ನಗದು ವರ್ಗಾವಣೆ; ಎಚ್ಚರಿಕೆ ವಹಿಸಿ

ಆನ್‌ಲೈನ್‌ ಪೇಮೆಂಟ್‌ ನಿರ್ಲಕ್ಷ್ಯಸಲ್ಲದು

Team Udayavani, Jan 13, 2020, 5:39 AM IST

2019ರಲ್ಲಿ ದೇಶದಲ್ಲಿ ಇಂಟರ್‌ನೆಟ್‌ ಬಳಕೆದಾರರ ಸಂಖ್ಯೆ 566 ಮಿಲಿಯನ್‌ನಿಂದ 627 ಮಿಲಿಯನ್‌ಗೆ ಏರಿಕೆ ಕಂಡಿದೆ. ಇದು ಆನ್‌ಲೈನ್‌ ಪೇಮೆಂಟ್‌ ಅನ್ನು ಪ್ರೋತ್ಸಾಹಿಸಿದೆ. ಇಂದು ಅತೀ ಹೆಚ್ಚು ಜನ ಆನ್‌ಲೈನ್‌ ವ್ಯವಹಾರದ ಮೊರೆ ಹೋಗುತ್ತಿದ್ದು, ಜಾಗರೂಗತೆಯಿಂದ ಹೆಜ್ಜೆ ಇಡಬೇಕಾಗಿದೆ.

ಆನ್‌ಲೈನ್‌ ಮೂಲಕ ಹಣ ಪಾವತಿ ಮಾಡುವವರು ಯಾವುದೇ ರೀತಿಯ ಸೈಬರ್‌ ಸುರ‌ಕ್ಷತೆಯ ಬಗ್ಗೆ ಜಾಗೃತವಾದಂತಿಲ್ಲ. ಯಾವುದೇ ತಿಳಿವಳಿಕೆ ಇಲ್ಲದೇ ಗುಪ್ತ ಮಾಹಿತಿಯನ್ನು ಹಂಚಿಕೊಳ್ಳುವಿಕೆ ಈ ವರ್ಗದಲ್ಲಿ ಹೆಚ್ಚು ಕಂಡುಬರುತ್ತಿದೆ. ಆನ್‌ಲೈನ್‌ ವ್ಯವಹಾರಗಳಿಂದ ಸೈಬರ್‌ ವಂಚಕರಿಗೆ ಸುಲಭವಾಗುವ ಸಾಧ್ಯತೆಯೇ ಹೆಚ್ಚು. ಇದನ್ನು ತಪ್ಪಿಸಿಕೊಳ್ಳಲು ನಾವು ಬಳಕೆದಾರರು ಎಚ್ಚರಿಕೆ ವಹಿಸಬೇಕಾಗಿದೆ.

ಮೊಬೈಲ್‌ ವ್ಯಾಲೆಟ್‌ ಮತ್ತು ಯುಪಿಐ ಮೂಲಕ ಸುಲಭವಾಗಿ ಹಣಕಾಸು ವ್ಯವಹಾರ ನಡೆಸಲಾಗುತ್ತಿದೆ. ಪರಿಣಾಮವಾಗಿ ಬಳಕೆದಾರರ ಸಂಖ್ಯೆ ಗಣನೀಯವಾಗಿ ಏರಿಕೆಯಾಗುತ್ತಿದೆ. ಜತೆಗೆ ಡೆಬಿಟ್‌ ಕಾರ್ಡ್‌ ಬಳಕೆದಾರರ ಸಂಖ್ಯೆಯನ್ನು ಹಿಂದಿಕ್ಕಿದೆ.

