ಚಿರಕಾಲವಿರಲಿ ಈ ಸ್ಫೂರ್ತಿ


Team Udayavani, Nov 18, 2019, 5:00 AM IST

mouna-kanive-1

ಬಹಳಷ್ಟು ಸಲ ನಿಮ್ಮ ರೋಲ್‌ ಮಾಡಲ್‌ ಯಾರೆಂದು ಕೇಳಿದಾಗ ಕಲ್ಪನಾ ಚಾವ್ಲಾ, ಸಚಿನ್‌ ತೆಂಡುಲ್ಕರ್‌, ಪಿ.ಟಿ. ಉಷಾ ಹೀಗೆ ನಾನಾ ಹೆಸರುಗಳು ಕೇಳಿಬರುವುದನ್ನು ನೀವು ಗಮನಿಸಿರಬಹುದು. ಅವರ ಸಾಧನೆಗಳನ್ನು ಕಂಡು ನಾವು ಕೂಡ ಅವರಂತೆ ಆಗಬೇಕೆಂಬ ಕನಸು ಕಾಣುವುದು ಕೂಡ ಸಹಜ. ಅಂತೆಯೇ ಆ ಹುಮ್ಮಸ್ಸು, ಉತ್ಸಾಹವನ್ನು ಕೂಡ ಬೆಳೆಸಿಕೊಳ್ಳುತ್ತೇವೆ. ಕೆಲವರು ಇಂತಹ ಸ್ಫೂರ್ತಿಯಿಂದ ಯಶಸ್ಸನ್ನು ಪಡೆದರೆ, ಇನ್ನು ಕೆಲವರು ತಾವಂದುಕೊಂಡ ಗುರಿತಲುಪಲಾಗದೆ, ಬಯಸಿದ ಕೆಲಸವೂ ಸಿಗದೆ, ಸಾಧಿಸಬೇಕಾದ ಗುರಿಯನ್ನು ಅರ್ಧದಲ್ಲಿ ಬಿಟ್ಟುಬಿಡುತ್ತಾರೆ. ಬಾಳ ಪಯಣ ಹಲವು ಆಯಾಮಗಳನ್ನು ಪಡೆಯುತ್ತಾ ನಮ್ಮ ರೋಲ್‌ ಮಾಡೆಲ್‌ಗ‌ಳ ಕಥೆ ಕೇವಲ ಕ್ಷಣಿಕ ಸ್ಫೂರ್ತಿಯಾಗಿತ್ತು ಎಂಬುವುದನ್ನು ಮರೆತು ಬಿಡುತ್ತೇವೆ.

ಹೀಗೆ+ಯಾಕೆ=ಹೀಗೇಕೆ
ಚಿಕ್ಕ ವಯಸ್ಸಿನಲ್ಲಿ ಅಂದುಕೊಂಡ ಆ ಕನಸು ಯಾಕೆ ಇಂದು ವ್ಯತಿರಿಕ್ತವಾಯಿತು ಎಂಬ ಪ್ರಶ್ನೆಗೆ ಕಾರಣಗಳು ಹಲವಾರಿದ್ದರೂ, ನಮ್ಮನ್ನು ನಾವು ಸಂಪೂರ್ಣವಾಗಿ ಅದರಲ್ಲಿ ತೊಡಗಿಸಿಕೊಳ್ಳದಿರುವುದೇ ಇದಕ್ಕೆ ಮುಖ್ಯ ಕಾರಣ. ಬೇರೆಯವರ ಯಶಸ್ಸನ್ನು ಕಂಡು ಅಸೂಯೆ ಪಡುತ್ತಾರೆ. ಆದರೆ ಸಾಧನೆ, ಯಶಸ್ಸಿನ ಹಿಂದೆ ಅದೇಷ್ಟೋ ವರ್ಷಗಳ ಪರಿಶ್ರಮ ಅಡಗಿರುತ್ತದೆ ಎಂಬುವುದನ್ನು ನಾವು ಮರೆಯಬಾರದು. ವೇದಿಕೆಯ ಮೇಲೆ ಸಾಧನೆ ಮಾಡಿದ ವ್ಯಕ್ತಿಯ ಭಾಷಣ ಕೇಳಿದೊಡನೆ ನಮ್ಮ ಮೈಮನ ರೋಮಾಂಚನವಾಗುತ್ತದೆ. ಒಮ್ಮೆ ಆ ವ್ಯಕ್ತಿಯಂತೆ ಮಿಂಚಬೇಕು ಎನಿಸುತ್ತದೆ. ಆದರೆ ಅದರ ಹಿಂದಿನ ಪರಿಶ್ರಮವನ್ನು ಅನುಸರಿಸಲು ಸೋಮಾರಿಗಳಾಗುತ್ತೇವೆ. ಇದು ಕೆಲವರಲ್ಲಿ ಕಂಡುಬರುವ ಸಹಜಗುಣವಾಗಿ ಬಿಟ್ಟಿದೆ. ಇದಕ್ಕೆ ನಮಗೆ ನಾವೇ ಪ್ರಶ್ನೆ ಕೇಳಿಕೊಳ್ಳಬೇಕಿದೆ, ಆತ್ಮವಿಮರ್ಶೆ ಮಾಡಿಕೊಳ್ಳಬೇಕಿದೆ.

