ಸೋಲು, ಗೆಲುವಿನಲ್ಲಿದೆ ನಾಳೆಯ… ಭರವಸೆ

Team Udayavani, Jun 24, 2019, 5:39 AM IST

ಮನುಷ್ಯನ ಉಗಮವಾದಾಗಿನಿಂದಲೂ ಆತ ಪ್ರತಿ ಹಂತದಲ್ಲೂ ಸೋಲು- ಗೆಲುವೆಂಬ ಎರಡು ಮುಖಗಳ ಮಧ್ಯೆ ಜೀವಿಸುತ್ತಾನೆ. ಈ ಎರಡು ಪದಗಳು ಯುಗಾಂತರಗಳಿಂದ ಬಂದಿವೆ. ತ್ರೇತಾಯುಗದಲ್ಲಿ ರಾಮರಾವಣರ ನಡುವೆ, ದ್ವಾಪರ ಯುಗದಲ್ಲಿ ಪಾಂಡವ- ಕೌರವರ ನಡುವೆ, ಕಲಿಯುಗದಲ್ಲಿ ಸಾವಿರಾರು ಮಂದಿಯ ಈ ಆಟ- ಪರಿಪಾಟ ನಡೆದಿದೆ, ನಡೆಯುತ್ತಿದೆ.

ಹಾಗಾದರೆ ಗೆದ್ದವರ ಪ್ರಾಣ ಉಳಿಯಿತೇ, ಸೋತವರ ಪ್ರಾಣ ಚಿಗುರಿತೇ ಎಂಬ ಪ್ರಶ್ನೆ ನಮ್ಮಲ್ಲಿ ಮೂಡುತ್ತದೆ. ಶ್ರೀರಾಮನು ತನ್ನ ಪತ್ನಿ ಸೀತಾಮಾತೆಯ ಮೇಲೆ ಅನುಮಾನಪಟ್ಟು ಅವರನ್ನು ಅಗ್ನಿಗೆ ಆಹುತಿಯಾಗುವಂತೆ ಮಾಡಿದನು. ಆ ಸೀತಾಮಾತೆಗಾಗಿಯೇ ರಾಮಾಯಣ ನಡೆಯಿತು ಎಂಬುದು ನಮಗೆ ಗೊತ್ತಿರುವ ಸಂಗತಿ.

ಹಾಗೆಯೇ ಮಹಾಭಾರತದಲ್ಲಿ ಮೂರನೇ ವ್ಯಕ್ತಿಯ ಮಾತಿಗೆ ತಲೆಬಾಗಿ ತನ್ನ ಅಣ್ಣ ತಮ್ಮಂದಿರಿಂದಲೇ ಪ್ರಾಣ ಕಳೆದುಕೊಂಡ ಕೌರವರು ಗಳಿಸಿದ್ದು ಸಾವೆಂಬ ಸೋಲು. ಆದರೆ ಪಾಂಡವರಿಗೆ ತಮ್ಮ ಸಹೋದರರನ್ನು ಸಾಯಿಸಿದ ಸಂಕಟವು ಅವರನ್ನು ಕಾಡತೊಡಗುತ್ತದೆ.

ಇನ್ನು ಕಲಿಯುಗದಲ್ಲಿ ವಿಶ್ವವನ್ನೇ ತನ್ನದಾಗಿಸಿಕೊಂಡ ಅಲೆಗಾÕಂಡರ್‌ ಎಲ್ಲವನ್ನು ಗೆದ್ದ ಅನಂತರ ಅವನಿಗೆ ಗೆಲ್ಲಲು ಉಳಿದದ್ದು ಸಾವು ಒಂದೇ. ಅದು ಮಾತ್ರ ಅವನಿಂದ ಆಗಲಿಲ್ಲ. ಇದನ್ನು ಜಗತ್ತಿಗೆ ತಿಳಿಸಲು ತಾನು ಸಾಯುವ ಮುನ್ನ ತನ್ನ ಕೈಯನ್ನು ಮಣ್ಣಿನಿಂದ ಮುಚ್ಚದೆ ಹೊರಗೆ ಉಳಿಸಲು ಹೇಳುತ್ತಾನೆ. ಅದಕ್ಕೆ ಮನುಷ್ಯ ತಾನೆಷ್ಟು ಎತ್ತರಕ್ಕೆ ಬೆಳೆದರೂ ತನ್ನವರಿಗಾಗಿ ಸೋಲಲೇಬೇಕು. ಗಂಡಸು ತಾನೆಷ್ಟು ಎತ್ತರಕ್ಕೆ ಬೆಳೆದರೂ ಹೆಂಡತಿ ಮತ್ತು ಮಕ್ಕಳಿಗೆ ತಲೆಬಾಗಿಸಲೇಬೇಕು. ತಾನೆಷ್ಟು ಆರ್ಥಿಕವಾಗಿ ಬೆಳೆದರೂ ತನ್ನ ಮಗುವಿನ ಮುಂದೆ ಮಗುವಾಗಲೇಬೇಕು.