2019ರ ಡಿಸೆಂಬರ್‌ ತಿಂಗಳೊಂದರಲ್ಲೆ 1.31 ಬಿಲಿಯನ್‌ ವಹಿವಾಟುಗಳು ದಾಖಲಾಗಿವೆ. ಇದು ಪರೋಕ್ಷವಾಗಿ ಸೈಬರ್‌ ಅಪರಾಧಗಳು ಹೆಚ್ಚಲು ಕಾರಣವಾಗಿದೆ. ಈ ಕಾಮರ್ಸ್‌ ಆನ್‌ಲೈನ್‌ ಜಾಹೀರಾತುಗಳು, ಮೊಬೈಲ್‌ ವಾಲೆಟ್‌ ಮತ್ತು ಪ್ಯಾಕಿಂಗ್‌ ಸೇವೆಗಳ ವ್ಯವಸ್ಥೆಯನ್ನು ಸೈಬರ್‌ ವಂಚಕರಿದ ಸುರಕ್ಷಿತವಾಗಿ ಬಳಕೆ ಮಾಡಬಹುದಾದ ಕೆಲವು ಪ್ರಮುಖ ಮಾರ್ಗಗಳು ಇಲ್ಲಿವೆ.

ಕ್ಯುಆರ್‌ಕೋಡ್‌ ಮತ್ತು ಯುಪಿಐ
ಆನ್‌ಲೈನ್‌ ಪಾವತಿಯಲ್ಲಿ ಕ್ಷಿಪ್ರಗತಿಯ ಏರಿಕೆ ಕಾಣುವಲ್ಲಿ ಯುಪಿಐ ನ ಪಾತ್ರ ಮಹತ್ತರವಾದದ್ದು. ಇದು ಅತ್ಯಂತ ಸುಲಭವಾಧ ಮಾರ್ಗವಾಗಿರುವುದರಿಂದ ಜನರು ಬೇಗನೆ ಹೊಂದಿಕೊಳ್ಳುತ್ತಾರೆ. ಇಲ್ಲಿ ನಗದನ್ನು ವರ್ಗಾಯಿಸುವಾಗ ಪಿನ್‌ ನಂಬರ್‌ಗಳನ್ನು ಬೇರೆಯವರಿಗೆ ಕಾಣದಂತೆ ನಮೂದಿಸಬೇಕಾಗಿದೆ. ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡುವ ಮೊದಲು ಸರಿಯಾಗಿದೆಯೆ ಎಂದು ಪರಿಶೀಲಿಸುವುದು ಅಗತ್ಯ. ಸಾರ್ವಜನಿಕ ಸ್ಥಳಗಳಲ್ಲಿ, ಹೊಟೇಲ್‌ ಮುಂತಾದ ಕಡೆಗಳಲ್ಲಿ ಕ್ಯೂಆರ್‌ಕೋಡ್‌ ಸ್ಕ್ಯಾನ್‌ ಮಾಡುವಾಗ ಸ್ವೀಕರಿಸುವವರ ಯುಪಿಐ ಪಿನ್‌ ಸರಿಯಾಗಿದೆಯೇ ಎಂದು ಅವರಿಂದ ಖಚಿತ ಪಡಿಸಿಕೊಳ್ಳುವುದು ಒಳ್ಳೆಯ ನಡೆ.