ಸ್ಫೂರ್ತಿಯನ್ನು, ಆದರ್ಶವನ್ನು ಓರ್ವ ಸಿನೆಮಾ ನಟ, ಪ್ರಖ್ಯಾತ ಆಟಗಾರರಿಂದಲೇ ಪಡೆಯುತ್ತೇವೆ ಎಂಬ ತಪ್ಪು ಕಲ್ಪನೆ ಬೇಡ. ಬಡತನ, ಹಸಿವು, ಅವ್ಯವಸ್ಥೆ ಇವುಗಳೂ ಕೂಡ ನಿಮ್ಮನ್ನು ಉತ್ತಮ ನಡೆಯತ್ತ ಕೊಂಡೊಯ್ಯಲು ಸ್ಫೂರ್ತಿಯಾಗಬಹುದು. ಅಬ್ದುಲ್‌ ಕಲಾಂ ಬೀದಿ ದೀಪದಿಂದ ಓದಿ ಜಗತ್ತಿನ ಮಹಾನ್‌ ವ್ಯಕ್ತಿಯಾದದ್ದು ತನ್ನಂತೆ ಇತರರೂ ಕಷ್ಟವನ್ನು ನಾಚಿಸುವಂತೆ ಬದುಕಬೇಕೆಂಬ ಸ್ಫೂರ್ತಿಯೂ ಇಂದಿಗೂ ಅಜರಾಮರ. ಕಾದಷ್ಟು ಕಬ್ಬಿಣ ಹದವಾಗುತ್ತಾ ಹೋಗುತ್ತದೆ ಎಂಬ ಮಾತಿದೆ. ಅದನ್ನು ನಮ್ಮ ಜೀವನದಲ್ಲಿ ಅನುಸರಿಸಿದರೆ ಎಲ್ಲ ಎಲ್ಲೆ ಮಿಟಿದವರಾಗಲು ಸಾಧ್ಯವಾಗುತ್ತದೆ. ಜೀವನದ ಭವ ಸಾಗರವನ್ನು ಮೇಲ್ನೋಟಕ್ಕೆ ಕಣ್ಣಾಯಿಸಿದರೆ ಸಾಲದು ಅದಕ್ಕೂ ಮಿಗಿಲಾಗಿ ಗುರಿ ತಲುಪಲು ನಿರ್ದಿಷ್ಟ ಛಲವು ಅತ್ಯಗತ್ಯ. ನಾವು ಸಾಧಿಸಬೇಕೆಂದು ಕೊಂಡದ್ದು ನಮ್ಮ ಕನಸ್ಸನ್ನು ಆಕ್ರಮಿಸುವಷ್ಟು ದೃಢವಾಗಿ ಮನಸ್ಸಲ್ಲಿ ಉಳಿದುಬಿಟ್ಟರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎನ್ನಬಹುದು.

