ನಿಮ್ಮ ಪ್ರಶ್ನೆಗೆಯೋಗ ತಜ್ಞರ ಉತ್ತರ

Team Udayavani, Jan 28, 2020, 5:47 AM IST

ಯೋಗದ ಕುರಿತಾಗಿರುವ ತಮ್ಮ ಗೊಂದಲಗಳಿಗೆ ತಜ್ಞರ ಉತ್ತರಗಳ ಮೂಲಕ ತೆರೆ ಎಳೆಯುವ ಪ್ರಯತ್ನ ಇದು. ಓದುಗರು ಕೇಳಿದ ಪ್ರಶ್ನೆಗಳಿಗೆ ಈ ಬಾರಿ ಉಡುಪಿಯ ಅಯ್ಯಂಗಾರ್‌ ಯೋಗ ಶಿಕ್ಷಕಿ, ಶೋಭಾ ಶೆಟ್ಟಿ ಅವರು ಉತ್ತರಿಸಿದ್ದಾರೆ.

 ಗರ್ಭಿಣಿಯರು ಯಾವ ರೀತಿಯ
ಆಸನಗಳನ್ನು ಮಾಡಬೇಕು ?
ಗರ್ಭಿಣಿಯರು ಇದೇ ಮೊದಲ ಬಾರಿ ಯೋಗ ಮಾಡುವವರಾದರೆ ಅವರಾಗಿ ಪ್ರಯತ್ನಿಸಬಾರದು. ಪರಿಣತ ಯೋಗ ಶಿಕ್ಷಕರ ಸಹಾಯದಿಂದ ಮಾತ್ರ ಮಾಡಬೇಕು. ದೇಹಕ್ಕೆ ಯಾವುದೇ ಒತ್ತಡಗಳು ಬೀಳದಂತೆ ನೋಡಿಕೊಳ್ಳಬೇಕು. ದೈನಂದಿನ ಜೀವನದಲ್ಲಿ ಇರುವ‌ ಹಾಗೆ, ಸುಲಲಿತವಾಗಿ ಯೋಗವನ್ನು ಅಭ್ಯಾಸ ಮಾಡಬೇಕು. ದೇಹಕ್ಕೆ ಒತ್ತಡ ಬೇಳದಂತೆ ನೋಡಿಕೊಳ್ಳಬೇಕು. ಇದಕ್ಕೆ ತಜ್ಞರ ನಿರ್ದೇಶನದ ಮೂಲಕ ಯೋಗ ಮಾಡುವುದು ಮಾತ್ರ ಸರಿಯಾದ ಆಯ್ಕೆ.

ಬೆನ್ನು ನೋವಿಗೆ ಮಾಡಬಹುದಾದ
ಸುಲಭ ಆಸನಗಳು?
ಬೆನ್ನು ನೋವಿಗೆ ನಿರ್ದಿಷ್ಟವಾಗಿ ಯಾವ ಯೋಗ ಮಾಡಬೇಕು ಎಂದು ಹೇಳುವುದು ಕಷ್ಟ. ಇದು ನೋವಿನ ಮಾತ್ರೆಗಳನ್ನು ನೀಡಿದಂತಲ್ಲ. ಅವರ ದೇಹದ ಸ್ಥಿತಿಯನ್ನು ಅರಿತುಕೊಂಡು ಯೋಗ ಮಾಡಬೇಕು. ಇಲ್ಲೂ ನೀವು ತಜ್ಞರ ಸಲಹೆಯನ್ನು ಪಡೆದುಕೊಳ್ಳುವುದು ಅತ್ಯಗತ್ಯ. ಬೆನ್ನು ನೋವಿನ ಕಾರಣಕ್ಕೆ ಏಕಾಏಕಿ ಯೋಗವನ್ನು ಮಾಡುವುದು ಸರಿಯಾದ ಕ್ರಮವಲ್ಲ. ಇದರಿಂದ ನಿಮ್ಮ ನೋವು ಹೆಚ್ಚಾಗುವ ಸಾಧ್ಯತೆಯೇ ಹೆಚ್ಚು. ಇನ್ನು ಯೋಗವನ್ನು ಪ್ರತಿದಿನ ಅಭ್ಯಾಸ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಕಂಡುಕೊಳ್ಳಬಹುದಾಗಿದೆ.

