ಹೀಗೆ ನಡೆಸಿ ಹಿಂದಿ ಪರೀಕ್ಷೆಗಾಗಿ ತಯಾರಿ

Team Udayavani, Feb 26, 2020, 6:36 AM IST

ಪ್ರಿಯ ವಿದ್ಯಾರ್ಥಿಗಳೇ,
ಪರೀಕ್ಷೆಯನ್ನು ಉತ್ಸವದಂತೆ ಕಾಣಿ. ಆತ್ಮವಿಶ್ವಾಸದಿಂದ ಏನನ್ನೂ ಸಾಧಿಸಬಹುದು. ಪರಿವರ್ತನಶೀಲವಾದುದು ಈ ಜಗತ್ತು. ಅದಕ್ಕೆ ಪರೀಕ್ಷೆಯೂ ಹೊರತಲ್ಲ. ಅದರಂತೆ ಬರುವ ಎಸೆಸೆಲ್ಸಿ ಪರೀಕ್ಷೆಯಲ್ಲಿ ಆಗಲಿರುವುದು ಕೆಲವು ಅಂಕಗಳ ಪ್ರಶ್ನೆಯ ಸ್ವರೂಪ ಬದಲಾವಣೆಯೇ ವಿನಾ ಸಂಪೂರ್ಣ ವಿಷಯವಲ್ಲ ಎಂಬುದನ್ನು ಮನದಟ್ಟು ಮಾಡಿಕೊಳ್ಳಿ. ಚಿಂತೆ ಸರ್ವನಾಶ ಮಾಡಿದರೆ, ಚಿಂತನೆ ಹೊಸತನವನ್ನು ಸೃಷ್ಟಿಸುತ್ತದೆ. ಹೊಸ ಚಿಂತನೆಯೊಂದಿಗೆ ತೃತೀಯ ಭಾಷಾ ಹಿಂದಿಗೆ ಒಂದಿಷ್ಟು ಪೂರಕ ಮಾಹಿತಿ ಇಲ್ಲಿದೆ.

– ಈ ವರ್ಷ 5 ಅಂಕ, 4 ಅಂಕ, 3 ಅಂಕ, 2 ಅಂಕಗಳ ಪ್ರಶ್ನೆಗಳು ಮುಖ್ಯವೆನಿಸುತ್ತವೆ.
– 5 ಅಂಕಗಳ ಪ್ರಶ್ನೆ ಪತ್ರಲೇಖನಕ್ಕೆ ಮೀಸಲು. ಹಾಗಾಗಿ ಅಂಕ ಗಳಿಸಲು ಸುಲಭ ಎಂಬ ಅಂಶ ಮರೆಯದಿರಿ. ಇಲ್ಲಿ ಆಯ್ಕೆಗೆ ಅವಕಾಶವಿದೆ. ರಜಾ ಅರ್ಜಿ (ಚುಟ್ಟಿà ಪತ್ರ), ಪಾರಿವಾರಕ ಪತ್ರ ಚೆನ್ನಾಗಿ ಅಭ್ಯಾಸ ಮಾಡುವುದರಿಂದ ಅಂಕ ಗಳಿಸಲು ಸಾಧ್ಯ.
– 4 ಅಂಕದ ಪ್ರಶ್ನೆಗಳು ಒಟ್ಟು 4, ಅಂದರೆ 16 ಅಂಕಗಳದ್ದಾಗಿರುತ್ತವೆ. ಇದರಲ್ಲಿ ಒಂದು ಕಂಠಪಾಠ ಪದ್ಯ. “ಕೋಶಿಶ್‌ ಕರೆವಾಲೊಂ ಕೊ…’ ಎಂಬ ಪದ್ಯ ಭಾಗದ “ಅಸಫ‌ಲತಾ ಏಕ್‌ ಚುನೋತಿ’- ಈ ಆರು ಸಾಲನ್ನು ಚೆನ್ನಾಗಿ ಅಭ್ಯಾಸ ಮಾಡಿದರೆ ನಾಲ್ಕು ಅಂಕ ಗಳಿಸಬಹುದು.
