ಧೀಶಕ್ತಿ ಯಕ್ಷ ವನಿತೆಯರ ವಾಕ್ಚಾತುರ್ಯ 


Team Udayavani, Sep 27, 2019, 5:00 AM IST

k-11

ಮುಂಬಯಿಯ ಕಲಾ ಪ್ರಕಾಶ ಪ್ರತಿಷ್ಠಾನ ಏರ್ಪಡಿಸಿದ ಐದು ದಿನಗಳ ಸರಣಿ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪದ್ಮಾ ಕೆ. ಆರ್‌. ಆಚಾರ್ಯ ಸಾರಥ್ಯದ ಪುತ್ತೂರಿನ ಧೀಶಕ್ತಿ ಮಹಿಳಾ ಯಕ್ಷಬಳಗದ ಕಲಾವಿದೆಯರು ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿರ್ವಹಿಸಿ ವಾಕ್ಚಾತುರ್ಯದ ಮೂಲಕ ಮುಂಬಯಿ ಪ್ರೇಕ್ಷಕರ ಮನಸೂರೆಗೊಂಡಿದ್ದಾರೆ.

ಭಾಗವತರಾಗಿ ಕು| ಅಮೃತಾ ಅಡಿಗ, ಚೆಂಡೆಯಲ್ಲಿ ಕು| ಅಪೂರ್ವಾ ಸುರತ್ಕಲ್, ಮದ್ದಳೆಯಲ್ಲಿ, ಕೌಶಿಕ್‌ ರಾವ್‌ ಪುತ್ತಿಗೆ, ಸತ್ಯನಾರಾಯಣ ಅಡಿಗ ಹಿಮ್ಮೇಳಕ್ಕೆ ಧ್ವನಿಯಾದರು. ಪ್ರತಿದಿನವೂ ಕಿಕ್ಕಿರಿದ ಪ್ರೇಕ್ಷಕರಿಂದ ತುಂಬಿದ ಸಭಾಗೃಹ ಕಲಾವಿದೆಯರಿಗೆ ಸ್ಫೂರ್ತಿದಾಯಕವಾಗಿತ್ತು.

ಮೊದಲನೆಯ ದಿನ ಘಾಟ್ಕೊಪರ್‌ನಲ್ಲಿ ಕೃಷ್ಣ ಸಂಧಾನ ತಾಳಮದ್ದಳೆಯನ್ನು ನಡೆಸಿಕೊಟ್ಟರು. ಶ್ರೀಕೃಷ್ಣನಾಗಿ, ಪದ್ಮಾ ಆಚಾರ್ಯ, ಧರ್ಮರಾಯನಾಗಿ ಜಯಲಕ್ಷ್ಮೀ ವಿ. ಭಟ್‌, ವಿದುರನಾಗಿ ಅಶ್ವಿ‌ನಿ ನಿಡ್ವಣ್ಣಾಯ, ಕೌರವನಾಗಿ ಸುಮಂಗಲಾ ರತ್ನಾಕರ್‌, ದ್ರೌಪದಿಯಾಗಿ ಆಶಾಲತಾ ಕಲ್ಲೂರಾಯ ವಾದ- ಪ್ರತಿವಾದ, ವಿಷಯಗಳ ಮಂಡನೆಯೊಂದಿಗೆ ಮಿಂಚಿದರು.

ಎರಡನೆಯ ದಿನ ಮೀರಾರೋಡಿನಲ್ಲಿ ವೀರಮಣಿ ಕಾಳಗ ನಡೆಯಿತು. ಹನುಮನಾಗಿ ಪದ್ಮಾ ಆಚಾರ್ಯ, ವೀರಮಣಿಯಾಗಿ ಸುಮಂಗಲಾ ರತ್ನಾಕರ್‌, ಶತ್ರುಘ್ನನಾಗಿ ಜಯಲಕ್ಷ್ಮೀ ಭಟ್‌, ಈಶ್ವರನಾಗಿ ಆಶಾಲತಾ ಕಲ್ಲೂರಾಯ , ಶ್ರೀರಾಮನಾಗಿ ಅಶ್ವಿ‌ನಿ ನಿಡ್ವಣ್ಣಾಯ ಸಮರ್ಥವಾದ ವಾಗ್ವೆ„ಕರಿಯೊಂದಿಗೆ ಮೆಚ್ಚುಗೆ ಪಡೆದರು.

