ಮನೆ ಒಳಾಂಗಣಕ್ಕೆ 3ಡಿ ಅಲಂಕಾರ


Team Udayavani, Jun 22, 2019, 5:00 AM IST

16

ಮನೆ ಕಟ್ಟುವುದು ಸುಲಭದ ಮಾತಲ್ಲ ಅದಕ್ಕೆ ಅದರದ್ದೇ ಆದ ಕೆಲವು ಮಾನದಂಡಗಳನ್ನು ಅನುಸರಿಸಬೇಕಾಗುತ್ತದೆ. ಕಟ್ಟಿದ ಅನಂತರ ಎಲ್ಲರಲ್ಲಿಯೂ ಕಾಡುವುದು ಮನೆಯನ್ನು ಹೇಗೆ ಸಿಂಗರಿಸಬಹುದು ಎಂದು? ಅದಕ್ಕೆ ಪೂರಕವೆಂಬ ಹಾಗೆ ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ 3ಡಿ ವಿನ್ಯಾಸಗಳನ್ನು ಬಳಸುತ್ತಿದ್ದು, ಇದು ಮನೆ ಇನ್ನಷ್ಟು ಸುಂದರವಾಗಿ ಕಾಣಲು ಸಹಾಯ ಮಾಡುತ್ತದೆ.

ಇಂದಿನ ಆಂತರಿಕ ವಿನ್ಯಾಸಕಾರರು ಗ್ರಾಹಕರ ಪರಿಕಲ್ಪನೆಗೆ ತಕ್ಕಂತೆ ಯೋಜನೆಗಳನ್ನು ನಿರ್ಮಿಸಿ ಕೊಡುತ್ತಿದ್ದು, ನಮ್ಮ ಕಲ್ಪನೆಗೆ ತಕ್ಕಂತೆ ಮನೆಯನ್ನು ಸಿಂಗರಿಸಿಕೊಳ್ಳಬಹುದು.

ನೈಜತೆಯ ಪ್ರತಿಬಿಂಬ
ಮನೆ ಎಂದ ಮೇಲೆ ಅದನ್ನು ಆದಷ್ಟು ಸಿಂಗರಿಸಲು ನಾವು ಪ್ರಯತ್ನಿಸುತ್ತೇವೆ. ಅದರಲ್ಲೂ ಕೆಲವರಿಗೆ ಪ್ರಕೃತಿ, ನೀರು ಎಂದರೆ ತುಂಬಾ ಇಷ್ಟವಿದ್ದು, ಮನೆಯನ್ನೂ ಕೂಡ ಅದೇ ರೀತಿಯಲ್ಲಿ ಸಿಂಗರಿಸಲು ಇಷ್ಟ ಪಡುತ್ತಾರೆ. ಅಂಥವರಿಗೆ ಇದು ಹೇಳಿ ಮಾಡಿಸಿರುವ ಹಾಗಿದೆ. ಮನೆಯ ಗೋಡೆ ಪೀಠೊಪಕರಣ ಸೇರಿದಂತೆ ಎಲ್ಲ ಕಡೆಗಳಲ್ಲಿಯೂ ನೈಜತೇಯನ್ನು ಪ್ರತಿಬಿಂಬಿಸುತ್ತದೆ.

ವಿನೂತನ ಆಯ್ಕೆ
ಒಳಾಂಗಣ ವಿನ್ಯಾಸಕಾರರು 3ಡಿ ದೃಶ್ಯಾವಳಿಗಳಿಂದ ಅಲ್ಪಾವಧಿಯಲ್ಲಿಯೇ ಪರಿಣಾಮಕಾರಿಯಾದಂತಹ ಸಚಿತ್ರ ವಿನ್ಯಾಸಗಳನ್ನು ನೀಡುತ್ತಾರೆ. ಇದರಲ್ಲಿ ಸಾವಿರಾರು ಆಯ್ಕೆಗಳಿದ್ದು ನಿಮಗೆ ಬೇಕಾದಂತಹ ರೀತಿಯಲ್ಲಿ ಮಾಡಿಸಿಕೊಳ್ಳಬಹುದಾಗಿದೆ. ಕೆಲವರಿಗೆ ಪ್ರಾಣಿಗಳೆಂದರೆ ತುಂಬಾ ಇಷ್ಟವಿರುತ್ತದೆ ಅಂಥವರು ಮನೆಗಳಲ್ಲಿ ಪ್ರಾಣಿಗಳ 3ಡಿ ಚಿತ್ರಗಳನ್ನು ಬಳಸಿಕೊಳ್ಳಬಹುದು. ಇನ್ನು ಕೆಲವರು ನೀರನ್ನು ಇಷ್ಟಪಡುತ್ತಾರೆ. ಅಂಥವರು ಗೋಡೆಗಳಿಗೆ ನೀರಿನಿಂದ ಮಾಡಿದ 3ಡಿ ದೃಶ್ಯಾವಳಿಗಳನ್ನು ಮಾಡಿಸಿಕೊಳ್ಳಬಹುದು. ಉದಾಃ ಹರಿಯುವ ತೊರೆ, ಜಲಪಾತ, ಸಮುದ್ರ… ಹೀಗೆ ನೈಜ್ಯವಾಗಿಯೂ ನೀರು ಮನೆಯೊಳಗೆ ಹರಿಯುತ್ತಿರುವ ಭ್ರಮೆಯನ್ನು ಇದು ಸೃಷ್ಟಿಸುತ್ತದೆ.

