ಗಿಡಗಳಿಗೆ “ಕಸಿ’: ಕಡಿಮೆ ಸಮಯದಲ್ಲಿ ಉತ್ತಮ ಇಳುವರಿ


Team Udayavani, Aug 25, 2019, 5:30 AM IST

r-12

ಕಸಿ ನಿರ್ಲಿಂಗ ವಂಶಾಭಿವೃದ್ಧಿಯ ಒಂದು ಪುರಾತನ ಕಲೆ. ಆದರೆ ಇದರ ವ್ಯಾಪಕ ವಾಣಿಜ್ಯಿಕ ಬಳಕೆ ಅದರ ಸರಳ, ನವೀನ ತಂತ್ರಗಳು ಕೂಡ ಇತ್ತೀಚಿನದು. ಅಂಗಾಂಶ ಕೃಷಿ ಅಥವಾ ಟಿಶ್ಯೂ ಕಲ್ಚರ್‌ ಇನ್ನೊಂದು ಜನಪ್ರಿಯ ವಿಧಾನ. ಆದರೆ ಇದು ಬಾಳೆ, ಹೂ, ಅಲಂಕಾರಿಕ ಗಿಡ ಮುಂತಾದ ಮೃದು ಕಾಂಡದ ಸಸ್ಯ ಜಾತಿಗಳಲ್ಲಿ ಮಾತ್ರ ವಾಣಿಜ್ಯಿಕ ಯಶಸ್ಸು ಕಂಡಿದೆ.

ಉತ್ತಮ ಇಳುವರಿ ನೀಡುವ ಆಹಾರ ಬೆಳೆಗಳು ಅಥವಾ ವಾಣಿಜ್ಯ ಬೆಳೆಗಳ ಕಾಂಡದ ಒಂದು ಸಣ್ಣ ತುಂಡಿನಿಂದ ಅದೇ ಸ್ವಜಾತಿಯ ಮತ್ತೂಂದು ಸಸ್ಯವನ್ನು ಉತ್ಪತ್ತಿ ಮಾಡುವ ಪ್ರಕ್ರಿಯೆಗೆ ‘ಕಸಿ ಪದ್ಧತಿ’ ಎಂದು ಕರೆಯುತ್ತಾರೆ. ಅಂದರೆ ಇಳುವರಿ ನೀಡಿ ಮುಪ್ಪಡರಿದ ಒಂದು ಸಸ್ಯದ ಕಾಂಡಕ್ಕೆ ಅತಿ ಉಪಯುಕ್ತವಾದ ಅದೇ ಪ್ರಭೇದದ ಸಸ್ಯ ಕಾಂಡವನ್ನು ಬೆಸೆಯುವುದರಿಂದ ‘ನಿರುಪಯುಕ್ತ’ ಸಸಿ ಕೂಡ ಉಪಯುಕ್ತವಾಗುತ್ತದೆ. ಕಸಿಯನ್ನು ಮುಖ್ಯವಾಗಿ ಮಾವು, ಹಲಸು, ಚಿಕ್ಕು, ಪೇರಲೆ, ದಾಸವಾಳ, ಗುಲಾಬಿ, ಬದನೆ ಈ ಪ್ರಭೇದಗಳಿಗೆ ಮಾಡಲಾಗುತ್ತದೆ. ಇದರ ಉದ್ದೇಶ ಹಲವು. ಕಡಿಮೆ ಸಮಯದಲ್ಲಿ ಉತ್ತಮ ಇಳುವರಿ ಮತ್ತು ಪ್ರತಿಫ‌ಲ ಅಪೇಕ್ಷೆ ಪ್ರಮುಖವಾದುದು.

ಉದಾಹರಣೆಗೆ ಮಾವು ಮರ. ಇದರ ಬೀಜವನ್ನು ನೆಟ್ಟು ಅದು ಬೆಳೆದು ಪ್ರತಿಫ‌ಲ ನೀಡುವ ಹೊತ್ತಿಗೆ ಆರೆಂಟು ವರ್ಷಗಳು ತಗಲುತ್ತವೆ. ಈ ಪದ್ಧತಿ ಅನುಸರಿಸಿದರೆ ಸುಮಾರು ಮೂರು ನಾಲ್ಕು ವರ್ಷಗಳಲ್ಲಿ ಉತ್ತಮ ಫ‌ಸಲು ಪಡೆದು ಗುಣಮಟ್ಟದಲ್ಲಿ ಉತ್ತಮ ಅಂಶವನ್ನು ಗುರುತಿಸಬಹುದು.