ಸೈಬರ್‌ ಸುರಕ್ಷತೆಗಾಗಿ ತಂತ್ರಜ್ಞಾನ
ಇಂದು ಬರುತ್ತಿರುವ ಅನೇಕ ಪಾವತಿ ಮತ್ತು ಶಾಪಿಂಗ್‌ ಆ್ಯಪ್‌ಗ್ಳು ಸೈಬರ್‌ ವಂಚನೆಯನ್ನು ತಡೆಗಟ್ಟಲು ಕೆಲವು ಸುರಕ್ಷತಾ ವೈಶಿಷ್ಟéಗಳನ್ನು ಅಳವಡಿಸಿಕೊಳ್ಳುತ್ತಿವೆ. ಕೃತಕ ಬುದ್ಧಿಮತ್ತೆಯಿಂದ ಸೈಬರ್‌ ವಂಚನೆಯನ್ನು ತಡೆಯಲು ಪ್ರಯತ್ನಿಸುತ್ತಿದೆ. ಉದಾಹರಣೆಗಾಗಿ ನಿಮ್ಮ ಬ್ಯಾಂಕಿನ ಸಿಂಬಂದಿ ಎಂದು ಹೇಳಿ ನಿಮ್ಮ ಆಧಾರ್‌-ಪಾನ್‌ ನಂಬರ್‌ ಸಹಿತ ಬ್ಯಾಂಕಿನ ಕಾರ್ಡ್‌ಗಳ ನಂಬರ್‌ ಅನ್ನು ಪಡೆಯಲಾಗುತ್ತದೆ. ಇಂತಹ ಸ್ಪಾಮ್‌ ಕರೆಗಳು ಬಂದಾಗ ನಿಮ್ಮ ಮೊಬೈಲ್‌ ಸ್ಕ್ರೀನ್‌ ಮೇಲೆ “ಸ್ಪಾಮ್‌ ಕಾಲ್‌’ ಎಂದು ತೋರಿಸುತ್ತದೆ. ಇಂತಹ ಸಂದರ್ಭ ನೀವು ಯಾವುದೇ ಮಾಹಿತಿಯನ್ನು ನೀಡಬೇಡಿ. ನಮಗೆ ಕ್ರೆಡಿಟ್‌ ಕಾರ್ಡ್‌ ಕೊಡುವ ನೆಪದಲ್ಲಿ ಬರುವ ಕರೆಗಳಿಗೆ ಸ್ಪಂದಿಸಬೇಡಿ. ನೇರವಾಗಿ ಬ್ಯಾಂಕ್‌ಗೆ ಹೋಗಿ ವಿಚಾರಿಸಿ ಕಾರ್ಡ್‌ಗಳನ್ನು ಪಡೆಯಿರಿ. ಇಲ್ಲಿ ನಿಮ್ಮ ಡೆಬಿಟ್‌ ಅಥವಾ ಕ್ರೆಡಿಟ್‌ ಕಾರ್ಡ್‌ಗಳು ದುರ್ಬಳಕೆಯಾಗುವುದನ್ನು ತಪ್ಪಿಸಬಹುದು.

ಕಾನುನು ಮತ್ತು ಕಾರ್ಯವಿಧಾನ
ಆನ್‌ಲೈನ್‌ ಪಾವತಿ ಮಾಡುವಾಗ ಬಳಕೆದಾರರ ಮುಜಾಗ್ರತೆಯ ಕೊರತೆಯಿಂದ ಆಗುವಂತಹ ಅನಾಹುತಗಳಿಗೆ ಬಳಕೆದಾರರೇ ಕಾರಣರಾಗಿರುತ್ತಾರೆ. ಈ ಕುರಿತಂತೆ ಬ್ಯಾಂಕಿಂಗ್‌ಗೆ ದೂರು ನೀಡಿ ಸಂಸ್ಥೆಯ ಸಹಾಯ ಪಡೆಯಬಹುದು. ಇಂತಹ ವಂಚನೆ ನಡೆದ ಕೂಡಲೇ ಬ್ಯಾಂಕಿಗೆ ಮಾಹಿತಿ ನೀಡುವುದು ಅಗತ್ಯ. ಯಾವುದೇ ರೀತಿಯ ಸೈಬರ್‌ ವಂಚನೆಗಳು ನಡೆದಾಗ ಅಪರಾಧ ಪ್ರಕ್ರಿಯೆ ಸಂಹಿತೆ 1973ರ ಕಾಯಿದೆ 156 (3)ರ ಅಡಿಯಲ್ಲಿ ನ್ಯಾಯ ಪಡೆಯಬಹುದಾಗಿದೆ.

