ಕಾರಿನ ಟಯರ್‌ ಹೆಚ್ಚಿನ ಕಾಳಜಿ ಅಗತ್ಯ

Team Udayavani, Sep 6, 2019, 5:32 AM IST

ವಾಹನವನ್ನು ಬಳಸುತ್ತಿರುವಿರಾದರೆ, ಅದರ ಟಯರ್‌ ಬಗ್ಗೆಯೂ ಹೆಚ್ಚಿನ ಕಾಳಜಿ ಅಗತ್ಯ. ಟಯರ್‌ ಬಗ್ಗೆ ಕಾಳಜಿ ವಹಿಸದಿದ್ದರೆ, ಪ್ರಯಾಣದಲ್ಲಿ ಟಯರ್‌ ಪಂಕ್ಷರ್‌, ಅಥವಾ ಬಿರುಕು ಬಿಡುವ ಅತಿ ವೇಗದ ಸಂದರ್ಭ ಸ್ಫೋಟದ ಅಪಾಯವೂ ಇದೆ. ಆದ್ದರಿಂದ ಮುಂಜಾಗ್ರತೆಗಳೇನು? ನೋಡೋಣ.

ನಿಯಮಿತವಾಗಿ ಪರಿಶೀಲನೆ
ಕಾರಿನ ಟಯರ್‌ ಬಗ್ಗೆ ನಿಯಮಿತವಾಗಿ ನೀವೇ ಪರಿಶೀಲನೆ ನಡೆಸಿ. ವಾಹನವನ್ನು ತೊಳೆಯುವ ವೇಳೆ ಅಥವಾ ಪ್ರಯಾಣ ಹೊರಡುವ ಮುನ್ನ ನಾಲ್ಕೂ ಟಯರ್‌ಗಳ ಮೇಲೆ ಕಣ್ಣು ಹಾಯಿಸಿ. ಅಪರೂಪಕ್ಕೆ ಕಾರನ್ನು ಬಳಸುವ ಅಭ್ಯಾಸವಿದ್ದರೆ, ಕಾರು ಹೆಚ್ಚಾಗಿ ನಿಂತೇ ಇರುತ್ತದೆ. ನಿಂತೇ ಇರುವ ಸಂದರ್ಭದಲ್ಲಿ ಟಯರ್‌ನ ಗಾಳಿ ಕಡಿಮೆಯಾಗುವುದು ಬೇಗ. ಆದ್ದರಿಂದ ನಾಲ್ಕೂ ಟಯರ್‌ಗಳಲ್ಲಿ ಗಾಳಿ ಸರಿಯಾಗಿದೆಯೇ ಎಂದು ವೀಕ್ಷಿಸಿ.

ಏರ್‌ ಚೆಕಪ್‌
ಯಾವುದೇ ವಾಹನವಾದರೂ ಕನಿಷ್ಠ 15 ದಿನಕ್ಕೊಮ್ಮೆಯಾದರೂ ಗಾಳಿಯನ್ನು ಪರಿಶೀಲಿಸುತ್ತಿರಬೇಕು. ನೈಟ್ರೋಜನ್‌ ಆದರೆ ಸುಮಾರು 25 ದಿನಕ್ಕೊಮ್ಮೆ ಪರಿಶೀಲಿಸುವುದು ಉತ್ತಮ.

