Udayavni Special

ಸಾಲ ಸೌಲಭ್ಯಗಳ ಕುರಿತು ಮಾಹಿತಿ ಇರಲಿ


Team Udayavani, Feb 24, 2020, 5:47 AM IST

Injury-Value-Calculation

ಮಧ್ಯಮ ವರ್ಗದ ಜನರಿಗೆ/ಉದ್ಯೋಗಿಗಳ ಕುಟುಂಬದಲ್ಲಿ ಏನಾದರೂ ಶುಭಕಾರ್ಯ ಸಮಾರಂಭಗಳು ನಡೆಯುವುದಿದ್ದರೆ ಅದರ ಖರ್ಚುವೆಚ್ಚಗಳನ್ನು ಭರಿಸಲು ಮಧ್ಯಮ ವರ್ಗದವರು ಮೊರೆ ಹೋಗುವುದು ಸಾಲದ ಮೂಲವನ್ನು. ಆದರೆ ಹಣ ಹೊಂದಿಸಬೇಕು ಎನ್ನುವ ಜವಾಬ್ದಾರಿಯ ಒತ್ತಡದ ನಡುವೆ ಪೂರ್ವಾಪರ ಯೋಚಿಸದೇ ಸಾಲ ತೆಗೆದುಕೊಳ್ಳಲು ಮುಂದಾಗುತ್ತಾರೆ. ಆದರೆ ಬ್ಯಾಂಕ್‌ಗಳಲ್ಲಿ ದೊರೆಯುವ ವೈಯಕ್ತಿಕ ಸಾಲ ಮತ್ತು ಪ್ರಾಪರ್ಟಿ ಮೇಲಿನ ಸಾಲ ಇವೆರಡಕ್ಕೂ ಕೆಲವು ಸಾಮ್ಯತೆಗಳಿದ್ದರೂ, ಅವುಗಳದ್ದೇ ಆದ ಸಾಧಕ-ಬಾಧಕಗಳಿವೆ. ಈ ಕುರಿತ ವಿವರ ಇಲ್ಲಿವೆ.

ಏನಿದು ವೈಯಕ್ತಿಕ ಸಾಲ?
ವೈಯಕ್ತಿಕ ಸಾಲ ಎಂದರೆ ಹೆಸರೇ ಸೂಚಿಸುವಂತೆ ವೈಯಕ್ತಿಕ ಬಳಕೆಗೆ ಬ್ಯಾಂಕಿನಿಂದ ತೆಗೆದುಕೊಳ್ಳುವ ಸಾಲ. ಇದು ಅತ್ಯಂತ ಸರಳವಾಗಿದ್ದು, ನಿಮ್ಮ ವೇತನ ಅಥವಾ ಆದಾಯವನ್ನು ಅವಲಂಬಿಸಿದೆ. ಇಲ್ಲಿ ನೀವು ಯಾವ ಉದ್ದೇಶಕ್ಕಾದರೂ ಸಾಲವನ್ನು ಬಳಸಬಹುದು. ಬ್ಯಾಂಕ್‌ ಕೇಳುವುದಿಲ್ಲ. ಮನೆಗೆ ಪೀಠೊಪಕರಣಗಳ ಖರೀದಿ, ಗೃಹ ಸಾಲದ ಡೌನ್‌ಪೇಮೆಂಟ್‌, ಬಿಸಿನೆಸ್‌ ಇತ್ಯಾದಿ ವೆಚ್ಚಗಳಿಗೆ ಉಪಯೋಗಿಸಬಹುದು.