ಇದನ್ನು ಮನೆಯ ಗೋಡೆಗಳಿಗೆ ಅಲ್ಲದೆ ಫ‌ರ್ನಿಚರ್‌, ಕಿಚನ್‌, ಬೆಡ್‌ರೂಮ್‌ಗಳಲ್ಲೂ ಇದನ್ನು ಅಳವಡಿಸಿಕೊಳ್ಳಬಹುದಾಗಿದೆ.

ಸಮಯ, ಹಣ ಉಳಿತಾಯ
ಮನೆ ಕಟ್ಟಲು ನಾವು ತುಂಬಾ ಸಮಯ ತೆಗೆದುಕೊಳ್ಳುವುದು ಸಾಮಾನ್ಯ. ಅದೇ ರೀತಿ ಮನೆಯ ವಿನ್ಯಾಸಕ್ಕೂ ಹೆಚ್ಚಿನ ಸಮಯ ತಗುಲಿದರೆ ಮನೆ ನಿರ್ಮಿಸುವಲ್ಲಿ ತುಂಬಾ ವಿಳಂಬವಾಗಿ ಬಿಡುತ್ತದೆ. ಅದರ ಬದಲು 3ಡಿ ಆರ್ಕಿಟೆಕ್ಚರಲ್ ರೆಂಡ್‌ ರಿಂಗ್‌ ಸೇವೆಗಳನ್ನು ಆಯ್ಕೆ ಮಾಡಿಕೊಳ್ಳುವುದರಿಂದ ಸಮಯ ಹಾಗೂ ಹಣ ಎರಡನ್ನು ಉಳಿಸಬಹುದು. ತಂತ್ರಜ್ಞಾನ ತುಂಬಾ ಸುಧಾರಿಸಿರುವುದರಿಂದ ತ್ವರಿತವಾಗಿ ಇದನ್ನು ರಚಿಸಬಹುದು. ಇದನ್ನು ರಚಿಸಲು ನೀವು ವಾರ, ತಿಂಗಳುಗಳ ಕಾಲ ಕಾಯಬೇಕಾಗಿಲ್ಲ ಅದರ ಬದಲು ಕೆಲವೇ ದಿನಗಳು ಸಾಕು. ವಿನ್ಯಾಸಗಳನ್ನು ಆಯ್ಕೆ ಮಾಡಿದ ತತ್‌ಕ್ಷಣ ಕೆಲಸವನ್ನು ಪ್ರಾರಂಭಿಸಬಹುದಾಗಿದೆ.

ಇದನ್ನು ರಚಿಸಲು ನೀವು ಹೊರಗುತ್ತಿಗೆ ನೀಡಬಹುದು. ಇದಕ್ಕೆ ಸಂಬಂಧ ಪಟ್ಟ ಕಂಪೆನಿಗಳು ಎಲ್ಲ ಕಡೆಗಳಲ್ಲಿಯೂ ಇರುತ್ತವೆ. ಅಂತಹ ಕಂಪೆನಿಗಳಲ್ಲಿ ಒಳ್ಳೆಯ ಸಂಸ್ಥೆಯನ್ನು ಆಯ್ಕೆ ಮಾಡಿಕೊಂಡು ಪರಿಣತಿ ಹೊಂದಿರುವವರಿಗೆ ನೀಡುವುದರಿಂದ ವಿನ್ಯಾಸಗಳನ್ನು ಚೆನ್ನಾಗಿ ಮಾಡಿಕೊಡುತ್ತಾರೆ.