ಟ್ರೆಡ್‌
ಟಯರ್‌ನಗಳ ಮಧ್ಯೆ ಗೀರುಗಳಿರುತ್ತವೆ. ಇದಕ್ಕೆ ಟ್ರೆಡ್‌ ಎಂದು ಹೆಸರು. ಈ ಟ್ರೆಡ್‌ಗಳು ಸರಿಯಾಗಿ ಒಂದೇ ಪ್ರಮಾಣದಲ್ಲಿ ಸವೆಯಬೇಕು. ಯಾವುದಾದರೂ ಟ್ರೆಡ್‌ ಹೆಚ್ಚು ಸವೆಯುತ್ತದೆ ಎಂದಾದಲ್ಲಿ ಆ ಭಾಗದಲ್ಲಿ ಸಮಸ್ಯೆಯಿದೆ ಎಂದರ್ಥ. ಬ್ಯಾಲೆನ್ಸಿಂಗ್‌ ಸಮಸ್ಯೆಯಿಂದ ಹೀಗಾಗುವ ಸಾಧ್ಯತೆ ಇದೆ. ಈ ಟ್ರೆಡ್‌ ಪರಿಶೀಲನೆಗೆ ಸುಲಭದ ಉಪಾಯವೆಂದರೆ ಒಂದು ರೂಪಾಯಿ ನಾಣ್ಯ ತೆಗೆದು ಎಲ್ಲ ಟ್ರೆಡ್‌ಗಳಲ್ಲಿ ಇಟ್ಟು ನೋಡಬೇಕು. ಎಲ್ಲವೂ ಒಂದೇ ರೀತಿ ಸವೆದಿದ್ದರೆ ಚಿಂತೆ ಇಲ್ಲ. 2 ಎಂಎಂಗಿಂತ ಹೆಚ್ಚು ಸವೆದಿದ್ದರೆ ಬದಲಿಸಬೇಕಾಗಬಹುದು. ಟಯರ್‌ ಟ್ರೆಡ್‌ ಸಂಪೂರ್ಣ ಸವೆದರೆ ಟಯರ್‌ ಬದಲಾಯಿಸುವುದು ಉತ್ತಮ.

ವೀಲ್ ರೊಟೇಶನ್‌/ ಬ್ಯಾಲೆನ್ಸಿಂಗ್‌/ಅಲೈನ್‌ಮೆಂಟ್
ಕಾರಿನ ಟಯರ್‌ಗಳು ಒಳಮುಖವಾಗಿದ್ದು, ಭಾರ ಬಿದ್ದಂತೆ ರಸ್ತೆಗೆ ಸಮವಾಗಿರ ಬೇಕಾಗುತ್ತದೆ. ಕಾರಿನ ಟಯರ್‌ಗಳು ಸರಿ ಯಾಗಿರುತ್ತವೆೆ ಮತ್ತು ಉತ್ತಮ ಮೈಲೇಜ್‌, ಟಯರ್‌ ಬಾಳಿಕೆ ಬರುತ್ತವೆ. ಇದನ್ನು ಪರಿಶೀಲಿಸಲು ವೀಲ್ ಅಲೈನ್‌ಮೆಂಟ್ ಮಾಡಿಸಬೇಕು. ಪ್ರತಿ 5 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ಅಲೈನ್‌ಮೆಂಟ್ ಅಗತ್ಯ. ಸ್ಟೀರಿಂಗ್‌ ಸೆಟಪ್‌ ಸರಿಮಾಡಬೇಕು. (ಕಾರಿನ ಸ್ಟೀರಿಂಗ್‌ ಯಾವುದಾದರೂ ಒಂದು ಬದಿಗೆ ಎಳೆಯುತ್ತದೆ ಎಂದರೆ ವೀಲ್ ಅಲೈನ್‌ಮೆಂಟ್ ಹೋಗಿದೆ ಎಂದರ್ಥ. ಸಾಮಾನ್ಯವಾಗಿ ಎಡಭಾಗದ ಅಲೈನ್‌ಮೆಂಟ್ ಹೋಗುತ್ತದೆ. ಅಂದರೆ ನೀವು ಸ್ಟೀರಿಂಗ್‌ ಅನ್ನು ತುಸು ಬಲಭಾಗಕ್ಕೆ ಎಳೆಯಬೇಕಾಗುತ್ತದೆ) ಇನ್ನು ಪ್ರತಿ 10 ಸಾವಿರ ಕಿ.ಮೀ.ಗೆ ಒಂದು ಬಾರಿ ವೀಲ್ ರೊಟೇಶನ್‌ ಮಾಡಿಸಬೇಕು.(ಚಿತ್ರದಲ್ಲಿ ನೋಡಿ) ಜತೆಗೆ ಕಾರಿನ ವೀಲ್ ಸರಿಯಾಗಿ ತಿರುಗುತ್ತದೆಯೇ ಎಂದು ಪರಿಶೀಲಿಸಲು ಬ್ಯಾಲೆನ್ಸಿಂಗ್‌ ಪರಿಶೀಲನೆ ನಡೆಸಬೇಕು. ನಿಮ್ಮ ಕಾರು ಪಂಕ್ಚರ್‌ ಆದರೆ, ಅಥವಾ ದೊಡ್ಡ ಹೊಂಡ ಗುಂಡಿಗೆ ಬಿದ್ದ ಸಂದರ್ಭ ಅಲೈನ್‌ಮೆಂಟ್, ಬ್ಯಾಲೆನ್ಸಿಂಗ್‌ ಹೋಗುವ ಸಾಧ್ಯತೆ ಹೆಚ್ಚಿರುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಎಪ್ರಿಲ್‌ 1ರಿಂದ ಭಾರತ್‌ ಸ್ಟೇಜ್‌-6 (ಬಿಎಸ್‌-6) ಜಾರಿಯಾಗಲಿದೆ. ಬಿಎಸ್‌-6 ಎಂಬುದು ಭಾರತ್‌ ಸ್ಟೇಜ್‌ 6 ಎಂಬುದರ ಸಂಕ್ಷಿಪ್ತ ರೂಪ. ಜಾಗತಿಕ ಮಟ್ಟದಲ್ಲಿ ಇದನ್ನು ಯೂರೋ...