ಸೋಲು ಮುಂದಿನ ಗೆಲುವಿಗೆ ದಾರಿ
ಯಾವುದೇ ಸ್ಪರ್ಧೆಯಲ್ಲಿ ಸೋತಾಗ ನಾವು ಜಿಗುಪ್ಸೆ ಹೊಂದುತ್ತೇವೆ. ಮಾನಸಿಕವಾಗಿ ಕೊರಗುತ್ತೇವೆ. ಸೋಲು ಎಂಬುದು ಸಾಮರ್ಥ್ಯಗಳ ಕೊರತೆ. ಆ ಸಾಮರ್ಥ್ಯ ಗಳಿಸಿದಾಗ ನಾವೂ ಗೆಲ್ಲಬಹುದು. ಸೋಲನ್ನು ಬೇರೆಯದೇ ರೀತಿಯಲ್ಲಿ ಅಥೈ ìಸಿಕೊಳ್ಳಬಾರದು. ಆ ಸ್ಪರ್ಧೆಯಲ್ಲಿನ ಸಾಮರ್ಥ್ಯಗಳು ನನಗೆ ಇನ್ನೂ ಕರಗತವಾಗಬೇಕಿದೆ ಎಂದು ತಿಳಿದರಾಯಿತು. ಆಗ ನಮಗೆ ಸೋಲು ಎಂಬ ಭಾವನೆ ಬರುವುದಿಲ್ಲ. ಸೋಲು ಅನುಭವಿಸಿದಷ್ಟು ನಾವು ಮಾಡಿಕೊಳ್ಳಬೇಕಾದ ಸಾಮರ್ಥ್ಯಗಳ ಅರಿವಾಗುತ್ತದೆ. ಆಗ ನಮಗರಿವಿಲ್ಲದ ಹಾಗೆ ನಾವು ಗೆಲ್ಲುತ್ತಾ ಹೋಗುತ್ತೇವೆ. ಸೋಲನ್ನು ಕೊನೆ ಎಂದು ಪರಿಗಣಿಸದೆ ಕಲಿಕೆಯ ಮೆಟ್ಟಿಲು ಎಂದು ಪರಿಗಣಿಸಬೇಕು. ಆಗ ಸೋಲನ್ನು ಮೆಟ್ಟಿ ನಿಲ್ಲಲು ಸಾಧ್ಯ.

ಕಲ್ಪನೆ ಮತ್ತು ವಾಸ್ತವ
ಒಂದೊಂದು ವಯಸ್ಸಿನಲ್ಲಿ ನಮ್ಮ ಕಲ್ಪನೆಗಳು ಬೇರೆಯದೇ ರೀತಿಯಾಗಿರುತ್ತದೆ. ಅದು ಸಮಯಕ್ಕೆ ತಕ್ಕಂತೆ ತನ್ನತನ ಬದಲಾಯಿಸಿರುತ್ತದೆ. ಮೂರ್‍ನಾಲ್ಕು ವರ್ಷದ ಮಗುವಿಗೆ ತನ್ನದೇ ಆದ ಹೊಸ ಕಲ್ಪನೆಗಳಿರುತ್ತವೆ. ಪಕ್ಕದ ಮನೆಯ ಮಗು ಓಡಿಸುವ ಸೈಕಲ್‌ ತನ್ನದೆಂಬಂತೆ ತಾನು ಅದರ ಮೇಲೆ ಸವಾರಿ ಮಾಡುವಂತೆ ಕನಸು ಕಟ್ಟುತ್ತದೆ. ಅದಕ್ಕೆ ಅಮ್ಮನೊಂದಿಗೆ ಸೈಕಲನ್ನು ತನಗೂ ಕೊಡಿಸುವಂತೆ ಹಠ ಹಿಡಿಯುತ್ತದೆ.

