ಮಧುಚಂದ್ರ ಕಾಲ…ಈ ಬಾರಿಯ ಪಯಣ

Team Udayavani, Jan 16, 2020, 5:23 AM IST

ನವದಂಪತಿ ಪರಸ್ಪರ ಅರಿಯಲು, ರೊಮ್ಯಾಂಟಿಕ್‌ ಕ್ಷಣಗಳನ್ನು ಮತ್ತಷ್ಟು ಮಧುರವಾಗಿಸಲು ಹನಿಮೂನ್‌ ಗೆ ತೆರಳುತ್ತಾರೆ. ಏಕಾಂತದಿಂದ ಜೋಡಿ ಹಕ್ಕಿಗಳಾಗಿ ವಿಹರಿಸುವ ಕ್ಷಣಗಳವು. ಈ ಅನುಭವವೂ ಸುಮಧುರ ಮಯವಾಗಿರಬೇಕೆಂದರೆ ತಾಣವೂ ಸೇರಿದಂತೆ ಎಲ್ಲದರ ಬಗ್ಗೆ ಪೂರ್ವ ಮಾಹಿತಿ ಇರಬೇಕು. ವ್ಯವಸ್ಥಿತವಾದ ಯೋಜನೆಯೂ ಇರಬೇಕಾದುದು ಅವಶ್ಯ ಎನ್ನುತ್ತಾರೆ ಕಾರ್ತಿಕ್‌ ಅಮೈ.

ನಿಸರ್ಗಕ್ಕೆ ಇರುವ ಶಕ್ತಿಯೆಂದರೆ ಎಲ್ಲವನ್ನೂ ತನ್ನೊಳಗೆ ಒಳಗೊಳ್ಳುವುದು ಹಾಗೂ ಎಲ್ಲವನ್ನೂ ತನ್ನತ್ತ ಸೆಳೆದುಕೊಳ್ಳುವುದು. ಇಂಥ ಅಗೋಚ ರವಾದ ಶಕ್ತಿ ಬೇರೆ ಯಾವುದರಲ್ಲೂ ಇಲ್ಲ. ಹಾಗಾಗಿಯೇ ಪ್ರಕೃತಿಯ ಎದುರು ಎಲ್ಲವೂ ಸುಂದರವಾಗಿಯೇ ಕಾಣುತ್ತದೆ.

ಸುಂಯ್‌ಗಾಡುತ್ತಾ ಬೀಸುವ ತಣ್ಣನೆಯ ಗಾಳಿ, ಪಕ್ಷಿಗಳ ಇಂಚರ, ನದಿಯ ಜುಳು ಜುಳು ನಾದ- ಎಲ್ಲವೂ ಹೊಸತಾಗಿಯೇ ತೋರುತ್ತವೆ. ದಾಂಪತ್ಯದ ಬದುಕಿಗೆ ಆಗಮಿಸಿದ ನವ ದಂಪತಿಯೂ ಮಧುಚಂದ್ರಕ್ಕೆ ತೆರಳುವುದು ಇಂಥ ಸೌಂದರ್ಯವನ್ನು ಮನಸ್ಸಿನೊಳಗೆ ತುಂಬಿಕೊಳ್ಳಲೆಂದೇ. ಅದಕ್ಕಾಗಿಯೇ ಬಹಳ ಹಿತ ಕರವಾದ ಅನುಭವ ನೀಡುವಂಥ ತಾಣಗಳನ್ನೇ, ಅತ್ಯಂತ ಸುಂದರವಾಗಿರುವ ಪ್ರದೇಶಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ತಣ್ಣನೆಯ ಗಾಳಿ ಬೇಕು, ಹಾಗೆಂದೆ ಮೈ ಕೊರೆದು ಹೋಗುವ ಚಳಿ ಇರಬಾರದು. ಬಿಸಿಲಿರಲಿ, ಹಾಗೆಂದು ತಲೆ ಗಿರ್ರನೆ ತಿರುಗಿಸುವಷ್ಟು ಅಲ್ಲ..ಹೀಗೆ ಎಲ್ಲವೂ ಇರ ಬೇಕು. ಆದರೆ ಹಿತಕರವಾದ ನೆಲೆಯಲ್ಲಷ್ಟೇ.

