ಅಡಿಕೆ ಬೆಲೆ ಮತ್ತೆ ಏರಿಕೆ

Team Udayavani, Sep 22, 2019, 5:00 AM IST

x-21

ಈ ವಾರವೂ ಹೊಸ ಅಡಿಕೆ ಬೆಲೆಯಲ್ಲಿ 2 ರೂ. ಏರಿಕೆಯಾಗಿದೆ. ಕಳೆದ ಹೊಸ ಅಡಿಕೆ 250 -268 ರೂ. ತನಕ ಖರೀದಿಯಾಗಿತ್ತು. ಈ ವಾರ ಮತ್ತೆ ಏರಿಕೆಯಾಗಿದೆ. ಹಳೆಯ ಅಡಿಕೆ 290-300 ರೂ. ತನಕ ಖರೀದಿಯಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಅಡಿಕೆ ಬೆಲೆ ಸ್ಥಿರತೆಯನ್ನು ಕಾಯ್ದುಕೊಂಡಿದೆ. ಡಬಲ್‌ ಚೋಲು 310 ರೂ.ವರೆಗೆ ಖರೀದಿ ನಡೆಸಿದ್ದು, ಹಿಂದಿನ ವಾರದ ಧಾರಣೆಯನ್ನೇ ಕಾಪಾಡಿಕೊಂಡಿದೆ. ಪಠೊರಾ ಹೊಸ 150 ರೂ.ನಿಂದ 190 ರೂ.ವರೆಗೆ ಹಾಗೂ ಹಳೆಯದು 210 ರೂ.ಗೆ ಖರೀದಿ ನಡೆಸುತ್ತಿದೆ. ಉಳ್ಳಿಗಡ್ಡೆ 130 ರೂ. ಹಾಗೂ ಹಳೆಯದು 150 ರೂ., ಕರಿಕೋಟು 100 ರೂ.ನಿಂದ 140 ರೂ.ವರೆಗೆ ಧಾರಣೆ ಪಡೆಯುತ್ತಿವೆ.

ರಬ್ಬರ್‌ ಇಳಿಕೆ
ರಬ್ಬರ್‌ ಬೆಲೆಯಲ್ಲಿ ತೀವ್ರ ಇಳಿಕೆ ಕಂಡುಬಂದಿದ್ದು, 126 ರೂ. ಗಳಲ್ಲಿ ಮಾರುಕಟ್ಟೆಯಲ್ಲಿ ಖರೀದಿಯಾಗುತ್ತಿದೆ. ಕರಾವಳಿ ಭಾಗದ ಪ್ರಮುಖ ವಾಣಿಜ್ಯ ಬೆಳೆ ಎನಿಸಿಕೊಂಡಿರುವ ರಬ್ಬರ್‌ನ ಬೆಲೆ ಚೇತೋಹಾರಿ ಏರಿಕೆಯನ್ನು ಕಂಡು ಬೆಳೆಗಾರರಲ್ಲಿ ಖುಷಿಯನ್ನು ತಂದಿತ್ತು. ಈ ವಾರ ಮತ್ತಷ್ಟು ಧಾರಣೆ ಇಳಿಕೆಯಾಗಿದೆ. ಆರ್‌ಎಸ್‌ಎಸ್‌4 ದರ್ಜೆ 126 ರೂ., ಆರ್‌ಎಸ್‌ಎಸ್‌5 ದರ್ಜೆ 122ರೂ.ನಲ್ಲಿ ಖರೀದಿ ನಡೆಸಿವೆ.

ಕೊಕ್ಕೋ ಯಥಾಸ್ಥಿತಿ
ಕಳೆದ ಕೆಲ ಸಮಯಗಳಿಂದ ಸ್ಥಿರವಾಗಿ ಸಾಗುತ್ತಿದ್ದ ಕೊಕ್ಕೋ ಧಾರಣೆಯಲ್ಲಿ ಕಳೆದ ವಾರ ಇಳಿಕೆ ಕಂಡಿತ್ತು. ಈ ವಾರ 45-48 ರೂ. ಗೆ ಖರೀದಿಯಾಗಿದೆ. ಕೃಷಿ ಉತ್ಪನ್ನಗಳ ಪೈಕಿ ಸ್ಥಿರತೆ ಸಾಧಿಸಿದ ಏಕೈಕ ಉತ್ಪನ್ನವೆಂದರೆ ಅದು ಕೊಕ್ಕೋ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಕೆಲವು ವರ್ಷಗಳಿಂದ ಕೊಕ್ಕೋ ಬೆಳೆಯುವ ಪ್ರಮಾಣವೂ ಧಾರಣೆಯ ಸ್ಥಿರತೆಯ ಕಾರಣದಿಂದ ಹೆಚ್ಚಾಗಿದೆ.

