ಜಾಗವಿಲ್ಲದೆಡೆ ಬರಲಿವೆ ತೇಲುವ ನಗರಗಳು

Team Udayavani, Oct 6, 2019, 5:52 AM IST

ಇರುವ ಭೂಮಿಯಲ್ಲೆಲ್ಲ ಕಟ್ಟಡಗಳು, ರಸ್ತೆಗಳು ತಲೆ ಎತ್ತಿವೆ. ಮುಂದಿನ ದಿನಗಳಲ್ಲಿ ಜನರಿಗೆ ಜಾಗವೇ ಇಲ್ಲ ಎನ್ನುವ ಚಿಂತೆಗೆ ಸದ್ಯದಲ್ಲೇ ಬ್ರೇಕ್‌ ಬೀಳಲಿದೆ. ಇದಕ್ಕಾಗಿ ಸಮುದ್ರದಲ್ಲೇ ತೇಲುವ ನಗರಗಳ ಸೃಷ್ಟಿಗೆ ತಂತ್ರಜ್ಞರು ಆಲೋಚಿಸುತ್ತಿದ್ದಾರೆ. ಇದಕ್ಕಾಗಿ ಯುಎನ್‌ ಹ್ಯಾಬಿಟೇಟ್‌, ಖಾಸಗಿ ಸಂಸ್ಥೆ ಓಸೀನೆಕ್ಸ್‌ ಜತೆಗೆ ಯೋಜನೆಗಳನ್ನು ರೂಪಿಸುತ್ತಿದೆ. ಇದೇ ವೇಳೆ ಸಿಂಗಾಪುರದಲ್ಲಿ ಜನರಿಗಾಗಿ ಹೆಚ್ಚುವರಿ ಮನೆಗಳನ್ನು ನಿರ್ಮಿಸಲು ಮತ್ತು ನಗರವನ್ನು ವಿಸ್ತರಿಸಲು ತೇಲುವ ನಗರಕ್ಕೆ ಜಪಾನ್‌ ಪ್ಲ್ರಾನ್‌ ಮಾಡುತ್ತಿದೆ.

ಈ ತೇಲುವ ನಗರಗಳು ಪರಿಸರ ಸಹ್ಯವಾಗಿದ್ದು, ಸಮುದ್ರ ತೀರದಲ್ಲಿ ತೇಲುತ್ತಲೇ ಜನರಿಗೆ ಅತ್ಯುತ್ತಮವಾದ ಜೀವನವನ್ನು ನೀಡಲಿದೆ. ಮನೆಗಳು, ಶಾಪಿಂಗ್‌ ಮಾಲ್‌ಗ‌ಳೊಂದಿಗೆ ಜನರಿಗೆ ಬೇಕಾದ ಆಹಾರ ಬೆಳೆಯಲು ಅತ್ಯಾಧುನಿಕ ವ್ಯವಸ್ಥೆಗಳು, ಮೀನುಗಾರಿಕೆಗೂ ಪೂರಕವಾಗಿರಲಿದೆ.

ತಂತ್ರಜ್ಞಾನ, ನಿರ್ಮಾಣದ ಸವಾಲು
ನಗರವನ್ನು ತೇಲುವಂತೆ ಮಾಡುವುದು ಸುಲಭವೇನಲ್ಲ. ಇದರ ತಂತ್ರಜ್ಞಾನ, ನಿರ್ಮಾಣಕ್ಕೆ ಅಪಾರ ವೆಚ್ಚವಾಗುತ್ತದೆ. ಈ ಯೋಜನೆಯಿನ್ನೂ ಆಲೋಚನೆ ಹಂತದಲ್ಲಿದೆ. ಆದರೂ ಇದನ್ನು ಮಾಡಬಹುದು ಎಂದು ತಂತ್ರಜ್ಞರು ಅಭಿಪ್ರಾಯಕ್ಕೆ ಬಂದಿದ್ದಾರೆ. ಇಲ್ಲಿ ಜೀವನ ನಡೆಸುವುದು ಹೇಗೆ? ಸಮಸ್ಯೆಗಳು ಸೃಷ್ಟಿಯಾಗಬಹುದೇ ಎಂಬ ಬಗ್ಗೆಯೂ ಚರ್ಚೆಗಳು ನಡೆದಿವೆ.

