ಅಂದ ಹೆಚ್ಚಿಸುವ ಮರ, ಬಿದಿರಿನ ಪೀಠೊಪಕರಣ

Team Udayavani, Sep 7, 2019, 5:13 AM IST

ಮನೆಯ ಅಂದ ಹೆಚ್ಚಿಸುವುದರಲ್ಲಿ ಬಿದಿರು, ಮರದ ಪೀಠೊಪಕರಣಗಳ ಪಾತ್ರವೂ ಮಹತ್ವದ್ದು. ಬಲಿಷ್ಠತೆ, ಗರಿಷ್ಠ ಬಾಳಿಕೆ, ಅಂದ, ನುಣುಪು, ಆಕರ್ಷಕ ಲುಕ್‌ ಇತ್ಯಾದಿ ವೈಶಿಷ್ಟ್ಯಗಳ ಈ ಪೀಠೊಪಕರಣಗಳು ಹಲವು ಬಣ್ಣ, ವಿನ್ಯಾಸಗಳಲ್ಲಿ ಇಂದು ಲಭ್ಯ.

ಹಿಂದೆಲ್ಲ ಗ್ರಾಮೀಣ ಪ್ರದೇಶಗಳ ಮನೆಗಳಲ್ಲಿ ಕಂಡುಬರುತ್ತಿದ್ದ ಬಿದಿರಿನ ಪೀಠೊಪಕರಣಗಳ ಬಳಕೆ ಈಗ ನಗರ ಜೀವನದಲ್ಲೂ ಹಾಸುಹೊಕ್ಕಾಗಿವೆ. ಮರದ ಪೀಠೊಪಕರಣಗಳು ಒಂದು ಹಂತಕ್ಕೆ ಔಟ್ಡೇಟೆಡ್‌ ಅನ್ನಿಸಿದರೂ ಈಗ ಹಾಗಿಲ್ಲ. ಫ್ಯಾಷನ್‌ ಎಂಬುದು ಎಂದೂ ಒಂದೇ ರೀತಿ ಇರುವುದಿಲ್ಲ. ಮರದ ಉತ್ಪನ್ನಗಳು ಅಗ್ಗದ ಸೊತ್ತುಗಳೂ ಅಲ್ಲ. ಸ್ಥಾನಮಾನದ ದೃಷ್ಟಿಯಿಂದಲೂ ಮರದ ಪೀಠೊಪಕರಣಗಳು ಹೆಚ್ಚುಗಾರಿಕೆ ಹೊಂದಿವೆ. ಮರ ಮತ್ತು ಬಿದಿರಿನ ಪೀಠೊಪಕರಣಗಳಲ್ಲಿ ಕಲಾತ್ಮಕತೆಗೆ ಅವಕಾಶ ಹೆಚ್ಚು. ಇದು ಮನೆಯ ಮೆರುಗನ್ನು ಹೆಚ್ಚಿಸುತ್ತದೆ.

ಆಗ್ರ್ಯಾನಿಕ್‌ ಸಿಟ್ಟಿಂಗ್‌ ರೂಂ, ಬ್ಯಾಂಬೂ ಫ್ಲೋರಿಂಗ್‌: ಮನೆ ಎಂದ ಮೇಲೆ ಲಿವಿಂಗ್‌ ರೂಂ ಅಥವಾ ಸಿಟ್ಟಿಂಗ್‌ ರೂಂ ಬಹಳ ಪ್ರಮುಖ. ಬಿದಿರಿನಿಂದ ತಯಾರಿಸಿದ ಕುರ್ಚಿ, ಸೋಫಾ ಸೆಟ್ ಇತ್ಯಾದಿ ಪೀಠೊಪಕರಣಗಳು ಲಿವಿಂಗ್‌ ರೂಂಗೆ ಉತ್ತಮ ಲುಕ್‌ ನೀಡಬಲ್ಲವು. ಅತಿಥಿಗಳ ಮನಸ್ಸಿಗೆ ಉತ್ತಮ ಅನುಭೂತಿ ನೀಡಬಲ್ಲವು. ಮರದ ಆಸನಗಳು, ಮರ ಮತ್ತು ಕುಶನ್‌-ಎರಡೂ ಇರುವ ಪಾರಂಪರಿಕ ವಿನ್ಯಾಸ ಆಸನಗಳಿವೆ. ಲಿವಿಂಗ್‌ ರೂಂಗೆ ಬಿದಿರಿನ ಫ್ಲೋರಿಂಗ್‌ ಕೂಡ ಉತ್ತಮ ಆಯ್ಕೆ. ಇದರ ನಿರ್ವಹಣೆಯೂ ಸುಲಭ. ಮರದ ಲಾಂಗ್‌ ಸೋಫಾಗಳು ಲಿವಿಂಗ್‌ ರೂಂ ಗೆ ಸೂಕ್ತ. ದೊಡ್ಡ ಮಟ್ಟದ ಕಾರ್ಯಕ್ರಮಗಳು ಮನೆಯಲ್ಲಿ ನಡೆದಾಗ ಅತಿಥಿಗಳಿಗೆ ಬೆಡ್‌ ಆಗಿಯೂ ಇವು ಉಪಯೋಗಕ್ಕೆ ಬರುತ್ತವೆ.