ಈ ಪದ್ಧತಿ ಕೈಗೊಳ್ಳುವ ಮುನ್ನ ಕೆಲವು ಅಂಶಗಳನ್ನು ನಾವು ಗಮನಿಸಬೇಕು. ಕಸಿ ಮಾಡಲು ಬೇಕಿರುವ ಸಸ್ಯದ ಉತ್ತಮ ಮತ್ತೂಂದು ಪ್ರಭೇದದ ತಳಿ ನಮ್ಮಲ್ಲಿ ಇರಬೇಕು. ವಾಣಿಜ್ಯ ಬೆಳೆಗಳ ‘ನಿಲಿಂಗ್‌’ ವಂಶಾಭಿವೃದ್ಧಿಯ ವಿಧಾನಕ್ಕೆ ಕಸಿ ಪದ್ಧತಿ ಒಂದು ಉತ್ತಮ ಉದಾಹರಣೆ. ಒಂದೇ ಜಾತಿಯ ಎರಡು ಸಸಿಗಳನ್ನು ಬೆಸೆಯುವಲ್ಲಿ ಈ ಪದ್ಧತಿ ಸಹಾಯಕ. ಸದೃಢವಾದ ಬೇರು ಗಿಡದ ಮೇಲೆ ಉತ್ತಮ ಜಾತಿಯ ಟೊಂಗೆಗಳನ್ನು ಬೆಸೆಯುವುದು ಕಸಿ ಪದ್ಧತಿಯಲ್ಲಿ ಬಹು ಮುಖ್ಯ ಅಂಶ.

ಕಸಿ ಮಾಡಲು ಸೂಕ್ತ ಕಾಲ
ಕಸಿ ಮಾಡಲು ಚಳಿಗಾಲ ಮತ್ತು ಅತಿ ಮಳೆ ಬೀಳುವ ಅಥವಾ ತೀವ್ರ ಬಿಸಿಲು ಇದ್ದ ತಿಂಗಳುಗಳನ್ನು ಬಿಟ್ಟು ಉಳಿದ ತಿಂಗಳುಗಳಲ್ಲಿ ಕೈಗೊಳ್ಳುವುದು ಸೂಕ್ತ. ಆಗಸ್ಟ್‌-ಸೆಪ್ಟಂಬರ್‌ ಅಥವಾ ಜನವರಿ-ಫೆಬ್ರವರಿ ತಿಂಗಳುಗಳು ಈ ಕಾರ್ಯಕ್ಕೆ ಯೋಗ್ಯ.

ಈ ಪದ್ಧತಿಯ ಪ್ರಯೋಜನ
1 ಹಳೆಯ ತಳಿಯ ಪುನರ್‌ ಸಂಸ್ಕರಣೆ ಹಾಗೂ ಅಭಿವೃದ್ಧಿ .
2 ಅಲಂಕಾರಿಕ ಸಸ್ಯಗಳ ಅಭಿವೃದ್ಧಿ.

ಕಸಿ ಪದ್ಧತಿಯ ವಿಧಾನಗಳು
1 ಗೂಟಿ ಕಸಿ:
ಹದವಾಗಿ ಬಲಿತ ಗಿಡದ ಕಾಂಡವನ್ನು ಮಧ್ಯೆ ಕತ್ತರಿಸಿ ಮಧ್ಯಭಾಗದಲ್ಲಿ ಅಡ್ಡವಾಗಿ ಸೀಳಬೇಕು. ಅದೇ ಜಾತಿಯ ಮತ್ತೂಂದು ಸಸ್ಯದ ಚಿಗುರನ್ನು ಬೆಸೆಯುವುದು ಗೂಟಿ ಕಸಿ ವಿಧಾನ.

2 ಸಾಮೀಪ್ಯ ಕಸಿ: ಇದು ಬಹಳ ಹಿಂದಿನ ಪದ್ಧತಿ. ಕುಂಡದಲ್ಲಿ ಬೆಳೆದ ಸಸಿಯನ್ನು ತಾಯಿ ಮರದ ಹತ್ತಿರ ಬೆಸೆಯುವ ಕ್ರಿಯೆ. ಇದು ಚಿಗುರಲು ಸುಮಾರು 2ರಿಂದ 3 ತಿಂಗಳು ಬೇಕು. ಇದನ್ನು ಬೃಹತ್‌ ಪ್ರಮಾಣದಲ್ಲಿ ಅನುಸರಿಸಲು ಸಾಧ್ಯವಿಲ್ಲ.