ಹೇಗಿರಲಿದೆ ನಗರ?: ದೊಡ್ಡ ನಗರವನ್ನು ತೇಲುವಂತೆ ಮಾಡಲಾಗುತ್ತದೆ. ಒಂದು ಸಾಮಾನ್ಯ ನಗರ 10 ಸಾವಿರ ಮಂದಿಗೆ ವಾಸಸ್ಥಳವನ್ನು ಒದಗಿಸಿಕೊಡಲಿದೆ. ಇದು ಸಮುದ್ರದಲ್ಲಿ ತೇಲುವಂತೆ ಬೀಮ್‌ಗಳನ್ನು ಹೊಂದಿರಲಿದೆ. ಮುಂದಿನ 20 ವರ್ಷದೊಳಗೆ ಇಂತಹ ನಗರಗಳು ಸಾಕಾರವಾಗಲಿದ್ದು, ಪ್ರಪಂಚಾದ್ಯಂತ ಸಮುದ್ರ ತೀರದಲ್ಲಿರುವ, ಬೆಳೆಯುವ ದೇಶಗಳಿಗೆ ಪ್ರಯೋಜನಕಾರಿಯಾಗಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಎಷ್ಟೋ ಬಾರಿ ಬದುಕಿನಲ್ಲಿ ನಡೆಯುವ ಘಟನೆಗಳಿಗೆ ಮಾತನಾಡಿ ಪ್ರಯೋಜನವಿರುವುದಿಲ್ಲ. ಅದು ಗೊತ್ತಿದ್ದರೂ ನಾವು ಸೋಲ ಬಾರದು ಎಂಬ ಕಾರಣಕ್ಕೆ ಮಾತನ್ನು ಮುಂದುವರಿಸುತ್ತಾ...

  • ಬದುಕಿನಲ್ಲಿ ಪ್ರತಿಯೊಂದು ಘಟ್ಟಕ್ಕೂ ಒಂದೊಂದು ವಯಸ್ಸಿದೆ. ಆಯಾ ವಯಸ್ಸಿನಲ್ಲಿ ಆಯಾ ಘಟ್ಟಗಳನ್ನು ಪೂರೈಸಿದರೆ ಬದುಕು ಸುಂದರ. ಬಾಲ್ಯ, ಕಲಿಕೆ, ವಿವಾಹ, ಮಕ್ಕಳು,...

  • ಮನಸ್ಸೊಂದು ಹುಚ್ಚು ಕುದುರೆಯಂತೆ. ಲಗಾಮು ಇಲ್ಲದಿದ್ದರೆ ಎತ್ತಲತ್ತ ಓಡುತ್ತದೆ. ಅದನ್ನು ಹತೋಟಿಯಲ್ಲಿಡುವುದು ಅಗತ್ಯ. ಇಲ್ಲವಾದಲ್ಲಿ ಪರಿಣಾಮ ಬರೀ ವ್ಯಕ್ತಿಯ...

  • ಜೀವನದಲ್ಲಿ ಎಲ್ಲವನ್ನೂ ಎಷ್ಟು ಬೇಕು ಅಷ್ಟನ್ನೇ ಅನುಭವಿಸಬೇಕು. ಅದು ಅತಿಯಾದ ಖುಷಿಯೇ ಇರಲಿ ಅಥವಾ ದುಃಖವೇ ಇರಲಿ. ಖುಷಿಯನ್ನು ಅನುಭವಿಸಿ ಥಟ್ಟನೆ ಮರೆತು ಬಿಡುವ...

  • ಸಾಧನೆ ಮಾಡಹೊರಟವರಿಗೆ ಗುರಿ ಮತ್ತು ಗುರು ಇವೆರಡೂ ಅತ್ಯವಶ್ಯ. ಆಯ್ದುಕೊಂಡ ಗುರಿ ಸ್ಪಷ್ಟವಾಗಿಲ್ಲದಿದ್ದರೂ ಮಾರ್ಗದರ್ಶನ ನೀಡುವ ಗುರು ಸರಿ ಇಲ್ಲದಿದ್ದರೂ ಸಾಧನೆ...

ಹೊಸ ಸೇರ್ಪಡೆ