ತಿಗಣೆಕಾಟಕ್ಕೆ ಮನೆಮದ್ದು..

Team Udayavani, Sep 7, 2019, 5:09 AM IST

ಮನೆಗಳಲ್ಲಿ ತಿಗಣೆಯ ಕಾಟ ಬಹುದೊಡ್ಡ ಸಮಸ್ಯೆಯಾಗಿರುತ್ತವೆ. ನಾವು ಯಾವುದೇ ಕೆಮಿಕಲ್ ಅಥವ ಇತರ ಕೀಟ ನಾಶಕಗಳನ್ನು ತಂದು ಸಿಂಪಡಿಸಿದ್ದರೂ ಅವುಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗದೇ ಇರಬಹುದು. ತಿಗಣೆಗಳನ್ನು ಮನೆ ಮದ್ದುಗಳಿಂದಲೇ ಅವುಗಳನ್ನು ನಿಗ್ರಹಿಸಬಹುದು.

ರಕ್ತವನ್ನು ಕುಡಿದು ಜೀವಿಸುವ ಈ ಕೀಟ ದೇಹವನ್ನು ಕಡಿದಾಗ ನೋವಿನ ಅನುಭವವಾಗುವುದಿಲ್ಲ. ಬಳಿಕ ತೀವ್ರ ಸ್ವರೂಪದ ಉರಿ ಕಾಣಿಸಿಕೊಳ್ಳುತ್ತದೆ. ಕಡಿದ ಜಾಗ ಕೆಂಪಗಾಗುತ್ತದೆ. ಹಾಗಾದರೆ ಇದರ ನಿವಾರಣೆ ಹೇಗೆ? ಮನೆಗಳಲ್ಲಿ ಇದನ್ನು ತಡೆಯುವುದು ಹೇಗೆ ಇಲ್ಲಿದೆ ಮಾಹಿತಿ.

ಮಲಗುವ ಕೊಠಡಿಯಲ್ಲಿ
ತಿಗಣೆಗಳು ಹೊದಿಕೆ, ತಲೆದಿಂಬು, ಹಾಸಿಗೆ ಮೊದಲಾದ ಕಡೆಯಲ್ಲಿಯೂ ಅಡಗುತ್ತವೆ. ಇನ್ನು ಕೊಠಡಿಯಲ್ಲಿರುವ ಪೀಠೊಪಕರಣಗಳ ಬಡಿ ಭಾಗಗಳಲ್ಲಿ ಕಿಟಕಿಯ ಪರದೆ, ಬಟ್ಟೆಗಳ ನಡುವೆ ಮೊದಲಾದ ಕಡೆ ಕಂಡುಬರುತ್ತವೆ. ನಮ್ಮ ಕೊಠಡಿಯನ್ನು ಶುಭ್ರವಾಗಿಟ್ಟುಕೊಂಡರೆ ಇಂತಹ ಕೀಟಗಳು ಆಶ್ರಯ ಪಡೆಯುವುದನ್ನು ತಡೆಯಬಹುದು.

ಒಗೆಯುವ ಬಟ್ಟೆಗಳನ್ನು ಬಕೆಟ್‌ನೊಳಗೆ ಹಾಕುವ ಮುನ್ನ ದೊಡ್ಡ ಪ್ಲಾಸ್ಟಿಕ್‌ ಚೀಲದಲ್ಲಿ ಹಾಕಿಡಬೇಕು. ಕೊಠಡಿಯನ್ನು ಆಗಾಗ ಸ್ವಚ್ಛಗೊಳಿಸುತ್ತಾ ಇದ್ದರೆ ತಿಗಣೆಗಳಿಂದ ತಕ್ಕ ಮಟ್ಟಿನ ಮುಕ್ತಿ ಹೊಂದಬಹುದು.

ಉಪ್ಪು
ಉಪ್ಪಿನ ವಾಸನೆಯೂ ತಿಗಣೆಗಳನ್ನು ನಿವಾರಿಸಲು ಸಹಕಾರಿಯಾಗಿದೆ. ಉಪ್ಪು ಮೈಮೇಲೆ ಬಿದ್ದ ತಿಗಣೆ ಕೆಲವೇ ನಿಮಿಷಗಳಲ್ಲಿ ಸಾಯುತ್ತದೆ. ಉಪ್ಪನ್ನು ಹೆಚ್ಚಿನ ಸಾಂದ್ರತೆಯಲ್ಲಿ ನೀರಿನಲ್ಲಿ ಕರಗಿಸಿ ಈ ನೀರನ್ನು ತಿಗಣೆಗಳಿರುವ ಭಾಗದಲ್ಲೆಲ್ಲಾ ಸಿಂಪಡಿಸುವ ಮೂಲಕ ತಿಗಣೆಗಳನ್ನು ಸಾಯಿಸಬಹುದು.