ಪ್ರಾಪರ್ಟಿ ಮೇಲಿನ
ಸಾಲ ಎಂದರೇನು?
ನೀವು ನಿಮ್ಮ ಮನೆ ಅಥವಾ ವಾಣಿಜ್ಯೋದ್ದೇಶದ ಸ್ವಂತ ಮಳಿಗೆ, ಕಟ್ಟಡ ಇದ್ದರೆ ಅದನ್ನು ಅಡಮಾನ ವಾಗಿಟ್ಟುಕೊಂಡು ಸಾಲ ಪಡೆಯ ಬಹುದು. ಇದನ್ನು ಪ್ರಾಪರ್ಟಿ ಮೇಲಿನ ಸಾಲ (loan against property / LAP) ಎನ್ನುತ್ತಾರೆ. ಪರ್ಸನಲ್‌ ಲೋನ್‌ ಅಲ್ಲಿರುವಂತೆ ಇಲ್ಲೂ ಗ್ರಾಹಕರು ಸಾಲವನ್ನು ಯಾವುದೇ ಉದ್ದೇಶಕ್ಕೆ ಬಳಸಲು ಸಾಧ್ಯವಾಗುವುದಿಲ್ಲ ಎಂಬ ಅಂಶವನ್ನು ಗಮನಿಸಬೇಕು. ವಿವಾಹ, ವೈದ್ಯಕೀಯ, ಶಿಕ್ಷಣ, ಬಿಸಿನೆಸ್‌, ಮನೆಯ ನವೀಕರಣ ಇತ್ಯಾದಿ ಉದ್ದೇಶಗಳಿಗೆ ಪ್ರಾಪರ್ಟಿ ಸಾಲವನ್ನು ಉಪಯೋಗಿಸಬಹುದು. ನಿಮ್ಮ ಬಳಿ ಸ್ವಂತ ಮನೆ ಇದ್ದು, ಅದರ ಆಧಾರದಲ್ಲಿ ಪ್ರಾಪರ್ಟಿ ಸಾಲ ತೆಗೆದುಕೊಳ್ಳುತ್ತಿದ್ದೀರಿ ಎಂದಿಟ್ಟುಕೊಳ್ಳಿ. ಸಾಲದ ಮೊತ್ತವನ್ನು ಮತ್ತೂಂದು ಸೈಟ್‌ ಖರೀದಿಸಲು ಬಳಸಲು ಅಥವಾ ಚಿನ್ನ ಕೊಳ್ಳಲು ಇಲ್ಲವೇ ಷೇರುಗಳಲ್ಲಿ ಹೂಡಿಕೆ ಮಾಡಲು ಬರುವುದಿಲ್ಲ. ಇವುಗಳನ್ನೆಲ್ಲ ಸ್ಪೆಕ್ಯುಲೇಟಿವ್‌ ಪರ್ಪಸ್‌ ಎಂದು ಬ್ಯಾಂಕ್‌ ಪರಿಗಣಿಸುತ್ತದೆ. ಪ್ರಾಪರ್ಟಿಯ ಮೌಲ್ಯ, ಸಾಲ ಮರು ಪಾವತಿಸುವ ಸಾಮರ್ಥ್ಯ, ವಯಸ್ಸು ಇತ್ಯಾದಿಯನ್ನು ಅವಲಂಬಿಸಿ ಸಾಲದ ಮೊತ್ತ ನಿಗದಿಯಾಗುತ್ತದೆ.