3 ಓಟೆ ಕಸಿ: ಇದು ಹಳೆಯ ಗಿಡಗಳಿಗೆ ಕಸಿ ಮಾಡುವ ವಿಧಾನ. ಬೀಜದಿಂದ ಚಿಗುರೊಡೆದ ಎಳೆಯ ಗಿಡಕ್ಕೆ ಕಸಿ ಮಾಡಲಾಗುತ್ತದೆ. ಇದನ್ನು ವ್ಯಾಪಕ ಪ್ರಮಾಣದಲ್ಲಿ ಮಾಡಲು ಸಾಧ್ಯ. ಇಲ್ಲಿ ಮುಖ್ಯವಾಗಿ ಗಮನಿಸಬೇಕಾದುದೆಂದರೆ ಸಸಿಯ ಓಟೆಯಿಂದ ಬೇರೆಯಾಗದಂತೆ ನಿಗಾ ವಹಿಸಬೇಕು. ಒಂದು ವೇಳೆ ಬೇರೆಯಾದರೆ ಕಸಿ ಕಟ್ಟಿದ್ದು ವ್ಯರ್ಥ.

4 ಮೃದು ಕಾಂಡ ಕಸಿ: ಮೆದುವಾದ ಸಸ್ಯಗಳಾದ ಬಾಳೆ ಮತ್ತು ಸೇವಂತಿಗೆ ಸಸ್ಯಗಳಿಗೆ ಕಾಂಡದ ಮೇಲಿರುವ ಲೇಪವನ್ನು ಕೊರೆದು ಆ ಜಾಗದಲ್ಲಿ ಬೇರೆ ಕಾಂಡವನ್ನು ಬೆಸೆಯುವುದು.

5 ಕುಡಿ ಕಸಿ: ಬಲಿತ ಮರಕ್ಕೆ ನಡುಭಾಗದಲ್ಲಿ ಆಂಗ್ಲ ಭಾಷೆ ‘ವಿ’ ಆಕಾರದಲ್ಲಿ ಮೇಲಿನ ಕಾಂಡವನ್ನು ಸೀಳಿ ಆ ಜಾಗದಲ್ಲಿ ಉತ್ತಮ ಜಾತಿಯ ಕಾಂಡವನ್ನು ಬೆಸೆಯುವುದು. ಕಾಂಡ ಬೆಸೆದುಕೊಂಡ ಅನಂತರ ಮರದ ಮೇಲ್ಭಾಗವನ್ನು ಕತ್ತರಿಸಲಾಗುತ್ತದೆ.

6 ಗೂಟಿ ಕಟ್ಟುವುದು: ಈ ಪದ್ಧತಿಯಲ್ಲಿ ಕಸಿ ಕಟ್ಟುವ ಪೇರಳೆ, ದಾಳಿಂಬೆ ಗಿಡಗಳ ಕಾಂಡದ ಮಧ್ಯಭಾಗದಲ್ಲಿ ಮತ್ತೂಂದು ಕಾಂಡವನ್ನು ಮಣ್ಣಿನ ಉಂಡೆಯೊಂದಿಗೆ ಲೇಪಿಸಿ ಮೇಲಿನಿಂದ ಪ್ಲಾಸ್ಟಿಕ್‌ ತೊಟ್ಟೆಯನ್ನು ಕಟ್ಟಬೇಕು.

7 ಕಣ್ಣು ಕಸಿ: ಸಸ್ಯಗಳ ಎಲೆಗಳ ಕಂಕುಳಲ್ಲಿ ಇರುವ ಚಿಗುರು ಕಣ್ಣನ್ನು ಬಳಸಿಕೊಂಡು ಕಸಿ ಮಾಡುವ ವಿಶಿಷ್ಟ ವಿಧಾನ. ಬಾಳೆ, ಗುಲಾಬಿ ಗಿಡಗಳಿಗೆ ಇದು ಸೂಕ್ತವಾಗಿದೆ. ಇದರಲ್ಲಿ ಎರಡು ವಿಧಾನಗಳಿವೆ. ಅಯ್‌ ಬಡ್ಡಿಂಗ್‌, ಪ್ಯಾಚ್ ಬಡ್ಡಿಂಗ್‌. ಕಸಿ ಕಟ್ಟುವ ಈ ಎರಡು ವಿಧಾನಗಳನ್ನು ಅನುಸರಿಸಲು ಸಸ್ಯಗಳ ಗಾತ್ರ ಮತ್ತು ಬೆಳವಣಿಗೆಯನ್ನು ಗಣನೆಗೆ ತೆಗೆದುಕೊಳ್ಳುವುದು ಆವಶ್ಯಕ. ಅತ್ಯಂತ ಪ್ರಾಚೀನ ಕಾಲದಿಂದಲೂ ರೂಢಿಯಲ್ಲಿರುವ ಕಸಿ ಪದ್ಧತಿ ಹಳೆಯ ದೇಸಿ ಸಸಿಗಳನ್ನು ಉಳಿಸಿ ನವೀಕರಿಸಲು ಮತ್ತು ಅಲಂಕಾರಿಕ ಸಸ್ಯಗಳನ್ನು ಅಭಿವೃದ್ಧಿಪಡಿಸಲು ಸಹಕಾರಿ.

