ಬಹುಮುಖ ಪ್ರತಿಭೆ ಅವನಿ

Team Udayavani, Jan 23, 2020, 5:15 AM IST

ತನ್ನ 12ನೇ ವಯಸ್ಸಿಗೆ ಎರಡು ಪುಸ್ತಕ ಪ್ರಕಟಿಸಿರುವ ಬರಹಗಾರ್ತಿ, ಸಭೆಯಲ್ಲಿ ನಿಂತು ಮಾತನಾಡಿದರೆ ಭಾಷಣಗಾರ್ತಿ, ಹಾಡಲು ನಿಂತರೆ ಗಾಯಕಿ. ಅವಳೇ ಪೆರುವಾಜೆ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಅವನಿ.

ಈಗಾಗಲೇ ಗಾಳಿಪಟ ಹಾಗೂ ಬೆಳಕು ಮಕ್ಕಳ ಕವಿತೆಗಳ ಗುತ್ಛ ಪ್ರಕಟಿಸಿರುವ ಅವನಿ ಉಪಾಧ್ಯ ಯಕ್ಷಗಾನ, ಗಾಯನ, ಭರತನಾಟ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವಳು.
ಶಿಕ್ಷಕರಾದ ಸುಬ್ರಹ್ಮಣ್ಯ ಉಪಾಧ್ಯ ಹಾಗೂ ಲಕ್ಷ್ಮೀ ಹೆಗಡೆ ಅವರ ಪುತ್ರಿ. ಅವನಿ ಉಪಾಧ್ಯ ಬಿ. ಕಾರ್ಕಳದ ಸರಕಾರಿ ಕನ್ನಡ ಮಾಧ್ಯಮ ಶಾಲೆಯಲ್ಲಿ 7ನೇ ತರಗತಿ ವಿದ್ಯಾರ್ಥಿನಿ. ಶಾಲೆಯ ಎಲ್ಲ ಚಟುವಟಿಕೆಗಳಲ್ಲೂ ಸಕ್ರಿಯವಾಗಿ ತೊಡಗಿಸಿಕೊಂಡಿರುವವಳು.

ಪ್ರಶಸ್ತಿ-ಸಮ್ಮಾನ
ಬಾಲ ಪ್ರತಿಭೆ ಅವನೀ ಉಪಾಧ್ಯಳ ಬಹುಮುಖ ಪ್ರತಿಭೆಯನ್ನು ಗುರುತಿಸಿ ಹತ್ತಾರು ಸಂಘ ಸಂಸ್ಥೆಗಳು ಸಮ್ಮಾನಿಸಿ ಪ್ರೋತ್ಸಾಹಿಸಿವೆ. ಸರಕಾರಿ ನೌಕರರ ಸಂಘ ಕಾರ್ಕಳ ಇದರ ವತಿಯಿಂದ ಬಾಲ ಕವಯತ್ರಿ ಪುರಸ್ಕಾರ, ಕಾಸರಗೋಡಿನಲ್ಲಿ ತುಳುನಾಡ ಐಸಿರ ಪ್ರಶಸ್ತಿ, ನ್ಯಾಷನಲ್‌ ಟ್ಯಾಲೆಂಟೆಡ್‌ ಬೆಸ್ಟ್‌ ಡಾನ್ಸರ್‌ 2018 ಪ್ರಶಸ್ತಿ, ಕೊಪ್ಪಳ ಜಿಲ್ಲೋತ್ಸವ ಕಾರ್ಯಕ್ರಮದಲ್ಲಿ ಸಮ್ಮಾನ, ಅಖೀಲ ಕರ್ನಾಟಕ ಬೆಳದಿಂಗಳ ಸಾಹಿತ್ಯ ಸಮ್ಮೇಳನದಲ್ಲಿ ಕರ್ನಾಟಕ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಿವೆ.

-  ರಾಮಚಂದ್ರ ಬರೆಪ್ಪಾಡಿ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