಿ ಕದಡುವುದನ್ನು ಮುಂದುವರಿಸಿ. ಸ್ಪಲ್ಪ ಸಮಯದ ಅನಂತರ ಮಿಶ್ರಣ ತಳ ಬಿಡಲು ಪ್ರಾರಂಭಿಸುತ್ತದೆ. ಆಗ ಮಿಶ್ರಣವನ್ನು ತುಪ್ಪ ಸವರಿದ ಪ್ಲೇಟ್‌ಗೆ ಸುರಿಯಿರಿ. ಬಿಸಿ ಆರಿದ ಅನಂತರ ಬೇಕಾದ ಆಕಾರದಲ್ಲಿ ಕತ್ತರಿಸಿದಾಗ ಹಾಲಾºಯಿ ಸವಿಯಲು ಸಿದ್ಧವಾಗುತ್ತದೆ.

ಅಕ್ಕಿ ತಂಬಿಟ್ಟು
ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ : ಅರ್ಧ ಕಪ್‌
ಕೊಬ್ಬರಿ ತುರಿ: ಕಾಲು ಕಪ್‌
ಹುರಿದ ಕಡಲೆ: ಕಾಲು ಕಪ್‌
ನೆಲಗಡಲೆ: ಸ್ವಲ್ಪ
ಬೆಲ್ಲ: ಅರ್ಧಕಪ್‌
ನೀರು: ಕಾಲು ಕಪ್‌
ಏಲಕ್ಕಿ ಪುಡಿ: ಸ್ವಲ್ಪ

ಮಾಡುವ ವಿಧಾನ
ಅಕ್ಕಿಯನ್ನು ಹೊಂಬಣ್ಣ ಬರುವವರೆಗೆ ಹುರಿಯಿರಿ. ಹುರಿಗಡಲೆ ಮತ್ತು ನೆಲಗಡಲೆಯನ್ನು ಪುಡಿ ಮಾಡಬೇಕು. ಈ ಹುಡಿಗೆ ಸ್ವಲ್ಪ ಬೆಲ್ಲ ಮತ್ತು ಕೊಬ್ಬರಿ ತುರಿಯನ್ನು ಮಿಶ್ರಣ ಮಾಡಬೇಕು. ಒಂದು ಬಾಣಲೆಗೆ ಬೆಲ್ಲ ಮತ್ತು ನೀರು ಹಾಕಿ ಕುದಿಸಿ ಇದಕ್ಕೆ ಅಕ್ಕಿ ಹುಡಿ ಹುರಿಗಡÇ, ನೆೆಲಗಡಲೆ ಬೆಲ್ಲ ಮತ್ತು ಕೊಬ್ಬರಿ ಮಿಶ್ರಣ ಹಾಕಿ ಚೆನ್ನಾಗಿ ಕಲಸಿ ಸಣ್ಣ ಉಂಡೆ ಮಾಡಿದರೆ ಅಕ್ಕಿ ತಂಬಿಟ್ಟು ಸವಿಯಲು ಸಿದ್ಧ.

ಹೆಸರಿಟ್ಟಿನ ಉಂಡೆ
ಬೇಕಾಗುವ ಸಾಮಗ್ರಿಗಳು
ಹೆಸರುಬೇಳೆ: ಒಂದು ಕಪ್‌
ಸಕ್ಕರೆ : ಅರ್ಧ ಕಪ್‌
ತುಪ್ಪ : ಕಾಲು ಕಪ್‌
ಸ್ವಲ್ಪ ಗೋಡಂಬಿ ಚೂರುಗಳು

ಮಾಡುವ ವಿಧಾನ
ಗೋಡಂಬಿಯನ್ನು ಚೂರು ಮಾಡಿ ಹುರಿದಿಟ್ಟುಕೊಳ್ಳಬೇಕು. ಹೆಸರು ಬೇಳೆಯನ್ನು ಕಂದು ಬಣ್ಣ ಬರುವವರೆಗೆ ಹುರಿದು, ಮಿಕ್ಸಿಯಲ್ಲಿ ಪುಡಿಮಾಡಿಟ್ಟುಕೊಳ್ಳಬೇಕು. ಅನಂತರ ಸಕ್ಕರೆಯನ್ನು ಪುಡಿಮಾಡಿ . ಹೆಸರು ಬೇಳೆ,ಸಕ್ಕರೆಗೆ ತುಪ್ಪ ,ಗೋಡಂಬಿಯನ್ನು ಸೇರಿಸಿ ಉಂಡೆಮಾಡಿದರೆ ಹೆಸರಿಟ್ಟಿನ ಉಂಡೆ ರೆಡಿ.

ಅರಸಿನ ಎಲೆಯ ಕಡುಬು
ಬೇಕಾಗುವ ಸಾಮಗ್ರಿಗಳು
ಅರಸಿನ ಎಲೆ :ಹತ್ತು
ಅಕ್ಕಿ : ಅರ್ಧ ಕೆಜಿ
ಬೆಲ್ಲ : ಒಂದು ಕಪ್‌
ಕೊಬ್ಬರಿ ತುರಿ: ಒಂದು ಕಪ್‌

ಅಕ್ಕಿ ಯನ್ನು ಸ್ಪಲ್ಪ ದಪ್ಪಕ್ಕೆ ಅರೆದುಕೊಳ್ಳಬೇಕು. ಹಿಟ್ಟನ್ನು ಅರಸಿನ ಎಲೆ ಮೇಲೆ ಹರಡಿ ಇದಕ್ಕೆ ಬೆಲ್ಲ ಮತ್ತು ಕೊಬ್ಬರಿ ತುರಿ ಮಿಶ್ರಣವನ್ನು ಹಾಕಿ ಹಬೆಯಲ್ಲಿ ಬೇಯಿಸಬೇಕು. ಅಲ್ಲಿಗೆ ಅರಸಿನ ಎಲೆಯ ಕಡುಬು ಸವಿಯಲು ಸಿದ್ಧ.

