ಕಾರ್ಡ್‌ ಈಸ್‌ ಸೇಫ್! ಸವಲತ್ತುಗಳ ಆನ್‌- ಆಫ್ ಸ್ವಿಚ್‌


Team Udayavani, Feb 3, 2020, 5:23 AM IST

Kirulekhana-4

ಗ್ರಾಹಕರ ಮತ್ತು ಬ್ಯಾಂಕುಗಳ ನಿದ್ರೆ ಕೆಡಿಸುತ್ತಿರುವ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ವಂಚನೆ ತಡೆಯಲು ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ ಒನ್‌ಟೈಮ್‌ ಪಾಸ್ವರ್ಡ್‌ ವ್ಯವಸ್ಥೆಯನ್ನು ಜಾರಿಗೆ ತಂದಿತ್ತು. ಇದೀಗ, ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ ಗಳ ಆಂತರಿಕ (Domestic- ದೇಶದೊಳಗೆ) ಮತ್ತು ಅಂತಾರಾಷ್ಟ್ರೀಯ (International) ವ್ಯವಹಾರಗಳಿಗೆ ಹೊಸ ನೀತಿ ನಿಯಮಾವಳಿಗಳನ್ನು (Guidelines) ಬಿಡುಗಡೆ ಮಾಡಿದೆ.

ಬ್ಯಾಂಕುಗಳು ಗ್ರಾಹಕರಿಗೆ ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ನೀಡಿದಾಗ ಅವುಗಳಲ್ಲಿ ಎಟಿಎಂ, ಪಾಯಿಂಟ್‌ ಆಫ್ ಸೇಲ್ಸ… ಆನ್‌ಲೈನ್‌ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ, ಇಂಟರ್ನೆಟ್‌- ಮೊಬೈಲ್‌, ಸಂಪರ್ಕ ರಹಿತ (Contactless Transaction), ಇ- ಕಾಮರ್ಸ್‌, ಸೌಲಭ್ಯಗಳು ಇರುತ್ತವೆ. ಸಾಮಾನ್ಯವಾಗಿ, ಗ್ರಾಹಕರು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ…ಅನ್ನು ಹೆಚ್ಚು ಬಳಸುತ್ತಾರೆ. ಇಂದಿನ ಯುವಪೀಳಿಗೆ ಮತ್ತು ಸ್ವಲ್ಪ ಟೆಕ್ನಿಕಲ್‌ ತಿಳಿವಳಿಕೆ ಇದ್ದವರು ಉಳಿದ ಸವಲತ್ತುಗಳನ್ನು ಹೆಚ್ಚು ಬಳಕೆ ಮಾಡುತ್ತಾರೆ. ಈ ಕಾರ್ಡ್‌ಗಳನ್ನು ನೀಡುವಾಗ, ಹಣ ಹಿಂಪಡೆಯುವ (ಡ್ರಾ ಮಾಡುವ) ಮತ್ತು ಅವರು ನಡೆಸುವ ವ್ಯವಹಾರದ ಗರಿಷ್ಠ ಮೊತ್ತ ಕೂಡಾ ನಿಗದಿಯಾಗಿರುತ್ತದೆ.

ಈಗಿನ ಹೊಸ ಮಾರ್ಗದರ್ಶಿ ಸೂತ್ರದ ಪ್ರಕಾರ, ಬ್ಯಾಂಕುಗಳು ಕ್ರೆಡಿಟ್‌ ಮತ್ತು ಡೆಬಿಟ್‌ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ… ಮುಂತಾದ ಕೇವಲ ಆಂತರಿಕ (Domestic) ವಹಿವಾಟುಗಳಿಗೆ ಬಳಸುವಂತೆ ಎನೇಬಲ್‌ ಮಾಡಲಾಗುತ್ತದೆ. ಇದು ದೇಶದ ಒಳಗೆ ಮಾತ್ರ ಈಟಞಛಿsಠಿಜಿc ವಹಿವಾಟಿಗಷ್ಟೇ ಸೀಮಿತವಾಗಿರುತ್ತದೆ. ಗ್ರಾಹಕರು ಇದನ್ನು ಅಂತಾರಾಷ್ಟ್ರೀಯ ಮತ್ತು ಸಂಪರ್ಕ ರಹಿತ (Contactless) ಆನ್‌ಲೈನ್‌, ಇಂಟರ್‌ನೆಟ್‌- ಮೊಬೈಲ್‌ ವ್ಯವಹಾರಗಳಿಗೆ ಬಳಸುವುದಿದ್ದರೆ ಪ್ರತ್ಯೇಕವಾಗಿ ಅನುಮತಿ ಪಡೆಯಬೇಕು.

