ಸೋಫಾ ಖರೀದಿಸುವಾಗ ಎಚ್ಚರ ವಹಿಸಿ

Team Udayavani, Nov 16, 2019, 4:36 AM IST

ಮನೆ ಅಂದವಾಗಿರಲು ಮನೆಯೊಳಗೆ ಪೀಠೊಪಕರಣಗಳು ಬೇಕಾಗುತ್ತವೆ. ಮನೆಗೆ ವಸ್ತುಗಳನ್ನು ಖರೀದಿಸುವಾಗ ಹಲವಾರು ರೀತಿಯಲ್ಲಿ ಗಮನಹರಿಸಬೇಕಾಗುತ್ತದೆ. ಅಂತೆಯೇ ಮನೆಯ ಸೊಬಗನ್ನು ಹೆಚ್ಚಿಸುವಲ್ಲಿ ಕೂಡ ಸೋಫಾಗಳು ಹೆಚ್ಚು ಆಕರ್ಷಿಸುತ್ತವೆ. ಹಾಗಾಗರೆ ಸೋಫಾಗಳನ್ನು ಖರೀದಿಸುವಾಗ ಹೆಚ್ಚು ಕಾಳಜಿ ಹಾಗಯೇ ಕೆಲವೊಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತದೆ.

ಸೋಫಾ ಇಡಬೇಕಾದ ಜಾಗವನ್ನು ಅಳತೆ ಮಾಡಿ
ಸೋಫಾವನ್ನು ಖರೀಸುವಾಗ ಮೊದಲು ಮಾಡಬೇಕಾದ ಕೆಲಸವೆಂದರೆ ನೀವು ಸೋಫಾವನ್ನು ಇಡಬಯಸುವ ಜಾಗದ ಅಳತೆ ಮಾಡಿಕೊಳ್ಳುವುದು. ನೀವು ಅಂಗಡಿ ಅಥವಾ ಶೋ ರೂಂಗಳಿಂದ ನೇರವಾಗಿ ಸೋಫಾವನ್ನು ಕೊಂಡೊಯ್ಯುವ ಬದಲಿ ನಿಮ್ಮ ಮನೆಗೆ ಎಷ್ಟು ದೊಡ್ಡದು ಅಥವಾ ಎಷ್ಟು ಚಿಕ್ಕ ಸೋಫಾ ಬೇಕು ಎಂಬುವುದನ್ನು ಅಳತೆ ಮಾಡಿಕೊಂಡು ನಂತರ ಸೋಫಾ ಖರೀದಿಸಿಕೊಳ್ಳಿ.

ವಿನ್ಯಾಸ ನೋಡಿಕೊಂಡು ಸೋಫಾ ಖರೀದಿಸಿ
ಸೋಫಾವನ್ನು ಖರೀದಿಸುವಾಗ ಮನೆಯಲ್ಲಿರುವ ಉಳಿದ ಪೀಠೊಪಕರಣಗಳ ಶೈಲಿಯೊಂದಿಗೆ ಸಮನ್ವಯಗೊಳಿಸಿ ಸೋಫಾ ಖರೀದಿಸಿ. ಹಾಗಾಗಿ ನಿಮಗೆ ಕಲಾತ್ಮಕ ಅಥವಾ ಇನ್ನಾವುದೇ ಶೈಲಿಯಲ್ಲಿ ನಿಮಗೆ ಅನುಕೂಲವಾಗುವಂತೆ ಸೋಫಾ ಖರೀದಿಸಿ. ಸೋಪಾ ಖರೀದಿಸುವಾಗ ಅದರ ವಿನ್ಯಾಸ ಹಾಗೂ ನಿಮ್ಮ ಉಳಿದ ಪೀಠೊಪಕರಣಗಳೊಂದಿಗೆ ಸೋಫಾ ಹೇಗೆ ಕಾಣುತ್ತದೆ ಎಂಬುವುದರ ಬಗ್ಗೆ ಹೆಚ್ಚು ಗಮನ ಹರಿಸುವುದು ಉತ್ತಮ.

