ಕೈ ಹಿಡಿವ ಕಡಲೆ; ನಿಶ್ಚಿತ ಕಾಸು ಕೊಡುವ ದ್ವಿದಳ ಧಾನ್ಯ


Team Udayavani, Dec 22, 2019, 4:45 AM IST

cd-33

ನಾವು ತಿನ್ನುವ ಊಟದಲ್ಲಿ ದಿನನಿತ್ಯ ಕನಿಷ್ಠ 80 ಗ್ರಾಂ.ಗಳಷ್ಟಾದರೂ ದ್ವಿದಳ ಧಾನ್ಯದ ಕಾಳುಗಳು ಇರಲೇಬೇಕು! ಹೌದು, ದ್ವಿದಳ ಧಾನ್ಯಗಳಿಗೆ ಇರುವ ಮಹತ್ತÌವೇ ಅಂಥದ್ದು. ಆಹಾರದಲ್ಲಿ ಮುಖ್ಯವಾಗಿ ಇರಬೇಕಾದ ಪ್ರೊಟೀನ್‌/ಸಸಾರಜನಕ ಅಂಶವನ್ನು ಇವು ಒದಗಿಸುತ್ತವೆ. ಕಾಳುಗಳಲ್ಲಿ 39; ಸಿ39; ಜೀವಸತ್ತ ಹೆಚ್ಚಾಗಿದ್ದು, ಇವುಗಳನ್ನು ನಿರಂತರವಾಗಿ ಸೇವಿಸಿದರೆ ಅನಾರೋಗ್ಯ ನಿಮ್ಮ ಹತ್ತಿರವೂ ಸುಳಿಯಲ್ಲ. ಈ ಹಿನ್ನೆಲೆಯಲ್ಲಿಯೇ, ಜಗತ್ತಿನಾದ್ಯಂತ ದ್ವಿದಳ ಧಾನ್ಯಗಳಿಗೆ ಅಧಿಕ ಬೇಡಿಕೆ ಇದೆ. ಅದರಲ್ಲೂ ಕಡಲೆ ರೈತರ ಕೈ ಹಿಡಿಯುತ್ತೆ. ಇದು ಹಿಂಗಾರಿನ ಬೆಳೆ. ಹೆಚ್ಚು ಮಳೆಯ ಆವಶ್ಯಕತೆ ಇಲ್ಲ. ತಂಪಾದ ವಾತಾವರಣವಿದ್ದರೆ ಸಾಕು. ಹವೆಯಲ್ಲಿನ ನೀರಿನಾಂಶವನ್ನೇ ಹೀರಿಕೊಂಡು ಬೆಳೆಯುತ್ತದೆ.

ಬೀಜ ಬಿತ್ತನೆ ಹೇಗೆ?
ಕಡಲೆಯಲ್ಲಿ ಕಂದು, ಹಳದಿ, ಕಪ್ಪು, ಬಿಳಿ ಹೀಗೆ ನಾಲ್ಕು ಬಣ್ಣದವುಗಳಿವೆ, ಒಂದೊಂದು ಪ್ರದೇಶದಲ್ಲಿ ಒಂದೊಂದು ವಿಧದ ಕಡಲೆ ಬೆಳೆಯುತ್ತಾರೆ. ಆದರೂ ಅಣ್ಣಿಗೇರಿ- 1 ಕಡಲೆ ಅತ್ಯಂತ ಜನಪ್ರಿಯ ತಳಿ. ಜೊತೆಗೆ ಬಿ.ಜಿ.ಡಿ.- 103 ಹಾಗೂ ಜೆ.ಜಿ. – 11 ಕೂಡ ಅಧಿಕ ಇಳುವರಿ ಕೊಡುವ ತಳಿಗಳು. ಮುಂಗಾರಿನ ಬೆಳೆಯ ನಂತರ ಜಮೀನನ್ನು ಎರಡು ಸಲ ಉಳುಮೆ ಮಾಡಿ ಕೊನೆಗೊಮ್ಮೆ ಕಪ್ಪು ಮಣ್ಣಿನಲ್ಲಿ ಜಮೀನಿನ ತುಂಬಾ ಮಡಿ ಆಗುವಂತೆ ಕುಂಟೆಯ ಸಹಾಯದಿಂದ ಮಣ್ಣು ಎತ್ತರಿಸಬೇಕು. ಬಿತ್ತನೆಗೆ ಎರಡು ವಾರ ಮೊದಲು ಎಕರೆಗೆ ಕೇವಲ 2- 3 ಟನ್‌ನಷ್ಟು ಕೊಟ್ಟಿಗೆ ಗೊಬ್ಬರ ಹಾಕಿ ಮಣ್ಣಿನಲ್ಲಿ ಬೆರೆಸಿ. ಮೊದಲೇ ಹೇಳಿದಂತೆ ದ್ವಿದಳ ಧಾನ್ಯಗಳಿಗೆ ರಾಸಾಯನಿಕ ಗೊಬ್ಬರಗಳ ಅವಶ್ಯ ಇಲ್ಲ. ಹೊಲ ಫ‌ಲವತ್ತಾಗಿದ್ದರೆ ಅಷ್ಟೇ ಸಾಕು, ಕೂರಿಗೆಯ ಸಹಾಯದಿಂದ ಒಂದೂವರೆ ಅಡಿ ಅಗಲದ ಸಾಲಿನಲ್ಲಿ ಅರ್ಧ ಅಡಿಗೊಂದು ಬೀಜ ಬೀಳುವಂತೆ ಬಿತ್ತನೆ ಮಾಡಿ.

