ಧಾನ್ಯ ದಾಸ್ತಾನು; ನಷ್ಟ, ಕೀಟಬಾಧೆ ನಿಯಂತ್ರಣ

Team Udayavani, Nov 3, 2019, 4:34 AM IST

ಧಾನ್ಯಗಳನ್ನು ಸಮರ್ಪಕವಾಗಿ ದಾಸ್ತಾನು ಮಾಡುವುದು ಅತ್ಯಗತ್ಯ. ಇಲ್ಲದಿದ್ದರೆ ಕೀಟಬಾಧೆ ಅಧಿಕವಾಗಿ ಭಾರಿ ನಷ್ಟ ಉಂಟಾಗ ಬಹುದು. “ಮುಂಜಾಗ್ರತೆ ವಹಿಸಿದ್ದೆವು. ಆದರೂ ಧಾನ್ಯಕ್ಕೆ ಹುಳು ಬಾಧೆ ತಗುಲಿದೆ’ ಎಂಬ ಮಾತನ್ನು ರೈತರು ಹೇಳುತ್ತಿರುತ್ತಾರೆ. ಅವರು ಮುಂಜಾಗ್ರತಾ ಕ್ರಮ ಅನುಸರಿಸಿದ್ದರೂ ಯಾವುದೋ ಒಂದು ಹಂತದಲ್ಲಿ ಎಡವುತ್ತಾರೆ. ಸಣ್ಣದೊಂದು ಪ್ರಮಾದ ದಿಂದಲೂ ಕೀಟಗಳ ಬಾಧೆ ವಿಪರೀತವಾಗುತ್ತದೆ. ದ್ವಿದಳ ಧಾನ್ಯಗಳ ಸಂಗ್ರಹಣೆಯಲ್ಲಿ ಹೆಚ್ಚು ಜಾಗರೂಕತೆ ಬೇಕು. ಏಕೆಂದರೆ, ಚಿಪ್ಪಿನಹುಳು ಬಾಧೆ ತಗುಲುವ ಸಾಧ್ಯತೆ ಹೆಚ್ಚಿರುತ್ತದೆ. ಚಿಪ್ಪಿನಹುಳುಗಳನ್ನು “ಬ್ರು ಬೆಡ್ಸ್‌’ ಎಂದು ಕರೆಯಲಾಗುತ್ತೆ. ಇವು ಚಿಕ್ಕದಾಗಿದ್ದು ದುಂಡಗಿನ ಆಕಾರ ಹೊಂದಿರುತ್ತವೆ. ಕಾಯಿ ಅಥವಾ ಕಾಳುಗಳ ಮೇಲೆ ಮೊಟ್ಟೆ ಇಡುತ್ತವೆ. ಅಗಾಧ ಸಂಖ್ಯೆಯ ಮೊಟ್ಟೆಗಳಿಂದ ಹೊರಬರುವ ಹುಳುಗಳು ದ್ವಿದಳ ಧಾನ್ಯಗಳ ಕಾಯಿ ಅಥವಾ ಕಾಳಿನೊಳಗೆ ಸೇರಿಕೊಳ್ಳುತ್ತವೆ. ಧಾನ್ಯವನ್ನು ತಿನ್ನಲು ಪ್ರಾರಂಭಿಸುತ್ತವೆ. ಈ ಹುಳುಗಳು ಕೋಶಾವಸ್ಥೆ ತಲುಪಿ ಪ್ರೌಢಾವಸ್ಥೆಯಲ್ಲಿ ಕೀಟಗಳಾಗಿ ಮಾರ್ಪಾಡಾಗುತ್ತವೆ. ಆಗ ಕಾಳುಗಳಿಗೆ ರಂಧ್ರ ಕೊರೆದು ಹೊರಬರುತ್ತವೆ. ಮತ್ತೆ ಇವುಗಳಿಂದ ಮೊಟ್ಟೆ ಇಡುವ ಕ್ರಿಯೆ ನಡೆಯುತ್ತದೆ. ಇದರಿಂದಾಗಿ ಕೀಟಗಳ ಸಂಖ್ಯೆ ದ್ವಿಗುಣಗೊಳ್ಳುತ್ತದೆ.

