ಮನೆಗೆ ವಿಭಿನ್ನ ಲುಕ್‌ ನೀಡುವ ಕನ್ನಡಿ


Team Udayavani, Sep 21, 2019, 5:00 AM IST

u-40

ಕಾಲಕ್ಕೆ ತಕ್ಕಂತೆ ಮನೆಯ ಸೌಂದರ್ಯವನ್ನು ಇಮ್ಮಡಿಗೊಳಿಸುವುದು ಹೆಚ್ಚಿನ ಮಹಿಳೆಯರ ಅಚ್ಚುಮೆಚ್ಚಿನ ಕೆಲಸ. ಇದಕ್ಕಾಗಿ ಮಾರುಕಟ್ಟೆಯಲ್ಲಿ ಯಾವ ರೀತಿಯ ಗೃಹಾಲಂಕಾರ ವಸ್ತುಗಳು ಬಂದರೂ ಅವು ನಮ್ಮ ಮನೆಯಲ್ಲಿರಬೇಕೆಂದು ಬಯಸುತ್ತಾರೆ. ಸಾಮಾನ್ಯ ಮನೆಗೂ ಮೆರುಗು ನೀಡುವಂತಹದ್ದು ಕನ್ನಡಿ. ಕನ್ನಡಿಯಿಂದ ಮನೆಯ ಅಲಂಕಾರವನ್ನು ಇನ್ನಷ್ಟು ಚಂದವಾಗಿಸಬಹುದು. ಮನೆಯ ಅಲಂಕಾರಕ್ಕೆ ಕನ್ನಡಿ ಆಯ್ಕೆ ಹೇಗೆ ಎಂಬ ಮಾಹಿತಿ ಇಲ್ಲಿದೆ.

ಇಂದಿನ ಮನೆಗಳಲ್ಲಿ ಕನ್ನಡಿಗಳನ್ನು ಅಳವಡಿಸುವುದು ಟ್ರೆಂಡ್‌ ಆಗಿದ್ದು ಮನೆ ಇನ್ನಷ್ಟು ಚೆಂದ ಕಾಣುವುದು ಇದರ ಹಿಂದಿನ ಉದ್ದೇಶವಾಗಿದೆ. ಅದಲ್ಲದೆ ಇದು ಇಂಟೀರಿಯರ್‌ ಡೆಕೊರೇಶನ್‌ಗೆ ಇನ್ನಷ್ಟು ಮೆರುಗು ನೀಡುವುದರಲ್ಲಿ ಸಂಶಯವಿಲ್ಲ.

ಕನ್ನಡಿಯನ್ನು ಮನೆಯಲ್ಲಿ ಅಳವಡಿಸುವುದರಿಂದ ಹಲವು ಉಪಯೋಗಗಳಿದ್ದು ಇದು ಮನೆಯ ವಿಸ್ತಾರವನ್ನು ಹೆಚ್ಚಿಸುವುದಲ್ಲದೆ ನಿಮ್ಮ ನಿವಾಸಕ್ಕೆ ಒಂದು ಚೆಂದದ ಲುಕ್‌ ನೀಡುತ್ತದೆ. ಮನೆಯ ಅಂದ ಹೆಚ್ಚಿಸಲು ಬಯಸುವವರು ಈ ಮಾದರಿಯನ್ನು ಅನುಸರಿಸಬಹುದು. ಇದು ಸ್ವಲ್ಪ ಸೂಕ್ಷ್ಮವಾಗಿದ್ದರೂ ಕೂಡ ಅಂದವನ್ನು ಇಮ್ಮಡಿಗೊಳಿಸುವುದರಲ್ಲಿ ಯಾವುದೇ ಸಂಶಯವಿಲ್ಲ. ಇದು ಬೆಳಕನ್ನು ಪ್ರತಿಫ‌ಲಿಸಿ ಕೊಠಡಿಯನ್ನು ಇನ್ನಷ್ಟು ಬ್ರೈಟ್‌ ಆಗಿ ಮಾಡುತ್ತದೆ.