 ಮನಸ್ಸಿನ ಹತೋಟಿಗೆ ಯಾವ
ಯೋಗ ಪೂರಕ?
ಎಲ್ಲಾ ಆಸನಗಳು ಮನಸ್ಸಿನ ಏಕಾಗ್ರತೆ ಮತ್ತು ಮನಸ್ಸನ್ನು ಹತೋಟಿಯಲ್ಲಿಡಲು ಸಹಕಾರಿಯಾಗಿದೆ. ಯಮ, ನಿಯಮ, ಆಸನ, ಪ್ರಾಣಾಯಾಮ, ಪ್ರತ್ಯಾಹಾರ, ಧಾರಣಾ, ಧ್ಯಾನ, ಸಮಾ ಎಂಬ ಪತಂಜಲಿ ಹೇಳಿದ ಹಂತಗಳಂತೆ ಇವುಗಳನ್ನು ಪಾಲಿಸಿದರೆ ಮನಸ್ಸನ್ನು ಹತೋಟಿಯಲ್ಲಿಡಲು ಸಾಧ್ಯ. ನೀವು ಯೋಗ ಮಾಡುವ ವೇಳೆ ಪ್ರತಿಯೊಂದು ಯೋಗದಲ್ಲೂ ಲಕ್ಷ್ಯವನ್ನು ಇಟ್ಟುಕೊಳ್ಳಬೇಕು. ಯಾವ ಅಂಗದ ಮೂಲಕ ಯೋಗಾಭ್ಯಾಸ ಮಾಡುತ್ತೀರಿ ಎಂಬುದನ್ನು ನೀವು ಏಕಾಗ್ರತೆಯಿಂದ ಗಮನಿಸುತ್ತಿದ್ದರೆ ಸಹಜವಾಗಿ ನಿಮ್ಮಲ್ಲಿ ಮನಸ್ಸಿನ ಹತೋಟಿ ಬರುತ್ತದೆ.

ನಿದ್ರೆ ಸಮಸ್ಯೆಗೆ ಯಾವ ಯೋಗ
ಹೆಚ್ಚು ಉಪಕಾರಿ?
ಯೋಗ ಅಭ್ಯಾಸ ಮಾಡುತ್ತಾ ಇದ್ದರೆ ಅದು ಅಭ್ಯಾಸವಾಗುತ್ತದೆ. ನಿದ್ರೆಯ ಸಮಸ್ಯೆ ಎಂಬುವಂತದ್ದು ಅವರವರ ದೇಹದ ಮೇಲೆ ಅವಲಂಬಿತವಾಗಿದೆ. ನೀವು ಸಂಜೆ ಯೋಗ ಮಾಡಿದರೆ ದೇಹಕ್ಕೆ ಹೆಚ್ಚು ಒತ್ತಡ ಉಂಟಾಗುತ್ತದೆ. ಇದು ನಿದ್ರೆಯ ಸಮಸ್ಯೆಗೆ ಕಾರಣವಾಗಬಹುದು. ಈ ಕಾರಣಕ್ಕಾಗಿ ನೀವು ಬೆಳಗ್ಗೆ ಯೋಗ ಮಾಡಿ, ಸಂಜೆ ವಿಶ್ರಾಂತಿ ಪಡೆದುಕೊಳ್ಳುವುದು ಉತ್ತಮ. ಇದರಿಂದ ನಿದ್ರೆ ಚೆನ್ನಾಗಿ ಬರಬಹುದು. ರಾತ್ರಿ 10 ಗಂಟೆಗೆ ಮಲಗಿದರೆ ನೀವು ನಿದ್ರೆಯ ಸಮಸ್ಯೆಯನ್ನು ತಕ್ಕಮಟ್ಟಿಗೆ ಬಗೆಹರಿಸಿಕೊಳ್ಳಬಹುದು. ಆರೋಗ್ಯ ಚೆನ್ನಾಗಿದ್ದರೆ ಬೇಗನೇ ನಿದ್ದೆ ಬರುತ್ತದೆ. ಆರೋಗ್ಯ ಚೆನ್ನಾಗಿ ಇರಬೇಕಾದರೆ ಯೋಗವನ್ನು ಅಭ್ಯಾಸ ಮಾಡಲೇಬೇಕು.