– ಒಂದು ಗದ್ಯಭಾಗವನ್ನು ಕೊಟ್ಟು, ಅದಕ್ಕೆ ಸಂಬಂಧಿಸಿದ ಪ್ರಶ್ನೆಗಳನ್ನು
ಕೇಳುತ್ತಾರೆ. ಸುಲಭದಲ್ಲಿರುವ ಆ ಗದ್ಯಭಾಗವನ್ನು ಅರ್ಥೈಸಿಕೊಂಡು ಉತ್ತರಿಸಬೇಕು.
– ಗದ್ಯ ಪಾಠಗಳಿಗೆ ಸಂಬಂಧಿಸಿದಂತೆ 4 ಅಂಕಗಳ ಪ್ರಶ್ನೆ ಇರುತ್ತದೆ. ಇಲ್ಲಿಯೂ ಆಯ್ಕೆಗೆ ಅವಕಾಶವಿದೆ. ಸಾಮಾನ್ಯವಾಗಿ “ಕರ್ನಾಟಕ ಸಂಪದ’, “ಗಿಲ್ಲು’, “ಇಂಟರ್‌ನೆಟ್‌ ಕ್ರಾಂತಿ’ ಈ ಮೊದಲಾದ ಪಾಠಗಳಲ್ಲಿ ಪಾಠದ ಪ್ರಮುಖ ಸಾರವನ್ನೊಳಗೊಂಡ ಪ್ರಶ್ನೆಗಳನ್ನು ಕೇಳಲಾಗುತ್ತದೆ.
– ಪ್ರಬಂಧ ರಚನೆಗೆ 4 ಅಂಕ. ಕೊಟ್ಟ ವಿಷಯಕ್ಕೆ 4 ಅಂಶಗಳನ್ನು ಇರಿಸಿರುವುದರಿಂದ, ಆ ಅಂಶಗಳನ್ನು ವಿಸ್ತರಿಸಿ 4 ಪ್ಯಾರಾಗಳಲ್ಲಿ ಉತ್ತರಿಸಬೇಕು. ಹೀಗೆ ಮಾಡಿದರೆ ಸುಲಭವಾಗಿ 4 ಅಂಕಗಳನ್ನು ಗಳಿಸಬಹುದು.
-ಮೂರು ಅಂಕದ ಪ್ರಶ್ನೆಗಳು ಒಟ್ಟು 9 ಇದ್ದು, ಒಟ್ಟು 27 ಅಂಕಗಳಿರುತ್ತವೆ. ಇದರಲ್ಲಿ ಒಂದು ಪ್ರಶ್ನೆ ಪಠ್ಯಪುಸ್ತಕದ ಸುಲಭ ಪಾಠದಿಂದ ಆಯ್ಕೆ ಮಾಡಿದ ಗದ್ಯಾಂಶವನ್ನು ಅನುವಾದ ಮಾಡುವುದು ಆಗಿರುತ್ತದೆ. ಹಾಗಾಗಿ ಆ ಸುಲಭ ಪಾಠಗಳನ್ನು ಅರ್ಥೈಸಿ ಓದಿಕೊಳ್ಳಿ .
– “ತುಲಸಿ ದೋಹೆ’ ಎಂಬ ಪದ್ಯ ಭಾಗದಿಂದ ಒಂದು ಭಾವಾರ್ಥ ಕೇಳಲಾಗುತ್ತದೆ. ಬಹಳ ಸರಳವಾದ ಪದ್ಯಭಾಗ ಇದಾದ್ದರಿಂದ ಇದನ್ನು ಕೂಡ ಸರಳ ವಾಕ್ಯಗಳಲ್ಲಿ ಬರೆದು ಅಭ್ಯಾಸ ಮಾಡಿಕೊಳ್ಳಿ. ಇನ್ನು ಉಳಿದ 7 ಪ್ರಶ್ನೆಗಳಲ್ಲಿ 5 ಪ್ರಶ್ನೆಗಳು ಗದ್ಯ ಭಾಗಕ್ಕೆ ಮೀಸಲಾದರೆ, 2 ಪ್ರಶ್ನೆಗಳನ್ನು ಪದ್ಯಭಾಗದಲ್ಲಿ ಕೇಳಲಾಗುತ್ತದೆ.
