ಮನೆಯಲ್ಲೀಗ ಪೇಪರ್‌ ಕ್ರಾಫ್ಟ್ , ಸ್ಟಿಕ್ಕರ್‌ಗಳದ್ದೇ ಕಾರುಬಾರು

Team Udayavani, Dec 14, 2019, 4:37 AM IST

ಮನೆ ಎಲ್ಲರ ಕನಸಿನ ಕೂಸು. ಮನೆಯನ್ನು ಬೇರೆಬೇರೆ ವಸ್ತುಗಳಿಂದ ಅಲಂಕಾರ ಮಾಡುವುದು ಇತ್ತೀಚೆಗಿನ ಟ್ರೆಂಡ್‌ಗಳಲ್ಲಿ ಒಂದಾಗಿದೆ. ಪೇಪರ್‌ ಕ್ರಾಫ್ಟ್ಗಳ ಮೂಲಕವೂ ಮನೆಯನ್ನು ಅಂದವಾಗಿ ಡಿಸೈನ್‌ ಮಾಡಬಹುದಾಗಿದೆ. ಪೇಪರ್‌ ಅಥವಾ ಬೇರೆ ಬೇರೆ ವಿಧದ ಬಣ್ಣದ ಕಾಗದಗಳ ಮೂಲಕ ಮನೆಯಲ್ಲಿರುವ ವಿವಿಧ ವಸ್ತಗಳನ್ನು ಅಲಂಕರಿಸುವುದು ಇಲ್ಲಿನ ವಿಶೇಷತೆ. ಅದರ ಜತೆಗೆ ವಾಲ್‌ ಸ್ಟಿಕ್ಕರ್‌ಗಳು ಇತ್ತಿಚೆಗೆ ಹೆಚ್ಚು ಗಮನ ಸೆಳೆಯುತ್ತವೆ. ಮನೆಯ ಖಾಲಿ ಗೋಡೆಗಳಿಗೆ ಸ್ಟಿಕ್ಕರ್‌ಗಳ ಮೂಲಕ ಜೀವ ತುಂಬಬಹುದು. ಅಂದದ ಜತೆಗೆ ಮನಸ್ಸಿಗೆ ಖುಷಿಯನ್ನೂ ಇವುಗಳು ನೀಡುತ್ತವೆ.

ಮನೆಯ ವಸ್ತುಗಳಿಗೆ ಪೇಪರ್‌ ಕವರ್‌
ಇತ್ತೀಚೆಗೆ ಗೂಡು ದೀಪ, ನಕ್ಷತ್ರಗಳೆಲ್ಲ ಪ್ಲಾಸ್ಟಿಕ್‌ನಿಂದ ಪೇಪರ್‌ನತ್ತ ವಾಲುತ್ತಿರುವುದು ಎಲ್ಲರಿಗೂ ತಿಳಿದಿರುವ ವಿಷಯವೇ. ಅದನ್ನೇ ಮನೆ ಅಲಂಕಾರದಲ್ಲೂ ಬಳಸಬಹುದು. ಬಣ್ಣದ ಕಾಗದಗಳಲ್ಲಿ ಇಂತಹ ನಕ್ಷತ್ರಗಳನ್ನು ತಯಾರಿಸಿ ಮನೆಯ ಎದುರು ನೇತಾಡಿಸಬಹುದು. ಮನೆಯ ಬಲ್ಬ್ಗಳು ಕಣ್ಣಿಗೆ ಕುಕ್ಕುವಂತಿದ್ದರೆ ಅದಕ್ಕೆ ಕಾಗದಗಳ ಕವರ್‌ ಮಾಡಿ ಬೆಳಕನ್ನು ಮಂದವಾಗಿಸಬಹುದು. ಮಲಗುವ ಕೋಣೆ, ಡೈನಿಂಗ್‌ ಹಾಲ್‌ಗ‌ಳಿಗೆ ಈ ಐಡಿಯಾವನ್ನು ಬಳಸಬಹುದು.