ಎರಡರಲ್ಲಿ
ಯಾವುದರ ಆಯ್ಕೆ ?
ವೈಯಕ್ತಿಕ ಸಾಲ ಮತ್ತು ಪ್ರಾಪರ್ಟಿ ಮೇಲಿನ ಸಾಲದಲ್ಲಿ ಅದರದ್ದೇ ಆದ ಅನುಕೂಲ ಮತ್ತು ಅನನುಕೂಲಗಳಿವೆ. ಬ್ಯಾಂಕ್‌ ಒಂದರ ಎಲ್ಲ ಶಾಖೆಗಳಲ್ಲಿಯೂ ಪ್ರಾಪರ್ಟಿ ಮೇಲಿನ ಸಾಲ ಸಿಗುವುದಿಲ್ಲ. ಆದರೆ ಪರ್ಸನಲ್‌ ಲೋನ್‌ ವ್ಯಾಪಕವಾಗಿ ಸಿಗುತ್ತದೆ. ಆದರೆ ಯಾವ ಬ್ಯಾಂಕಿನಲ್ಲಿ ನಿಮ್ಮ ವೇತನದ ಖಾತೆ ಇರುತ್ತದೆಯೋ, ಅಲ್ಲಿ ಅರ್ಜಿ ಸಲ್ಲಿಸುವುದು ಉತ್ತಮ. ಸಾಮಾನ್ಯವಾಗಿ ಬ್ಯಾಂಕ್‌ಗಳು ತಮ್ಮಲ್ಲಿ “ಸ್ಯಾಲರಿ ಅಕೌಂಟ್‌’ ಇರದ ಗ್ರಾಹಕರಿಗೆ ವೈಯಕ್ತಿಕ ಸಾಲ ಕೊಡುವುದಿಲ್ಲ. ಪ್ರಾಪರ್ಟಿಯ ದಾಖಲೆಗಳು ಸಮರ್ಪಕವಾಗಿದ್ದರೆ, ಕಾನೂನು ನಿಯಮಾವಳಿಗಳ ಪ್ರಕಾರ ಕಟ್ಟಿದ್ದರೆ, ಮನೆ ಅಥವಾ ಕಟ್ಟಡ ಹೆಚ್ಚು ಹಳೆಯದಲ್ಲದಿದ್ದರೆ ಸಾಲದ ಪ್ರಕ್ರಿಯೆ ಸುಗಮವಾಗುತ್ತದೆ. ಸಾಲದ ಮರು ಪಾವತಿ ಇತರ ಇಎಂಐಗಳಂತೆ ಇರುತ್ತದೆ. ವೈಯಕ್ತಿಕ ಸಾಲದ ಪ್ರಕ್ರಿಯೆ ಸರಳವಾಗಿದ್ದರೂ, ಪ್ರಾಪರ್ಟಿ ಆಧಾರಿತ ಸಾಲವನ್ನೂ ಮತ್ತೂಂದು ಆಯ್ಕೆಯಾಗಿ ಪರಿಗಣಿಸಬಹುದು. ಕಡಿಮೆ ಕ್ರೆಡಿಟ್‌ ಸ್ಕೊರ್‌ ಇರುವವರಿಗೆ ಎಲ…ಎಪಿ ಸೂಕ್ತವಲ್ಲ.

ಬಡ್ಡಿ ದರ ಹೇಗಿರುತ್ತದೆ?
ವೈಯಕ್ತಿಕ ಸಾಲಕ್ಕೆ ಹೋಲಿಸಿದರೆ ಪ್ರಾಪರ್ಟಿ ಸಾಲದ ಬಡ್ಡಿ ದರಗಳು ಕಡಿಮೆ. ಸರಕಾರಿ ಬ್ಯಾಂಕ್‌ಗಳಲ್ಲಿ ಪರ್ಸನಲ್‌ ಲೋನ್‌ಗೆ ಶೇ.15ರ ಆಸುಪಾಸಿನಲ್ಲಿ ಬಡ್ಡಿ ಇದ್ದರೆ, ಪ್ರಾಪರ್ಟಿ ಮೇಲಿನ ಸಾಲಕ್ಕೆ ಶೇ. 13-14ರ ಬಡ್ಡಿ ಇರಬಹುದು. ಖಾಸಗಿ ಬ್ಯಾಂಕ್‌, ಹಣಕಾಸು ಸಂಸ್ಥೆಗಳಲ್ಲಿ ವೈಯಕ್ತಿಕ ಸಾಲದ ಬಡ್ಡಿ ದರ ಶೇ.16-20ರಷ್ಟರ ತನಕವೂ ಇರಬಹುದು. ಪರ್ಸನಲ್‌ ಲೋನ್‌ಗೆ ಮರು ಪಾವತಿಯ ಅವಧಿ ಸಾಮಾನ್ಯವಾಗಿ 12ರಿಂದ 60 ತಿಂಗಳುಗಳ ತನಕ ಇದ್ದರೆ, ಎಲ…ಎಪಿಗಳಿಗೆ 15 ವರ್ಷದತನಕ ಸಿಗಬಹುದು. ಆದರೆ ದೀರ್ಘಾ ವಧಿಗೆ ಸಾಲ ತೆಗೆದುಕೊಳ್ಳುವು ದರಿಂದ ಬಡ್ಡಿಯ ವೆಚ್ಚ ಕೂಡ ಹೆಚ್ಚಳವಾಗಬಹುದು. 21ರಿಂದ 58 ವರ್ಷದ ವ್ಯಕ್ತಿಗಳಿಗೆ ವೈಯಕ್ತಿಕ ಸಾಲ ದೊರೆಯುತ್ತದೆ. ಇದಕ್ಕೆ ಕನಿಷ್ಠ ದಾಖಲೆಗಳು ಸಾಕು. ವಿಳಾಸ, ಗುರುತು,ವಯಸ್ಸಿನ ಪ್ರಮಾಣ ಪತ್ರ, ಕಳೆದ 6 ತಿಂಗಳಿನ ಬ್ಯಾಂಕ್‌ ಸ್ಟೇಟ್‌ಮೆಂಟ್‌, ಕಳೆದ ಮೂರು ತಿಂಗಳಿನ ಪೇ ಸ್ಲಿಪ್‌ ಇತ್ಯಾದಿ ಸಾಕು.

