ಎಪ್ರಿಲ್‌ನಲ್ಲಿ ಬರಲಿದೆ ಬಿಎಸ್‌ 6


Team Udayavani, Feb 28, 2020, 7:20 AM IST

BS-6

ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ.

ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ ಸ್ಟೇಜ್‌ ಎನ್ನಲಾಗುತ್ತದೆ. ಭಾರತದಲ್ಲಿ “ಭಾರತ್‌ ಸ್ಟೇಜ್‌’ ಎಂದು ಪರಿವರ್ತಿಸಿಕೊಳ್ಳಲಾಗಿದೆಯಷ್ಟೇ. 2000ರಲ್ಲಿ ಭಾರತ್‌ ಸ್ಟೇಜ್‌ ಪರಿಕಲ್ಪನೆ ಆರಂಭವಾಯಿತು. ಆರಂಭಿಕ ಹಂತದಲ್ಲಿ ಬಿಎಸ್‌-1 ಜಾರಿಗೆ ತರಲಾ ಯಿತು. ಬಳಿಕ ಬಿಎಸ್‌-2, ಬಿಎಸ್‌3, ಬಿಎಸ್‌-4 ಜಾರಿಗೆ ಬಂದವು. ಈಗ ಬಿಎಸ್‌ -4 ಜಾರಿಯಲ್ಲಿದೆ.

ವಾಹನಗಳು ಉಗುಳುವ ಹೊಗೆಯಲ್ಲಿರುವ ಮಾಲಿನ್ಯ ಕಾರಕಗಳಿಗೆ ಇವುಗಳು
ಕಡಿವಾಣ ಹಾಕುತ್ತವೆ.

ಬಿಎಸ್‌ 4ರಿಂದ ಬಿಎಸ್‌ 6 
ವಾಹನಗಳಿಂದಾಗುವ ವಾಯುಮಾಲಿನ್ಯದ ಪ್ರಮಾಣವನ್ನು ಶೀಘ್ರವಾಗಿ ಇಳಿಕೆ ಮಾಡಬೇಕು ಎಂಬ ಉದ್ದೇಶದಿಂದ ಬಿಎಸ್‌-5 ಜಾರಿಯನ್ನು ಕೈಬಿಟ್ಟು, ನೇರವಾಗಿ ಬಿಎಸ್‌-6ಕ್ಕೆ ಹೋಗಲಾಗಿದೆ. ವಿಶ್ವದ ಬಹುತೇಕ ಕಡೆ ಈಗಾಗಲೇ ಯೂರೋ-6 ಜಾರಿಯಲ್ಲಿದೆ. ಬಿಎಸ್‌ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ ಮತ್ತು ವಾಹನಗಳು ಹೊರಹಾಕುವ ಮಾಲಿನ್ಯಕಾರಕ ಗಳ ಮೇಲೂ ನಿಯಂತ್ರಣ ಹೇರುತ್ತದೆ.

ಬಿಎಸ್‌-4 ವಾಹನಗಳಲ್ಲಿ ಬಿಎಸ್‌-4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ. ಬಿಎಸ್‌-6 ವಾಹನಗಳಲ್ಲಿ ಬಿಎಸ್‌-6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್‌-4 ಪೆಟ್ರೋಲ್‌ ಎಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್‌-6 ಪೆಟ್ರೋಲ್‌
ವಾಹನಗಳ ಬೆಲೆಯಲ್ಲಿ ಹೆಚ್ಚು ಏರಿಕೆಯಾಗುವುದಿಲ್ಲ. ಮಾಲಿನ್ಯಕಾರಕಗಳ ಪ್ರಮಾಣಗಳೂ ಕಡಿಮೆ ಇರುತ್ತವೆೆ.

