ಕಣ್ಮನ ಸೆಳೆಯುವ ಜಂಪ್‌ ಸೂಟ್‌

Team Udayavani, Jan 24, 2020, 4:09 AM IST

ಜಂಪ್‌ ಸೂಟ್‌ ಎಲ್ಲರಿಗೂ ಒಪ್ಪುವಂತಹ ವಿನೂತನ ಶೈಲಿಯ ಉಡುಪಾಗಿದೆ. ಸರಳ ಮಾದರಿಯ ಉಡುಪು ಅಥವಾ ಪ್ಯಾಂಟ್‌, ಟಾಪ್‌ಗ್ಳಿಗಿಂತ ಉತ್ತಮ ನೋಟವನ್ನು ನೀಡುವುದರಿಂದ ಹೆಚ್ಚಾಗಿ ಕಣ್ಮಣಿಯರು ಈ ಉಡುಪಿನತ್ತ ಮಾರು ಹೊಗುತ್ತಿದ್ದಾರೆ.

ಜಂಪ್‌ ಸುಟ್‌ ಆಯ್ಕೆ ಹೇಗೆ?
ಅನೆಕ ಶೈಲಿಯಲ್ಲಿ ಜಂಪ್‌ ಸೂಟ್‌ ಸಿಗುವುದರಿಂದ ಆಯ್ಕೆ ಮಾಡುವಾಗ ನಿಮಗೆ ಸೂಕ್ತವಾದ ಮತ್ತು ಒಪ್ಪುವಂತಹದನ್ನು ಆಯ್ಕೆ ಮಾಡಿಕೊಳ್ಳುವುದು ಉತ್ತಮ. ಜಂಪ್‌ ಸೂಟ್‌ ಕೊಳ್ಳುವಾಗ ಹಗಲಿನಲ್ಲಿ ಧರಿಸಲು ಕ್ಯಾಶುವಲ್‌ ಸೂಟ್‌, ಸಂಜೆಯ ವೇಳೆಗೆ ಫಾರ್ಮಲ್‌ ಸೂಟ್‌, ಶೀತ ಹವಾಮಾನವನ್ನು ಎದುರಿಸಲು ಉದ್ದವಾದ ತೋಳುಗಳುಳ್ಳ ಸ್ಟ್ರಾಪ್ಲೆಸ್‌ ಶೈಲಿಯ ಜಂಪ್‌ ಸೂಟ್‌ ಯ್ಕೆ ಮಾಡಿಕೊಳ್ಳುವುದು ಉತ್ತಮ. ಇನ್ನೂ ನೀವು ಎತ್ತರವಾಗಿದ್ದರೆ ಸ್ಲಿಮ್‌ ಕ್ರಾಪ್ಡ್ ಶೈಲಿಯ ಜಂಪ್‌ ಸೂಟ್‌ ಆಯ್ಕೆ ಉತ್ತಮ ಇದರಿಂದ ನೀವು ಇನ್ನಷ್ಟು ಚಂದ ಕಾಣಿಸಬಹುದು ಮತ್ತು ಬಟ್ಟೆಯಲ್ಲಿ ನೀವು ಜೌಗು ಕಾಣುವುದನ್ನು ತಪ್ಪಿಸಬಹುದು. ಆದುದರಿಂದ ನಿಮಗೆ ಒಪ್ಪುವಂತಹ ಜಂಪ್‌ ಸೂಟ್‌ ಖರೀಸುವಾಗ ಈ ಎಲ್ಕಾ ಅಂಶಗಳನ್ನು ನೆನೆಪಿನಲ್ಲಿಡಬೆಕಾಗುತ್ತದೆ.

ಕ್ಯಾಶ್ಯುವಲ್‌ ಈವೆಂಟ್‌
ಹತ್ತಿ ಮತ್ತು ಡೆನಿಮ್‌ ಗಳಂತಹ ಅಂದರೆ ಡ್ರಾಸ್ಟ್ರಿಂಗ್‌ ಸೊಂಟವನ್ನು ಒಳಗೊಂಡಿರುವಂತಹ ಸಡಿಲವಾದ ಫಿಟ್‌ ಜಂಪ್‌ಸೂಟ್‌ಗಳನ್ನು ಧರಿಸುವುದು ಉತ್ತಮ. ಜಂಪ್‌ ಸೂಟ್‌ನೊಂದಿಗೆ ಫ್ಲಾಟಗಗ ಚಪ್ಪಲಿಗಳನ್ನು ಧರಿಸುವುದಾದರೆ, ಕತ್ತರಿಸಿದ ಶೈಲಿಯ ಬೂಟ್‌ ಅಥವಾ ಲೇಸ್‌ ಅಪ್‌ ಸ್ಯಾಂಡಲ್‌ ಅನ್ನು ಆಋಇಸಿಕೊಳ್ಳಿ ಇದು ನಿಮಗೆ ಇನ್ನಷ್ಟು ಲುಕ್‌ ನೀಡುತ್ತದೆ.

ಜಂಪ್‌ ಸೂಟ್‌ಗೆ ಸರಿ ಹೊಂದುವ ಪರಿಕರಗಳ ಆಯ್ಕೆ ಜಂಪ್‌ ಸೂಟ್‌ ಇತರ ಉಡುಪುಗಳಿಗಿಂತ ವಿಭಿನ್ನವಾಗಿರುವುದರಿಂದ, ಇದರ ಜತೆಗೆ ಸರಿ ಹೊಂದುವಂತಹ ಪರಿಕರಗಳನ್ನು ಆಯ್ಕೆ ಮಾಡುವುದು ಅಷ್ಟೇ ಉತ್ತಮ.