ಸಾಲದ ಮೊತ್ತ ಎಷ್ಟು?
ವೈಯಕ್ತಿಕ ಸಾಲದಲ್ಲಿ ನಿಮ್ಮ ಮಾಸಿಕ ಆದಾಯವನ್ನು ಅವ ಲಂಬಿಸಿ ಮೊತ್ತ ನಿಗದಿಯಾಗುತ್ತದೆ. ಎಲ…ಎಪಿಯಲ್ಲಿ ಸಾಮಾನ್ಯವಾಗಿ ಪ್ರಾಪರ್ಟಿಯ ಮೌಲ್ಯದ ಶೇ.40-50ರಷ್ಟು ಮೊತ್ತದ ಸಾಲ ಸಿಗಬಹುದು. ವೈಯಕ್ತಿಕ ಸಾಲದಲ್ಲಿ 15-20 ಲಕ್ಷ ರೂ. ತನಕ ಕೂಡ ಸಿಗಬಹುದು. ಇವೆರಡೂ ವಿಭಾಗದಲ್ಲಿ ಕಡಿಮೆ ಮೊತ್ತದ ಸಾಲ ಕೂಡ ಲಭ್ಯವಿದೆ. ಉದಾಹರಣೆಗೆ ಬ್ಯಾಂಕ್‌ ಒಂದು 50,000 ರೂ.ಗಳಿಂದ 15 ಲಕ್ಷ ರೂ. ತನಕ ಪರ್ಸನಲ್‌ ಲೋನ್‌ ಕೊಡುತ್ತದೆ. ಆದರೆ ತಕ್ಷಣ ಸಾಲ ಬೇಕೆಂದರೆ ವೈಯಕ್ತಿಕ ಸಾಲ ಸೂಕ್ತ. ಎಲ…ಎಪಿಯಲ್ಲಿ ಅರ್ಜಿಯ ಪರಿಶೀಲನೆ ಮತ್ತು ಇತರ ಪ್ರಕ್ರಿಯೆಗೆ ಹೆಚ್ಚು ಸಮಯ ತಗಲುತ್ತದೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್

ಲಾಕ್ ಡೌನ್ ಜೊತೆ ನೋ ಮ್ಯಾನ್ ಝೋನ್: ಮಂಗನ ಕಾಯಿಲೆ ತಡೆಗೆ ಮಲೆನಾಡಿನಲ್ಲಿ ಕ್ರಮ

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು

ಚೀನಾದಿಂದ ಹರಡಿದ Covidಗೆ ಜಾಗತಿಕವಾಗಿ ಎಷ್ಟು ಲಕ್ಷ ಕೋಟಿ ನಷ್ಟ,ನಿರುದ್ಯೋಗ ಭೀತಿ; ಮುಂದೇನು?

