ಡಿಜಿಟಲ್‌ ವ್ಯವಹಾರ ಎಚ್ಚರ ಅಗತ್ಯ

Team Udayavani, Nov 4, 2019, 5:30 AM IST

ಇಂದು ಹಣಕಾಸು ವ್ಯವಹಾರವೂ ಬೆರಳು ತುದಿಯಲ್ಲೇ ನಡೆಯುತ್ತಿರುವುದು ಗಮನಾರ್ಹವಾದ ಸಂಗತಿ. ಡಿಜಿಟಲ್‌ ಮಾಧ್ಯಮಗಳ ಮೂಲಕ ಹಣಕಾಸು ವ್ಯವಹಾರವನ್ನು ಅತ್ಯಂತ ಕಡಿಮೆ ಅವಧಿಯಲ್ಲಿ ಮಾಡುತ್ತಿರುವುದನ್ನು ನಾವು ಗಮನಿಸಬಹುದು. ಆದರೆ ಇದರಿಂದ ಹಲವು ರೀತಿಯಲ್ಲಿ ಉಪಯೋಗವಾಗಿದೆ. ಆದರೆ ಅಷ್ಟೇ ಪ್ರಮಾಣದ ಎಚ್ಚರಿಕೆಯನ್ನು ನಾವು ವಹಿಸಬೇಕಾಗುತ್ತದೆ. ಈ ಇಂಟರ್‌ನೆಟ್‌ ಯುಗದಲ್ಲಿ, ಸುರಕ್ಷತೆಯ ಬಗ್ಗೆ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ನಾವು ಎಲ್ಲೆಲ್ಲ ಎಚ್ಚರಿಕೆ ವಹಿಸಬೇಕು ಗೊತ್ತಾ? ಈ ಬಗ್ಗೆ ಕೆಲವೊಂದು ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿ ನೀಡಲಾಗಿದೆ.

ವಿಳಾಸ ನೋಡಿ
ಹಣಕಾಸು ವ್ಯವಹಾರ ನಡೆಸುವ ಸಂದರ್ಭದಲ್ಲಿ ಆನ್‌ಲೈನ್‌ ತಾಣ ಅಥವಾ ಬ್ಯಾಂಕ್‌ ವೆಬ್‌ಸೈಟ್‌ ತೆರೆಯುವಾಗ ಅದರ ವಿಳಾಸವನ್ನು (ಯು.ಆರ್‌.ಎಲ್‌) ಪರೀಕ್ಷಿಸಿ. ಮೋಸಗಾರರು ಬ್ಯಾಂಕ್‌ ವೆಬ್‌ಸೈಟ್‌ನೆ°à ಹೋಲುವ ನಕಲಿ ಜಾಲತಾಣಗಳನ್ನು ಸೃಷ್ಟಿಸಿಕೊಂಡಿರುತ್ತಾರೆ. ಅದರಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ನೀಡಿದರೆ ಅದನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಾರೆ. ವಿಳಾಸ ನೋಡಿದರೆ ಅಸಲೀಯತ್ತು ಗೊತ್ತಾಗುತ್ತದೆ.

ಸಾರ್ವಜನಿಕ ವೈಫೈ ಬಳಕೆ ಬಗ್ಗೆ ಗಮನವಿರಲಿ
ವೈಯಕ್ತಿಕ ವ್ಯವಹಾರ ನಡೆಸಲು ಸುರಕ್ಷಿತ ಸ್ವಂತ ನೆಟ್‌ವರ್ಕ್‌ ಬರುವವರೆಗೆ ಕಾಯುವುದು ಉತ್ತಮ. ಸಾರ್ವಜನಿಕ ವೈಫೈಗಳಲ್ಲಿ ಹಣಕಾಸು ವ್ಯವಹಾರಗಳನ್ನು ಮಾಡದಿರುವುದು ಹೆಚ್ಚು ಸೂಕ್ತ.

ನಿಬಂಧನೆಗಳನ್ನು ತಿಳಿದುಕೊಳ್ಳಿ
ಶಾಪಿಂಗ್‌ ಮಾಡುವಾಗ, ಗ್ರಾಹಕರು ಪಾಲಿಸಬೇಕಿರುವ ನಿಬಂಧನೆಗಳ ಪಟ್ಟಿಯನ್ನು ಸಾಮಾನ್ಯವಾಗಿ ಯಾರೂ ಓದುವುದಿಲ್ಲ. ಆದರೆ ಅದನ್ನು ಓದುವುದರಿಂದ ತಿಳಿವಳಿಕೆ ಮತ್ತು ಜಾಗೃತಿ ಹೆಚ್ಚುತ್ತದೆ. ಆಯಾ ಉತ್ಪನ್ನದ ಕುರಿತಂತೆ ಬಳಕೆದಾರರ ರಿವ್ಯೂಗಳನ್ನು ಓದಿ.

