ಪರಿಸರ ಸ್ನೇಹಿಯಾಗಿರಲಿ ಮನೆ

Team Udayavani, Apr 20, 2019, 6:15 AM IST

ಮನೆಯೊಳಗೆ ಹಾಗೂ ಸುತ್ತಮುತ್ತ ತಂಪಾದ ವಾತಾವರಣ ಇರಬೇಕು ಎಂದು ಎಲ್ಲರೂ ಬಯಸುತ್ತಿರುವುದರಿಂದ ಪರಿಸರ ಸ್ನೇಹಿ ಮನೆಗಳಿಗೆ ಈಗ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಆದರೆ ಪರಿಸರ ಸ್ನೇಹಿ ಮನೆಗಳು ಹೇಗಿರಬೇಕು, ಯಾವ ರೀತಿಯಲ್ಲಿರಬೇಕು, ಅದನ್ನು ನಿರ್ಮಿಸುವುದು, ನಿರ್ವಹಣೆ ಮಾಡುವುದು ಹೇಗೆ ಎಂಬ ಚಿಂತೆ ಹಲವರಲ್ಲಿದೆ. ಆದರೆ ಇದರ ಬಗ್ಗೆ ತಿಳಿದುಕೊಂಡು ನಿರ್ಮಾಣ ಮಾಡಿದರೆ ಮನೆ ಆಕರ್ಷಕವಾಗಿರುವುದರ ಜತೆಗೆ ತಂಪಾಗಿಯೂ ಇರುತ್ತದೆ.

ಮನೆ ಕಟ್ಟುವುದು ಸುಲಭದ ಮಾತಲ್ಲ. ಅದಕ್ಕೆ ಅನುಭವದ ಯೋಜನೆಗಳು ಇಲ್ಲದಿದ್ದರೂ, ಹೊಸ ವಿನ್ಯಾಸದ ಗುರಿಯಿರಬೇಕು. ಅದರಲ್ಲೂ ಈಗ ಎಲ್ಲ ಕಡೆಯಲ್ಲಿಯೂ ಮನೆ ಮಾತಾಗಿರುವ ಪರಿಸರ ಸ್ನೇಹಿ ಮನೆಗಳು ಎಲ್ಲರ ಗಮನ ಸೆಳೆಯುತ್ತಿವೆ. ಇಂತಹ ಮನೆಕಟ್ಟಲು ಸ್ವಲ್ಪ ಕ್ರಿಯಾತ್ಮಕ ಯೋಜನೆಗಳು ಅಗತ್ಯ.

ಕೆಲವರಿಗೆ ಇರುವ ಮನೆಯನ್ನು ನವೀಕರಿಸುವ, ಇನ್ನು ಕೆಲವರಿಗೆ ಹೊಸ ಪರಿಸರ ಸ್ನೇಹಿ ಮನೆಗಳನ್ನು ಕಟ್ಟುವ ಹಂಬಲವಿರುತ್ತದೆ. ಅದಕ್ಕಾಗಿ ಪೂರ್ವನಿಯೋಜಿತ ಕೆಲಸಗಳನ್ನು ನಿರ್ವಹಿಸಬೇಕಾಗುತ್ತದೆ. ದೊಡ್ಡ ದೊಡ್ಡ ಮನೆಗಳನ್ನು ಕಟ್ಟಿ ಅದನ್ನು ನಿರ್ವಹಿಸಲಾಗದಿರುವುದಕ್ಕಿಂತ, ಚಿಕ್ಕ ಮನೆಯಾದರೂ ಅನುಕೂಲಕರವಾಗಿರುವಂತೆ ಕಟ್ಟುವುದರಿಂದ ಮನೆಯ ಅಂದ ಹೆಚ್ಚುವುದಲ್ಲದೆ, ಪ್ರತಿದಿನ ಸುಂದರವಾಗಿ ಸಮಯ ಕಳೆಯಲು ನೇರವಾಗುತ್ತದೆ.

ಸೈಟ್ ಆಯ್ಕೆ
ಪರಿಸರ ಸ್ನೇಹಿ ಮನೆ ನಿರ್ಮಿಸಲು ಮೊದಲು ಅತ್ಯಂತ ಅನುಕೂಲವಾದ ಸೈಟ್ ಆಯ್ಕೆ ಮಾಡಿಕೊಳ್ಳಬೇಕು. ಬೆಳಕಿನ ದೃಷ್ಟಿಕೋನ ಮನೆಗೆ ಪೂರಕವಾಗಿರಬೇಕು. ಅದಲ್ಲದೆ ಭೌಗೋಳಿಕ ಲಕ್ಷಣ, ಮನೆಯ ವಿನ್ಯಾಸ ಇವೆಲ್ಲವೂ ಪ್ರಕೃತಿಯ ಆಗುಹೋಗುಗಳಿಗೆ ಸರಿಹೊಂದುವಂತೆ ನಿರ್ಮಿಸಬೇಕು.

