ಅಂದ ಹೆಚ್ಚಿಸುವ ಚೋಕರ್ಸ್

Team Udayavani, Aug 9, 2019, 5:28 AM IST

ಫ್ಯಾಷನ್‌ ಲೋಕದಲ್ಲಿ ಬದಲಾವಣೆ ಆಗುವುದು ಸಾಮಾನ್ಯ. ಅದರಲ್ಲಂತೂ ಹೆಂಗಳೆಯರಿಗಾಗಿಯೇ ನವ ನವೀನ ರೀತಿಯ ಆಭರಣಗಳು ಪರಿಚಯವಾಗುತ್ತಲೇ ಇರುತ್ತವೆ ಅದರ ಸಾಲಿಗೆ ಈಗ ಚೋಕರ್‌ ಕೂಡ ಸೇರಿದೆ. ಹಿಂದಿನ ಕಾಲದಲ್ಲಿದ್ದ ಫ್ಯಾಷನ್‌ ಪ್ರಸ್ತುತ ದಿನಗಳಲ್ಲಿ ಮತ್ತೆ ಮುನ್ನಲೆಗೆ ಬರುತ್ತಿದ್ದು, ಫ್ಯಾಷನ್‌ ಪ್ರಿಯರನ್ನು ಸೆಳೆಯುತ್ತಿದೆ. ಇದಕ್ಕೆ ಸೇರ್ಪಡೆಯೇ ಈ ಚೋಕರ್. ಕುತ್ತಿಗೆ ಬಿಗಿಯಾಗಿ ಸುತ್ತಿಕೊಳ್ಳುವ ಈ ಚೋಕರ್ ಆಭರಣಗಳನ್ನು ಹಿಂದಿನ ಕಾಲದಲ್ಲಿ ಮಹಿಳೆಯರು ತೊಡುತ್ತಿದ್ದರು. ಈ ಫ್ಯಾಷನ್‌ ಮತ್ತೆ ಜನಪ್ರಿಯತೆ ಪಡೆದುಕೊಂಡಿದೆ. ಮದುಮಗಳು, ಮಾಡೆಲ್ಗಳು ಇಂದು ತಮ್ಮ ಫ್ಯಾಷನ್‌ ಸ್ಟೈಲಿನಲ್ಲಿ ಈ ಚೋಕರ್ಗಳಿಗೆ ಸ್ಥಾನ ನೀಡಲಾರಂಭಿಸಿದ್ದಾರೆ.

ಯಾವುದು ಸೂಕ್ತ
ಕುತ್ತಿಗೆ ಉದ್ದ ಮತ್ತು ತೆಳ್ಳಗಿದ್ದರೆ ಅಂಥವರು ರತ್ನಗಳಿಂದ ಕೂಡಿದ ಚೋಕರ್‌ಗಳನ್ನು ಬಳಸಬಹುದು. ವಿಶಾಲವಾದ ಕುತ್ತಿಗೆ ಇದ್ದಲ್ಲಿ ಸ್ವಲ್ಪ ಸರಳವಾದದ್ದನ್ನು ಆರಿಸಿಕೊಳ್ಳುವುದು ಉತ್ತಮ. ಅಗಲ ಮುಖದವರಿಗೆ ಎಲ್ಲ ರೀತಿಯ ಕಂಠಪಟ್ಟಿಗಳು ಚೆಂದವಾಗಿಯೇ ಕಾಣುತ್ತದೆ.

ಮದುವೆ ಸಮಾರಂಭ, ಔತಣಕೂಟ, ಪಾರ್ಟಿಗೆ ಈ ಚೋಕರ್ ಸೂಕ್ತ ಆಯ್ಕೆ. ಧರಿಸುವ ಉಡುಗೆಗೆ ಸರಿಯಾದ ಚೋಕರ್ ಆಯ್ದುಕೊಂಡಲ್ಲಿ ಆಕರ್ಷಣೆಯ ಕೇಂದ್ರ ಬಿಂದು ಆಗುವುದರಲ್ಲಿ ಯಾವುದೇ ಸಂಶಯವಿಲ್ಲ.

ತಾರೆಯರಿಗೂ ಅಚ್ಚುಮೆಚ್ಚು
ತಾರೆಯರೂ ಕೂಡ ಚೋಕರ್ ಅನ್ನು ಇಷ್ಟ ಪಡುತ್ತಿದ್ದಾರೆ. ಪಾರ್ಟಿ, ಇನ್ನಿತರ ಸಮಾರಂಭಗಳಿಗೆ ಡ್ರೆಸ್‌ಗೆ ತಕ್ಕಂತೆ ಮ್ಯಾಚ್ ಮಾಡುತ್ತಿದ್ದಾರೆ. ಇವು ಪೈಬರ್‌, ಪ್ಲಾಸ್ಟಿಕ್‌ ಸೇರಿದಂತೆz ಬಂಗಾರ, ಬೆಳ್ಳಿ ಇನ್ನಿತರ ಆಭರಣದ ರೀತಿಯಲ್ಲೂ ಲಭ್ಯವಿದೆ. ಅದರಲ್ಲಿಯೂ ಹರಳುಗಳಿಂದ ವಿನ್ಯಾಸವಾದ ಚೋಕರ್‌ಗಳಿಗೆ ಡಿಮ್ಯಾಂಡ್‌.

•ಪ್ರೀತಿ ಭಟ್ ಗುಣವಂತೆ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