– “ಮಾತೃಭೂಮಿ’, “ಅಭಿನವ್‌ ಮನುಷ್‌’, “ಸಮಯ ಕಾ ಸದುಪಯೋಗ್‌’ ಈ ಪದ್ಯಭಾಗಗಳಿಂದ ಪ್ರಮುಖ ಸಾರವನ್ನೊಳಗೊಂಡ ಪ್ರಮುಖ ಒಂದೆರಡು ಪ್ರಶ್ನೆಗಳನ್ನು ಅಭ್ಯಾಸ ಮಾಡಬೇಕು. ಏಕೆಂದರೆ 2/3 ಅಂಕದಲ್ಲಾಗಲೀ ಖಂಡಿತ ಬರುತ್ತದೆ.
– ಹಾಗೆಯೇ ಪದ್ಯಭಾಗದಲ್ಲಿ “ಗಿಲ್ಲು’, “ಇಂಟರ್‌ನೆಟ್‌ ಕ್ರಾಂತಿ’, “ಕರ್ನಾಟಕ ಸಂಪದ’, “ಇಮಾನಾªರೊಂಕೇ ಸಮ್ಮೇಲನ್‌ ಮೇ’, “ಬಸಂತ್‌ ಕೀ ಸಚ್ಚಾಯಿ’- ಈ ಪಾಠಗಳಲ್ಲಿ ಮುಖ್ಯ ಆಶಯಗಳನ್ನು ಒಳಗೊಂಡ ಪ್ರಶ್ನೆಗಳನ್ನೇ 3/4 ಅಂಕದ ಪ್ರಶ್ನೆಗಳನ್ನಾಗಿ ಕೇಳುತ್ತಾರೆ.
– ಇನ್ನು ಕೆಲವು ಪದ್ಯ ಪಾಠಗಳನ್ನು 2/3 ಅಂಕದ ಪ್ರಶ್ನೆಗಳನ್ನಾಗಿ ಕೇಳುತ್ತಾರೆ. ಅದು ಆಯಾ ಪಾಠದ ತಿರುಳನ್ನೇ ವಿಸ್ತರಿಸುವ ಪ್ರಶ್ನೆಯಾಗಿರುತ್ತದೆ. ಉದಾ: “ಕಾಶ್ಮೀರ್‌ ಸೇಬ್‌’, “ಮೇರಾ ಬಚ್‌ಪನ್‌ ದುನಿಯಾ ಕಾ ಪೆಹಲಾ ಮಕಾನ್‌’, “ಬಾಲಶಕ್ತಿ’, “ಮಹಿಳಾ ಸಾಹಸಗಾಥ್‌’, “ರೊಬರ್ಟ್‌’. ಹಾಗಾಗಿ ಇಂತಹ ಪಾಠಗಳ ಸಾರಾಂಶವನ್ನು ಚೆನ್ನಾಗಿ ಅಭ್ಯಾಸ ಮಾಡಬೇಕು.
– 2 ಅಂಕದ ಪ್ರಶ್ನೆಗಳು ಒಟ್ಟು 8 ಇರುತ್ತವೆ. ಅಂದರೆ ಒಟ್ಟು 16 ಅಂಕ. ಇದರಲ್ಲಿ 3 ಪೂರಕ ಪಾಠವಿದ್ದು, 2 ಪ್ರಶ್ನೆಗಳಂತೆ 4 ಅಂಕಗಳಿರುತ್ತವೆ. ಅದರಲ್ಲಿಯೂ “ಶನಿ’ ಪಾಠಕ್ಕೆ 2 ಅಂಕವಿದೆ. ಉಳಿದ 2 ಪಾಠಗಳಿಂದ ಆಯ್ಕೆಗೆ ಅವಕಾಶವಿರುತ್ತದೆ. ಸರಳವಾದ ಪಾಠಗಳಾದ್ದರಿಂದ ಸುಲಭವಾಗಿ ಅರ್ಥೈಸಿಕೊಂಡು ಓದಿದಲ್ಲಿ 4 ಅಂಕ ಗಳಿಸಬಹುದು. ಉಳಿದಂತೆ 6 ಪ್ರಶ್ನೆಗಳು ಗದ್ಯ, ಪದ್ಯಗಳಿಗೆ ಮೀಸಲಾಗಿದ್ದು, ಪದ್ಯ ಭಾಗದ “ಸೂರ್‌ಶಾ’ದಲ್ಲಿ ಒಂದು ಪ್ರಶ್ನೆ ಕೇಳಬಹುದು.