ದಾಸ್ತಾನು ಮಾಡದಿದ್ದರೂ ತೊಂದರೆ
ದಾಸ್ತಾನು ಹಂತದಲ್ಲಿ ಈ ಕೀಟಗಳ ಹಾವಳಿ ತೀವ್ರವಾಗುತ್ತದೆ. ಸಾಮಾನ್ಯವಾಗಿ ಈ ಕೀಟಗಳು ದ್ವಿದಳ ಧಾನ್ಯಗಳು ಕೊಯಾಗುವ ಮೊದಲೇ ದಾಳಿ ಇಡುತ್ತವೆ. ಇವುಗಳ ಆಕ್ರಮಣಕ್ಕೆ ತುತ್ತಾದ ಧಾನ್ಯಗಳನ್ನೇ ಸಂಗ್ರಹಿಸುವುದರಿಂದ ಇವುಗಳ ಬೆಳವಣಿಗೆ ನಿರಾತಂಕವಾಗಿ ಸಾಗುತ್ತದೆ. ಇದಕ್ಕೆ ಕಾರಣ, ಕಳೆದ ಬಾರಿ ಉಪಯೋಗಿಸಿದ ಚೀಲಗಳು, ಕಣಜಗಳಲ್ಲಿ ಚಿಪ್ಪುಹುಳುಗಳು ಸುಪ್ತಾವಸ್ಥೆಯಲ್ಲಿರುವುದು ಗೊತ್ತಾಗದೆ, ಇವುಗಳಿರುವ ಚೀಲಗಳನ್ನು ಉಪಯೋಗಿಸಿದಾಗ ಮತ್ತೆ ಕೀಟಬಾಧೆ ಆರಂಭ. ಸಂಗ್ರಹಣೆಯಲ್ಲಿ ಉಂಟಾಗುವ ಇಂಥ ತೊಡಕಿನಿಂದಾಗಿ ರೈತರಿಗೆ ನಷ್ಟ ಉಂಟಾಗುತ್ತದೆ. ಆದ್ದರಿಂದಲೇ ಬಹಳಷ್ಟು ರೈತರು ಧಾನ್ಯ ದಾಸ್ತಾನು ಮಾಡಲು ಹೋಗುವುದಿಲ್ಲ. ಆಯಾ ಸಂದರ್ಭದಲ್ಲಿ ಮಾರುಕಟ್ಟೆ ಬೆಲೆಗೆ ಮಾರಿಬಿಡುತ್ತಾರೆ. ಮಾರುಕಟ್ಟೆಗೆ ಒಮ್ಮೆಲೇ ಧಾನ್ಯ ಹೆಚ್ಚಿನ ಪ್ರಮಾಣದಲ್ಲಿ ಹೋದಾಗ ಬೆಲೆಯನ್ನೂ ಕಡಿಮೆ ನಿಗದಿ ಪಡಿಸಲಾಗುತ್ತದೆ. ಇದರಿಂದ ನಷ್ಟ ವಾ ಗು ವುದು ರೈತರಿಗೇ.

ಬಿಸಿಲಿನಿಂದ ಸಹಾಯ
ಇಂಥ ಪರಿಸ್ಥಿತಿ ನಿವಾರಿಸುವುದು ಅಗತ್ಯ. ಇದಕ್ಕಾಗಿ ಸುರಕ್ಷಿತ ಸಂಗ್ರಹಣಾ ವ್ಯವಸ್ಥೆ ಮಾಡಿಕೊಳ್ಳಬೇಕು. ಧಾನ್ಯಗಳನ್ನು ಒಕ್ಕಣೆ ಮಾಡಿದ ತಕ್ಷಣವೇ ಅವುಗಳಲ್ಲಿರುವ ಕೀಟಗಳನ್ನು ನಾಶಗೊ ಳಿಸಬೇಕು. ಕಟಾವಾದ ತಕ್ಷಣ ಮೂಟೆ ಕಟ್ಟಿ ಇಟ್ಟರೆ ಕೀಟಗಳಿಗೆ ಅವಕಾಶ ಒದಗಿಸಿಕೊಟ್ಟಂತೆ. ಆದ್ದರಿಂದ, ಧಾನ್ಯಗಳ ತೇವಾಂಶ ಕಡಿಮೆ ಮಾಡಲು ಬಿಸಿಲಿನಲ್ಲಿ ಒಣಗಿಸಬೇಕು. ಕನಿಷ್ಠ 5ರಿಂದ 6 ದಿನ ಒಣಗಿಸಿದರೆ ಕೀಟಗಳು, ಮೊಟ್ಟೆಗಳು ನಾಶವಾಗುತ್ತವೆ. ಸಿಮೆಂಟ್‌ನಿಂದ ಮಾಡಿದ ಕಣದಲ್ಲಿ ಒಣಗಿಸುವುದು ಸೂಕ್ತ. ಒಣಗಿದ ಹಂತದಲ್ಲಿ ಪ್ರತಿದಿನ ಸಂಜೆ ಧಾನ್ಯಗಳನ್ನು ಗಾಳಿ ಸೇರದಂತೆ ಲೋಹದ ಅಥವಾ ಪ್ಲಾಸ್ಟಿಕ್‌ನ ದೊಡ್ಡ ಬ್ಯಾರೆಲ್‌ಗ‌ಳಲ್ಲಿ ಸಂಗ್ರಹಿಸಬೇಕು. ಬಿಸಿಲಿನಲ್ಲಿ ಚೆನ್ನಾಗಿ ಒಣಗಿಸಿದ ಧಾನ್ಯಗಳನ್ನು ಮಾತ್ರ ಸಂಗ್ರಹಣೆ ಮಾಡಬೇಕು. ಧಾನ್ಯದ ಮೇಲೆ ಮರಳನ್ನು ತುಂಬಬೇಕು. ನಂತರ ಭದ್ರವಾಗಿ ಬ್ಯಾರೆಲ್‌ ಮುಚ್ಚಬೇಕು.

-  ಕುಮಾರ ರೈತ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