ಉತ್ತಮ ತಳಿ ಹಾಗೂ ಗುಣಮಟ್ಟದ ಇಳುವರಿ ಕೊಡುವ ಕಸಿ ಪದ್ಧತಿ ರೈತರಿಗೆ ಒಂದು ವರದಾನ.

ಬೇರು ಸಸ್ಯಗಳನ್ನು ಬೆಳೆಸುವುದು
ತೋಟದ ಸರಿಯಾದ ನಕ್ಷೆ ತಯಾರಿಸಿ 10/10 ಮೀ. ಅಂತರದಲ್ಲಿ ಗುಣಿಗಳನ್ನು ಗುರುತಿಸಿ 1 ಮೀ. ಉದ್ದ, 1 ಮೀ. ಅಗಲ, 1 ಮೀ. ಆಳವಿರುವ ತಗ್ಗುಗಳನ್ನು ತೋಡಬೇಕು. ಗುಣಿಗಳ ತಳಭಾಗದಲ್ಲಿ ಸ್ವಲ್ಪ ಹಸಿರೆಲೆ, ಗೊಬ್ಬರ, ಹೊಂಗೆ, ಬೇವು ಮುಂತಾದ ಗಿಡಗಳ ಎಲೆ ಮತ್ತು ಮೃದು ಕಾಂಡಗಳನ್ನು ತುಂಬಿ ಅನಂತರ ಉತ್ತಮ ತೋಟದ ಮಣ್ಣು ಮತ್ತು ಸಾವಯವ ಗೊಬ್ಬರಗಳನ್ನು ಸಮ ಪ್ರಮಾಣದಲ್ಲಿ ಬೆರೆಸಿ ಗುಣಿಗಳಲ್ಲಿ ತುಂಬಬೇಕು.

ಜಯಾನಂದ ಅಮೀನ್‌, ಬನ್ನಂಜೆ

ಟಾಪ್ ನ್ಯೂಸ್

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Neha hiremath Case; ನಿಷ್ಪಕ್ಷ ತನಿಖೆ ನಡೆಸಿ ನ್ಯಾಯ ಒದಗಿಸಲಾಗುವುದು: ಹೆಬ್ಬಾಳ್ಕರ್

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Bengaluru: ನಕಲಿ ಭೂ ದಾಖಲೆಗಳ ಸಲ್ಲಿಸಿ 22 ಬ್ಯಾಂಕಲ್ಲಿ 10 ಕೋಟಿ ಸಾಲ!

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

Dharwad; ನೇಹಾ ಕೊಲೆ ಮಾಡಿದ ನನ್ನ ಮಗನಿಗೆ ಕಠಿಣ ಶಿಕ್ಷೆಯಾಗಲಿ: ಫಯಾಜ್ ತಾಯಿ ಆಗ್ರಹ

gayi

Davanagere; ಗಾಯಿತ್ರಿ ಸಿದ್ದೇಶ್ವರ್‌ ಅಂತಿಮ ನಾಮಪತ್ರ ಸಲ್ಲಿಕೆ; ಭರ್ಜರಿ ಮೆರವಣಿಗೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

Mollywood: ಸೂಪರ್‌ ಹಿಟ್‌ ʼಪ್ರೇಮಲುʼ ಸೀಕ್ವೆಲ್‌ ಅನೌನ್ಸ್; ಹೆಚ್ಚಾಯಿತು ನಿರೀಕ್ಷೆ

signature

Haveri; ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೂಚಕರ ಖೊಟ್ಟಿ ಸಹಿ, ದೂರು ದಾಖಲು

Hubli; Dingaleshwar Swamiji received payment to compete: Yatnal alleges

Hubli; ಸ್ಪರ್ಧೆ ಮಾಡಲು ದಿಂಗಾಲೇಶ್ವರ ಸ್ವಾಮೀಜಿಗೆ ಪೇಮೆಂಟ್ ಬಂದಿದೆ: ಯತ್ನಾಳ್ ಆರೋಪ

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

Box office: ಈ ವಾರ ಬಾಲಿವುಡ್‌ನಲ್ಲಿ ಎರಡು ಸಿನಿಮಾಗಳು ರಿಲೀಸ್: 1st Day ಗಳಿಸಿದ್ದೆಷ್ಟು?

6-jp-hegde

Congress: ಕೈಗಾರಿಕೋದ್ಯಮದಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ: ಜೆಪಿ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.