ಬೇಕಾಬಿಟ್ಟಿ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ
ವಿಶೇಷ ಡೀಲ್‌ಗ‌ಳು, ದರ ಕಡಿತ ಮಾರಾಟ ಅಥವಾ ಇನ್ನಾವುದೋ ಆಕರ್ಷಕ ಜಾಹೀರಾತಿಗೆ ಮರುಳಾಗಿ ಬ್ರೌಸರ್‌ ಬದಿಯಲ್ಲಿ ಕಾಣುವ ಲಿಂಕ್‌ಗಳನ್ನು ಕ್ಲಿಕ್‌ ಮಾಡಬೇಡಿ. ಅದರಿಂದ ಕಂಪ್ಯೂಟರ್‌ ಮತ್ತು ಸ್ಮಾರ್ಟ್‌ಫೋನ್‌ಗಳಿಗೆ ಮಾಲ್‌ ವೇರ್‌ಗಳು, ವೈರಸ್‌ಗಳು ದಾಳಿ ನಡೆಸಬಹುದು. ಅವು ಸ್ಮಾರ್ಟ್‌ಫೋನಿನಲ್ಲಿನ ಸೂಕ್ಷ್ಮ ಮಾಹಿತಿಯನ್ನು ಕದ್ದು ಮೂರನೆಯವರಿಗೆ ಕೊಡಬಹುದು. ಇದರಿಂದ ಎಚ್ಚರಿಕೆ ವಹಿಸಬೇಕಾಗುತ್ತದೆ.

ಇ-ಮೇಲ್‌ ಗಾಳ
“ನಿಮಗೆ ಒಂದು ಕೋಟಿ ರೂ. ಲಾಟರಿ ಹೊಡೆದಿದೆ. ಬಹುಮಾನದ ಮೊತ್ತ ನಿಮಗೆ ತಲುಪಲು ನಿರ್ದಿಷ್ಟ ಮೊತ್ತವನ್ನು ಡೆಪಾಸಿಟ್‌ ಆಗಿ ಕೊಡಬೇಕು. ನಂತರ ಅದನ್ನು ಮರಳಿಸಲಾಗುವುದು ಈ ರೀತಿಯ ಇಮೇಲ್‌ ಕಳಿಸಿ ಮೋಸ ಮಾಡುವ ದೊಡ್ಡ ಜಾಲವೇ ಇದೆ. ಇಂಥ ಇ-ಮೇಲ್‌ಗ‌ಳಿಗೆ ಪ್ರತಿಕ್ರಿಯಿಸಲು ಹೋಗಬಾರದು. ಬದಲಿಗೆ ಸ್ಪಾಮ್‌ ಪಟ್ಟಿಗೆ ಸೇರಿಸಿ ಅನಂತರ ಡಿಲೀಟ್‌ ಮಾಡಿಬಿಡಬೇಕು.

 - ವಿಜಯಕುಮಾರ್‌ ಎಸ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ವಿವಿಧ ರೀತಿಯ ಜೈವಿಕ ಗೊಬ್ಬರಗಳು ಸೂಕ್ಷ್ಮಜೀವಿಗಳಿಂದ ತಯಾರು ಮಾಡಿದ ಗೊಬ್ಬರಗಳಿಗೆ ಜೈವಿಕ ಗೊಬ್ಬರವೆನ್ನುತ್ತಾರೆ. ಇದರಲ್ಲಿ ಅನೇಕ ವಿಧಗಳಿವೆ. ಸಾರಜನಕ...

  • ಭಾರತದ ಗೋಪರಂಪರೆಯಲ್ಲೂ ಹೈನುಗಾರಿಕೆ ತಳಿಗಳಲ್ಲಿ ಗೀರ್‌ ವಿಶಿಷ್ಟ ಸ್ಥಾನ. ಭಾರತೀಯ ಪರಂಪರೆಯಲ್ಲಿ ಹೆಚ್ಚು ಹಾಲು ಕೊಡುವ ತಳಿಗಳಲ್ಲಿ ಇದು ಎರಡನೆಯದು. ಗುಜರಾತಿನ...

  • ಬೆಳೆಗಾರರು ಅಡಿಕೆ ಮತ್ತು ತೆಂಗು ಬೆಳೆಗಳ ಮಧ್ಯೆ ಕೊಕ್ಕೋ ಬೆಳೆದು ಯಶಸ್ವಿಯಾಗಿದ್ದರು. ಆದರೆ ಕೊಕ್ಕೋ ಬೆಳೆಯುವ ಪ್ರಮಾಣವನ್ನು ಹೆಚ್ಚಿಸಿ ಅಂತಾರಾಷ್ಟೀಯ ಮಾರುಕಟ್ಟೆಯಲ್ಲಿ...

  • ಶೀತವಲಯದ ಪ್ರದೇಶಗಳಲ್ಲಿ ಪ್ರಮುಖವಾಗಿ ಬೆಳೆಯುವ ಹೂಕೋಸು ಮತ್ತು ಕ್ಯಾಬೇಜ್‌ ಬೆಳೆಯನ್ನು ಬಾಳಿಲದ ಮನೆ ಅಂಗಳದಲ್ಲಿ ಬೆಳೆಯುವ ಪ್ರಯೋಗದಲ್ಲಿ ಗೃಹಿಣಿಯೊಬ್ಬರು...

  • ಕಾಂಪೋಸ್ಟ್‌ ಗೊಬ್ಬರವನ್ನು ಹರಡುವ ಯಂತ್ರಚಾಲಿತ ಉಪಕರಣ ಇದು. ಇದರ ಹೆಸರು "ಕಾಂಪೋಸ್ಟ್‌ ಸ್ಪ್ರೆಡ್ಡರ್‌'. ದೊಡ್ಡ ಪ್ರಮಾಣದಲ್ಲಿ ಕಾಂಪೋಸ್ಟ್‌ ಗೊಬ್ಬರವನ್ನು...

ಹೊಸ ಸೇರ್ಪಡೆ