 ಮಕ್ಕಳಲ್ಲಿ ಪರೀಕ್ಷಾ ಸಮಯದಲ್ಲಿ
ಆತ್ಮವಿಶ್ವಾಸ ವೃದ್ಧಿಗೆ ಯಾವ ಯೋಗ ಅಗತ್ಯ?
ಯೋಗ ಆತ್ಮ ವಿಶ್ವಾಸ ವೃದ್ಧಿಗೆ ಬಹುದೊಡ್ಡ ಕೊಡುಗೆ ನೀಡುತ್ತದೆ. ಈ ಸಮಯದಲ್ಲಿ ಮಕ್ಕಳು ಯೋಗ ಮಾಡಲೇಬೇಕು. ಶೀಶಾìಸನ, ಸರ್ವಾಗಾಂಸನ, ಹಲಾಸನ ಮೊದಲಾದ ಆಸನವನ್ನು ಮಾಡುತ್ತಾ ಇದ್ದರೆ ಬ್ರೈನ್‌ ಚುರುಕಾಗುವುದರ ಜತೆಗೆ ಚುರುಕಾಗಿರುತ್ತದೆ. ಮಾತ್ರವಲ್ಲದೇ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ

  • ಲ್ಯಾರಿ ಟೆಸ್ಲರ್‌ ಎಂಬ ಕಂಪ್ಯೂಟರ್‌ ವಿಜ್ಞಾನಿ ಕೆಲ ದಿನಗಳ ಹಿಂದಷ್ಟೆ ತೀರಿಕೊಂಡರು. ಜಗತ್ತಿನೆಲ್ಲೆಡೆ ಅದು ಸುದ್ದಿಯಾಯಿತು. ಏಕೆಂದರೆ, ಇಂದು ಜಗತ್ತಿನಲ್ಲಿರುವ...

  • ಎಷ್ಟೋ ಬಾರಿ ನಮ್ಮದಲ್ಲದ ತಪ್ಪಿಗೆ ನಮ್ಮನ್ನು ಗುರಿಮಾಡಿದಾಗ ಕೋಪ, ಅಸಹನೆ, ದಃಖ ಹೀಗೆ ಎಲ್ಲೂವೂ ಒಟ್ಟಿಗೆ ಅಭಿವ್ಯಕ್ತಗೊಳ್ಳುವುದು ಸಹಜ. ಇಂತಹ ಸಂದರ್ಭದಲ್ಲಿ...

  • ವಿಶೇಷ ವರದಿ-ಮಹಾನಗರ: ಕೆಲವು ದಿನಗಳಿಂದ ನಗರದಲ್ಲಿ ಅಬ್ಟಾ ... ಏನ್‌ ಸೆಕೇನಪ್ಪಾ ! ಎಂದು ಹೇಳಿಕೊಂಡವರೇ ಹೆಚ್ಚು. ಏಕೆಂದರೆ ಕೆಲವುದಿನಗಳಿಗೆ ಹೋಲಿಕೆ ಮಾಡಿದರೆ...

  • ಬೋಂಡಾ, ಬಜ್ಜಿ, ಪಕೋಡವನ್ನು ಸಾಮಾನ್ಯವಾಗಿ ಎಲ್ಲಾ ಕಡೆ ಮಾಡ್ತಾರೆ. ಆದ್ರೆ, ಕೆಲವರು ತಿಂಡಿಗೆ ಬಳಸುವ ಪದಾರ್ಥ, ಕೈ ರುಚಿ, ಶುಚಿತ್ವ, ಹೀಗೆ... ಹಲವು ಕಾರಣಗಳಿಂದ ಗ್ರಾಹಕರಿಂದ...

  • ಜೇನು ಕುಟುಕಿದರೆ ಮಾತ್ರ ಉರಿ, ಕೃಷಿಕರಿಗೆ ಸಿಹಿಯೇ. ಜೇನು ಕೃಷಿಯ ಹೆಗ್ಗಳಿಕೆ ಎಂದರೆ, ಸ್ವಂತ ಜಮೀನು ಹೊಂದಿರಬೇಕಾದ ಅಥವಾ ಹೆಚ್ಚಿನ ಬಂಡವಾಳ ಹೂಡಬೇಕಾದ ಅಗತ್ಯವಿಲ್ಲ....