ಡೀಸೆಲ್‌ ಎಂಜಿನ್‌
ಬಿಎಸ್‌-4 ಮತ್ತು ಬಿಎಸ್‌-6 ಡೀಸೆಲ್‌ ಎಂಜಿನ್‌ಗಳ ಮಧ್ಯೆ ವ್ಯತ್ಯಾಸವಿದೆ. ಡೀಸೆಲ್‌ ಎಂಜಿನ್‌ನ ಎಕ್ಸಾಸ್ಟ್‌ ಸಿಸ್ಟಂನಲ್ಲಿ (ಸೈಲೆನ್ಸರ್‌) ದುಬಾರಿ ಮೌಲ್ಯದ ಡೀಸೆಲ್‌ ಪರ್ಟಿಕ್ಯುಲೇಟ್‌ ಫಿಲ್ಟರ್‌-ಡಿಪಿಎಫ್ ಅನ್ನು ಅಳವಡಿಸಲಾಗುತ್ತದೆ. ಹೀಗಾಗಿ ಬಿಎಸ್‌-6 ಡೀಸೆಲ್‌ ಎಂಜಿನ್‌ ಇರುವ ವಾಹನಗಳ ಬೆಲೆ ಪೆಟ್ರೋಲ್‌ ವಾಹನಕ್ಕೆ ಹೋಲಿಸಿದರೆ ಹೆಚ್ಚಿರಲಿದೆ. ಅದೇ ರೀತಿ ಡೀಸೆಲ್‌ ಎಂಜಿನ್‌ಗಳು ಉಗುಳುವ ಮಾಲಿನ್ಯಕಾರಕ ಕಣಗಳೂ ಭಾರಿ ಪ್ರಮಾಣದಲ್ಲಿ ಕಡಿಮೆಯಾಗಲಿವೆ. ಬಿಎಸ್‌-4 ಡೀಸೆಲ್‌ ಎಂಜಿನ್‌ನಲ್ಲಿ ನೈಟ್ರೊಜನ್‌ ಆಕ್ಸೆ„ಡ್‌ ಪ್ರಮಾಣವು 250 ಮಿ.ಗ್ರಾಂ ಇದ್ದರೆ ಬಿಎಸ್‌-6 ಎಂಜಿನಲ್ಲಿ 80 ಮಿ.ಗ್ರಾಂ ಗೆ ಇಳಿಕೆಯಾಗಲಿದೆ.

ಪೆಟ್ರೋಲ್‌ ಎಂಜಿನ್‌
ಬಿಎಸ್‌-4 ಮಾದರಿ ಪೆಟ್ರೋಲ್‌ ಎಂಜಿನ್‌ಗಳ ಹೊಗೆಯಲ್ಲಿ ಇಂಗಾಲದ ಮೊನೊಕ್ಸೆ„ಡ್‌ 833 ಇದ್ದರೆ ಅದೇ ಬಿಎಸ್‌-6ನಲ್ಲಿ 667 ಇರಲಿದೆ. ಹೈಡ್ರೊಕಾರ್ಬನ್‌ ಪ್ರಮಾಣ 83 ಕಣಗಳಿಂದ 76 ಕಣಗಳಿಗೆ ಇಳಿಕೆಯಾಗಲಿದೆ. ನೈಟ್ರೋಜನ್‌ ಆಕ್ಸೆçಡ್‌ ಪ್ರಮಾಣವೂ ಇಳಿಕೆಯಾಗಲಿದೆ.

