ಒಂಟಿತನವನ್ನೂ ಆನಂದಿಸಿ

Team Udayavani, Dec 16, 2019, 5:11 AM IST

ಸಾಂದರ್ಭಿಕ ಚಿತ್ರ.

ಒಂಟಿತನ ಎನ್ನುವುದು ಎಲ್ಲರ ಜೀವನದಲ್ಲಿ ಒಂದಲ್ಲ ಒಂದು ಬಾರಿ ಆವರಿಸಿಕೊಳ್ಳುತ್ತದೆ. ಅದಕ್ಕಾಗಿ ಆತಂಕ ಪಡುವುದು ಬೇಡ. ಏಕೆಂದರೆ ಜಗತ್ತಿನಲ್ಲಿ ಎಲ್ಲರೂ ಒಂದಲ್ಲ ಒಂದು ರೀತಿ ಒಬ್ಬಂಟಿಗಳೆ ಎನ್ನುವುದು ಕಟು ಸತ್ಯ. ಇದನ್ನು ಮೊದಲು ಅರಿತುಕೊಳ್ಳಬೇಕು.

ಹುಟ್ಟಿದ ಊರು ಬಿಟ್ಟು ಹೆಚ್ಚಿನ ವಿದ್ಯಾಭ್ಯಾಸ ಅಥವಾ ಕೆಲಸಕ್ಕೆಂದು ದೂರದೂರಿಗೆ ಬರುವ ಅನೇಕ ಯುವ ಮನಸ್ಸುಗಳು ಒಂಟಿತನಕ್ಕೆ ಸಿಲುಕಿ ಮಾನಸಿಕವಾಗಿ ಕುಗ್ಗಿ ಹೋಗುತ್ತವೆ. ಇದು ಮನಸ್ಸಿನ ಮೇಲೆ ಗಾಢವಾದ ಪರಿಣಾಮ ಉಂಟು ಮಾಡಬಹುದು. ಇದರಿಂದ ಹೊರ ಬರಲು ಒಂಟಿತನವನ್ನೇ ನಿಮ್ಮ ಖುಷಿಯ ಸಾಧನವನ್ನಾಗಿ ಪರಿವರ್ತಿಸಿಕೊಳ್ಳಿ. ಆಗ ಅದು ನಿಮ್ಮನ್ನು ಕಾಡಲಾರದು.

ನಿಮಗಿಷ್ಟದ ಸಂಗೀತ ಕೇಳಿ
ಸಂಗೀತಕ್ಕೆ ವಿಶಿಷ್ಟವಾದ ಶಕ್ತಿ ಇದೆ. ಒಂಟಿತನಕ್ಕೆ ಇದು ದಿವ್ಯ ಔಷಧವೂ ಹೌದು. ನಿಮಗಿಷ್ಟವಾದ ಸಂಗೀತವನ್ನು ಕೇಳುವ ಮೂಲಕ ನೀವು ಸಂತೋಷವಾಗಿರಲು ಸಾಧ್ಯ. ಅಥವಾ ಸಂಗೀತ ತರಗತಿಗೆ ಸೇರಿಕೊಳ್ಳಬಹದು.

ಪುಸ್ತಕ ಓದಿ
ಒಂದು ಉತ್ತಮ ಪುಸ್ತಕ ಒಬ್ಬ ಆತ್ಮೀಯ ಗೆಳೆಯನಿಗೆ ಸಮಾನ. ನಿಮ್ಮ ಅಭಿರುಚಿಗೆ ತಕ್ಕಂಥ ಪುಸ್ತಕ ಕೊಂಡು ಅದನ್ನು ಓದಿ. ಇದರಿಂದ ಹೊಸದೇನಾದರೂ ತಿಳಿಯತ್ತದೆ ಮತ್ತು ಒಂಟಿತನದ ಬೇಸರ ಕಾಡುವುದಿಲ್ಲ.

ಅಡುಗೆ ಮಾಡಿ
ಕೆಲಸಕ್ಕಾಗಿ ಪರ ಊರಿಗೆ ಬಂದು ಬಾಡಿಗೆ ರೂಮ್‌ನಲ್ಲಿ ಇದ್ದೀರೆಂದರೆ ಅಲ್ಲಿ ನಿಮ್ಮ ಒಂಟಿತನ ಹೋಗಲಾಡಿಸಲು ಅಡುಗೆ ಮನೆ ಕೂಡ ನಿಮಗೊಂದು ಅತ್ಯುತ್ತಮ ಸಂಗಾತಿ. ಹೌದು, ಅಡುಗೆ ಮಾಡುವುದರಿಂದ ಮನಸ್ಸಿಗೆ ಖುಷಿ ಸಿಗುತ್ತದೆ. ಅಲ್ಲದೇ ನೀವೇ ತಯಾರಿಸಿದ ಅಡುಗೆಯ ರುಚಿಯನ್ನು ಸವಿಯುವಾಗ ಸಿಗುವ ಮಜಾನೇ ಬೇರೆ.

ಕರೆ ಮಾಡಿ
ಇಂದಿನ ತಂತ್ರಜ್ಞಾನ ದೂರ ವಿರುವವರನ್ನೂ ಹತ್ತಿರವಾಗಿಸುತ್ತದೆ. ಇವುಗಳಿಂದ ನಿಮ್ಮ ತಂದೆ- ತಾಯಿ, ಕುಟುಂಬದವರು, ಸ್ನೇಹಿತರಿಗೆ ಕರೆ ಮಾಡುವ ಮೂಲಕ ಮನಸ್ಸು ಹಗುರ ಮಾಡಿಕೊಳ್ಳಬಹುದು.

ಬೆಳಗಿನ ವ್ಯಾಯಾಮ,ಧ್ಯಾನ
ಬೆಳಗಿನ ವ್ಯಾಯಾಮ ದಿನವಿಡೀ ನೀವು ಖುಷಿಯಾಗಿರಲು ಬಲು ಉಪಕಾರಿ. ಬೆಳಗ್ಗೆ ಬೇಗನೆ ಎದ್ದು ಶುದ್ಧವಾದ ಪರಿಸರದಲ್ಲಿ ಸ್ವಲ್ಪ ಹೊತ್ತು ಓಡಾಡಿ. ಅನಂತರ ಧ್ಯಾನ ಮಾಡಿದರೆ ಮನಸ್ಸು ಪ್ರಫ‌ುಲ್ಲವಾಗಿ ಫ‌ುಲ್‌ ಚಾರ್ಜ್‌ ಆಗುತ್ತೆ.

-   ಶಿವಾನಂದ್‌ ಎಚ್‌.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