ಬೆಲ್ಟ್‌ಗಳೊಂದಿಗೆ ಜಂಪ್‌ಸೂಟ್‌
ಜಂಪ್‌ಸೂಟ್‌ ಅನ್ನು ಎಳೆಯಲು ಬೆಲ್ಟ್ ಒಂದು ಪ್ರಮುಖ ಪರಿಕರವಾಗಿದ್ದು, ಇದು ನೀವು ತೆಳ್ಲಗೆ ಕಾಣುವಂತೆ ಮಾಡುತ್ತದೆ. ಬೆಲ್ಟ್ ಆಯ್ಕೆಯ ಬಣ್ಣ ಮತ್ತು ನೀವು ಧರಿಸುವ ಬೂಟಿನ ಬಣ್ಣ ಒಮದೇ ಆಗಿದ್ದರೆ ಇದು ನಿಮ್ಮ ನೋಟವನ್ನು ಇನ್ನಷ್ಟು ಹೆಚ್ಚಿಸುತ್ತದೆ.

ಜ್ಯುವೆಲ್ಲರಿಯೊಂದಿಗೆ ಜಂಪ್‌ಸೂಟ್‌: ಜಂಪ್‌ಸೂಟ್‌ಗಳು ಸ್ಟೆಟ್‌ಮೆಂಟ್‌ ಸೈಲ್‌ ಆಗಿರುವಾಗ ಕೆಲವೊಮ್ಮೆ ಸರಳವಾಗಿ ಕಾಣಿಸಬಹುದು. ನೀವು ಧರಿಸುವ ಆಭರಣಗಳು ನೀವು ಧರಿಸುವ ಉಡುಪಿನ ಮೇಲೆ ಫೋಕಸ್‌ ಪಾಯಿಂಟ್‌ ಆಗಿರುವುದರಿಂದ ಆಯ್ಕೆಯಲ್ಲಿ ಜಾಗರೂಕತೆ ಮುಖ್ಯ. ಆದೂದರಿಂದ ಸ್ವಲ್ಪ ದಪ್ಪನಾದ ಹಾರ ಅಥವಾ ದೊಡ್ಡ ಪೆಂಡೆಂಟ್‌ ಕಿವಿಯೊಲೆಗಳಂತಹ ಎದ್ದು ಕಾಣುವ ಆಭರಗಳನ್ನು ಆರಿಸುವುದು ಉತ್ತಮ. ಫಾರ್ಮಲ್‌ ಜಂಪ್‌ಸೂಟ್‌ ಶೈಲಿಯೊಂದಿಗೆ ಚಿನ್ನದ ಆಭರಣ ಕೂಡ ಉತ್ತಮವಾದ ಲುಕ್‌ ನೀಡುತ್ತದೆ.

ಹೈ ಹೀಲ್ಸ್‌ನೊಂದಿಗೆ ಜಂಪ್‌ಸೂಟ್‌ ನಿಮ್ಮ ಅಂದವನ್ನು ಇನ್ನಷ್ಟು ಹೆಚ್ಚಿಸಲು ಹೈ ಹೀಲ್ಸ್‌ ಸಹಕಾರಿಯಾಗಿದೆ.

ಕೇಶ ವಿನ್ಯಾಸ
ಕ್ಯಾಶ್ಯುವಲ್‌ ಜಂಪ್‌ಸೂಟ್‌ಗಳಿಗಾಗಿ ಪೋನಿ ಸ್ಟೈಲ್‌ ತುಂಬಾ ಉತ್ತಮ ಲುಕ್‌ ನೀಡುತ್ತದೆ.

ಫಾರ್ಮಲ್‌ ಜಂಪ್‌ಸೂಟ್‌
ಮಹಿಳೆಯರು ಸಾಮಾನ್ಯವಾಗಿ ಯಾವುದೇ ಸಮಾರಮಭಗಳಲ್ಲಿ ಭಾಗವಹಿಸುವ ಮೊದಲು ತಮ್ಮ ಧಿರಿಸಿನ ಆಯ್ಕೆಯಲ್ಲಿ ತೊಡಗುವುದು ಸಹಜ. ಸೂಕ್ತವಾಗಿ ಡ್ರೆಸ್ಸಿಂಗ್‌ ಮಾಡಲು ಉತಮ ಆಯಕೆಯು ಮುಖ್ಯವಾಗುತ್ತದೆ. ಜಂಪ್‌ ಸೂಟ್‌ಗಳು ಸಾಮಾನ್ಯ ಉಡುಪಿನಷ್ಟೆ ಸುಂದರವಾಗಿ ಮತ್ತು ಹೊಳಪು ನೀಡುತ್ತದೆ. ಇದರಿಂದ ನಿಮ್ಮ ಅಂದ ಇನ್ನಷ್ಟು ಹೆಚ್ಚುತ್ತದೆ. ನಯವಾದ ಸರಳ ಮಾದರಿಯ ಜಂಪ್‌ ಸೂಟ್‌ ತೊಡುವುದರಿಂದ ಇದು ಫಾರ್ಮಲ್‌ ಪಾರ್ಟಿಗಳಿಗೆ ಇನ್ನಷ್ಟು ಮೆರುಗನ್ನು ನೀಡುತ್ತದೆ.

– ವಿಜಿತಾ ಅಮೀನ್‌

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