  • ಭಾರತೀಯ ಮಾರುಕಟ್ಟೆಯಲ್ಲಿ ಮಾರುತಿ ಸುಜುಕಿ ಅತೀ ದೊಡ್ಡ ಕಾರು ತಯಾರಕ ಸಂಸ್ಥೆಯಾಗಿದೆ. ಇದು ಶೇ. 51ರಷ್ಟು ಮಾರುಕಟ್ಟೆ ಪಾಲನ್ನು ಹೊಂದಿದೆ. ಮಾರುತಿ ಸುಜುಕಿಯಲ್ಲಿ...

  • ಇ ತ್ತೀಚೆಗೆ ನವನವೀನ ಮಾದರಿಯ ಸ್ಮಾರ್ಟ್‌ ಫಿಟೆ°ಸ್‌ ಬ್ಯಾಂಡ್‌ ಹಾಗೂ ಸ್ಮಾರ್ಟ್‌ವಾಚ್‌ಗಳು ಬಿಡುಗಡೆಯಾಗುತ್ತಿವೆ. ಇವುಗಳು ಇಂದು ನಮ್ಮ ಕೆಲಸವನ್ನು ಸುಲಭ ಮಾಡುತ್ತಿವೆ....

  • ಇಂದು ಆಕರ್ಷಕ ಬೈಕ್‌ಗಳು ಹೆಚ್ಚು ಜನ ಮೆಚ್ಚುಗೆ ಪಡೆದುಕೊಳ್ಳುತ್ತಿವೆ. ಇಲ್ಲಿ ರಸ್ತೆಗಿಳಿಯಲು ಸಿದ್ಧವಾಗಿರುವ ಬೈಕ್‌ ಒಂದನ್ನು ಪರಿಚಯಿಸಲಾಗಿದೆ. ಬಜಾಜ್‌...

  • ಮಾರುಕಟ್ಟೆಗೆ ದಿನಕ್ಕೊಂದು ಹೊಸ ಉತ್ಪನ್ನ ಆಗಮನವಾಗುತ್ತಿರುತ್ತದೆ. ಈ ನಿಟ್ಟಿನಲ್ಲಿ ಕಾರು ಉದ್ಯಮದಲ್ಲಿ ಸರಕಾರದ ನಿರ್ದೇಶನದ ಮೇರೆಗೆ ಬಿಎಸ್‌6 ಎಂಜಿನ್‌ ಇರುವ...

ಹೊಸ ಸೇರ್ಪಡೆ