ಇದರಲ್ಲಿ ನಾನಾ ಆಕಾರ, ಗಾತ್ರ ಮತ್ತು ಬಣ್ಣಗಳಿದ್ದೂ ವಿವಿಧ ಮೆಟೀರಿಯಲ್‌ಗ‌ಳಲ್ಲಿ ಲಭ್ಯವಿರುತ್ತದೆ. ಒಂದು ಕೊಠಡಿಯಲ್ಲಿ ಈ ಕನ್ನಡಿ ಒಂದು ರೀತಿಯ ಕೇಂದ್ರ ಬಿಂದುವಾಗಿದ್ದು ದೊಡ್ಡ ದೊಡ್ಡ ವಾಲ್‌ಗ‌ಳಿಗೆ ಇದು ಒಂದು ಸರಳತೆಯ ಜತೆಗೆ ಚೆಂದದ ಸೊಬಗನ್ನು ನೀಡುತ್ತದೆ.

ಆಯ್ಕೆಯಲ್ಲಿರಲಿ ಎಚ್ಚರ
ಕನ್ನಡಿ ಮನೆಯ ಅಂದ ಹೆಚ್ಚಿಸುತ್ತವೆ ಎಂದು ಕಣ್ಣಿಗೆ ಕಂಡಿದ್ದನ್ನು ಮನೆಯಲ್ಲಿ ತಂದು ಅಳವಡಿಸುವುದಲ್ಲ, ತರುವುದಕ್ಕಿಂತ ಮೊದಲು ಗೋಡೆಯ ಎತ್ತರ ಅಗಲಕ್ಕೆ ಸರಿಯಾಗಿ, ಎಷ್ಟು ದೊಡ್ಡದಾದ ಕನ್ನಡಿ ತರಬೇಕು ಎಂದು ಮೊದಲು ನಿರ್ಧರಿಸಿ ಅನಂತರ ಯಾವ ರೀತಿಯ ಕನ್ನಡಿ ಆ ಗೋಡೆಗೆ ಒಪ್ಪಬಹುದು ಎಂಬುದನ್ನು ಸರಿಯಾಗಿ ಗಮನಿಸಿ, ಇದು ನಿಮ್ಮ ಕನ್ನಡಿ ಅಳವಡಿಕೆಯಲ್ಲಿ ಮುಖ್ಯ ಪಾತ್ರ ವಹಿಸುತ್ತದೆ. ಉದ್ದನೆಯ ಕನ್ನಡಿ, ನೀಳ ಕನ್ನಡಿ, ಚೌಕ, ಆಯತಾಕಾರದ ಕನ್ನಡಿಗಳು ಸಾಮಾನ್ಯವಾಗಿ ಚೆಂದ ಕಾಣುತ್ತವೆ.

ಮೊದಲು ಸರಿಯಾದ ಯೋಚನೆಯ ಜತೆಗೆ ವಾಲ್‌ಗ‌ಳಿಗೆ ಕನ್ನಡಿ ಅಳವಡಿಸಬೇಕು. ನಿಮ್ಮ ರೀತಿಯಲ್ಲಿ ಅದು ಯಾವ ರೀತಿಯಲ್ಲಿ ಇಂಪಾಕ್ಟ್ ಆಗಬಲ್ಲದು ಎಂಬುದನ್ನು ಮೊದಲು ತಿಳಿದುಕೊಳ್ಳಿ ಅನಂತರ ಯಾವ ಗಾತ್ರದಲ್ಲಿ ಇರಬೇಕು ಎನ್ನುವುದನ್ನು ಯೋಚಿಸಿ ಏಕೆಂದರೆ ಕೆಲವರು ಪೂರ್ತಿ ವಾಲ್‌ಗ‌ಳಿಗೆ ಅಳವಡಿಸುತ್ತಾರೆ, ಇನ್ನು ಕೆಲವರು ಅರ್ಧ ಗೋಡೆಗಳಿಗೆ, ಇನ್ನು ಕೆಲವರು ಎಷ್ಟು ಬೇಕೊ ಅಷ್ಟೆ ಅಳವಡಿಸಿಕೊಂಡಿರುತ್ತಾರೆ ಹಾಗಾಗಿ ಕನ್ನಡಿಯ ಆಕರ್ಷಣೆ ನಿಮಗೆ ಕೇಂದ್ರ ಬಿಂದುವಾಗಬೇಕೊ ಅಥವಾ ಅದು ಬ್ಯಾಕ್‌ಗ್ರೌಂಡ್‌ ರೀತಿಯಲ್ಲಿ ಕಾಣಬೇಕೊ ಎಂಬುದನ್ನು ನಿರ್ಧರಿಸಿಕೊಳ್ಳಿ.