ಕಾಳುಮೆಣಸು ಯಥಾಸ್ಥಿತಿ
ಕಾಳುಮೆಣಸು ಧಾರಣೆಯಲ್ಲಿ ಈ ವಾರವೂ ಅದೇ 320 ರೂ. ದರ ಮುಂದುವರಿದಿದೆ. ಸ್ಥಳೀಯ ಮಾರುಕಟ್ಟೆಯಲ್ಲಿ ಕಾಳುಮೆಣಸು ಒಂದಷ್ಟು ಬೇಡಿಕೆ ಪಡೆದುಕೊಂಡಿದೆ. ಕೆಲ ಸಮಯಗಳ ಧಾರಣೆಯನ್ನೇ ಗಮನಿಸಿದರೆ, ಕಾಳುಮೆಣಸು ದೊಡ್ಡ ಮಟ್ಟಿನ ಧಾರಣೆ ಪಡೆದುಕೊಳ್ಳದೇ ಇರುವುದನ್ನು ಗಮನಿಸಬಹುದು. ಕಳೆದ ಎರಡು ವರ್ಷಗಳಿಂದ ಇಳಿಕೆಯ ಧಾರಣೆ ಮುಂದುವರಿದಿದೆ.

ತೆಂಗು ಧಾರಣೆ ಏರಿಕೆ
ಕಳೆದ ವಾರ 28 ರೂ. ಮತ್ತು 29 ರೂ.ಗೆ ಇಳಿಕೆ ಕಂಡಿದ್ದ ತೆಂಗಿನ ಬೆಲೆಯಲ್ಲಿ ಈ ವಾರ ಮತ್ತೆ ಏರಿಕೆಯಾಗಿದೆ. ಹೊಸ ತೆಂಗಿನ ಕಾಯಿ 31 ಮತ್ತು 32 ರೂ. ತನಕ ಖರೀದಿಯಾಗಿದೆ.

- ರಾಜೇಶ್‌ ಪಟ್ಟೆ

ಟಾಪ್ ನ್ಯೂಸ್

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಓಲೈಕೆ ರಾಜಕಾರಣ ಮಾಡುವ ಕಾಂಗ್ರೆಸ್‌ಗೆ ಜನ ತಕ್ಕ ಪಾಠ ಕಲಿಸಲಿದ್ದಾರೆ: ಮಂಜು

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಅಡಿಕೆ ಎಲೆ ಹಳದಿ ರೋಗದ ವರದಿ ಬಿಡುಗಡೆ-ಹಕ್ಕೊತ್ತಾಯ ಮಂಡನೆ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಕಾರ್ಗಿಲ್‌ ಯೋಧ ಮೆಲ್ವಿನ್‌ ಆಳ್ವರಿಗೆ ಮಿಲಿಟರಿ ಗೌರವ ಸಹಿತ ಅಂತ್ಯಸಂಸ್ಕಾರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

PM Modi

Pakistan ವಿರುದ್ಧ ಆಕ್ರೋಶ ; ಉಗ್ರವಾದ ಬಿತ್ತಿದ್ದ ರಾಷ್ಟ್ರಕ್ಕೆ ಗೋಧಿಗೂ ಬರ: ಮೋದಿ

1-ewqwqewq

LS Election; ಅತೀ ದೊಡ್ಡ ಹಂತದಲ್ಲಿ 62.37% ಮತದಾನ

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Puttur ಎಲೆಕ್ಷನ್‌ ಇದೆ ನಿಜ, ಆದರೆ ಹಿಂದಿನ ಅಬ್ಬರ ಕಾಣಿಸುತ್ತಿಲ್ಲ !

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

Udupi ಶ್ರೀಕೃಷ್ಣ ಮಠ ; ಸುಂದರಕಾಂಡ ಪ್ರವಚನಕ್ಕೆ ಚಾಲನೆ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

ಜಯಪ್ರಕಾಶ್‌ ಹೆಗ್ಡೆ ಗೆಲುವು ಖಚಿತ: ಕೆಪಿಸಿಸಿ ವಕ್ತಾರ ಸುಧೀರ್‌ ಕುಮಾರ್‌ ಮುರೊಳ್ಳಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.