ಕೃತಕ ನೆರೆ ತಡೆಗೆ ಕ್ರಮ ಕೈಗೊಳ್ಳಬೇಕಿದೆ

Team Udayavani, Apr 21, 2019, 6:05 AM IST

ಸಾಂದರ್ಭಿಕ ಚಿತ್ರ.

ವರ್ಷಂಪ್ರತಿ ಮಳೆಗಾಲದಲ್ಲಿ ಜ್ಯೋತಿ ಸರ್ಕಲ್‌,ಬಂಟ್ಸ್‌ ಸರ್ಕಲ್‌,ಕಂಕನಾಡಿ,ಬಲ್ಮಠ,ಕೆ.ಎಸ್‌.ರಾವ್‌ ರಸ್ತೆ, ಕೊಡಿಯಾಲಬೈಲ್‌,ಬಿಜೈ ಹಾಗೂ ಇನ್ನಿತರ ರಸ್ತೆಗಳು, ದೊಡ್ಡ ತೋಡು,ನದಿಗಳಲ್ಲಿ ನೀರು ರಭಸದಲ್ಲಿ ಹರಿದಾಗ ವಾಹಗಳಿಗೆ,ಪಾದಚಾರಿಗಳಿಗೆ ತೀರಾ ಸಂಕಷ್ಟವನ್ನೊಡ್ಡುತ್ತವೆ.

ಆದರೆ ಇಷ್ಟು ವರ್ಷ ಜನರು ಮಳೆಗಾಲದಲ್ಲಿ ಇಂತಹ ಸಮಸ್ಯೆಗಳನ್ನು ಅನುಭವಿಸುತ್ತಿದ್ದರೂ,
ಮ.ನಾ.ಪ.ವಾಗಲಿ, ಜಿಲ್ಲಾಡಳಿತವಾಗಲಿ ಮುಂಚಿತವಾಗಿ ಇಂತಹ ಸಮಸ್ಯೆಗಳನ್ನು ಬಗೆಹರಿಸಲು ಕ್ರಮಕೈಗೊಂಡಿಲ್ಲ. ಈ ಕೃತಕ ನೆರೆಗೆ ಮುಖ್ಯ ಕಾರಣ ತೋಡು, ಚರಂಡಿ, ರಾಜ ಕಾಲುವೆಗಳ ಹೂಳೆತ್ತುವ ಕೆಲಸ ಕ್ಲಪ್ತ ಸಮಯದೊಳಗೆ ಮಾಡಿ ಮುಗಿಸದೇ ಇರುವುದು.ಈಗಾಗಲೇ ಕೆಲವು ಕಡೆಗಳಲ್ಲಿ ಹೂಳೆತ್ತುವ ಕಾಮಗಾರಿ ಆರಂಭವಾಗಿದ್ದರೂ ಶೀಘ್ರದಲ್ಲೇ ಎಲ್ಲ ಚರಂಡಿ,ರಾಜಕಾಲುವೆಗಳನ್ನು ಸ್ವತ್ಛಗೊಳಿಸಬೇಕಿದೆ.ಬಹುತೇಕ ಎಲ್ಲ ಮುಖ್ಯರಸ್ತೆ, ಅಡ್ಡ ರಸ್ತೆಗಳ ಚರಂಡಿ ನಿರ್ಮಾಣ ಕಾಮಗಾರಿ ತುಂಬಾ ಭರದಿಂದ ನಡೆಯುತ್ತಿದೆ.

ಆದರೆ ಈ ಕಾಮಗಾರಿಗಳು ಮೇ ತಿಂಗಳೊಳಗೆ ಮುಗಿಯುವ ಲಕ್ಷಣ ಕಾಣಿಸುತ್ತಿಲ್ಲ.ಇದರಿಂದಅಪಾಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದ್ದು,ಕೂಡಲೇ ಸಂಬಂಧಪಟ್ಟವರು ಗಮನಹರಿಸಿ ಕಾಮಗಾರಿಗಳನ್ನು ಮುಗಿಸಲು ಕ್ರಮಕೈಗೊಳ್ಳಬೇಕಿದೆ.

– ಜೆ. ಎಫ್ ಡಿ’ಸೋಜಾ,ಅತ್ತಾವರ


ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಬರುವ ದುಃಖ ಆ ಕ್ಷಣಕ್ಕೆ ದೊಡ್ಡದೆನಿಸುತ್ತದೆ. ಅದಕ್ಕಿಂತ ದೊಡ್ಡ ನೋವು ಇನ್ನೊಂದಿಲ್ಲ ಎನಿಸಿಬಿಡುತ್ತದೆ. ಆದರೆ ಸಮಯ ಸರಿದಂತೆ ಅವು ಕ್ಷುಲ್ಲಕವೆನಿಸುತ್ತದೆ....

  • ಗುಲಾಬಿ ಗಿಡ ಮುಳ್ಳಿನ ಗಿಡ. ಆದರೆ, ಟೊಂಗೆಯ ತುದಿಯಲ್ಲಿರುವುದು ಅಮರ ಪ್ರೇಮದ ಸಂಕೇತವಾದ ಗುಲಾಬಿ. ಎಷ್ಟೊಂದು ಮುಳ್ಳುಗಳಿವೆಯಲ್ಲ ಎಂದು ಗೊಣಗಿದರೆ ಗುಲಾಬಿಯ...

  • ಅದೊಂದು ಸುಂದರವಾದ ಊರು. ಎಲ್ಲವೂ ಪರ್ಫೆಕ್ಟ್ ಅನ್ನುವಷ್ಟು ಸೌಂದರ್ಯ. ಹೀಗಾಗಿ ಅಲ್ಲಿ ವಾಸಿಸುತ್ತಿದ್ದವರಿಗೂ ತಮ್ಮ ಊರಿನ ಬಗ್ಗೆ ಹೆಮ್ಮೆ ಎಂದೆನಿಸುತ್ತಿತ್ತು....

  • ಒಮ್ಮೊಮ್ಮೆ ಇಂಥದ್ದೊಂದು ನಡೆಯಲಿ ಎಂದು ನಾವು ನಿರೀಕ್ಷಿಸುವುದಿದೆ. ಅದು ಕೆಲವೊಮ್ಮೆ ಫ‌ಲಿಸುವುದೂ, ಒಮ್ಮೊಮ್ಮೆ ಕೈಕೊಡುವುದೂ ಬಲು ಅಚ್ಚರಿಯ ವಿಷಯ. ಯಾವುದೇ...

  • ವಿಸ್ಮಯದ ಜಗತ್ತಿನಲ್ಲಿ ದೇವರು ಮನುಷ್ಯನಿಗೆ ಸುಲಭವಾಗಿ ಅರ್ಥ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದೇ ಇರುವ ಅನೇಕ ಅಚ್ಚರಿಗಳನ್ನು ಸೃಷ್ಟಿಸಿಟ್ಟಿದ್ದಾನೆ. ಬೆಳಗಾಗುವುದು...

ಹೊಸ ಸೇರ್ಪಡೆ