ಅಡಿಗೆ ಕೋಣೆಯನ್ನು ಸೂರ್ಯನ ಬೆಳಕು ಬೀಳುವ ಕಡೆ ಮಾಡುವುದು ಕೂಡ ಇದೇ ಕಾರಣಕ್ಕಾಗಿ. ಇದರಿಂದ ಸೂರ್ಯನ ಚಲನವಲನಕ್ಕೆ ಅನುಗುಣವಾಗಿ ಮನೆ ಇರುತ್ತದೆ. ಬೆಳಗಿನ ಕೆಲಸಗಳು ಹೆಚ್ಚು ಅಡಿಗೆ ಮನೆಯಲ್ಲಿರುವುದರಿಂದ ಅದಕ್ಕೆ ಪೂರಕವಾದಂತೆ ಬೆಳಕು ಸಹ ಬೇಕಾಗಿರುತ್ತದೆ. ಅದಲ್ಲದೆ ಪೂರ್ವ ಅಥವಾ ಉತ್ತರ ದಿಕ್ಕಿನಲ್ಲಿ ಮನೆಯ ಮುಂಭಾಗದ ಬಾಗಿಲುಗಳನ್ನು ನಿರ್ಮಾಣ ಮಾಡಲಾಗುತ್ತದೆ.

ಗಾತ್ರ ಮತ್ತು ಆಕಾರ
ಮನೆ ನಿರ್ಮಾಣದಲ್ಲಿ ಗಾತ್ರ ಮತ್ತು ಆಕಾರಗಳು ಕೂಡ ಮುಖ್ಯವಾಗುತ್ತದೆ. ಕೆಲವೊಮ್ಮೆ ಸಣ್ಣ ಮನೆಗಳು ಕೂಡ ತುಂಬಾ ಇಷ್ಟವಾಗುತ್ತದೆ. ಅದಕ್ಕೆ ಬಳಸಲಾದ ವಸ್ತುಗಳು, ಅವುಗಳ ಮಾರ್ಪಾಡು ಎಲ್ಲವೂ ಖುಷಿಕೊಡುತ್ತದೆ. ಸಾಮಾನ್ಯವಾಗಿ ದೊಡ್ಡ ದೊಡ್ಡ ಕೊಠಡಿಗಳಿಗಿಂತ ಚಿಕ್ಕ ಸ್ಥಳಾವಕಾಶ ಹೆಚ್ಚು ಬೆಳಕನ್ನು ನೀಡುತ್ತದೆ. ಕಿಟಕಿಗಳು ಸಹ ಇದಕ್ಕೆ ಹೊರತಾಗಿಲ್ಲ. ಮನೆಯಲ್ಲಿ ಗಾಳಿ, ಬೆಳಕು ಹೇರಳವಾಗಿ ಬರಲು ಮತ್ತು ಶಾಖದ ಪ್ರಮಾಣವನ್ನು ಕಡಿಮೆ ಮಾಡಲು ಚೌಕ, ಆಯತಾಕಾರದಲ್ಲಿ ಕಿಟಕಿ ಮತ್ತು ಕಟ್ಟಡಗಳನ್ನು ನಿರ್ಮಾಣ ಮಾಡಲಾಗುತ್ತದೆ. ಅದಲ್ಲದೆ ಮನೆಯ ಛಾವಣಿಗಳಿಗೆ ಮರದಿಂದ ಮಾಡಿದ ಜಂತಿಗಳನ್ನೆ ಬಳಸುವುದರಿಂದ ಪರಿಸರ ಸ್ನೇಹಿ ಮನೆ ನಿರ್ಮಾಣಕ್ಕೆ ಅನುಕೂಲವಾಗುತ್ತದೆ.