ಹೊರಾಂಗಣ ಆಸನಗಳು: ಯಾವುದೇ ವಾತಾವರಣಕ್ಕೆ ಸುಲಭವಾಗಿ ಹಾನಿಗೊಳಗಾಗದೆ ಇರುವುದರಿಂದ ಹೊರಾಂಗಣಕ್ಕೆ ಬಿದಿರಿನ ಪೀಠೊಪಕರಣಗಳು ಸೂಕ್ತ. ಬಿದಿರು ಮತ್ತು ಮರದ ಸಂಯೋಜನೆ ಇಲ್ಲಿ ಬಹಳ ಉತ್ತಮ. ಮನೆಯಲ್ಲಿ ಹಿರಿಯರಿದ್ದರೆ ಸಿಟೌಟ್‌ನಲ್ಲಿ ಅವರಿಗೊಂದು ಮರದ ಕುರ್ಚಿ ಬಹಳ ಗೌರವಯುತವಾಗಿ ಕಾಣುತ್ತದೆ. ಮನೆಯಲ್ಲಿ ಪುಟ್ಟ ಪಾರ್ಕ್‌ ಇದ್ದರೆ ಅಲ್ಲಿ ಬಿದಿರಿನ ಪೀಠೊಪಕರಣಗಳನ್ನು ಬಳಸಬಹುದು.

ಬಾಗಿಲು
ಮರದ ಬಾಗಿಲಿಗೆ ಅತ್ಯಂತ ಬೇಡಿಕೆ. ಅದ್ಭುತ ಕಲಾತ್ಮಕತೆಯನ್ನು ಇದರಲ್ಲಿ ತರಬಹುದು. ನುರಿತ ಬಡಗಿಗಳಿಂದ ಚಿತ್ತಾರಗಳನ್ನು ಕೆತ್ತಿಸಿದ ಬಾಗಿಲುಗಳು ಮನೆಗೆ ವಿಶೇಷ ಮೆರುಗು ನೀಡುತ್ತವೆ.

ಡ್ರೆಸ್ಸರ್‌

ಬೆಡ್‌ರೂಂನಲ್ಲಿ ಬಟ್ಟೆ, ಆಭರಣಗಳನ್ನು ನೇತುಹಾಕಲು ಬಳಕೆಯಾಗುವ, ಹಲವು ಡ್ರಾಯರ್‌ಗಳಿರುವ ಡ್ರೆಸ್ಸರ್‌ ಮರದಿಂದ ತಯಾರಾಗುತ್ತದೆ.

ಬ್ಯಾಂಬೂ ಸ್ಟಿಕ್ಸ್‌
ಮನೆಯ ಗೋಡೆಗಳನ್ನು ಬಿದಿರಿನ ಕೋಲುಗಳಿಂದ ಅಲಂಕರಿಸುವುದು ಹೊಸ ಟ್ರೆಂಡ್‌. ರೂಂ ಡಿವೈಡರ್‌ ಆಗಿಯೂ ಬಿದಿರು ಬಳಕೆಯಾಗುತ್ತದೆ. ವಿದ್ಯುತ್‌ ದೀಪಗಳನ್ನು ಬಿದಿರಿನ ಬೊಂಬುಗಳಿಗೆ ಅಳವಡಿಸಿ, ದೀಪಗಳನ್ನು ತಯಾರಿಸುವುದು, ಗೋಡೆಗಳಲ್ಲಿ ಬಿದಿರುಗಳ ಹಿನ್ನೆಲೆಯಲ್ಲಿ ವಿದ್ಯುತ್‌ ದೀಪಗಳನ್ನು ಬಳಸಿ ಮನೆಯ ಕೊಠಡಿಗಳನ್ನು ಅದ್ಭುತವಾಗಿ ಸಿಂಗರಿಸುವ ಟ್ರೆಂಡ್‌ ಕೂಡ ಇದೆ.