ಎರಡು ವಿಧ
ಸಾಮಾನ್ಯವಾಗಿ ಇದರಲ್ಲಿ ವರ್ಚುವಲ್ ರಿಯಾಲಿಟಿ (ವಿಆರ್‌) ಮತ್ತು ಆಗ್ಮೆಂಟೆಡ್‌ ರಿಯಾಲಿಟಿ ಎಂಬ ಎರಡು ರೀತಿಯ ಆಯ್ಕೆಗಳಿದ್ದು, ಇದನ್ನು ನಾವು ಮೊದಲೇ ನಿರ್ಧರಿಸಿಕೊಂಡು ವಿನ್ಯಾಸಕಾರರಿಗೆ ತಿಳಿಸಬೇಕಾಗುತ್ತದೆ. ಇವೆರಡರಲ್ಲಿಯೂ ಸ್ವಲ್ಪ ವ್ಯತ್ಯಾಸಗಳಿವೆ. ನೀವು ಆಯ್ಕೆ ಮಾಡುವ ಡಿಸೈನ್‌ಗಳ ಮೇಲೆ ಇದು ಅವಲಂಬಿತವಾಗಿರುತ್ತದೆ. ಕೆಲವು ಡಿಸೈನ್‌ಗಳು ತುಂಬಾ ದುಬಾರಿಯಾಗಿರುತ್ತವೆ. ನಿಮಗೆ ಬೇಕಾದಂತಹ ರೀತಿಯಲ್ಲಿ ಮತ್ತು ನಿಮ್ಮ ಮನೆಗೆ ಒಪ್ಪುವಂತಹ ದೃಶ್ಯಾವಳಿಗಳನ್ನು ನೀವು ಆಯ್ಕೆ ಮಾಡಿಕೊಳ್ಳ ಬೇಕಾಗುತ್ತದೆ.

ರೆಂಡ್‌ರಿಂಗ್‌ ಪಡೆಯುವ ಮೊದಲು ಅದರ ಬಗ್ಗೆ ಸ್ವಲ್ಪ ತಿಳಿದುಕೊಂಡು ವಿನ್ಯಾಸಕಾರರಿಗೆ ಹೇಳಬೇಕಾಗುತ್ತದೆ. ಕೆಲವು ಡಿಸೈನ್‌ಗಳು ತುಂಬಾ ಸುಲಭದಲ್ಲಿ ಮಾಡಲಾಗುವುದಿಲ್ಲ. ಆದ್ದರಿಂದ ಕೆಲವೊಂದು ದೃಶ್ಯಾವಳಿಗಳನ್ನು ಆಯ್ಕೆ ಮಾಡುವಾಗ ನೋಡಿಕೊಳ್ಳಬೇಕಾಗುತ್ತದೆ.

••ಪ್ರೀತಿ ಭಟ್ ಗುಣವಂತೆ

 

ಟಾಪ್ ನ್ಯೂಸ್

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

18-aranthodu

Aranthodu: ಜೀಪ್-ಬೈಕ್ ಅಪಘಾತ; ಗಂಭೀರ ಗಾಯಗೊಂಡಿದ್ದ ಬೈಕ್ ಸವಾರ ಸಾವು

17-voting

Vote: ಮತದಾನದ ಮಹತ್ವ

Siddaramaiah

Haveri; ದೇಶ ಬಿಡುತ್ತೇನೆ ಎಂದಿದ್ದ ದೇವೇಗೌಡರು ಮೋದಿ ಜತೆ ಸೇರಿದ್ದಾರೆ: ಸಿದ್ದರಾಮಯ್ಯ

15-udupi

Lok Sabha Election-2024; ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಅಂತಿಮ ಹಂತದ ಸಿದ್ಧತೆ ಪೂರ್ಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Kaup: ಎ.25ರಿಂದ ಕಳತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ, ನಾಗಮಂಡಲ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

Malicious Calls; ಜ್ಞಾನವ್ಯಾಪಿ ಮಸೀದಿ ಸರ್ವೆ ತೀರ್ಪು ನೀಡಿದ್ದ ಜಡ್ಜ್ ಗೆ ಬೆದರಿಕೆ ಕರೆ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

ಬಂಟರು ಹಾಗೂ ಬಿಲ್ಲವರು ಮೊಗವೀರರ ಎರಡು ಕಣ್ಣುಗಳಿದ್ದಂತೆ: ಕಿರಣ್‌ ಕುಮಾರ್‌ ಉದ್ಯಾವರ

19-uv-fusion

Vote: ಬನ್ನಿ ಉತ್ತಮ ನಾಯಕನನ್ನು ಆಯ್ಕೆ ಮಾಡೋಣ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

ಜ.26ರಂದು 2ನೇ ಹಂತದ ಚುನಾವಣೆ;ರಾಹುಲ್‌, ತರೂರ್‌, ಹೇಮಾ ಮಾಲಿನಿ ಹಲವು ಘಟಾನುಘಟಿಗಳು ಕಣದಲ್ಲಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.