– ಒಂದು ಅಂಕದ ಪ್ರಶ್ನೆಗಳು ಒಟ್ಟು 8. ಇವುಗಳಲ್ಲಿ 4 ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳು, 4 ಅನುರೂಪಕ ಪ್ರಶ್ನೆಗಳು. ಒಂದು ವಾಕ್ಯದಲ್ಲಿ ಉತ್ತರಿಸುವ ಪ್ರಶ್ನೆಗಳನ್ನು ಸಾಮಾನ್ಯವಾಗಿ ಪದ್ಯ ಮತ್ತು ಗದ್ಯ ಭಾಗದಿಂದ ತಲಾ 2ರಂತೆ ಕೇಳಬಹುದು.
– ವ್ಯಾಕರಣ ಭಾಗಕ್ಕೆ 8 ಅಂಕಗಳಿವೆ. ಅವು ಬಹುವಾಕ್ಯ ಪ್ರಶ್ನೆಗಳಾಗಿರುತ್ತವೆ. ಪ್ರಮುಖವಾಗಿ ಸಂಧಿ ಸಮಾಸ, ಪ್ರೇರಣಾರ್ಥಕ ರೂಪ, ಉಗಮ ಚಿಹ್ನೆ, ಅನ್ಯಲಿಂಗ, ಅನ್ಯ ವಚನ, ವಿಲೋಮ ಶುದ್ಧಿ ಇವುಗಳಿಗೆ ಸಂಬಂಧಪಟ್ಟಂತೆ ತಲಾ ಒಂದು ಅಂಕದಂತೆ ಕೇಳಲಾಗುವುದು. ಪಠ್ಯ ಪುಸ್ತಕದಲ್ಲಿ ನೀಡಿರುವ ಉದಾಹರಣೆಗಳನ್ನೇ ಹೆಚ್ಚು ಗಮನವಿಟ್ಟು ಅಭ್ಯಾಸ ಮಾಡಿದರೆ ಸುಲಭದಲ್ಲಿ ಅಂಕ ಗಳಿಸಬಹುದು.
– 3, 4 ಅಂಕಗಳ ಪ್ರಶ್ನೆಗಳು ಪ್ರಬಂಧಾತ್ಮಕ ಉತ್ತರಗಳನ್ನು ಬಯಸುವುದರಿಂದ ಪ್ಯಾರಾಗಳಾಗಿಸಿ ಉತ್ತರಿಸುವುದು ಸೂಕ್ತ. ಹಾಗೆಯೇ ಪ್ರಬಂಧವನ್ನು ಕೂಡ ಅಲ್ಲಿ ಕೊಟ್ಟಿರುವ ಅಂಶಗಳ ಆಧಾರದ ಮೇಲೆ ಬರೆಯಲು ಮರೆಯದಿರಿ.

“ಕರತ ಕರತ ಅಭ್ಯಾಸ್‌ ಸೇ ಜಸಮತಿ ಹೋತ ಸುಜನ್‌’ ಎಂಬ ಕವಿವಾಣಿಯನ್ನು ಮರೆಯದೆ ಪರೀಕ್ಷೆಗೆ ಇನ್ನಿರುವುದು ಕೆಲವೇ ದಿನಗಳಾದರೂ ಆತ್ಮವಿಶ್ವಾಸದಿಂದ ಆರೋಗ್ಯದ ಕಡೆಗೆ ಗಮನವಿರಿಸಿ ಓದಿ ಪರೀಕ್ಷೆಯಲ್ಲಿ ಪಾಲ್ಗೊಳ್ಳಿ. ಯಶಸ್ಸು ನಿಮ್ಮದಾಗಲಿ.

- ಎಚ್‌. ಎನ್‌. ವೆಂಕಟೇಶ
ಹಿಂದಿ ಶಿಕ್ಷಕರು, ಡಾ| ಟಿಎಂಎ ಪೈ ಪ್ರೌಢಶಾಲೆ, ಕಲ್ಯಾಣಪುರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