ನಿರ್ಮಾಣ ಪ್ರಕ್ರಿಯೆ ಮನೆಯ ಸಂಪನ್ಮೂಲ ಭಾಗವಾಗಿರುವುದರಿಂದ, ಕಟ್ಟಡಗಳನ್ನು ಸುಂದರವಾಗಿ ನಿರ್ಮಿಸಬೇಕು. ಮನೆಯಲ್ಲಿ ಆದಷ್ಟು ಸೌರಶಕ್ತಿಯನ್ನು ಬಳಸುವುದರಿಂದ ಪರಿಸರ ಸ್ನೇಹಿಯಾಗುವುದಲ್ಲದೆ, ನೈಸರ್ಗಿಕವಾಗಿ ಯಾವುದೇ ತೊಡಕುಂಟಾಗದೇ ಪ್ರತಿದಿನ ಕಾರ್ಯ ನಿರ್ವಹಿಸುತ್ತದೆ. ಅದಲ್ಲದೆ ಚಳಿ ಮತ್ತು ಮಳೆಗಾಲದಲ್ಲಿ ಬಿಸಿ ನೀರಿನ ವ್ಯವಸ್ಥೆ ಕೂಡ ಆಗುತ್ತದೆ. ಜಾಗತಿಕ ಮಟ್ಟದಲ್ಲಿ ಕಾರ್ಬನ್‌ ಹೊರಸೂಸುವಿಕೆಯ ಪ್ರಮಾಣ ಹೆಚ್ಚಾಗಿರುವುದರಿಂದ ಸೌರಶಕ್ತಿಯನ್ನು ಪರ್ಯಾಯ ಶಕ್ತಿಯಾಗಿ ಬಳಸಬಹುದಾಗಿದೆ. ಇದಕ್ಕೆ ಪೂರಕವಾಗುವಂತೆ ಪರಿಸರ ಸ್ನೇಹಿ ಬಲ್ಬ್ಗಳು ಬಂದಿರುವುದರಿಂದ ಕೊಠಡಿಗಳಿಗೆ ಇದನ್ನು ಬಳಸಬಹುದಾಗಿದೆ.

ಜಲ ಸಂರಕ್ಷಣೆ
ನೀರು ಒಂದು ಪ್ರಮುಖ ಸಂಪನ್ಮೂಲವಾಗಿರುವುದರಿಂದ ಹಸಿರು ಮನೆಯಲ್ಲಿ ನೀರಿನ ಬಳಕೆ ಅತಿಮುಖ್ಯವಾಗಿರುತ್ತದೆ. ಮಳೆಗಾಲದಲ್ಲಿ ಮಳೆ ನೀರು ಕೊಯ್ಲು ಗಳನ್ನು ಮಾಡಿ ನೀರು ಸಂಗ್ರಹಿಸುವ ವ್ಯವಸ್ಥೆ ಮಾಡುವುದ ಮತ್ತು ಮನೆಗಳಲ್ಲಿ ಒಮ್ಮೆ ಬಳಕೆಯಾದ ನೀರನ್ನು ಪುನಃ ಬಳಸುವ ವ್ಯವಸ್ಥೆ ಮಾಡಿಕೊಂಡಲ್ಲಿ ಮನೆಗೆ ಅನೂಕೂಲವಾಗುತ್ತದೆ.

ಜಗತ್ತಿನಾದ್ಯಂತ ಅನೇಕ ಪರಿಸರ ಸ್ನೇಹಿ ಮನೆಗಳಿದ್ದು ಕೆಲವು ಮನೆಗಳು ಎಲ್ ಆಕೃತಿಯಲ್ಲಿ ನಿರ್ಮಾಣಗೊಂಡಿದ್ದು , ಕೆಲವು ಕಾಂಕ್ರೀಟ್ ಗೋಡೆಗಳು ಬೇಸಗೆಯಲ್ಲಿ ತಂಪಾಗಿ ಮತ್ತು ಚಳಿಗಾಲದಲ್ಲಿ ಬೆಚ್ಚಗಿನ ವಾತಾವರಣವನ್ನು ಮನೆಯೋಳಗೆ ನೀಡುತ್ತವೆ. ಅಲ್ಲದೆ ಸೌರಶಕ್ತಿಗಳನ್ನು ಬಳಸುವುದರಿಂದ ವಿದ್ಯುತ್‌ ಬಳಕೆಯನ್ನು ಕಡಿಮೆ ಮಾಡಬಹುದು.

