ಬ್ಲ್ಯಾಕ್ ಕ್ಯಾಪ್‌ ಲಲನೆಯರು

Team Udayavani, Jan 17, 2020, 5:52 AM IST

ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ. ಹೊರಗೆ ಸುತ್ತಾಡಲೂ ತಲೆ ನೋವಿನ ಚಿಂತೆ ಕಾಡುತ್ತದೆ. ಹೀಗಿರುವಾಗಲೇ ಬಿಸಿಲಬೇಗೆಯಿಂದ ತಪ್ಪಿಸಿಕೊಳ್ಳಲು ಪರ್ಯಾಯ ಮಾರ್ಗದ ಕಡೆ ಸಹಜವಾಗಿಯೇ ನಮ್ಮ ಗಮನ ಇರಲೇ ಬೇಕಾಗುತ್ತದೆ. ಇಂತಹ ಆಲೋಚನೆ ಬಂದಾಗಲೇ ನೆನಪಿಗೆ ಬರುವುದು ಬ್ಲ್ಯಾಕ್‌ ಕ್ಯಾಪ್‌. ಈ ಬ್ಲ್ಯಾಕ್‌ ಕ್ಯಾಪ್‌ ಇತ್ತೀಚೆಗೆ ಟ್ರೇಂಡ್‌ ಆಗಿದ್ದರೂ ಹಿಂದಿನ ಕಾಲದ ಸಿನೆಮಾಗಳಲ್ಲಿ ಇದರ ವಿನ್ಯಾಸ ಕಂಡಾಗ ಇದು ಎಷ್ಟು ಹಳೆಯದು ಎಂಬುವುದು ನೆನಪಿಗೆ ಬರುತ್ತದೆ.

ಬ್ಯಾಕ್‌ ಕ್ಯಾಪ್‌ ಯಾಕೆ?
ಯಾವುದೇ ಬಣ್ಣದ ಡ್ರೇಸ್‌ಗೆ ಸಹಜವಾಗಿ ಹೊಂದಿಕೊಂಡು ಸುಂದರತೆಯೊಂದಿಗೆ ಚರ್ಮದ ರಕ್ಷಣೆಗೂ ಪಯುಕ್ತವಾಗಿದೆ.

ಯಾವುದರೊಂದಿಗೆ ಸೂಕ್ತ?
ಬ್ಲ್ಯಾಕ್‌ ಹ್ಯಾಟ್‌ ಕೇವಲ ಬಿಸಿಲಿನಿಂದ ಮಾತ್ರ ನಮ್ಮನ್ನು ರಕ್ಷಿಸಲು ಬಳಸದೇ ಮಾಡರ್ನ್ ರೂಪದಲ್ಲಿ ಕಾಣಲೂ ಇದು ಸಹಾಯಕವಾಗಿದೆ. ಆ ಕಾರಣದಿಂದಲೇ ರ್‍ಯಾಂಪ್‌ವಾಕ್‌ನಲ್ಲಿ, ಫ್ಯಾಷನ್‌ ಶೋನಲ್ಲಿ ಇದೊಂದು ಹವಾ ಮೂಡಿಸಿದೆ ಎಂದರೂ ತಪ್ಪಾಗಲಾರದು. ಸಾಮಾನ್ಯ ಸ್ಪೋರ್ಟ್ಸ್ ಡ್ರೆಸ್‌ನಲ್ಲಿಯೂ ಇದು ಒಂದು ಟ್ರೆಂಡ್‌ ಆಗಿದೆ. ಕ್ರಾಪ್‌ ಟಾಪ್‌ ಜತೆ ರೌಂಡ್‌ ಇಯರಿಂಗ್‌ ಧರಿಸಿ ಸಿಂಪಲ್‌ ಮೇಕಪ್‌ನೊಂದಿಗೆ ಲೈಟ್‌ ಕಲರ್‌ ಪಿಂಕ್‌ ಲಿಫ್ಟಿಕ್‌ ಬ್ಲ್ಯಾಕ್‌ ಹ್ಯಾಟ್‌ ಗೆ ಪಫೇìಕ್ಟ್ ಮ್ಯಾಚಿಂಗ್‌ ಎನ್ನಬಹುದು. ಇದರೊಂದಿಗೆ ಮಿನಿ ಸ್ಕರ್ಟ್‌, ಥ್ರಿ ಫೋರ್ಥ್ ಝೀನ್ಸ್‌ ಪ್ಯಾಂಟ್‌ ವಿತ್‌ ವೈಟ್‌ ಶರ್ಟ್‌ ಗೂ ಬ್ಲ್ಯಾಕ್‌ ಹ್ಯಾಟ್‌ ಮ್ಯಾಚಿಂಗ್‌ ಆಗುತ್ತದೆ.