ಆನ್‌ಲೈನ್‌ ಹಣಕಾಸು ವ್ಯವಹಾರ ಮಾಡಿರಲೇಬೇಕು ಗ್ರಾಹಕರು ಅಂತಾರಾಷ್ಟ್ರೀಯ ವ್ಯವಹಾರಗಳಿಗೆ, ಆನ್‌ಲೈನ್‌ ಮತ್ತು ಸಂಪರ್ಕ ರಹಿತ ವ್ಯವಹಾರಗಳಿಗೆ ಈವರೆಗೆ ಬಳಸದಿದ್ದರೆ ಈ ಕಾರ್ಡ್‌ಗಳನ್ನು ಈ ಸೇವೆಗೆ ಡಿಸೇಬಲ್‌ (ಅನರ್ಹ) ಮಾಡಲಾಗುವುದು. ರಿಸರ್ವ್‌ ಬ್ಯಾಂಕ್‌ ಈ ರೀತಿ ಡಿಸೇಬಲ್‌ ಮಾಡುವಂತೆ ಬ್ಯಾಂಕುಗಳಿಗೆ ನಿರ್ದೇಶನ ನೀಡಿದೆ. ಗ್ರಾಹಕರು, ಈ ಹೆಚ್ಚಿನ ಸೌಲಭ್ಯಕ್ಕಾಗಿ ಕೋರಿಕೆ ಸಲ್ಲಿಸಬೇಕಾಗುತ್ತದೆ. ಕಾರ್ಡ್‌ ಹೊಂದಿದವರ ಬಗೆಗೆ ಬ್ಯಾಂಕುಗಳು ತಮ್ಮದೇ ನಿರ್ಧಾರ ತೆಗೆದುಕೊಳ್ಳಬಹುದು. ರಿಸ್ಕಿನ ಆಳವನ್ನು ಪರಿಶೀಲಿಸಿ ಚಾಲ್ತಿಯಲ್ಲಿರುವ ಕಾರ್ಡ್‌ಗಳನ್ನು ಡಿಆ್ಯಕ್ಟಿವೇಟ್‌ ಮಾಡಿ ಪುನಃ ಕಾರ್ಡ್‌ ಇಶ್ಯೂ ಮಾಡುವ ಸಾಧ್ಯತೆಯೂ ಇದೆ.

ಸವಲತ್ತುಗಳ ಸ್ವಿಚ್‌ ಗ್ರಾಹಕರ ಬಳಿ
ಹೊಸ ನಿಯಮಾವಳಿ ಪ್ರಕಾರ, ಗ್ರಾಹಕರು ತಮಗೆ ಬೇಕಾದಾಗ ತಾವೇ ಆರಿಸಿದ ಸವಲತ್ತುಗಳನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಬಹುದು. ಹಾಗೆಯೇ ವ್ಯವಹಾರದ ಗರಿಷ್ಠ ಮಿತಿಯನ್ನು ಬದಲಿಸಿಕೊಳ್ಳಬಹುದು. ಈ ರೀತಿ ತಮ್ಮ ಹಣಕಾಸು ವ್ಯವಹಾರಗಳನ್ನು ನಿಯಂತ್ರಿಸಬಹುದು ಮತ್ತು ಮಾನಿಟರ್‌ ಮಾಡಬಹುದು. ಅಂತಾರಾಷ್ಟ್ರೀಯ ವ್ಯವಹಾರಗಳನ್ನು ವಿದೇಶಕ್ಕೆ ಹೋದಾಗಷ್ಟೇ ಸ್ವಿಚ್‌ ಆನ್‌ ಮಾಡಿಕೊಳ್ಳಬಹುದು. ಇನ್ನುಮುಂದೆ, ಗ್ರಾಹಕರು ವಿದೇಶದಲ್ಲಿ ತಮ್ಮ ಕಾರ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ದೂರುವಂತಿಲ್ಲ.