ಮೂರನೇ ದಿನ ಡೊಂಬಿವಿಲಿಯಲ್ಲಿ ಶ್ರೀಕೃಷ್ಣ ರಾಯಭಾರ ನಡೆಯಿತು. ನಾಲ್ಕನೆಯ ದಿನ ಘನ್ಸೋಲಿಯ ಮೂಕಾಂಬಿಕಾ ದೇವರ ಸನ್ನಿಧಿಯಲ್ಲಿ ಸುಧನ್ವ ಮೋಕ್ಷ ನಡೆಯಿತು. ಸುಧನ್ವನಾಗಿ ಪದ್ಮಾ ಆಚಾರ್ಯ, ಅರ್ಜುನನಾಗಿ ಸುಮಂಗಲಾ ರತ್ನಾಕರ್‌, ಕೃಷ್ಣನಾಗಿ ಜಯಲಕ್ಷ್ಮೀ ಭಟ್‌ , ಪ್ರಭಾವತಿಯಾಗಿ ಆಶಾಲತಾ ಕಲ್ಲೂರಾಯ, ಹಂಸಧ್ವಜನಾಗಿ ಅಶ್ವಿ‌ನಿ ನಿಡ್ವಣ್ಣಾಯ ಉತ್ಕೃಷ್ಟ ಮಾತುಗಾರಿಕೆ ಮೂಲಕ ಮನಗೆದ್ದರು.

ಕೊನೆಯ ದಿನ ಮಾಟುಂಗಾದಲಿ ಭೀಷ್ಮ ವಿಜಯ ತಾಳಮದ್ದಳೆ ನಡೆಯಿತು. ಭೀಷ್ಮನಾಗಿ, ಪದ್ಮಾ ಕೆ. ಆರ್‌. ಆಚಾರ್ಯ, ಅಂಬೆಯಾಗಿ ಸುಮಂಗಲಾ ರತ್ನಾಕರ್‌, ಪರಶುರಾಮನಾಗಿ ಅಶ್ವಿ‌ನಿ ನಿಡ್ವಣ್ಣಾಯ, ಸಾಲ್ವನಾಗಿ ಜಯಲಕ್ಷ್ಮೀ ವಿ. ಭಟ್‌, ಬ್ರಾಹ್ಮಣನಾಗಿ ಆಶಾಲತಾ ಕಲ್ಲೂರಾಯ ಮನೋಜ್ಞವಾದ ಮಾತುಕತೆಯೊಂದಿಗೆ ಗಮನಸೆಳೆದರು.

 ಕಲಾಪ್ರೇಮಿ 

ಟಾಪ್ ನ್ಯೂಸ್

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

1-weewqewqe

LS Election; ದಿಂಗಾಲೇಶ್ವರ ಶ್ರೀ ಕೋಟ್ಯಧಿಪತಿ: 3 ಅಪರಾಧ ಪ್ರಕರಣಗಳು ಇವೆ

crime (2)

Bengaluru: ಪಾರ್ಕ್ ನಲ್ಲಿ ಹಾಡಹಗಲೇ ಜೋಡಿಯ ಬರ್ಬರ ಹತ್ಯೆ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Hubli; ಕಾಲೇಜಿನಲ್ಲಿ ಕಾರ್ಪೊರೇಟರ್ ಪುತ್ರಿಯನ್ನು ಇರಿದು ಕೊಲೆ; ಯುವಕನ ಬಂಧನ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Bidar; ನಾಮಪತ್ರ ಸಲ್ಲಿಸಲು ಓಡೋಡಿ ಬಂದ ಖೂಬಾ

Billionaire Priyanka; Here is the property details of Satish Jarakiholi’s daughter

Belagavi; ಕೋಟ್ಯಾಧೀಶೆ ಪ್ರಿಯಾಂಕಾ; ಸತೀಶ್ ಜಾರಕಿಹೊಳಿ ಮಗಳ ಆಸ್ತಿ ವಿವರ ಇಲ್ಲಿದೆ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ

Dharwad; ದಿಂಗಾಲೇಶ್ವರ ಸ್ವಾಮೀಜಿ ನಾಮಪತ್ರ ಸಲ್ಲಿಕೆ: ಸಚಿವ ಜೋಶಿ ವಿರುದ್ದ ಗಂಭೀರ ಆರೋಪ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

Tiger

Ponnampet; ಹುಲಿ ದಾಳಿಗೆ ಅಸ್ಸಾಂ ಮೂಲದ ಕಾರ್ಮಿಕ ಬಲಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

Ajekaru: ಹೆರ್ಮುಂಡೆ; ಚಿಂಕರಮಲೆ ಅರಣ್ಯದಲ್ಲಿ ಕಾಳ್ಗಿಚ್ಚು; ಹಾನಿ

8

Malpe Beach: ಈಜಲು ಹೋದ ಮೂವರು ಸಮುದ್ರಪಾಲು; ಓರ್ವನ ಸಾವು, ಇಬ್ಬರ ರಕ್ಷಣೆ

1-wewqewqe

Koratagere; ಗೃಹ ಸಚಿವ ಪರಮೇಶ್ವರ್ ಮತಬೇಟೆ: 40 ಗ್ರಾಮದಲ್ಲಿ ಮಿಂಚಿನ ಸಂಚಾರ

1-aaa-1

Rain; ರಾಜ್ಯದ ವಿವಿಧೆಡೆ ಸಿಡಿಲಬ್ಬರದ ಮಳೆ; ಕುಷ್ಟಗಿಯಲ್ಲಿ ರೈತ ಬಲಿ, ಅಪಾರ ನಷ್ಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.