ನೀವು ಸೋಫಾವನ್ನು ಖರೀದಿ ಮಾಡುವಾಗ ಅದರಲ್ಲಿ ಬಳಸಿರುವ ಬಟ್ಟೆಯ ಬಗ್ಗೆ ಸರಿಯಾಗಿ ಗಮನ ಕೊಡಿ. ನೀವು ಸೋಫಾವನ್ನು ಹೇಗೆ ಬಳಸುತ್ತೀರಿ, ಎಲ್ಲಿ ಇಡುತ್ತೀರಿ ಎಂಬುವುದನ್ನು ನೀವು ಮೊದಲೇ ತಿಳಿದುಕೊಂಡು ಅನಂತರ ಫ್ಯಾಬ್ರಿಕ್‌ನನ್ನು ಆಯ್ಕೆ ಮಾಡಿಕೊಳ್ಳಿ. ನೀವು ಸೋಫಾ ಖರೀದಿಸುವಾಗ ಅದರ ಬಣ್ಣವನ್ನು ಗಮನದಲ್ಲಿಟ್ಟುಕೊಳ್ಳಿ. ಮನೆಯ ಇತರ ಪೀಠೊಪಕರಣ, ಗೋಡೆಯ ಬಣ್ಣ ಮುಂತಾದವುಗಳನ್ನು ಗಮನಿಸಿ ಸೋಫಾವನ್ನು ಖರೀದಿಸುವುದು ಉತ್ತಮ.

ಸೋಫಾದ ಸ್ಪಚ್ಛತೆ ಹೇಗೆ ?
ಸೋಫಾವನ್ನು ಖರೀದಿಸಿದ್ದೀರಿ ಎಂದಾದರೆ ಅದರ ಸ್ವತ್ಛತೆಯನ್ನು ಕಾಪಾಡಿಕೊಳ್ಳುವುದು ಅಗತ್ಯ. ಸೋಫಾವನ್ನು ಸ್ವಚ್ಛಗೊಳಿಸುವಾಗ ಬಟ್ಟೆ, ವ್ಯಾಕ್ಯೂಮ್‌ ಕ್ಲೀನರ್‌ನನ್ನು ಬಳಸಿಕೊಂಡು ಅದರ ಮೇಲೆ ಇರುವ ಧೂಳು ಕಸ ಇನ್ನಿತರ ವಸ್ತುಗಳನ್ನು ಸ್ವತ್ಛಗೊಳಿಸಿ. ಸೋಫಾ ಕಲೆಗಳಿಂದ ಕೂಡಿದರೆ ಅಥವಾ ಗಟ್ಟಿಯಾದ ಧೂಳು ತುಂಬಿಕೊಂಡಿದ್ದರೆ ಅದನ್ನು ಶುಚಿಗೊಳಿಸಲು ಗಟ್ಟಿ ಮುಟ್ಟಾದ ಬ್ರಶ್‌ ಬಳಸಿಕೊಂಡು ಸೋಫಾ ಶುಚಿಗೊಳಿಸಬಹುದು. ವಾರಕ್ಕೊಂದು ಬಾರಿ ಸೋಫಾಕ್ಕೆ ಬಳಸಿ ಬಟ್ಟೆಗಳನ್ನು ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

ಆರಾಮದಾಯಕ ನೋಡಿಕೊಳ್ಳಿ
ಮನೆಯಲ್ಲಿರುವ ಸೋಫಾ ಜಾಗಕ್ಕೆ ತುಂಬಾ ದೊಡ್ಡದಾಗಿರಬಾರದು ಅಥವಾ ತುಂಬಾ ಚಿಕ್ಕದಾಗಿಯೂ ಇರಬಾರದು. ನೀವು ಎತ್ತರವಾಗಿದ್ದರೆ ಸೋಫಾದ ಆಸನಗಳು ಆಳವಾಗಿದಿಯೇ ಎಂಬುವುದನ್ನು ಖಚಿತಪಡಿಸಿಕೊಳ್ಳಿ. ಅದು ನಿಮಗೆ ಆರಾಮದಾಯಕವಾಗಿ ಕುಳಿತುಕೊಳ್ಳುವಂತೆ ಮಾಡುತ್ತದೆಯೇ ಎಂಬುವುದನ್ನು ಅರಿತುಕೊಳ್ಳಿ.

- ಪೂರ್ಣಿಮಾ ಪೆರ್ಣಂಕಿಲ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