ಈರುಳ್ಳಿ ರಸ
ಈರುಳ್ಳಿಯನ್ನು ಹಿಂಡಿ ರಸವನ್ನು ಸಂಗ್ರಹಿಸಿ. ಈ ರಸವನ್ನು ತಿಗಣೆ ಇರುವ ಭಾಗದಲ್ಲೆಲ್ಲಾ ಸಿಂಪಡಿಸಿದರೆ ಇದರ ಘಾಟಿಗೆ ತಿಗಣೆಗಳು ಅಡಗುತಾಣದಿಂದ ಹೊರಬಂದು ಓಡಲಾರಂಭಿಸುತ್ತವೆ. ಈ ವಿಧಾನವನ್ನು ಅನುಸರಿಸುವ ಮುನ್ನ ಕೋಣೆಯ ಎಲ್ಲಾ ವಸ್ತುಗಳನ್ನು ಬಿಸಿಲಿಗೆ ಹಾಕಿ ರಸವನ್ನು ಸಿಂಪಡಿಸಿದ ಬಳಿಕ ಕೊಠಡಿಯನ್ನು ಸ್ವಚ್ಛಗೊಳಿಸಬೇಕು.

ಬೇವಿನ ಎಣ್ಣೆ
ಬೇವಿನ ಎಣ್ಣೆಯನ್ನು ಅತಿ ಸೂಕ್ಷ್ಮಾಣುಜೀಗಳನ್ನು ನಿಗ್ರಹಿಸಲು ಬಳಸಬಹುದಾಗಿದೆ. ಬೇವಿನ ತೈಲವನ್ನು ಮನೆಯಲ್ಲಿರುವ ಎಲ್ಲ ವಸ್ತುಗಳ ಮೇಲೂ ಸಿಂಪಡಿಸಬೇಕು. ಬಟ್ಟೆಗಳನ್ನು ಗಿಡಮೂಲಿಕೆಯ ತೈಲದೊಂದಿಗೆ ಮಿಶ್ರಗೊಳಿಸಿರುವ ಡಿಟರ್ಜೆಂಟ್ ನಿಂದ ಒಗೆಯಬೇಕು. •

•ಜಯಶಂಕರ್‌ ಜೆ.


ಈ ವಿಭಾಗದಿಂದ ಇನ್ನಷ್ಟು

  • ಈಗಾಗಲೇ ಚಳಿಗಾಲ ಆರಂಭಗೊಂಡಿದ್ದು, ಅದಕ್ಕೆ ತಕ್ಕಂತೆಯೇ ಬಟ್ಟೆಗಳ ಪ್ಯಾಶನ್‌ ಕೂಡ ಬದಲಾಗುತ್ತಿದೆ. ಕೊರೆವ ಚಳಿಯಲ್ಲಿ ದೇಹವನ್ನು ಬೆಚ್ಚಗಿಡಲು ಯಾವ ರೀತಿಯ ಬಟ್ಟೆ...

  • ವಾಹನಗಳ ವ್ಯಾಪಕ ಬಳಕೆ ಬಳಿಕ ಪಿಕಪ್‌ ಕಡಿಮೆಯಾಗಿದೆ, ಆಗಾಗ್ಗೆ ನಿಲ್ಲುತ್ತದೆ, ಮೈಲೇಜ್‌ ಕಡಿಮೆ, ಹೆಚ್ಚು ಹೊಗೆ ಕಾರುವ ಸಮಸ್ಯೆಗಳು ನಿಮ್ಮ ಅನುಭವಕ್ಕೆ ಬರಬಹುದು....

  • ಕಾಲುಂಗುರ ಧರಿಸುವ ಪರಿಕಲ್ಪನೆ ಭಾರತೀಯ ಮೂಲದಿಂದ ಹುಟ್ಟಿಕೊಂಡಿದ್ದು, ಮದುವೆಯಾದ ಹೆಣ್ಣು ಕಾಲುಂಗುರವನ್ನು ಧರಿಸುವುದು ಪದ್ಧತಿ. ಸಾಮಾನ್ಯವಾಗಿ ಬೆಳ್ಳಿಯ...

  • ನಮ್ಮಲ್ಲಿ ಶೇರುಗಳನ್ನು ಕೊಂಡ ಮಾತ್ರಕ್ಕೆ ತಮ್ಮ ಕೆಲಸ ಮುಗಿಯಿತೆಂದು ಸುಮ್ಮನೆ ಕುಳಿತುಕೊಂಡುಬಿಡುವವರ ಸಂಖ್ಯೆ ಹೆಚ್ಚು. ಆದರ ಬೆಳವಣಿಗೆಯ ಬಗೆಗೆ ಹೆಚ್ಚು...

  • ಅವಧಿ, ನಿಗದಿತ ಠೇವಣಿ (ಟರ್ಮ್ ಡೆಪಾಸಿಟ್‌)ಯಿಂದ ಕಾಲಕಾಲಕ್ಕೆ ಉದಾಹರಣೆಗೆ-ತಿಂಗಳು, ಮೂರು ತಿಂಗಳು, ವಾರ್ಷಿಕ ಬಡ್ಡಿ ಬರುತ್ತಿದ್ದರೆ ಈ ಠೇವಣಿಯನ್ನು ಫಿಕ್ಸೆಡ್‌...

ಹೊಸ ಸೇರ್ಪಡೆ