ಬ್ಯಾಂಕ್‌ ಖಾತೆಯ
ವಂಚನೆ;ಜಾಗೃತಿ ಅಗತ್ಯ
ಬಳಕೆದಾರರು ಸಾಮಾನ್ಯವಾಗಿ ಬ್ಯಾಂಕ್‌ ಖಾತೆಗಳನ್ನು ತೆರೆದು ಅದರಲ್ಲಿರುವ ಅಪ್ಲಿಕೇಶನ್‌ಗಳ ಪಾಲನೆ ಮಾಡದೇ ಇರುವುದರಿಂದ ತಮ್ಮ ಖಾತೆಗಳ ವಂಚನೆ ಆಗುತ್ತದೆ. ಈ ದಿನಗಳಲ್ಲಿ ಬ್ಯಾಂಕುಗಳು ನೆಟ್‌ ಬ್ಯಾಂಕಿಂಗ್‌ ಹಾಗೂ ಇತರ ವಿಧಾನಗಳ ಮೂಲಕ ಉತ್ತಮ ಸೇವೆಯನ್ನು ನೀಡುತ್ತವೆ. ಆದರೂ ಬಳಕೆದಾರರು ತಮ್ಮ ಖಾತೆಯನ್ನು ಸುರಕ್ಷಿತವಾಗಿರಿಸಲು ಅನುಮಾನಾಸ್ಪದ ಲಾಗಿನ್‌ಗಳನ್ನು ತಪ್ಪಿಸಲಾಗಿದೆಯೇ ಪರೀಕ್ಷಿಸಿಕೊಳ್ಳಬೇಕು. ಒಂದು ವೇಳೆ ನಿಮ್ಮ ಖಾತೆಯ ವಂಚನೆ ನಡೆದಿದ್ದಲ್ಲಿ ಅದನ್ನು ಸ್ಕ್ರೀನ್‌ಶಾಟ್‌ ತೆಗೆದು ಮತ್ತು ಕರೆಯ ಪ್ರತಿಗಳನ್ನು ಸಂಬಂಧಪಟ್ಟ ಹಣಕಾಸು ಸಂಸ್ಥೆಗಳಿಗೆ ನೀಡಬೇಕು. ಇದರಿಂದ ಮುಂದಾಗುವ ಅನಾಹುತವನ್ನು ತಪ್ಪಿಸಬಹುದಾಗಿದೆ.

– ವಿಜಿತಾ ಅಮೀನ್‌, ಬಂಟ್ವಾಳ

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

  • ಇತ್ತೀಚಿನ ಹವಮಾನ ತೀರಾ ವಿಚಿತ್ರವೆನ್ನಬಹುದು. ಚಳಿಗಾಲವಾಗಿದ್ದರೂ ಸುಡುಬಿಸಿಲು ನೆತ್ತಿಯ ಮೇಲೆ ಮಂಜು ಹನಿಯುವ ಬದಲು ಬೆವರಲ್ಲಿಯೇ ಸ್ನಾನ ಮಾಡಿಸುವಂತಿರುತ್ತದೆ....

  • ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಕೈಯಲ್ಲೊಂದು ಸ್ಮಾರ್ಟ್‌ಫೋನ್‌, ಮಡಿಲಲ್ಲೊಂದು ಲ್ಯಾಪ್‌ಟಾಪ್‌ ಇರಲೇಬೇಕು. ಈಗಿನ ಕೆಲಸ ಕಾರ್ಯಗಳೆಲ್ಲವೂ ಈ ಎರಡರಲ್ಲೇ ನಿಭಾಯಿಸಲ್ಪಡುವುದರಿಂದ...

  • ಕಾರು ನಿಲ್ಲಿಸಿ ಕೆಲವು ದಿನ ಆಯ್ತು. ಆದ್ರೆ ಈಗ ಸ್ಟಾರ್ಟ್‌ ಮಾಡಲು ನೋಡ್ತಿದ್ರೆ ಜಪ್ಪಯ್ಯ ಅಂದ್ರೂ ಸ್ಟಾರ್ಟ್‌ ಆಗ್ತಿಲ್ಲ ಎನ್ನುವ ಸಮಸ್ಯೆಯನ್ನು ನೀವು ಎದುರಿಸಿರಬಹುದು....

  • ನಂಬಿಗಸ್ತ ಆಟಗಾರ ಎಂದು ಕಣ್ಮುಚ್ಚಿಕೊಂಡು ಹೇಳಬಹುದಾಗಿದ್ದ ಕ್ರಿಕೆಟಿಗರ ಪೈಕಿ ಹರ್ಭಜನ್‌ ಸಿಂಗ್‌ ಕೂಡ ಒಬ್ಬರು. ಅಪಾರ ಪ್ರತಿಭಾವಂತರು ಎಂಬುದು ಪ್ಲಸ್‌ ಪಾಯಿಂಟ್‌....

  • ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ...

ಹೊಸ ಸೇರ್ಪಡೆ