ಎಫ್ಆ್ಯಂಡ್‌ ಡಿ ಸ್ಪೀಕರ್‌

Team Udayavani, Jun 7, 2019, 5:50 AM IST

ಪ್ರಸಿದ್ಧ ಆಡಿಯೋ ಬ್ರ್ಯಾಂಡ್‌ ಎಫ್ ಆ್ಯಂಡ್‌ಡಿ ಕಂಪೆನಿಯು ತನ್ನ ಹೊಸ ಉತ್ಪನ್ನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲು ಸಿದ್ಧವಾಗಿದೆ. ಅದುವೇ ಸ್ಪೀಕರ್‌ ಟಿ300 ಎಕ್ಸ್‌ ಎಂಬ ಹೆಸರಿನ ಸ್ಪೀಕರ್‌ ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು ಇದರಲ್ಲಿ ಹಲವಾರು ಹೊಸ ತಂತ್ರಜ್ಞಾನಗಳಿವೆ.

9,990 ರೂ. ಬೆಲೆಬಾಳುವ ಟಿ300 ಎಕ್ಸ್‌ 2.1 ಸ್ಪೀಕರ್‌ ಈಗ ಸದ್ಯ ಒಂದು ವರ್ಷದ ವಾರಂಟಿಯೊಂದಿಗೆ ಮಾರುಕಟ್ಟೆಗಳಲ್ಲಿ ಲಭ್ಯವಿದೆ. ಸೌಂಡ್‌ ಬಾರ್‌ ಮತ್ತು ಸೌಂಡ್‌ ವೂಫ‌ರ್‌ ಇದರಲ್ಲಿ ಇದ್ದು ಎರಡು ಸ್ಯಾಟ್‌ಲೆçಟ್‌ ಸ್ಪೀಕರ್‌ ಹಾಗೂ ಒಂದು ಸಬ್‌ ವೂಫ‌ರ್‌ ಇದರಲ್ಲಿ ಲಭ್ಯವಿದೆ.

ಟಿ300 ಎಕ್ಸ್‌ 2.1 ಸ್ಪೀಕರ್‌ ಎರಡು ಸ್ಯಾಟ್‌ಲೆಟ್‌ಗಳನ್ನು ಸೌಂಡ್‌ಬಾರ್‌ನೊಂದಿಗೆ ಸಂಪ ರ್ಕ ಮಾಡುತ್ತಿದ್ದು ಇದರಿಂದ ಸ್ಪೀಕರ್‌ ಫ್ಲ್ಯಾಟ್‌ ಪ್ಯಾನಲ್‌ ಟಿವಿಯ ಜತೆ ಕೂಡ ಕಾರ್ಯವೆಸಗುತ್ತದೆ. ಚಾನೆಲ್‌ ಸ್ಪೀಕರ್‌ನಲ್ಲಿ ಬ್ಲೂಟೂತ್‌ ಕೂಡ ಇದ್ದು 70 ವೋಲ್ಟ್ನ ಔಟ್‌ಪುಟ್‌ ಪವರ್‌ನೊಂದಿಗೆ 8 ಸಬ್‌ವೂಫ‌ರ್‌ಗಳಿರುವುದರಿಂದ ಧ್ವನಿ ಸ್ಪಷ್ಟವಾಗಿ ಸ್ಪೀಕರ್‌ನಲ್ಲಿ ಕೇಳುತ್ತದೆ. ಇದರಲ್ಲಿ ವುಡನ್‌ಸಬ್‌ವೂಫ‌ರ್‌ ಇರುವುದರಿಂದ ಕ್ಲಾರಿಟಿ ಇರುತ್ತದೆ.

ಟಿ300 ಎಕ್ಸ್‌ 2.1 ಚಾನೆಲ್‌ ಸ್ಪೀಕರ್‌ನಲ್ಲಿ ಎಯುಕ್ಸ್‌ ಹಾಗೂ ಯುಎಸ್‌ಬಿ ಕನೆಕ್ಷನ್‌ಗಳು ಇರುವುದರಿಂದ ಮನೆಯಲ್ಲಿ ಕೂಡ ಮನೋರಂಜನ ಕೂಟಗಳನ್ನು ಏರ್ಪಡಿಸಲು ಹಲವಾರು ಅವಕಾಶಗಳಿವೆ. ಹೋಮ್‌ ಥಿಯೇಟರ್‌ನ ಅನುಭವವನ್ನು ಇದು ನೀಡುತ್ತದೆ. ಟಿ300 ಎಕ್ಸ್‌ 2.1ನಲ್ಲಿ 100ರಷ್ಟು ಎಫ್ಎಂ ಸ್ಟೇಷನ್‌ಗಳು ಲಭ್ಯವಿದ್ದು ಪಿಎಲ್‌ಎಲ್‌ ಟೆಕ್ನಾಲಜಿಯ ಮೂಲಕ ಇದು ಕಾರ್ಯನಿರ್ವಹಿಸುತ್ತದೆ. ಇದರಲ್ಲಿ ಒಂದು ರಿಮೋಟ್‌ ಕಂಟ್ರೋಲರ್‌ ಹಾಗೂ ಮಲ್ಟಿ ಕಲರ್‌ ಎಲ್‌ಇಡಿ ಲೈಟ್‌ಗಳು ಲಭ್ಯವಿವೆ. ಟಿವಿ ತಂತ್ರಜ್ಞಾನಗಳು ಹಲವಾರು ಆಧುನಿಕತೆಗಳೊಂದಿಗೆ ಮುಂದುವರಿಯುತ್ತಿರುವಾಗ ಅದರ ಶಬ್ದ ಸಾಮರ್ಥ್ಯವನ್ನು ಉತ್ತಮಗೊಳಿಸುವುದು ಅನಿವಾರ್ಯವಾಗಿದೆ. ಟಿ300 ಎಕ್ಸ್‌ 2.1 ಸ್ಪೀಕರ್‌ ಈ ಕೆಲಸವನ್ನು ಉತ್ತಮ ರೀತಿಯಲ್ಲಿ ಮಾಡುತ್ತಿದ್ದು ಉತ್ತಮ ಸಂವಿಧಾನಗಳೊಂದಿಗೆ ಕರ್ಕಶ ರಹಿತ ಧ್ವನಿಯನ್ನು ಇದು ನೀಡುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