ತಮಿಳುನಾಡಿನ ಮಾಲಾಡು

Team Udayavani, Jul 27, 2019, 5:00 AM IST

ತಮಿಳನಾಡಿನಲ್ಲಿ ವಿಶೇಷವಾಗಿರುವ ಮಾಲಾಡು ಹಬ್ಬಗಳ ಸಮಯದಲ್ಲಿ ಮಾಡುತ್ತಾರೆ. ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ತಿಂಡಿ ಇದಾಗಿದೆ.

ಮಾಡುವ ವಿಧಾನ
ಮೊದಲು ಹುರಿದ ಕಡಲೆಹಿಟ್ಟನ್ನು ಮಿಕ್ಸಿಗೆ ಹಾಕಿ ಅದನ್ನು ಪೌಡರ್‌ ಮಾದರಿಯಲ್ಲಿ ಮಾಡಿಕೊಳ್ಳಬೇಕು. ಅನಂತರ ಅದನ್ನು ಜರಡಿ ಹಿಡಿಯಬೇಕು. ಏಲಕ್ಕಿಯನ್ನು ಸಕ್ಕರೆಯೊಂದಿಗೆ ಗುದ್ದಿ ಪುಡಿಮಾಡಬೇಕು. ಇದನ್ನೂ ಬೇಳೆಯ ಮಾದರಿಯಲ್ಲಿ ಜರಡಿ ಹಿಡಿಯಬೇಕು. ಅದಕ್ಕೆ ಜಾಯಿಕಾಯಿಯನ್ನು ಹಾಕಿ.

ಮೊದಲೇ ಜರಡಿ ಹಿಡಿದ ಬೇಳೆ ಮತ್ತು ಸಕ್ಕರೆಯನ್ನು ಚೆನ್ನಾಗಿ ಮಿಕ್ಸ್‌ ಮಾಡಿಕೊಳ್ಳಿ. ನಂತರ ಗೇರುಬೀಜವನ್ನು ತುಪ್ಪದಲ್ಲಿ ಹುರಿದುಕೊಳ್ಳಬೇಕು. ಅದನ್ನು ಪಾನ್‌ನಿಂದ ತೆಗೆದು ಮಿಕ್ಸ್‌ ಮಾಡಿದ ಹಿಟ್ಟಿಗೆ ಹಾಕಿ. ಅನಂತರ ಅದೇ ಪಾನ್‌ಗೆ ಒಣಗಿದ ದ್ರಾಕ್ಷಿ ಹಾಕಿ ಅದು ಉಬ್ಬುವವರೆಗೂ ಹುರಿದುಕೊಳ್ಳಿ. ಅನಂತರ ದ್ರಾಕ್ಷಿಯನ್ನು ತೆಗೆದು ಅದೇ ತುಪ್ಪದಲ್ಲಿ ಹಿಟ್ಟನ್ನು ಹುರಿಯಬೇಕು.

ಕಡಿಮೆ ಉರಿ ಇಟ್ಟುಕೊಂಡು 2- 3 ನಿಮಿಷದ ವರೆಗೂ ಹಾಗೆ ಬಿಡಿ. ನಂತರ ಅದಕ್ಕೆ ಒಣದ್ರಾಕ್ಷಿಯನ್ನು ಹಾಕಿಕೊಂಡು ಲಾಡು ಮಾದರಿಯಲ್ಲಿ ಉಂಡೆ ಮಾಡಬೇಕು. ಈಗ ತಮಿಳನಾಡಿನ ಸುಲಭವಾಗಿ ತಯಾರಿಸಬಲ್ಲ ರುಚಿಕರವಾದ ಮಲಾಡು ತಿನ್ನಲು ಸಿದ್ಧ.

ಬೇಕಾಗಿರುವ ಸಾಮಗ್ರಿ
1 ಕಪ್‌ ಹುರಿದ ಕಡಲೆಹಿಟ್ಟು
1/2 ಕಪ್‌ ಸಕ್ಕರೆ
ಸ್ವಲ್ಪ ಏಲಕ್ಕಿ
ಜಾಯಿಕಾಯಿ
10 ರಿಂದ 12 ಗೇರುಬೀಜ  ಸ್ವಲ್ಪ ಒಣದ್ರಾಕ್ಷಿ  ಕಾಲು ಕಪ್‌ ತುಪ್ಪ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ರಜೆ ಸಮಯದಲ್ಲಿ ಮಕ್ಕಳಿಗೆ ಅಥವಾ ಮನೆಯಲ್ಲಿರುವವರಿಗೆ ಏನು ಮಾಡುವುದು ಎಂಬುದೇ ತಲೆನೋವಾಗಿ ಪರಿಣಮಿಸುತ್ತದೆ. ವೀಕೆಂಡ್‌ ಬಂದರೆ ಮನೆಯಲ್ಲಿ ಹೊಸ ಹೊಸ ಅಡುಗೆ ರುಚಿ...

  • ಬೇಕಾಗುವ ಸಾಮಗ್ರಿ ಬಾಸ್ಮತಿ ಅಕ್ಕಿ- 1 ಕಪ್‌ ನುಣ್ಣಗೆ ಕತ್ತರಿಸಿದ ಮೆಂತೆ ಎಲೆ -2 ಕಪ್‌ ಕತ್ತರಿಸಿದ ಮಿಶ್ರಣ ತರಕಾರಿಗಳು: 1 ಕಪ್‌. ನೀರುಳ್ಳಿ- 1ರಿಂದ 2 ಶುಂಠಿ- 3 ಬೆಳ್ಳುಳ್ಳಿ-...

  • ಪೇಥಾ ಆಗ್ರಾದ ಪ್ರಸಿದ್ಧ ಸ್ವೀಟ್‌ ಆಗಿದ್ದು, ಇಲ್ಲಿಯ ಈ ಸ್ವೀಟ್‌ ಸವಿಯಲು ಜನರು ದೂರದ ಊರುಗಳಿಂದ ಬರುತ್ತಾರೆ. ಇದನ್ನು ಕೇವಲ ಅಂಗಡಿಗಳಲ್ಲಿ ಮಾತ್ರವಲ್ಲ ಮನೆಯಲ್ಲಿಯೂ...

  • ಬೇಕಾಗುವ ಸಾಮಗ್ರಿ ಹಸಿ ಮೆಣಸಿನ ಕಾಯಿ-2 ಬ್ರಾಹ್ಮಿ ಎಲೆ-1 ಕಪ್‌ ಉದ್ದಿನ ಬೇಳೆ-ಒಂದೂವರೆ ಚಮಚ ಹುಣಿಸೇ ಬೀಜ-ಸ್ವಲ್ಪ ಉಪ್ಪು-ರುಚಿಗೆ ತಕ್ಕಷ್ಟು ತೆಂಗಿನಕಾಯಿ-ಅರ್ಧ...

  • ಸಿಹಿ ತಿನಿಸು ಹಬ್ಬ, ಆಚರಣೆಯಲ್ಲಿ ಬಹಳ ಪ್ರಾಮುಖ್ಯತೆ ಪಡೆದಿದೆ. ಸಾಮಾನ್ಯವಾಗಿ ಪಾಯಸ, ಹೋಳಿಗೆ ಹಬ್ಬದ ವಿಶೇಷ ಅಡುಗೆ ಪಟ್ಟಿಯಲ್ಲಿ ಸೇರಿದ್ದು ಏನಾದರೂ ಹೊಸತು ಹಬ್ಬದೂಟಕ್ಕೆ...

ಹೊಸ ಸೇರ್ಪಡೆ