 -ರಾಧಿಕಾ,ಕುಂದಾಪುರ

ಟಾಪ್ ನ್ಯೂಸ್

Untitled-2

ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

s-t-somashekhar

ಸಿದ್ದರಾಮಯ್ಯ ಮತ್ತು ಜಿ.ಟಿ.ದೇವೇಗೌಡ ಲವ್ ಬರ್ಡ್ಸ್ ತರಹ: ಎಸ್‌ಟಿ ಸೋಮಶೇಖರ್

avatar purusha

‘ಲಡ್ಡು ಬಂದು ಬಾಯಿಗೆ ಬಿತ್ತಾ…’ ಅವತಾರ್‌ ಪುರುಷ ಹಾಡು

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ಬಳ್ಳಾರಿ: ಆಫ್ರಿಕಾದಿಂದ ಬಂದ ಇಬ್ಬರು ಕ್ವಾರಂಟೈನ್ ಗೆ: ಡಾ. ಜನಾರ್ಧನ್

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

ರೂಪಾಂತರಿ ವೈರಸ್ ಗೆ ಆಹ್ವಾನ! ದಕ್ಷಿಣ ಆಫ್ರಿಕಾದಿಂದ 1 ಸಾವಿರ ಪ್ರಯಾಣಿಕರು ಮುಂಬಯಿಗೆ ಆಗಮನ?

Untitled-2

ಸದ್ಯಕ್ಕೆ ಲಾಕ್ ಡೌನ್ ಮಾಡುವ ಉದ್ದೇಶ ಸರ್ಕಾರದ ಮುಂದಿಲ್ಲ: ಸಿಎಂ ಬೊಮ್ಮಾಯಿ ಸ್ಪಷ್ಟನೆಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘Car’bar with Merwyn Shirva | Episode 1

udayavani youtube

ಭಾರತ – ನ್ಯೂಜಿಲ್ಯಾಂಡ್ ಟೆಸ್ಟ್ ಪಂದ್ಯ ಡ್ರಾ : ಜಯದ ಸನಿಹದಲ್ಲಿದ್ದ ಟೀಂ ಇಂಡಿಯಾಗೆ ನಿರಾಸೆ

udayavani youtube

ಫ್ರೆಂಡ್ ಪೆನ್ಸಿಲ್ ಕದ್ದ ಎಂದು ಪೊಲೀಸ್ ಠಾಣೆಗೆದೂರು ದಾಖಲಿಸಲು ಹೋದ ಪುಟ್ಟ ವಿದ್ಯಾರ್ಥಿಗಳು!

udayavani youtube

ಕಟ್ಟಡ ತೆರವಿಗೆ ಕೂಡಿ ಬರದ ಗಳಿಗೆ : ಅವಘಡ ಸಂಭವಿಸುವ ಮೊದಲು ಎಚ್ಚೆತ್ತುಕೊಳ್ಳಿ

udayavani youtube

ನೋಂದಣೆ ಕಚೇರಿಗೆ ವಕೀಲರು ಬರದಂತೆ ಅಧಿಕಾರಿಗಳ ತಾಕೀತು : ಪ್ರತಿಭಟನೆಗಿಳಿದ ವಕೀಲರು

ಹೊಸ ಸೇರ್ಪಡೆ

13work

ಕಾಮಗಾರಿ ಪರಿಶೀಲಿಸಿದ ಮಡೋಳಪ್ಪ

ಕಡಲೆಕಾಯಿ ಪರಿಷೆ

ಮೂರು ದಿನಗಳ ಕಾಲ ನಡೆಯುವ ಕಡಲೆಕಾಯಿ ಪರಿಷೆ

12ishwarappa

ನೆಲೆ ಕಳೆದುಕೊಳ್ಳುತ್ತಿದೆ ಕಾಂಗ್ರೆಸ್‌

Untitled-2

ವಿಟ್ಲ : ಉಡುಪಿ-ಕಾಸರಗೋಡು 400 ಕೆವಿ ವಿದ್ಯುತ್ ಮಾರ್ಗ ವಿರೋಧಿಸಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

ಹುಬ್ಬಳ್ಳಿ: ಸಿದ್ಧಾರೂಢಸ್ವಾಮಿ ಮಠದ ಹೊಂಡದಲ್ಲಿ ಮುಳುಗಿ ಯುವಕ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.