ಗ್ರಾಹಕರಲ್ಲಿ ಕ್ರೆಡಿಟ್‌ ಕಾರ್ಡ್‌ ಇದ್ದು,ಅವರು ಅದನ್ನು ಅನ್‌ಲೈನ್‌ ಶಾಪಿಂಗ್‌ ಮತ್ತು ಇ- ಕಾಮರ್ಸ್‌ ವೆಬ್‌ಸೈಟ್‌ಗಳಾದ ಅಮೆಜಾನ್‌ ಮತ್ತು ಫ್ಲಿಪ್‌ಕಾರ್ಟ್‌ಗಳಲ್ಲಿ ಬಳಕೆ ಮಾಡುತ್ತಿದ್ದರೆ, ನಿಮ್ಮ ಕಾರ್ಡ್‌ಗಳನ್ನು ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್‌ಗ‌ಳಲ್ಲಿ ಡಿಸೇಬಲ…(ಆಫ್) ಮಾಡಬಹುದು. ಗ್ರಾಹಕರು ಆಯಾ ವ್ಯವಹಾರಕ್ಕೆ ತಕ್ಕಂತೆ ತಮಗೆ ಬೇಕಾದ ಬದಲಾವಣೆಯನ್ನು ಇಂಟರ್‌ನೆಟ್‌ ಬ್ಯಾಂಕಿಂಗ್‌ ಮೂಲಕ ಮಾಡಿಕೊಳ್ಳಬಹುದು. ಈ ಹೊಸ ಮಾರ್ಗದರ್ಶಿಯ ಅನಂತರ ಬಹುತೇಕ ರಿಸ್ಕ್ಗಳು ಗ್ರಾಹಕರಿಗೆ ವರ್ಗಾವಣೆ ಆಗುತ್ತಿವೆ. ಇದು, ಗ್ರಾಹಕರ ಜವಾಬ್ದಾರಿಯನ್ನು ಹೆಚ್ಚಿಸುತ್ತಿದೆ.

ಮುಖ್ಯಾಂಶಗಳು ಏನೇನು?
-ಈ ವ್ಯವಸ್ಥೆ ದೇಶಾದ್ಯಂತ ಮಾರ್ಚ್‌ 16ರಿಂದ ಜಾರಿಗೆ ಬರಲಿದೆ.
-ಚಾಲ್ತಿಯಲ್ಲಿರುವ ಕಾರ್ಡ್‌ಗಳಲ್ಲಿ ಎಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ… ಬಿಟ್ಟು ಉಳಿದೆಲ್ಲ ಸವಲತ್ತುಗಳು ಸ್ಥಗಿತವಾಗುತ್ತವೆ.
-ಈ ಎರಡು ಸವಲತ್ತುಗಳನ್ನು ಬಿಟ್ಟು ಬೇರೆ ಸೌಲಭ್ಯಗಳು ಬೇಕಿದ್ದರೆ, ಬ್ಯಾಂಕಿಗೆ ಕೋರಿಕೆ ಸಲ್ಲಿಸಿ ಪಡೆಯಬೇಕಾಗುತ್ತದೆ.
-ಡ್ರಾ ಮಾಡುವ ಹಣದ ಗರಿಷ್ಠ ಮಿತಿಯನ್ನು ಗ್ರಾಹಕರೇ ಬ್ಯಾಂಕಿನ ಸಹಾಯದಿಂದ ನಿಗದಿಪಡಿಸಿಕೊಳ್ಳಬೇಕು.
-ಗ್ರಾಹಕರೇ ತಮ್ಮ ಕಾರ್ಡನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಿಕೊಳ್ಳಬಹುದು. ಬಳಕೆ ಮಾಡುವ ಸಮಯದಲ್ಲಿ ಮಾತ್ರ ಸ್ವಿಚ್‌ ಆನ್‌ ಮಾಡಿಕೊಳ್ಳಬಹುದು.
-ಇನ್ನು ಮೇಲೆ ಹೊಸ ಕಾಡ್ಗìಳಲ್ಲಿ ಆಂತರಿಕ ವ್ಯವಹಾರ (Domestic) ಕೇವಲ ಏಟಿಎಂ ಮತ್ತು ಪಾಯಿಂಟ್‌ ಆಫ್ ಸೇಲ್ಸ… ಸೌಲಭ್ಯಗಳು ಮಾತ್ರ ಇರುತ್ತವೆ. ಉಳಿದ ಸೌಲಭ್ಯಗಳು ಬೇಕಿದ್ದರೆ ಕೇಳಿ ಪಡೆಯಬೇಕು.
-ಅಂತಾರಾಷ್ಟ್ರೀಯ ವ್ಯವಹಾರದ ಸೌಲಭ್ಯ ಬೇಕಿದ್ದರೆ, ವಿಶೇಷವಾಗಿ ಕೇಳಿ ಪಡೆಯಬೇಕು.
-ಯಾರಾದರೂ ಗ್ರಾಹಕರು ಈ ಮೊದಲು ಆನ್‌ಲೈನ್‌ ವ್ಯವಹಾರ, ಅಂತಾರಾಷ್ಟ್ರೀಯ ವ್ಯವಹಾರ ಮತ್ತು ಸಂಪರ್ಕ ರಹಿತ ವಹಿವಾಟುಗಳಿಗೆ ಬಳಸದಿದ್ದರೆ ಅಂಥವರ ಕಾರ್ಡ್‌ಗಳನ್ನು ಬ್ಯಾಂಕುಗಳು ಡಿಸೇಬಲ್‌ ಮಾಡಬಹುದು.
-ಗ್ರಾಹಕರು ಕಾರ್ಡ್‌ನಲ್ಲಿನ ಯಾವುದೇ ಸೌಲಭ್ಯವನ್ನು ಸ್ವಿಚ್‌ ಆನ್‌ ಮತ್ತು ಸ್ವಿಚ್‌ ಆಫ್ ಮಾಡಿಕೊಳ್ಳಬಹುದು.
-ಬ್ಯಾಂಕುಗಳು ಯಾವುದೇ ಕಾರ್ಡ್‌ನ್ನು ಸ್ಥಗಿತಗೊಳಿಸಿ ಹೊಸ ಕಾರ್ಡನ್ನು ನೀಡಬಹುದು.