ರಟ್ಟಿನ ಬಾಕ್ಸ್‌ಗಳಿಗೂ ಪೇಪರ್‌ ಹೊದಿಕೆಯನ್ನು ಮಾಡಬಹುದು. ರಟ್ಟಿನ ಬಾಕ್ಸ್‌ ಗೆ ಇದರಿಂದ ಬಣ್ಣ ತುಂಬಿ ಕಲರ್‌ಫ‌ುಲ್‌ ಆಗಿ ಕಾಣಿಸಿಕೊಳ್ಳುತ್ತದೆ. ಪೆನ್‌ ಬಾಕ್ಸ್‌ ಅಥವಾ ಇತರ ವಸ್ತುಗಳನ್ನು ಹಾಕಿಡುವ ಡಬ್ಬಗಳಿಗೂ ಪೇಪರ್‌ ಕ್ರಾಫ್ಟ್ನಿಂದ ಅಲಂಕರಿಸಬಹುದು,

ಗೋಡೆಗಳಿಗೆ ಸ್ಟಿಕ್ಕರ್‌
ಸ್ಟಿಕ್ಕರ್‌ ಎಂಬ ಕಾನ್ಸೆಪ್ಟ್ ತೀರಾ ಇತ್ತೀಚಿಗಿನದಾದರೂ ಅದು ಎಲ್ಲರ ಮನೆಗಳನ್ನು ಆಕ್ರಮಿಸಿಕೊಂಡಿದೆ. ಖಾಲಿ ಇರುವ ಗೋಡೆ ಅಥವಾ ಮನೆಯ ಖಾಲಿ ಇರುವ ಜಾಗಗಳಿಗೆ ಈ ಸ್ಟಿಕ್ಕರ್‌ಗಳನ್ನು ಹಾಕುವುದರಿಂದ ಖಾಲಿ ಜಾಗ ಕಾಣಿಸುವುದಿಲ್ಲ ಎಂದು ಮಾತ್ರವಲ್ಲ ಮನೆಯೂ ಅಂದವಾಗುತ್ತದೆ. ಟಿವಿ ಕಪಾಟಿನಲ್ಲಿ ಡಿಸೈನ್ಸ್‌, ಗೋಡೆಯಲ್ಲಿ ಗಿಟಾರ್‌, ಬಾಗಿಲಿನಲ್ಲಿ ಶಂಖ, ಮಲಗುವ ಕೋಣೆಯ ಇಂಟೀರಿಯರ್‌ಗೆ ನಕ್ಷತ್ರ, ಚಂದ್ರನ ಸ್ಟಿಕ್ಕರ್‌ಗಳನ್ನು ಹಾಕಿ ಅಲಂಕರಿಸಬಹುದು. ಇವುಗಳಲ್ಲಿ ಭಿನ್ನ ಭಿನ್ನ ಸ್ಟಿಕ್ಕರ್‌ಗಳು ಲಭ್ಯವಾಗುತ್ತವೆೆ. ಕೆಲವೊಂದು ಬಿಳಿ ಗೋಡೆಯಲ್ಲಿ ಹೊಳೆಯುತ್ತಿದ್ದರೆ ಇನ್ನು ಕೆಲವು ಸ್ಟಿಕ್ಕರ್‌ಗಳು ರಾತ್ರಿ ಹೊಳೆಯುವಂಥವುಗಳು. ಆಯ್ಕೆ ಅವರವರ ಇಷ್ಟದಂತಿರುತ್ತದೆ,

ಮನೆಯಲ್ಲಿ ಮಾಡುವ ಸಣ್ಣ ಸಣ್ಣ ಅಲಂಕಾರಗಳು ಮನೆಯ ಅಂದವನ್ನು ಹೆಚ್ಚಿಸುವುದರ ಜತೆಗೆ ಮನಸ್ಸಿಗೂ ಆನಂದವನ್ನು ನೀಡುತ್ತದೆ. ಎಲ್ಲದಕ್ಕಿಂತ ಹೆಚ್ಚಾಗಿ ಮನೋಲ್ಲಾಸ ಮುಖ್ಯವಾಗಿರುವುದರಿಂದ ಮನೆಯನ್ನು ಅದರಂತೆ ಜೋಡಿಸೋಣ.