ಹಲವರು ಈಗಾಗಲೇ ಮಗುಚಿಬಿದ್ದಿರುವ ತಮ್ಮ ಯಶಸ್ಸಿನ ಕಟ್ಟಡದ ಬಗ್ಗೆ ಕನಸು ಕಾಣುತ್ತಾರೆ. ಅದು ಈಗಾಗಲೇ ಮಗುಚಿಬಿದ್ದಾಗಿದೆ ಎಂಬ ಕಟು ವಾಸ್ತವ ಅವರಿಗಿರುವುದಿಲ್ಲ. ನಮಗೆ ಕೆಲವೊಂದು ಸೋಲನ್ನೂ ಅಷ್ಟು ಸುಲಭವಾಗಿ ಅರಗಿಸಿಕೊಳ್ಳಲು ಸಾಧ್ಯವಾಗುವುದೇ ಇಲ್ಲ. ಹಾಗಾಗಿ ಅದೇ ವಿಷಯದ ಸುತ್ತಲೇ ನಮ್ಮ ಕಲ್ಪನೆಯ ಹುತ್ತ ಬೆಳೆಯತೊಡಗುತ್ತದೆ.

– ಜಯಾನಂದ ಅಮೀನ್‌ ಬನ್ನಂಜೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ನಿಮ್ಮ ಮನೆಯನ್ನು ಆಕರ್ಷಕವಾಗಿಸಲು ಒಳಾಂಗಣದ ಜತೆಗೆ ಅಂಗಳದ ಕಡೆಗೂ ಗಮನ ಹರಿಸಬೇಕು. ಮನೆ ಸುತ್ತ ಖಾಲಿ ಜಾಗ ಇದ್ದರೆ ನಿಮ್ಮ ಅಭಿರುಚಿಗೆ ತಕ್ಕಂತೆ ಸುಂದರ ರೂಪ ಕೊಡಬಹುದು....

  • ಮನೆಯನ್ನು ಕಟ್ಟುವಾಗ ಪ್ರತಿ ಭಾಗವನ್ನು ಕಟ್ಟುವಾಗ ಇಂಚಿಚು ಗಮನಹರಿಸಬೇಕಾಗುತ್ತದೆ. ಬಾತ್‌ರೂಂ ನಿರ್ಮಿಸುವಾಗ ಕೆಲವು ಮುನ್ನೆಚ್ಚರಿಕೆ ವಹಿಸಬೇಕಾಗುತ್ತದೆ....

  • ಮನೆ ಸುಂದರವಾಗಿದ್ದರಷ್ಟೆ ಸಾಲದು. ಮನೆಯೊಳಗಿರುವ ವಸ್ತುಗಳನ್ನು ಅಷ್ಟೇ ಸುಂದರವಾಗಿರುವಂತೆ ನೋಡಿಕೊಳ್ಳವುದು ಅಗತ್ಯ. ಪ್ರತಿಯೊಂದು ವಸ್ತುಗಳ ನಿರ್ವಹಣೆಯತ್ತಲೂ...

  • ಪ್ರತಿಯೊಬ್ಬರಲ್ಲಿಯೂ ಸ್ವಂತ ಮನೆ ನಿರ್ಮಾಣದ ಕನಸುಗಳಿರುವುದು ಸಹಜವೇ. ನಾವು ನಿರ್ಮಿಸುವ ಮನೆಯ ಕೋಣೆ,ಬೆಡ್‌ ರೂಂ, ಕಿಚನ್‌ ಸಹಿತ ಹಾಲ್ ಈ ರೀತಿಯಲ್ಲಿ ಸಿಂಗರಿಸಬೇಕು...

  • ಮಾರುಕಟ್ಟೆಯಲ್ಲಿ ಈಗಾಗಲೇ ಪ್ರಾಬಲ್ಯ ಸಾಧಿಸಿರುವ ರೆಡ್‌ಮಿ ಮೊಬೈಲ್‌ ತನ್ನ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸಿದೆ. ರೆಡ್‌ಮಿ ಕೆ 20 ಮತ್ತು ರೆಡ್‌ಮಿ ಕೆ 20...

ಹೊಸ ಸೇರ್ಪಡೆ