-ರಮಾನಂದ ಶರ್ಮಾ

ಟಾಪ್ ನ್ಯೂಸ್

ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

M.P Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

3-hosapete

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Govt-b

KSRTC Bus: ಬಾಗಿಲಿದ್ದರೂ ಮುಚ್ಚುವವರಿಲ್ಲ! ಪ್ರಾಣಕ್ಕೆ ಎರವಾಗುತ್ತಿದೆ ಅಜಾಗರೂಕತೆ

Mullugudde ಕೊರಗಜ್ಜ ಪಾವಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾಥ೯ನೆ

Mullugudde ಕೊರಗಜ್ಜನ ಪವಾಡ; ನಾಪತ್ತೆ ಯುವಕ ಅಜ್ಜನ ಸನ್ನಿಧಾನದಲ್ಲಿ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಕಾಪುವಿಗೆ ಬಂದವರು ಈ ಹೋಟೆಲ್ ಗೊಮ್ಮೆ ಮಿಸ್ ಮಾಡದೆ ಭೇಟಿ ನೀಡಿ

udayavani youtube

Asian Games: ಸೀರೆ,ಕುರ್ತಾದಲ್ಲಿ ಮಿಂಚಿದ ಭಾರತದ ಕ್ರೀಡಾಳುಗಳು

udayavani youtube

ಮೈಸೂರಿನ ಕೃಷ್ಣಧಾಮಕ್ಕೆ ವಿಧಾನಸಭೆ ಸ್ಪೀಕರ್ ಯು ಟಿ ಖಾದರ್ ಭೇಟಿ

udayavani youtube

ಓಡಿಸ್ಸಾದ ಮರಳಿನಲ್ಲಿ ಅರಳಿದ ಸ್ಟೀಲ್ ಗಣಪ

udayavani youtube

ಯಾಕಾಗಿ ಗಣೇಶ ಹಲವು ಕೈಗಳನ್ನು ಹೊಂದಿದ್ದಾನೆ ?

ಹೊಸ ಸೇರ್ಪಡೆ

ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ

Protest: ಕಾವೇರಿ ಕಿಚ್ಚು… ರಾಮನಗರದಲ್ಲಿ ತಮಿಳುನಾಡು ಸರ್ಕಾರದ ವಿರುದ್ಧ ಆಕ್ರೋಶ

M.P Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

MP Election: ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ… ಮೂವರು ಕೆಂದ್ರ ಸಚಿವರು ಕಣಕ್ಕೆ

3-hosapete

Hosapete: ಬಸ್ ಪಲ್ಟಿ; 10ಕ್ಕೂ ಹೆಚ್ಚು ಜನರಿಗೆ ಗಾಯ, ಚಾಲಕನ ಸ್ಥಿತಿ ಗಂಭೀರ

2-fusion-dog

UV Fusion: ನಂಬಿಕೆಗಿಂತ ದೊಡ್ಡದು ಬೇರೇನಿಲ್ಲ

1-Tuesday

Daily Horoscope: ಸಜ್ಜನರ ಸೋಗುಹಾಕಿದ ವಂಚಕರ ಬಗ್ಗೆ ಎಚ್ಚರ, ಉದ್ಯೋಗಸ್ಥರಿಗೆ ಕೈತುಂಬಾ ಕೆಲಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.