-  ಸುಶ್ಮಿತಾ ಶೆಟ್ಟಿ ಸಿರಿಬಾಗಿಲು

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಸಮಸ್ಯೆ ಯಾವುದೇ ಇರಲಿ, ಇಷ್ಟಾರ್ಥ ಕಾರ್ಯವಿರಲಿ, ಕೇವಲ 5 ದಿನಗಳಲ್ಲಿ ಪರಿಹಾರಕ್ಕಾಗಿ ಇಂದೇ ಭೇಟಿ ನೀಡಿ
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ಜೀವನದಲ್ಲಿ ಎಲ್ಲದಕ್ಕಿಂತಲೂ ಸಂತೋಷ ಬಹಳ ಮುಖ್ಯ. ಅದೊಂದು ಇಲ್ಲವೆಂದಾದರೆ ಉಳಿದೆಲ್ಲ ಇದ್ದರೂ ಎಲ್ಲವೂ ಶೂನ್ಯವೆನಿಸುತ್ತದೆ. ಕೆಲವೊಮ್ಮೆ ನಾವು ಅನೇಕ ದುಗುಡಗಳನ್ನು...

  • ಜೀವನ ಎನ್ನುವುದು ಅನಿಶ್ಚಿತತೆಗಳ ಆಗರ. ಇಂದು ಇರುವಂತೆ ನಾಳೆ ಇರುವುದಿಲ್ಲ. ಅದು ಖುಷಿ ಆಗಿರಲಿ, ದುಃಖ ಆಗಿರಲಿ ಮಡುಗಟ್ಟಿರುವುದಿಲ್ಲ. ದಿನ ಉರುಳಿದಂತೆ ಅದು ಬದಲಾಗುತ್ತದೆ....

  • ಭಾರತವೂ ಶರಣರ, ಮಹಾತ್ಮರ, ಆಧ್ಯಾತ್ಮಿಕ ಚಿಂತಕರ, ಮಹಾಪುರುಷರು ಹುಟ್ಟಿದ ನಾಡು. ದೇಶದ ಕಟ್ಟುವ ಕೈಂಕರ್ಯದಲ್ಲಿ ಇವರ ಮಾರ್ಗೋಪದೇಶಗಳು ಪ್ರಮುಖ ಪಾತ್ರ ವಹಿಸಿವೆ....

  • ಈ ಜಗತ್ತಿನಲ್ಲಿ ಹೊಸತು ಯಾವುದು? ಏನೂ ಇಲ್ಲ. ಹಾಗಾದರೆ ಹಳತು ಯಾವುದು? ಅದೂ ಇಲ್ಲ. ಎಲ್ಲವೂ ಯಾವಾಗಲೂ ಇದೆ, ಯಾವಾಗಲೂ ಇದ್ದೇ ಇರುತ್ತದೆ. ಶಿರಡಿ ಶ್ರೀ ಸಾಯಿಬಾಬಾ ಪವಾಡ...

  • ನನ್ನ ಒತ್ತಡ ಕಳೆದುಕೊಳ್ಳುವ ತಂತ್ರವೆಂದರೆ ಸಮುದ್ರದ ಎದುರು ಹೋಗಿ ಕುಳಿತುಕೊಳ್ಳುವುದು. ಸದಾ ಸಾಗರವನ್ನು ಕಂಡರೆ ನನ್ನೆಲ್ಲ ದುಃಖಗಳು, ಕಷ್ಟಗಳು ಕರಗಿ ಹೋಗುತ್ತವೆ....

ಹೊಸ ಸೇರ್ಪಡೆ