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಬೀದಿ ನಾಯಿಗೆ ತುತ್ತು ಹಾಕಿದ ಕ್ರಿಕೆಟಿಗ ಶೆಲ್ಡನ್ ಜಾಕ್ಸನ್‌

ಕೊಂಗಂಡಿ ಬಾಲಕಿ ಸಾವು: ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿಲ್ಲ ಎಂದು ವರದಿ

ಕೊಂಗಂಡಿ ಬಾಲಕಿ ಸಾವು: ಕೋವಿಡ್-19 ಸೋಂಕಿನಿಂದ ಸಾವನ್ನಪ್ಪಿಲ್ಲ ಎಂದು ವರದಿ

ಲಾಕ್‌ಡೌನ್‌ ಅಸ್ತ್ರ ತೋರಿಸಿಕೊಟ್ಟ ಚೀನ

ಲಾಕ್‌ಡೌನ್‌ ಅಸ್ತ್ರ ತೋರಿಸಿಕೊಟ್ಟ ಚೀನ

ಕೋವಿಡ್-19 ಸೋಂಕು ತಾಗಿದ್ದ ಗದಗದ 80ರ ವೃದ್ಧೆ ಸಾವು; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಕೋವಿಡ್-19 ಸೋಂಕು ತಾಗಿದ್ದ ಗದಗದ 80ರ ವೃದ್ಧೆ ಸಾವು; ಜಿಲ್ಲೆಯಲ್ಲಿ ಹೆಚ್ಚಿದ ಆತಂಕ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

breadfruit

ದೀವಿ ಹಲಸು ಆದಾಯಕ್ಕೂ ಲೇಸು

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

Coronavirus Lockdown : ಮಟ್ಟುಗುಳ್ಳ ಮಂದಗತಿಯ ಮಾರುಕಟ್ಟೆ Saddens Muttugulla Growers

udayavani youtube

Kundapura: ಖಾಲಿ ರಸ್ತೆಯಲ್ಲೂ ಅಪಘಾತ! CCTVಯಲ್ಲಿ ದಾಖಲಾಯ್ತು ಅಪಘಾತದ ದೃಶ್ಯ

udayavani youtube

Shivamogga ಜ್ವರದಿಂದ ಬಳಲುತ್ತಿದ್ದರೂ ಆದೇಶ ಉಲ್ಲಂಘಿಸಿ ನಮಾಜ್ ನಲ್ಲಿ ಭಾಗಿಯಾದರು

udayavani youtube

Covid 19 ಸೋಂಕು ತಡೆಗೆ ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದ ಪುರಿ ಸ್ವಾಮೀಜಿ ಸಂದೇಶ

udayavani youtube

Udyavara Jamia Masjid ಮೈಕ್ ನಲ್ಲಿ ಮೊಳಗುತ್ತಿದೆ ಕೋವಿಡ್ ಮಹಾಮಾರಿ ಜಾಗೃತಿ ಸಂದೇಶ

ಹೊಸ ಸೇರ್ಪಡೆ

ನಿತ್ಯವೂ 80 ಮಂದಿಗೆ ಅನ್ನದಾತ ಇವರು

ನಿತ್ಯವೂ 80 ಮಂದಿಗೆ ಅನ್ನದಾತ ಇವರು

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಲಗ

ಚಾರ್ಮಾಡಿ ಘಾಟಿ ರಸ್ತೆಯಲ್ಲಿ ಸಲಗ

ತುಂಬೆ ಅಣೆಕಟ್ಟಿನಲ್ಲಿ 4.88 ಮೀ. ನೀರು

ತುಂಬೆ ಅಣೆಕಟ್ಟಿನಲ್ಲಿ 4.88 ಮೀ. ನೀರು

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿರುದ್ಧ ಕ್ರಮಕ್ಕೆ ಆಗ್ರಹ

Leopard-climbs-tree

ವಿಡಿಯೋ: ಬೇಟೆಯೊಂದಿಗೆ ಅನಾಯಾಸವಾಗಿ ದೈತ್ಯಗಾತ್ರದ ಮರ ಏರಿದ ಚಿರತೆ, ನೆಟ್ಟಿಗರು ಫುಲ್ ಫಿದಾ