ಐಎಎಸ್‌ ಕನಸು ನನಸಾಗಿಸಿಕೊಳ್ಳುವ ಮೊದಲು…

ಯಾವೆಲ್ಲ ಪರೀಕ್ಷೆಗಳಿವೆ? ಅರ್ಹತೆಗಳೇನು? ಇಲ್ಲಿವೆ ಮಾಹಿತಿ

Team Udayavani, Jan 29, 2020, 5:59 AM IST

“ಮರಳಿ ಯತ್ನವ ಮಾಡು’ ಎನ್ನುವುದು ಪ್ರಸಿದ್ಧ ಕವಿವಾಣಿ. ಇದು ಐ.ಎ.ಎಸ್‌. ಕನಸು ಹೊತ್ತವರಿಗೆ ಚೆನ್ನಾಗಿ ಹೊಂದುತ್ತದೆ. ಅದೊಂದು ತಪಸ್ಸು ಎನ್ನುವು ದರಲ್ಲಿ ಅನುಮಾನವೇ ಇಲ್ಲ. ಯುಪಿಎಸ್‌ಸಿ (ಯೂನಿಯನ್‌ ಪಬ್ಲಿಕ್‌ ಸರ್ವೀಸ್‌ ಕಮಿಷನ್‌) ಪ್ರತಿವರ್ಷ ನಾಗರಿಕ ಸೇವಾ ಹುದ್ದೆಗಳಾದ ಐ.ಪಿ.ಎಸ್‌., ಐ.ಎಫ್.ಎಸ್‌., ಐ.ಆರ್‌.ಎಸ್‌., ಐ.ಡಿ.ಎಸ್‌., ಸಿ.ಎ.ಪಿ.ಎಫ್.- ಎ.ಎಫ್. ಹಾಗೂ ಇನ್ನಿತರ ಕ್ಷೇತ್ರಗಳ ಅಭ್ಯರ್ಥಿ ನೇಮಕಾತಿ ಭರ್ತಿಗಾಗಿ, ಐ.ಎ.ಎಸ್‌. (ಇಂಡಿಯನ್‌ ಅಡ್ಮಿನಿಸ್ಟ್ರೇಟಿವ್‌ ಸರ್ವೀಸ್‌) ರಾಷ್ಟ್ರ ಮಟ್ಟದ ಸ್ಪರ್ಧಾತ್ಮಕ ಪರೀಕ್ಷೆಯನ್ನು ನಡೆಸಿಕೊಂಡು ಬರುತ್ತಿದೆ. 2020ನೇ ಸಾಲಿನ ನಾಗರಿಕ ಸೇವಾ ಪರೀಕ್ಷಾ ದಿನಾಂಕ ಪ್ರಕಟಣೆ ಆಗಿದ್ದು, ಪರೀಕ್ಷೆ ತೆಗೆದುಕೊಳ್ಳಲು ಅಗತ್ಯವಿರುವ ವಿದ್ಯಾರ್ಹತೆ, ಪರೀಕ್ಷಾ ನಿಯಮ, ಅರ್ಜಿ ಸಲ್ಲಿಕೆ ಹೇಗೆ ಎಂಬ ಮಾಹಿತಿ ನೀಡಿದ್ದಾರೆ ಸುಶ್ಮಿತಾ ಜೈನ್‌.

ಮೂರು ಹಂತಗಳನ್ನು ಒಳಗೊಂಡಿದೆ ನಾಗರಿಕ ಸೇವಾ ಪರೀಕ್ಷೆಗೆ ಒಟ್ಟು 2025 ಅಂಕಗಳನ್ನು ನಿಗದಿ ಮಾಡಿದ್ದು, ಮೂರು ಹಂತಗಳಲ್ಲಿ ಪರೀಕ್ಷೆಯನ್ನು ನಡೆಸಲಾಗುತ್ತದೆ.