ಹೇಗಿರಲಿ ಮೇಕ್‌ ಅಪ್‌?
ಹ್ಯಾಟ್‌ಗೂ ಮೇಕಪ್‌ ಗೂ ಸಂಬಂಧವಿದೆಯೇ ಎಂದು ಕಡೆಗಣಿಸದಿರಿ. ಯಾವುದೇ ಟ್ರೆಂಡ್‌ ಆದರೂ ಉತ್ತಮ ಲುಕ್‌ ದೊರಕಲು ಮೇಕಪ್‌ ಟಚ್‌ ಇರಲೇ ಬೇಕಾಗುತ್ತದೆ. ವೈಟ್‌ ಮಿನಿಸ್ಕರ್ಟ್‌ ನೊಂದಿಗೆ ಬ್ಲ್ಯಾಕ್‌ ಹ್ಯಾಟ್‌ ಸೂಪರ್‌ ಕಾಂಬಿನೇಷನ್‌ ಆಗಿದೆ ಸ್ಕರ್ಟ್‌ ಧರಿಸುವಾಗ ಹಿಲ್ಡ್‌ ಚಪ್ಪಲಿಯೂ ಕೂಡ ಸ್ಟೈಲ್‌ ಲುಕ್‌ ನೀಡಲು ಸಹಕಾರಿಯಾಗಿದೆ. ನೀವು ಫ್ಯಾಷನ್‌ ಶೋನಲ್ಲಿ ಬ್ಯಾಕ್‌ ಕ್ಯಾಪ್‌ ತೊಡುವಂತಿದ್ದರೆ ಡಾರ್ಕ್‌ ಲಿಫ್ಟಿಕ್‌ ಹಾಕಿಕೊಳ್ಳಬೇಕು. ಐಲೈನರ್‌ ದಪ್ಪಗೆ ಹಾಕಿಕೊಳ್ಳುವುದರಿಂದ ಹ್ಯಾಟ್‌ ಮರೆಯಲ್ಲಿ ಕಣ್ಣಿನ ಅಂದವು ಚೆನ್ನಾಗಿಕಾಣಲೂ ಸಾಧ್ಯ.

ಈಗಿನ ಟ್ರೆಂಡ್‌:
ಈಗಿನ ಟ್ರೆಂಡ್‌ನ‌ಲ್ಲಿ ನೆಟೆಡ್‌ ಬ್ಲ್ಯಾಕ್‌ ಹ್ಯಾಟ್‌ ಬಹುತೇಕರಿಗೆ ಫೇವರೆಟ್‌ ಎನ್ನಬಹುದು. ಇದರೊಂದಿಗೆ ಪುಲ್ಲಿಂಗ್‌ ಹ್ಯಾಟ್‌ ಆರಾಮದಾಯಕ ಅನುಭವವನ್ನು ಒದಗಿಸುತ್ತದೆ. ಸಿಂಪಲ್‌ ಬ್ಲ್ಯಾಕ್‌ ಹ್ಯಾಟ್‌ ಗೆ ವೈಟ್‌ ಫ್ಲವರ್‌ ಇದ್ದು ಒಂದೆರಡು ಗರಿ ಅದುಗಿಟ್ಟರೆ ಪಾರ್ಟಿ ನಲ್ಲಿ ಧರಿ ಸುವಾಗ ಸ್ಮಾರ್ಟ್‌ ಲುಕ್‌ನಲ್ಲಿ ನೀವು ಕಂಗೊಳಿಸಬಹುದು. ಡೆನಿಮ್‌ ಬ್ಲ್ಯಾಕ್‌ ಹ್ಯಾಟ್‌ ಶೈನಿ ಲುಕ್‌ ನೊಂದಿಗೆ ಡೆನಿಮ್‌ ಬಟ್ಟೆ ಚರ್ಮದ ಆರೈಕೆಯನ್ನು ಕೂಡ ಮಾಡುತ್ತದೆ. ಫ್ಲ್ಯಾಟ್‌ ಬ್ಲ್ಯಾಕ್‌ ಹ್ಯಾಟ್‌ ಮಾಡರ್ನ್ ಲುಕ್‌ನಲ್ಲಿ ನಳನೆಯರು ಕಂಗೊಳಿಸಲು ನೆರವಾಗಿದ್ದು ಕಾಲೇಜು ಬೆಡಗಿ ಯರ ನೆಚ್ಚಿನ ಹ್ಯಾಟ್‌ ಇದಾಗಿದೆ.

– ರಾಧಿಕಾ, ಕುಂದಾಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