ಶೇಂಗಾ ಉಂಡೆ
ಬೇಕಾಗುವ ಸಾಮಗ್ರಿಗಳು
ಶೇಂಗಾ: ಒಂದು ಕಪ್‌
ಬೆಲ್ಲ: ಮುಕ್ಕಾಲು ಕಪ್‌
ಕೊಬ್ಬರಿ: ಕಾಲು ಕಪ್‌
ಎಳ್ಳು : ಕಾಲು ಕಪ್‌
ಏಲಕ್ಕಿ ಪುಡಿ: ಸ್ವಲ್ಪ

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ನೆಲಗಡಲೆ ಹಾಗೂ ಎಳ್ಳನ್ನು ಬೇರೆಬೇರೆಯಾಗಿ ಕಂದು ಬಣ್ಣ ಬರುವವರೆಗೆ ಹುರಿಯಬೇಕು. ಅನಂತರ ತುರಿದ ಕೊಬ್ಬರಿಯನ್ನು ಹುರಿದಿಟ್ಟುಕೊಳ್ಳಬೇಕು. ಅನಂತರ ಈ ಎಲ್ಲ ಪದಾರ್ಥಗಳನ್ನು ಮಿಕ್ಸಿ ಜಾರಿಗೆ ಹಾಕಿ ತರಿತರಿಯಾಗಿ ಹುಡಿ ಮಾಡಬೇಕು. ಇದಕ್ಕೆ ಏಲಕ್ಕಿ ಹುಡಿಯನ್ನು ಮಿಶ್ರ ಮಾಡಿ ಉಂಡೆ ಮಾಡಿದರೆ ಶೇಂಗಾ ಉಂಡೆ ಸವಿಯಲು ಸಿದ್ಧ.

 ಚೈತನ್ಯ

ಟಾಪ್ ನ್ಯೂಸ್

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

10-bengaluru’

Bengaluru: ಮಕ್ಕಳ ಅಶ್ಲೀಲ ಫೋಟೋ, ವಿಡಿಯೋ ವೀಕ್ಷಿಸುತ್ತಿದ್ದ ಸೆಕ್ಯೂರಿಟಿ ಗಾರ್ಡ್‌ ಸೆರೆ

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

B Y Vijayendra: ಕಾಂಗ್ರೆಸ್‌ನವರು ಪ್ರಧಾನಿ ಅಭ್ಯರ್ಥಿ ಯಾರೆಂದು ಹೇಳಲಿ?

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Mysore Lok Sabha constituency: ಮಹಾರಾಜ-ಮುಖ್ಯಮಂತ್ರಿ ನಡುವೆ ವೀರಕಾಳಗ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Water Crisis; ರಾಜ್ಯ ಸರ್ಕಾರದಿಂದ ಟ್ಯಾಂಕರ್ ಲಾಬಿ: ಅರವಿಂದ ಬೆಲ್ಲದ್ ಆರೋಪ

Viral: ಕಚ್ಚಿದ ಹಾವನ್ನೇ ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು

Video Viral: ಕಚ್ಚಿದ ಹಾವನ್ನೇ ಕೊಂದು ಆಸ್ಪತ್ರೆಗೆ ತಂದ ಮಹಿಳೆ… ಕಂಗಾಲಾದ ವೈದ್ಯರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಬ್ರೆಡ್‌ನಿಂದ ಬಗೆ ಬಗೆ ತಿನಿಸು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಕಾಳಿನ ಉಂಡೆ ಸಿಹಿಸಿಹಿ ಲಡ್ಡು

ಸ್ವಾದಿಷ್ಟಕರ ಹಲ್ವ

ಸ್ವಾದಿಷ್ಟಕರ ಹಲ್ವ

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

ಮಸಾಲೆ ನೀರುದೋಸೆ, ಬಾಳೆಹಣ್ಣು ಫುಡ್ಡಿಂಗ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

ಮಂಡ್ಯದಲ್ಲಿ ಐಸ್‌ ಕ್ರೀಂ ತಿಂದು ಅವಳಿ ಮಕ್ಕಳ ಸಾವು, ತಾಯಿ ಅಸ್ವಸ್ಥ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Panaji: ಸರಕಾರದ ಆ್ಯಪ್‌ ನಿಂದಾಗಿ ದೂಧ್ ಸಾಗರ ಪ್ರವಾಸಿಗರ ಸಂಖ್ಯೆಯಲ್ಲಿ ಗಣನೀಯ ಇಳಿಕೆ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Shimoga; ವಿರೋಧ ಪಕ್ಷದವರಿಗೆ ಅಪಪ್ರಚಾರವೇ ಕೊನೆಯ ಅಸ್ತ್ರ: ಬಿವೈ ರಾಘವೇಂದ್ರ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

Chamarajanagar: ಮೇವಿಗಾಗಿ ಕಬ್ಬಿನ ತೊಂಡೆಗೆ ಬೇಡಿಕೆ ಹೆಚ್ಚಳ

11-srrest

Bengaluru: ಅತಿಕ್ರಮಿಸಿ ಏರ್‌ಪೋರ್ಟ್‌ನಲ್ಲಿ ವಿಡಿಯೋ: ಯುಟ್ಯೂಬರ್‌ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.