ಹಂತ 1: ಐ.ಎ.ಎಸ್‌. ಪ್ರಿಲಿಮ್ಸ್‌ (ಪೂರ್ವಭಾವಿ ಪರೀಕ್ಷೆ)
ಹಂತ 2: ಐ.ಎ.ಎಸ್‌. ಮೇನ್ಸ್ (ಮುಖ್ಯ ಪರೀಕ್ಷೆ)
ಹಂತ 3: ಇಂಟರ್‌ವ್ಯೂ/ ವ್ಯಕ್ತಿತ್ವ ಪರೀಕ್ಷೆ ಪ್ರಿಲಿಮ್ಸ್‌ ಪರೀಕ್ಷೆ
ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಸಾಮಾನ್ಯ ಜ್ಞಾನ ಮತ್ತು ಸಿವಿಲ್‌ ಸರ್ವೀಸ್‌ ಆಪ್ಟಿಟ್ಯೂಡ್‌ ಎಂಬ ಎರಡು ಪತ್ರಿಕೆಗಳಿದ್ದು, ಪ್ರತಿಯೊಂದು ಪತ್ರಿಕೆಯೂ 200 ಅಂಕಗಳನ್ನು ಒಳಗೊಂಡಿರುತ್ತದೆ.

ಐಎಎಸ್‌ ಪೂರ್ವಭಾವಿ ಪರೀಕ್ಷೆ
ಪತ್ರಿಕೆ 1: ಸಾಮಾನ್ಯ ಜ್ಞಾನ – 200 ಅಂಕಗಳು – ಅವಧಿ ಎರಡು ಗಂಟೆ. ಪತ್ರಿಕೆ 2: ಸಿವಿಲ್‌ ಸರ್ವೀಸ್‌ ಆಪ್ಟಿಟ್ಯೂಡ್‌ – 200ಅಂಕಗಳು – ಅವಧಿ ಎರಡು ಗಂಟೆ.

ಮುಖ್ಯ ಪರೀಕ್ಷೆ
ಪ್ರಿಲಿಮ್ಸ್‌ ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮಾತ್ರ ಐ.ಎ.ಎಸ್‌. ಮೈ®Õ… ಪರೀಕ್ಷೆಯನ್ನು ತೆಗೆದುಕೊಳ್ಳಲು ಅರ್ಹರಾಗಿರುತ್ತಾರೆ. ಐ.ಎ.ಎಸ್‌. ಮೇ®Õ… ಪರೀಕ್ಷೆಯಲ್ಲಿ ಏಳು ಮೆರಿಟ್‌ ಡಿರೈವಿಂಗ್‌ ಪತ್ರಿಕೆಗಳು ಹಾಗೂ ಎರಡು ಕ್ವಾಲಿಫೈಯಿಂಗ್‌ ಲಾಂಗ್ವೇಜ್‌ ಪತ್ರಿಕೆಗಳು ಇರುತ್ತವೆ. ಹಾಗೆಯೇ ಅರ್ಹತಾ ಪ್ರಶ್ನೆ ಪತ್ರಿಕೆಗಳಾಗಿದ್ದು, ಈ ಪರೀಕ್ಷೆಯಲ್ಲಿ ಉತ್ತೀರ್ಣರಾದವರು ಸಂದರ್ಶನ ಅಥವಾ ವ್ಯಕ್ತಿತ್ವ ಪರೀಕ್ಷೆಗೆ ಅರ್ಹರಾಗುತ್ತಾರೆ.

ವ್ಯಕ್ತಿತ್ವ ಪರೀಕ್ಷೆ (ಸಂದರ್ಶನ)
ವ್ಯಕ್ತಿತ್ವ ಪರೀಕ್ಷೆ 275 ಅಂಕಗಳನ್ನು ನಿಗದಿ ಮಾಡಲಾಗಿದ್ದು, ಸಂದರ್ಶನಕ್ಕೆ ಆಯ್ಕೆಯಾದ ಅಭ್ಯರ್ಥಿಗಳು ಸಂದರ್ಶನ ದಿನದಂದು ತಮ್ಮ ಎಲ್ಲ ಮೂಲ ಶೈಕ್ಷಣಿಕ ದಾಖಲೆಗಳನ್ನು ಹಾಜರುಪಡಿಸಬೇಕಾಗುತ್ತದೆ. ಅಭ್ಯರ್ಥಿಗಳ ಸಂದರ್ಶನಕ್ಕೆ ನಿಗದಿಪಡಿಸಲಾದ ದಿನಾಂಕವನ್ನು ಯಾವುದೇ ಕಾರಣಕ್ಕೂ ಬದಲಾವಣೆ ಮಾಡಲಾಗುವುದಿಲ್ಲ.