ನಿರ್ವಹಣೆ ಹೇಗೆ?
ಕಡಲೆಯ ಹೊಲದಲ್ಲಿ ಹೆಚ್ಚಿನ ಕಳೆಯ ಕಾಟ ಇರಲ್ಲ. ಆದರೂ 2- 3 ಸಲ ಎಡೆಕುಂಟೆ ಹೊಡೆದು ಮಣ್ಣು ಸಡಿಲ ಮಾಡಿ, ಬಿರುಕುಗಳಿದ್ದರೆ ಮುಚ್ಚುವ ಹಾಗೆ ಮಾಡಿ. ಪ್ರತಿ ಸಲ ಎಡೆಕುಂಟೆ ಹೊಡೆಯುವಾಗ ತಂಪಾದ ವಾತಾವರಣದಲ್ಲಿ ಇಟ್ಟ ಒಳ್ಳೆ ಸಾವಯವ ಗೊಬ್ಬರ, ಎರೆಹುಳು ಗೊಬ್ಬರ ಹಾಗೂ ಮುಂಗಾರಿನ ಬೆಳೆಗಾಗಿ ತಂದ ಇತರ ಸೂಕ್ಷ್ಮ ಪೋಷಕಾಂಶಗಳು ಉಳಿದಿದ್ದರೆ ಅವುಗಳನ್ನು ಮಿಕ್ಸ್‌ ಮಾಡಿ ಎರಚಬೇಕು. ತೀರ ರಾಸಾಯನಿಕ ಗೊಬ್ಬರ ಕೊಡಲೇಬೇಕು ಅನಿಸಿದರೆ ಎಕರೆಗೆ ಹೆಚ್ಚೆಂದರೆ ಹತ್ತು ಕೇಜಿಯಷ್ಟು ಡಿ.ಎ.ಪಿ. ಗೊಬ್ಬರ ಮಾತ್ರ ಕೊಡಿ ಸಾಕು.

ಟಾಪ್ ನ್ಯೂಸ್

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

musk

Tesla; ಭಾರತದಲ್ಲಿ ಎಲಾನ್‌ ಮಸ್ಕ್ 25,000 ಕೋಟಿ ಹೂಡಿಕೆ?

voter

EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

LSG vs CSK: ಲಕ್ನೋದಲ್ಲೂ ಚೆನ್ನೈ  ಫೇವರಿಟ್‌

1-qwewqeqwe

Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ

1-kudre

Horse riding ಎಚ್ಚರಿಕೆ: ಅಪಾಯಕಾರಿ ಗ್ಲ್ಯಾಂಡರ್ಸ್‌ ಸೋಂಕು ಅಂಟಿಕೊಂಡೀತು ಹುಷಾರು!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

udayavani youtube

ಬೇಸಿಗೆಯಲ್ಲಿ ನಮ್ಮನ್ನು ಕಾಡುವ Heat Illnessಏನಿದು ಸಮಸ್ಯೆ ? ಪರಿಹಾರವೇನು ?

udayavani youtube

ದ್ವಾರಕೀಶ್ ನಿಧನಕ್ಕೆ ನಟ ಶಿವರಾಜ್ ಕುಮಾರ್ ಸಂತಾಪ

udayavani youtube

ದೇವೇಗೌಡರಿದ್ದ ವೇದಿಕೆಗೆ ನುಗ್ಗಿದ ಕಾಂಗ್ರೆಸ್‌ ಕಾರ್ಯಕರ್ತೆಯರು

udayavani youtube

ಮಂಗಳೂರಿನಲ್ಲಿ ಪ್ರಧಾನಿ ಶ್ರೀ Narendra Modi ಅವರ ಬೃಹತ್‌ ರೋಡ್‌ ಶೋ

ಹೊಸ ಸೇರ್ಪಡೆ

1-24-friday

Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

Srirangapatna: ಐಸ್‌ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ

1-wewqwq

Loksabha Election; ದೇಶದಲ್ಲಿ ಹಂತ-1: ಮತ ಇಂದು

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Ls Polls: ಕಾಂಗ್ರೆಸ್‌ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್‌

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.