ಇತ್ತೀಚೆಗೆ ಸಾಮಾನ್ಯವಾಗಿ ಅಪಾರ್ಟ್‌ಮೆಂಟ್‌ಗಳಲ್ಲಿ ಇದನ್ನು ಬಳಸುತ್ತಿದ್ದು ಕೋಣೆಗಳು ವಿಶಾಲವಾಗಿ ಕಾಣಲು ಕನ್ನಡಿ ಸಹಾಯಕವಾಗಿದೆ. ಇದು ಭ್ರಮೆಯನ್ನು ಹುಟ್ಟಿಸುತ್ತದೆ. ಇನ್ನು ಕೆಲವರು ಇದನ್ನು ಕಿಚನ್‌ಗಳಲ್ಲಿ ಅಳವಡಿಸಿಕೊಳ್ಳುತ್ತಾರೆ. ಏಕೆಂದರೆ ಸಾಮಾನ್ಯವಾಗಿ ಮಹಿಳೆಯರು ಕನ್ನಡಿಯನ್ನು ತುಂಬಾ ಇಷ್ಟ ಪಡುವುದರಿಂದ ಕಿಚನ್‌ಗಳಲ್ಲಿ ಇದನ್ನು ಅಳವಡಿಸುವುದರಿಂದ ಅಡಿಗೆ ಮನೆಯಲ್ಲಿ ಹೆಚ್ಚು ಹೊತ್ತು ಕಾಲ ಕಳೆಯಲು ನೆರವಾಗುತ್ತದೆ. ಇನ್ನು ಕೆಲವು ಮನೆಗಳಲ್ಲಿ ಇದನ್ನು ಮನೆಯ ಮುಖ್ಯದ್ವಾರದ ಎದುರು ಕೂಡ ಬ್ರಹೃತ್‌ ಕನ್ನಡಿ ಅಳವಡಿಸುತ್ತಾರೆ. ಇದು ನಿಮ್ಮ ಮನೆಗೆ ಬರುವ ಅತಿಥಿಗಳಿಗೆ ಸ್ವಾಗತ ಕೋರುತ್ತವೆ. ಈ ರೀತಿ ಯಾವುದೇ ಪ್ರದೇಶವಿರಲಿ ವಿಸ್ತೀರ್ಣ ಇನ್ನಷ್ಟು ಹೆಚ್ಚ ಬೇಕು ಎಂದಲ್ಲೆಲ್ಲಾ ಕನ್ನಡಿಯನ್ನು ಬಳಸಬಹುದಾಗಿದೆ. ಆದರೆ ಇವುಗಳನ್ನು ಅಳವಡಿಸುವ ಮೊದಲು ಒಂದು ವ್ಯವಸ್ಥಿತವಾದ ಯೋಜನೆ ಮುಖ್ಯವಾಗಿರುತ್ತದೆ. ಮತ್ತು ಯಾವ ರೀತಿಯ ಕನ್ನಡಿ ಹೊಂದಬಹುದು ಎಂಬುದನ್ನು ಕೂಡ ಯೋಚಿಸಿ ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.