ವಯೋಮಿತಿ ಹಾಗೂ ಶೈಕ್ಷಣಿಕ ಅರ್ಹತೆ
ಪರೀಕ್ಷಾ ಅಧಿಕಾರಿಗಳು ನಿಗದಿಪಡಿಸಿದ ಕೆಲವು ನಿರ್ಣಾಯಕ ಅಂಶಗಳನ್ನು ಹೊಂದಿದ ಅಭ್ಯರ್ಥಿಗಳು ಮಾತ್ರ ಪರೀಕ್ಷೆಗೆ ಕೂರಲು ಅರ್ಹರಾಗಿರುತ್ತಾರೆ..

ಅರ್ಹತೆಯ ಮಾನದಂಡಗಳು
ರಾಷ್ಟ್ರೀಯತೆ, ವಯೋಮಿತಿ, ಶೈಕ್ಷಣಿಕ ಅರ್ಹತೆ, ದೈಹಿಕ ದೃಢತೆ, ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಪ್ರಯತ್ನಿಸಿದ ಸಂಖ್ಯೆ ಇವೆಲ್ಲವನ್ನೂ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.

ರಾಷ್ಟ್ರೀಯತೆ (ನ್ಯಾಷನಾಲಿಟಿ)
ಐ.ಎ.ಎಸ್‌. ಹಾಗೂ ಐ.ಪಿ.ಎಸ್‌. ಪರೀಕ್ಷೆ ಬರೆಯಲಿಚ್ಛಿಸುವ ಅಭ್ಯರ್ಥಿಗಳು ಭಾರತೀಯ ನಾಗರಿಕರಾಗಿರಬೇಕು. ಇನ್ನಿತರ ಹುದ್ದೆಗಳಿಗೆ ಪರೀಕ್ಷೆ ಬರೆಯಲಿಚ್ಛಿಸುವವರು ಕೆಳಗೆ ನೀಡಿರುವ ಯಾವುದಾದರೊಂದು ಕೆಟಗರಿಗೆ ಸೇರಿರಬೇಕು.

ಭಾರತೀಯ ನಾಗರಿಕರು
ನೇಪಾಲ, ಭೂತಾನ್‌ ನಾಗರಿಕರು
ಟಿಬೆಟಿಯನ್‌ ನಿರಾಶ್ರಿತರು (ಜನವರಿ 1, 1962ರ ಮುನ್ನ ಭಾರತಕ್ಕೆ ಬಂದು ನೆಲೆಸಿದವರು)
ಭಾರತೀಯ ಮೂಲದವರಾಗಿದ್ದು, ಪಾಕಿಸ್ಥಾನ, ಬರ್ಮಾ, ಶ್ರೀಲಂಕಾ, ಕೀನ್ಯಾ, ಉಗಾಂಡಾ ಇನ್ನೂ ಕೆಲವು ದೇಶಗಳಿಂದ ಭಾರತಕ್ಕೆ ಶಾಶ್ವತವಾಗಿ ನೆಲೆಸಲು ವಲಸೆ ಬಂದವರು ಅರ್ಹರಾಗಿರುತ್ತಾರೆ.
ಶೈಕ್ಷಣಿಕ ಅರ್ಹತೆ
ಸರಕಾರದಿಂದ ಮಾನ್ಯತೆ ಪಡೆದ ಯಾವುದೇ ವಿದ್ಯಾಸಂಸ್ಥೆ ಯಿಂದ, ಯಾವುದೇ ಪದವಿಯನ್ನು ಪಡೆದಿರಬೇಕು.
ಅವಕಾಶಗಳೆಷ್ಟು?
 ಜನರಲ್‌ ಕೆಟಗರಿಗೆ ಸೇರಿದ ಅಭ್ಯರ್ಥಿ 32 ವರ್ಷದ ವರೆಗೆ, ಗರಿಷ್ಠ ಆರು ಬಾರಿ ಐ.ಎ.ಎಸ್‌. ಪರೀಕ್ಷೆ ಬರೆಯಬಹುದು.
 ಒಬಿಸಿ ಅಭ್ಯರ್ಥಿಗಳು 35 ವರ್ಷದ ವರೆಗೆ ಗರಿಷ್ಠ 9 ಬಾರಿ ಪರೀಕ್ಷೆ ಬರೆಯಬಹುದು.
 ಪ.ಜಾತಿ ಮತ್ತು ಪಂಗಡ ಸೇರಿದ ಅಭ್ಯರ್ಥಿಗಳು 37 ವರ್ಷದ ವರೆಗೆ ಪರೀಕ್ಷೆಗೆ ಹಾಜರಾಗಬಹುದು.