ರಾಜ್ಯದಲ್ಲಿ ಮಧು ಚಂದ್ರಕ್ಕೆ ಹೇಳಿ ಮಾಡಿಸಿದ ತಾಣಗಳು ಬಹಳಷ್ಟಿವೆ. ಪ್ರವಾಸ ಎಂದರೆ ನಮಗೆ ಅರಿವಿರದ ಊರನ್ನು ನೋಡುವುದೆಂಬ ಸಾಮಾನ್ಯ ಅರ್ಥವೂ ಇದೆ. ಆದ ಕಾರಣಕ್ಕಾಗಿ ನವ ದಂಪತಿಗಳು ಆಯ್ದು ಕೊಳ್ಳುವುದು ಬೇರೆ ರಾಜ್ಯಗಳ ತಾಣಗಳನ್ನು. ಹಿಮಾಚಲ ಪ್ರದೇಶದ ಶಿಮ್ಲಾ ಕುಲು, ಮನಾಲಿಯೋ, ಉತ್ತರಾಖಂಡದ ಕೆಲವು ಸ್ಥಳಗಳು, ತಮಿಳುನಾಡಿನ ಊಟಿ ಎಲ್ಲವೂ ಬಹಳ ಜನಪ್ರಿಯ ತಾಣಗಳಾಗಿವೆ.

ಕೊಡಗು
ಕೊಡಗನ್ನು ಭಾರತದ ಸ್ಕಾಟ್ಲಾಲ್ಯಾಂಡ್ , ಕರ್ನಾ ಟಕದ ಕಾಶ್ಮೀರ ಎಂದೂ ಕರೆಯಲಾಗುತ್ತದೆ. ಈ ಪ್ರದೇಶವು ನಿತ್ಯಹರಿದ್ವರ್ಣ ಅರಣ್ಯ, ಸುಂದರ ಹಸಿರು ಕಣಿವೆಗಳು, ಮಂಜಿನ ಗುಡ್ಡಗಳು, ಕಾಫಿ/ಟೀ ಎಸ್ಟೇಟ್‌ ಗಳು, ಕಿತ್ತಳೆ ತೋಟಗಳಿವೆ. ಮುಂಜಾ ನೆಯ ಮಡಿಕೇರಿ ಮಂಜು ಮತ್ತು ಕತ್ತಲಾಗುತ್ತಿದ್ದಂತೆ ಚಳಿ ಹಿತವಾದುದು. ಈ ಚಳಿಗಾಲದ ಸಮಯ ಬಹಳ ಸೂಕ್ತ. ಮಳೆ ನೋಡುವವರಿಗೂ ಕೊಡಗು ಇಷ್ಟವಾಗುತ್ತದೆ.

ಅಲೆಪ್ಪಿ
ಮಧುಚಂದ್ರಕ್ಕೆ ಶಾಂತಿಯುತ, ಪ್ರಶಾಂತ ಸ್ಥಳ ಅಲೆಪ್ಪಿಯಲ್ಲಿದೆ. ಎಲ್ಲಿ ನೋಡಿದರೂ ಹಚ್ಚ ಹಸುರಿ ನಿಂದ ಕೂಡಿರುತ್ತದೆ. ಇಲ್ಲಿನ ತಾಳೆ ಮರ ಗಳ ಮಧ್ಯೆ ನೆಲೆಗೊಂಡಿರುವ ಹಿನ್ನೀರು ದಂಪತಿಗೆ ಹೇಳಿ ಮಾಡಿ ಸಿದೆ. ತೇಲುವ ಮನೆ ದೋಣಿಗಳಲ್ಲಿ ನಿಮ್ಮ ಸಂಗಾತಿಯೊಂದಿಗೆ ಕಾಲ ಕಳೆಯುವುದೇ ಹೊಸ ಅನುಭವ.

ಎಲ್ಲವೂ ಇವೆ
ಇಲ್ಲಿ ನೀಡಲಾದ ಎಲ್ಲಾ ಸ್ಥಳಗಳಲ್ಲಿ ಹನಿಮೂನ್‌ ಪ್ಯಾಕೇಜ್‌ಗಳು ಲಭ್ಯ ಇವೆ. ನಮ್ಮಲ್ಲಿ ಎಲ್ಲರಿಗೂ ಉತ್ತರ ಭಾರತ ಅಥವಾ ವಿದೇಶಗಳಿಗೆ ತೆರಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ನಮ್ಮ ಮಧ್ಯೆ ಇರುವ ಅತ್ಯುನ್ನತ ಪ್ರದೇಶಗಳನ್ನೇ ನೀಡಲಾಗಿದೆ. ಇಲ್ಲಿ ರೆಸಾರ್ಟ್‌ಗಳು, ಹೋಂ ಸ್ಟೇಗಳು ಇವೆ. ಆಹಾರವೂ ಲಭ್ಯ. ಸ್ಥಳೀಯ ಆಹಾರವನ್ನು ಸವಿಯಲು ಮರೆಯಬೇಡಿ. ಈ ತಾಣಗಳ ಇನ್ನಷ್ಟು ಮಾಹಿತಿ ಅಂತರ್ಜಾಲದಲ್ಲಿ ಲಭ್ಯವಿದೆ.