ಎಪ್ರಿಲ್‌ 1ರಿಂದ ಬಿಎಸ್‌ 6
ಎಪ್ರಿಲ್‌ 1ರಿಂದ ಬಿಡುಗಡೆಯಾಗುವ ಮತ್ತು ಮಾರಾಟವಾಗುವ ಎಲ್ಲ ವಾಹನಗಳು ಬಿಎಸ್‌-6 ಆಗಿರಲಿವೆ. ಅಲ್ಲದೇ ಈ ಮಾದರಿಯ ವಾಹನಗಳು ಮಾತ್ರ ನೋಂದಣಿಯಾಗುತ್ತವೆ. ಆದರೆ 2020ರ ಮಾರ್ಚ್‌ 31ರ ವರೆಗೆ ನೋಂದಣಿಯಾದ ಯಾವುದೇ ಬಿಎಸ್‌-4 ವಾಹನಗಳನ್ನು ಅವುಗಳ ನೋಂದಣಿ ಅವಧಿ ಮುಗಿಯುವ ವರೆಗೂ ಬಳಸಬಹುದಾಗಿದೆ. ಈಗ ಬಳಕೆಯಲ್ಲಿರುವ ವಾಹನಗಳನ್ನು ಅವುಗಳ ನೋಂದಣಿ ಅವಧಿ ಮುಗಿಯುವವರೆಗೂ ಬಳಸಬಹುದು.

ಬಿಎಸ್‌-6 ಇಂಧನ
ಬಿಎಸ್‌-6 ಇಂಧನದಲ್ಲಿ ಗಂಧಕದ ಪ್ರಮಾಣ ತೀರಾ ಕಡಿಮೆ ಇದೆ. ಬಿಎಸ್‌-4 ವಾಹನಗಳಲ್ಲಿ ಬಿಎಸ್‌-6 ಇಂಧನ ಬಳಸುವುದರಿಂದ ಎಂಜಿನ್‌ಗೆ ಯಾವುದೇ ಹಾನಿಯಾಗುವುದಿಲ್ಲ. ಎಪ್ರಿಲ್‌ 1ಕ್ಕೂ ಮುನ್ನ ದೇಶದ ಬಹುತೇಕ ಕಡೆಗಳಲ್ಲಿ ಬಿಎಸ್‌-6 ಇಂಧನ ಲಭ್ಯವಾಗಲಿದೆ. ಬಿಎಸ್‌-6 ವಾಹನಗಳಲ್ಲಿ ಬಿಎಸ್‌-4 ಇಂಧನ ಬಳಸುವುದರಿಂದ ಎಂಜಿನ್‌ಗೆ ತೊಂದರೆ ಎಂದು ಹೇಳಲಾಗುತ್ತದೆ.

ದುಬಾರಿಯೂ ಹೌದು
ಬಿಎಸ್‌-6 ವಾಹನಗಳು ಖಂಡಿತವಾಗಿಯೂ ಬಿಎಸ್‌-4 ವಾಹನಗಳಿಗಿಂತ ದುಬಾರಿ ಆಗಿರಲಿವೆ. ಪೆಟ್ರೋಲ್‌ ಎಂಜಿನ್‌ ವಾಹನಗಳ ಬೆಲೆ ಅಲ್ಪ ಪ್ರಮಾಣದಲ್ಲಿ ಏರಿಕೆಯಾಗಲಿದೆ. ಡೀಸೆಲ್‌ ವಾಹನಗಳ ಬೆಲೆ ತುಸು ಹೆಚ್ಚು ಏರಿಕೆಯಾಗಲಿದೆ. ಈಗಾಗಲೇ ಕೆಲವು ಕಾರು ತಯಾರಕ ಸಂಸ್ಥೆಗಳು ಸಣ್ಣ ಗಾತ್ರದ ಡೀಸೆಲ್‌ ಕಾರುಗಳ ಉತ್ಪಾದನೆಯನ್ನು ನಿಲ್ಲಿಸಿವೆೆ. ಬಿಎಸ್‌-6 ಟ್ರ್ಯಾಕ್ಟರ್‌ಗಳು, ಜೆಸಿಬಿ, ಬ್ಯಾಕ್‌ ಲೋಡರ್‌, ಹಿಟಾಚಿ ಮೊದಲಾದ ವಾಹನಗಳ ಬೆಲೆಯೂ ಭಾರಿ ಪ್ರಮಾಣದಲ್ಲಿ ಏರಿಕೆಯಾಗಲಿದೆ.

– ಕಾರ್ತಿಕ್‌ ಅಮೈ

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.