ವಯೋಮಿತಿ
ಕನಿಷ್ಠ ವಯೋಮಿತಿ: 21 ವರ್ಷ
ಗರಿಷ್ಠ ವಯೋಮಿತಿ: 32 ವರ್ಷ
ಗರಿಷ್ಠ ವಯೋಮಿತಿಯನ್ನು ಮೀಸಲಾತಿಗೆ ಒಳಪಟ್ಟ ಅಭ್ಯರ್ಥಿಗಳಿಗೆ ಕೆಳಗಿನಂತೆ ವಿಸ್ತರಿಸಲಾಗಿದೆ.
ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡ- 5 ವರ್ಷಗಳು.
ಒಬಿಸಿ- 3 ವರ್ಷಗಳು
ಎಕ್ಸ್ ಸರ್ವಿಸ್‌ಮನ್‌- 5 ವರ್ಷಗಳು

ಅರ್ಹತಾ ಸುತ್ತಿನ ಪತ್ರಿಕೆಗಳು
ಪತ್ರಿಕೆ 1: ಸಂವಿಧಾನದ 8ನೇ ಅನುಚ್ಛೇದದಲ್ಲಿ ಅಂಗೀಕರಿಸಿದ ಒಂದು ಭಾರತೀಯ ಭಾಷೆ-300 ಅಂಕಗಳು
ಪತ್ರಿಕೆ 2: ಕಡ್ಡಾಯ ಇಂಗ್ಲಿಷ್‌-300 ಅಂಕಗಳು ಅವಧಿ 3ಗಂಟೆ.
(10ನೇ ತರಗತಿಯ ಮಟ್ಟದ ಭಾಷಾ ಜ್ಞಾನಕ್ಕೆ ಸಂಬಂಧಿಸಿದ ಪಠ್ಯಕ್ರಮಕ್ಕೆ ಅನುವಾಗುವಂತೆ ರೂಪಿಸಲಾಗಿರುತ್ತದೆ.)

ಪರೀಕ್ಷಾ ಕೇಂದ್ರಗಳು
ಐ.ಎ.ಎಸ್‌. ಪೂರ್ವಭಾವಿ (ಪ್ರಿಲಿಮಿನರಿ) ಪರೀಕ್ಷೆಯನ್ನು ಭಾರತದ 72 ನಗರಗಳಲ್ಲಿ ನಡೆಸಲಾಗುತ್ತದೆ. ಕರ್ನಾಟಕದಲ್ಲಿ ಬೆಂಗಳೂರು ಮತ್ತು ಧಾರವಾಡ ಪೂರ್ವಭಾವಿ ಪರೀಕ್ಷಾ ಕೇಂದ್ರಗಳಾಗಿದ್ದವು. ಮುಖ್ಯ ಪರೀಕ್ಷೆ (ಮೇನ್ಸ್) ಭಾರತದ 24 ವಿವಿಧ ನಗರಗಳಲ್ಲಿ ನಡೆಯುತ್ತದೆ. ಈ ಕೇಂದ್ರಗಳಲ್ಲಿ ಬೆಂಗಳೂರು ಕೂಡ ಒಂದು. ಅಭ್ಯರ್ಥಿಗಳು ತಮಗೆ ಅನುಕೂಲವೆನಿಸಿದ ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಬಹುದು. ಆದರೆ ಮಂಜೂರು ಮಾಡುವ ಅಥವಾ ಅದಕ್ಕೆ ಸಮ್ಮತಿ ಸೂಚಿಸುವ ಅಧಿಕಾರ ಯು.ಪಿ.ಎಸ್‌.ಸಿ.ಗೆ ಇರುತ್ತದೆ.