ಬಿದಿರಿನ ಪೀಠೊಪಕರಣಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುತ್ತವೆ ಎಂಬುದರಲ್ಲಿ ಎರಡು ಮಾತಿಲ್ಲ.

ಕಬೋರ್ಡ್‌
ಸಣ್ಣ ಸಣ್ಣ ಅಪಾರ್ಟ್‌ಮೆಂಟ್‌ಗಳಲ್ಲಿ ಸುಮಾರು 5-6 ಡ್ರಾಯರ್‌ಗಳಿರುವ ಕಬೋರ್ಡ್‌ಗಳ ಬಳಕೆ ಈಗ ಟ್ರೆಂಡ್‌. ತೀರಾ ಅಗತ್ಯದ ವಸ್ತುಗಳಿಗೆ ಇದು ಉತ್ತಮ ಸ್ಥಳ. ಸುಂದರ ವಿನ್ಯಾಸಗಳಲ್ಲಿ ಇದು ಲಭ್ಯವಾಗುವುದರಿಂದ ಮನೆಗೆ ಅಂದ. ಮಾಡರ್ನ್ ಬಾತ್‌ರೂಂಗಳಲ್ಲಿ ಸ್ನಾನದ ಸಾಮಗ್ರಿಗಳನ್ನಿಡುವುದಕ್ಕೆ ದೊಡ್ಡ ಕನ್ನಡಿ ಹೊಂದಿರುವ ಮರದಿಂದ ತಯಾರಿಸಿದ, ಬಿದಿರಿನಿಂದ ಫ್ರೇಮ್‌ ಇರುವ ಕಬೋರ್ಡ್‌ ಗಳು ಒಳ್ಳೆಯ ಲುಕ್‌ ನೀಡುತ್ತವೆ.

– ಎಸ್ಕೆ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಕೆಲವೊಂದು ಸಲ ಸೋಲು ಅನ್ನೋದು ನಮ್ಮನ್ನು ಕುಗ್ಗಿಸಿಬಿಡುತ್ತದೆ. ಇನ್ನೂ ಕೆಲವೊಮ್ಮೆ ಸೋಲು ಪಾಠ ಕಲಿಸುತ್ತದೆ. ಕೆಲವರು ಗೆದ್ದು ಸೋಲುತ್ತಾರೆ. ಹಲವರು ಸೋತು ಗೆಲ್ಲುತ್ತಾರೆ....

  • ಯಾವುದೇ ಚಿಂತೆಯಲ್ಲಿ ಮೆಲ್ಲಗೆ ಹೆಜ್ಜೆ ಹಾಕುತ್ತಿರುವಾಗ ಬೇಲಿಯಿಂದ ತೂರಿ ಬಂದ ಸುಮದ ಘಮಕ್ಕೆ ನಮ್ಮ ಮನ ಅರಳುತ್ತದೆ. ತುಂಬಿದ ರಸ್ತೆಗಳಲ್ಲಿ ಆಟವಾಡುವ ಪುಟ್ಟ...

  • ಅದೊಂದು ದಿನ ತರಗತಿಯಲ್ಲಿ ಶಿಕ್ಷಕಿ, "ಉತ್ತಮ ಬದುಕಿಗೆ ಅತ್ಯಗತ್ಯವಾಗಿ ಬೇಕಾದ ಅಂಶ ಯಾವುದು? ಒಂದು ಪದದಲ್ಲಿ ಉತ್ತರಿಸಿ' ಎಂದು ಹೇಳಿದರು. ಹಣ, ಆಸ್ತಿ, ಸಂಪತ್ತು,...

  • "ಖುಷಿಯಾಗಿದ್ದಾಗ ನಾವು ಸಂಗೀತವನ್ನು ಆಸ್ವಾದಿಸುತ್ತೇವೆ. ಆದರೆ, ದುಃಖದಲ್ಲಿದ್ದಾಗ ಅದರಲ್ಲಿನ ಸಾಹಿತ್ಯ ನಮಗೆ ಅರ್ಥವಾಗುತ್ತದೆ' ಎಂಬ ಮಾತಿದೆ. ಸಂತೋಷದ ಹಾಡುಗಳೂ...

  • ಹೌದು ಎಲ್ಲರೂ ಆಧುನಿಕತೆಯೆಂದು ತಮ್ಮ ಜೀವನವನ್ನು ಬರಿದಾಗಿಸುವಂತಹ ಕ್ಲಿಷ್ಟಕರ ಪರಿಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ. ಸಾಧನೆಯ ಮಾತು ಮರೀಚಿಕೆಯಾಗಿ...

ಹೊಸ ಸೇರ್ಪಡೆ