ಗೋಡೆಗಳನ್ನು ಹಸುರಾಗಿಸಿ
ಮನೆಯ ಹೊರಗಿನ ಗೋಡೆಗಳಿಗೆ ಬಣ್ಣ ಬ¡ಣ್ಣದ ಪೇಂಟ್ ಮಾಡುವ ಬದಲು ತರಕಾರಿ, ಹೂವಿನ ಬಳ್ಳಿಗಳನ್ನು ಗೋಡೆಗಳಿಗೆ ಹರಿಯ ಬಿಡುವುದು ಒಳ್ಳೆಯದು. ಇವುಗಳು ತನ್ನಷ್ಟಕ್ಕೆ ತಾನೇ ಹಬ್ಬಿಕೊಂಡು ಗೋಡೆಗಳು ಹಸಿರು ಮಯವಾಗುವುದಲ್ಲದೆ, ಸುಂದರವಾಗಿ ಕಾಣುತ್ತದೆ. ಮನೆಗೆ ಪೇಂಟ್ ಮಾಡುವುವಾಗಲೂ ಕೂಡ ಕೆಮಿಕಲ್ ಬಳಸಿದ ಪೇಂಟ್ಗಳ ಬಳಕೆ ಕಡಿಮೆ ಮಾಡಬೇಕು, ನೈಸರ್ಗಿಕವಾಗಿ ಸಿಗುವ ಮರಳು, ಕಲ್ಲುಗಳಿಂದ ವಿನೂತನ ಮಾದರಿಯ ಗೋಡೆಗಳಿಗೆ ಆದ್ಯತೆ ನೀಡಬೇಕು.

– ಪ್ರೀತಿ ಭಟ್‌ ಗುಣವಂತೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಾತು ಒಂದು ಅದ್ಬುತ ಶಕ್ತಿ. ಮಾತೇ ಮಾಣಿಕ್ಯ ಎನ್ನುವಂತೆ ಅದಕ್ಕೆ ನಗಿಸುವುದು ಗೊತ್ತು ಅಳಿಸುವುದೂ ಗೊತ್ತು. ಸಂತೋಷ ವಾಗಿರಲೂ ಮಾತಿಗಿಂತ ಮಿಗಿಲಾದ ಔಷಧವಿಲ್ಲ....

  • ಶತ್ರುಗಳಿದ್ದರೆ ಜೀವನದಲ್ಲಿ ಮುಂದೆ ಬರಲು ಸಾಧ್ಯ ಎಂಬುದು ತಿಳಿದವರ ಮಾತು. ಹೌದು ಈ ಮಾತು ನನ್ನ ಜೀವನದಲ್ಲಿ ಅದೆಷ್ಟೋ ಬಾರಿ ಅನುಭವಕ್ಕೆ ಬಂದಿದೆ. ನಾವು ಏನೋ ಸಾಧನೆ...

  • ಬದುಕು ಎನ್ನುವುದು ಅನಿಶ್ಚಿತತೆಗಳ ಆಗರ. ಭವಿಷ್ಯವನ್ನು ಹೀಗೆ ಅಂತ ಊಹಿಸಲು ಸಾಧ್ಯವಿಲ್ಲ. ಹಾಗೆಯೇ ಭೂತ ಕಾಲವನ್ನು ಮತ್ತೆ ಬದಲಿಸಲು ಅಸಾಧ್ಯ. ಸದ್ಯ ಈಗ ಇರುವ ಸಮಯದಲ್ಲಿ...

  • ಯಾವುದೇ ವಿಷಯದಲ್ಲಾದರೂ ಅಷ್ಟೇ ನಮ್ಮ ಸಾಮರ್ಥ್ಯ ಹೊರಗೆ ಹಾಕಲು ಅದಕ್ಕೆ ಸರಿಯಾದ ಪ್ರೋತ್ಸಾಹ ಅತ್ಯಗತ್ಯ. ನಾವು ಬೆಳೆದ ವಾತಾವರಣ ನಮ್ಮನ್ನು ಕುಗ್ಗಿಸಲು ಹೊರಟರೆ,...

  • ಯೋಗ ಮತ್ತು ಯೋಗ್ಯತೆ‌ಗಳೆರಡೂ ವ್ಯಕ್ತಿಯೊಬ್ಬನನ್ನು ಔನ್ನತ್ಯಕ್ಕೆ ಏರಿಸುವ ಅಥವಾ ಪ್ರಪಾತಕ್ಕೆ ದೂಡುವ ಕೆಲಸವನ್ನು ಮಾಡಿ ಬಿಡುತ್ತದೆ. ಹೆಚ್ಚಿನ ಸಂದರ್ಭ ಗಳಲ್ಲಿ...

ಹೊಸ ಸೇರ್ಪಡೆ