ಅರ್ಜಿಸಲ್ಲಿಸಲು ಕೊನೆಯ ದಿನಾಂಕ: ಮಾರ್ಚ್‌ 3
ಪ್ರಿಲಿಮ್ಸ್‌ ಪರೀಕ್ಷೆ ದಿನಾಂಕ: ಮೇ. 31
ಮುಖ್ಯ ಪರೀಕ್ಷಾ ದಿನಾಂಕ: ಸೆಪ್ಟಂಬರ್‌ 18
ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಜಾಲಾತಾಣ www.upsc.gov.in

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ವಿವಿಧ ರೀತಿಯ ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳಿಂದ ತಯಾರು ಮಾಡಿದ ಗೊಬ್ಬರಗಳಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಇದರಲ್ಲಿ ಅನೇಕ ವಿಧಗಳಿವೆ. ಸಾರಜನಕ...

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

  • ಬೆಳೆಗಾರರು ಅಡಿಕೆ ಮತ್ತು ತೆಂಗು ಬೆಳೆಗಳ ಮಧ್ಯೆ ಕೊಕ್ಕೋ ಬೆಳೆದು ಯಶಸ್ವಿಯಾಗಿದ್ದರು. ಆದರೆ ಕೊಕ್ಕೋ ಬೆಳೆಯುವ ಪ್ರಮಾಣವನ್ನು ಹೆಚ್ಚಿಸಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ...

  • ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು...

ಹೊಸ ಸೇರ್ಪಡೆ

  • ಮನದ ಮೂಲೆಯಲ್ಲಿ ಇಡಿಸೂಡಿ ಹಿಡಿದ ಕೈಯೊಂದು ಮನೆಯ ಮೂಲೆಮೂಲೆಗಳನ್ನು ಸ್ವತ್ಛಗೊಳಿಸುತ್ತಿರುವಂತೆ ಭಾಸವಾದಾಗ ಒಂದು ಕ್ಷಣ ಯೋಚನೆಯಲ್ಲೇ ಮುಳುಗಿ ಹೋಯ್ತು ಮನ....

  • ಹುಬ್ಬಳ್ಳಿ: ಉತ್ತರಾಧಿಕಾರಿ ನೇಮಕ ವಿಚಾರ, ತಮ್ಮ ವಿರುದ್ಧ ಮಾಡಿರುವ ಆರೋಪಗಳ ಬಗ್ಗೆ ಸ್ಪಷ್ಟನೆ ನೀಡುವ ನಿಟ್ಟಿನಲ್ಲಿ ಬಾಲೇಹೊಸೂರು ಮಠದ ದಿಂಗಾಲೇಶ್ವರ ಸ್ವಾಮೀಜಿ,...

  • ಜಾಗತಿಕ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತಿದೆ. ದೇಶದ ನಾನಾ ಭಾಗಗಳಿಂದ ಜನ ಇಲ್ಲಿಗೆ ಬಂದು ನೆಲೆಸಿದ್ದಾರೆ. ಬದುಕಿರುವಾಗ ಹೇಗೋ ನೆಲೆ ಸಿಗುತ್ತಿದೆ. ಆದರೆ ಅದೇ...

  • ಬೆಂಗಳೂರು: ವಿವಿಧ ಇಲಾಖೆಯ ಸಚಿವರು ಸುಲಭವಾಗಿ ಕಾರ್ಯಕರ್ತರಿಗೆ ಹಾಗೂ ಸಾರ್ವಜನಿಕರಿಗೆ ಲಭ್ಯವಾಗಬೇಕೆಂಬ ಸದುದ್ದೇಶದಿಂದ ಬಿಜೆಪಿ ಕೇಂದ್ರ ಕಚೇರಿಗೆ ವಾರಕ್ಕೆ...

  • ಬೆಂಗಳೂರು: ಹುಳಿಮಾವು ಕೆರೆ ದುರಂತ ಸಂಭವಿಸಿ ಇಂದಿಗೆ (ಫೆ.24)ನಾಲ್ಕು ತಿಂಗಳಾಗಲಿದೆ. ಆದರೆ, ಇದಕ್ಕೆ "ಪರೋಕ್ಷವಾಗಿ ಕಾರಣರಾದ ಪಾಲಿಕೆಯ ಕೆರೆ ವಿಭಾಗದ ಅಧಿಕಾರಿಗಳ'...