ಪ್ರೇಮ್‌ಗಳ ಆಯ್ಕೆ
ನೀವು ಖರೀದಿಸಿ ತರುವ ಕನ್ನಡಿಯ ಜತೆಗೆ ಅದಕ್ಕೆ ಅಳವಡಿಸುವ ಪ್ರೇಮ್‌ ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಯಾಕೆಂದರೆ ಒಮ್ಮೊಮ್ಮೆ ನೀವು ಆರಿಸುವ ಪ್ರೇಮ್‌ಗಳು ನಿಮ್ಮ ಗೋಡೆಯ ಬಣ್ಣಕ್ಕೆ ಸರಿ ಹೊಂದುವುದಿಲ್ಲ. ಅದಕ್ಕಿಂತ ಮಿಗಿಲಾಗಿ ಗೋಡೆಗಳಿಗೆ ತಕ್ಕನೆಯ ಪ್ರೇಮ್‌ ಹುಡುಕುವುದು ದೊಡ್ಡ ಸಾಹಸ. ಆದ್ದರಿಂದ ಆದಷ್ಟು ವಾಲ್‌ಗೆ ಸರಿಹೊಂದುವ ಚೌಕಟ್ಟನ್ನು ಆರಿಸಿ ಆಗ ವಾಲ್‌ ಇನ್ನಷ್ಟು ಚೆಂದವಾಗಿ ಕಾಣುತ್ತದೆ. ಅದಲ್ಲದೆ ನೀವು ಆಯ್ಕೆ ಮಾಡಿದ ಪ್ರೇಮ್‌ಗಳು ನಿಮ್ಮ ಅಭಿರುಚಿಯನ್ನು ಬಿಂಬಿಸುವಂತಿರಬೇಕು. ಈಗ ಕ್ಯಾಶುವಲ್‌ ಮತ್ತು ಮಾಡರ್ನ್ ಇಂಟೀರಿಯರ್‌ಗಳಲ್ಲಿಯೂ ಇದು ಸಾಮಾನ್ಯವಾಗಿದ್ದು, ಸದ್ಯ ಸರಳ ಪ್ರೇಮ್‌ಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.

-  ಪ್ರೀತಿ ಭಟ್‌ ಗುಣವಂತೆ

ಟಾಪ್ ನ್ಯೂಸ್

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ

1-a-DK-SHI

D.K. Suresh ಅವರದ್ದು ಹೃದಯವಂತಿಕೆಯಲ್ಲವೇ?: ಡಿಸಿಎಂ ಡಿ.ಕೆ. ಶಿವಕುಮಾರ್ ವಾಗ್ದಾಳಿ

1-wewqeqwe

Lok Sabha Polls: ಶಿಂಧೆ ಸೇನೆ ಸೇರ್ಪಡೆಯಾದ ಖ್ಯಾತ ನಟ ಗೋವಿಂದ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ

Lok Sabha Polls: ಚುನಾವಣೆಯಲ್ಲಿ 238 ಬಾರಿ ಸೋತರೂ ಛಲಬಿಡದ ಸರದಾರ.. ಈ ಬಾರಿ ಮತ್ತೆ ಕಣಕ್ಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

Checkbounce case: ಆರೋಪಿ ಮಹಿಳೆ ಖುಲಾಸೆ

Checkbounce case: ಆರೋಪಿ ಮಹಿಳೆ ಖುಲಾಸೆ

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

Udupi: ಕರ್ತವ್ಯದಲ್ಲಿದ್ದ ಪೊಲೀಸ್‌ಗೆ ಹಲ್ಲೆ, ಜೀವಬೆದರಿಕೆ: ಪ್ರತ್ಯೇಕ ಪ್ರಕರಣ ದಾಖಲು

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Fraud: ಸರಕಾರಿ ಉದ್ಯೋಗ ಆಮಿಷ: ಲಕ್ಷಾಂತರ ರೂಪಾಯಿ ವಂಚನೆ

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Kokkada: ತೋಟದಲ್ಲಿ ಕಟ್ಟಿದ್ದ ದನ ಕಳವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.