ನಮ್ಮ ಟಿಪ್ಸ್‌
ಇಬ್ಬರೂ ಒಮ್ಮತ ಸ್ಥಳಗಳನ್ನು ಆಯ್ಕೆ ಮಾಡಿಕೊಳ್ಳಿ. ಅಗತ್ಯ ವಸ್ತುಗಳನ್ನು ಪಟ್ಟಿ ಮಾಡಿಕೊಳ್ಳಿ. ಬೋಟಿಂಗ್‌ ಇದ್ದರೆ ಮತ್ತು ಅಲ್ಲಿನ ಭೌಗೋಳಿಕತೆಗೆ ಅನುಸಾರವಾಗಿ ಬಟ್ಟೆಗಳನ್ನು ಧರಿಸಿ. ಸ್ಥಳದ ಕುರಿತು ಸರಿಯಾಗಿ ಮಾಹಿತಿ ಪಡೆದು ಪ್ರೇಕ್ಷಣೀಯ ಸ್ಥಳಗಳಿಗೆ ಹತ್ತಿರವಾಗುವಂತೆ ರೆಸಾರ್ಟ್‌ ಅಥವ ಹೋಂ ಸ್ಟೇ ಬುಕ್‌ ಮಾಡಿ. ಹನಿಮೂನ್‌ ಸಮಯದಲ್ಲಿ ಹೆಂಡತಿ/ಗಂಡನಿಗೆ ಅಚ್ಚರಿ ಮೂಡುವಂತೆ (ಸರ್ಕಸ್‌) ಉಡುಗೊರೆಯನ್ನೂ ಕೊಡಲು ಮರೆಯದಿರಿ. ಇದು ನಿಮ್ಮ ಮಧುಚಂದ್ರವನ್ನು ಮತ್ತಷ್ಟು ಸುಖಕರ ಮಾಡಿಕೊಳ್ಳಿ.

ಮನಾಲಿ
ಮನಾಲಿ ಚಳಿಗಾಲದ ಮಧುಚಂದ್ರದ ತಾಣಗಳಿಗೆ ಉತ್ತಮ. ಪ್ಯಾರಾಗ್ಲೆ„ಡಿಂಗ್‌, ಹೈಕಿಂಗ್‌, ಸ್ಕೀಯಿಂಗ್‌, ವೈಟ್‌ ವಾಟರ್‌ ರ್ಯಾಫ್ಟಿಂಗ್‌ ಮೊದಲಾದ ವಿವಿಧ ಚಟುವ ಟಿಕೆಗ ಳಲ್ಲಿ ಪಾಲ್ಗೊಳ್ಳಬಹುದು. ಸಹಜವಾಗಿ ಇದು ಮಂಜಿ ನಿಂದ ಆವೃತ್ತವಾದ ಬೆಟ್ಟದ ಇಳಿಜಾರುಗಳನ್ನು ಹೊಂದಿದೆ. ಹನಿ ಮೂನ್‌ ಸಂಭ್ರಮಕ್ಕೆ ಮಂಜು ಮತ್ತು ಚಳಿ ಹೊಸ ಭಾಷ್ಯ ಬರೆಯುತ್ತದೆ.

ಮುನ್ನಾರ್‌
ಮುನ್ನಾರ್‌ ಭಾರತದ ಹನಿಮೂನ್‌ ರಾಜಧಾನಿ . ಇದು ಅಪರೂಪದ ಹವಾಗುಣ, ಹಿತವಾದ ಪರಿಸರ, ಆಹ್ಲಾದಕರ ಗಾಳಿಯನ್ನು ಹೊಂದಿದೆ. ಇದು ನಿಮ್ಮ ಹನಿಮೂನ್‌ಗೆ ಉತ್ತಮ ಆರಂಭವನ್ನು ನೀಡುತ್ತದೆ. ಮುನ್ನಾರ್‌ ಹಚ್ಚಹ ಸುರಿನ ಜತೆಗೆ ನಿತ್ಯಹರಿದ್ವರ್ಣ ಕಾಡು ಗಳನ್ನು ಹೊಂದಿದ್ದು, ಮಧುಚಂದ್ರದ ದೀರ್ಘ‌ಕಾಲ ಉಳಿ ಯುವಂತೆ ಮಾಡುತ್ತದೆ. ಮಾತ್ರವಲ್ಲದೆ ಹಿತ ವಾದ ಚಳಿ ಮೈ ಮರೆಸುತ್ತದೆ.

ಚಿಕ್ಕಮಗಳೂರು
ಚಿಕ್ಕಮಗಳೂರು ಪಶ್ಚಿಮ ಘಟ್ಟದ ತವರು. ದಟ್ಟ ಅರಣ್ಯ ಗಳಿಂದ ಕೂಡಿದ ಕೇಂದ್ರವಾಗಿದೆ. ಆಕರ್ಷಕ ಪ್ರವಾಸಿ ತಾಣ ಗಳು, ಕಾಫಿ ತೋಟಗಳು ಇಲ್ಲಿನ ಆಕರ್ಷಣೆಯಾಗಿದೆ. ಹಿತ ವಾದ ಚಳಿ ಇಲ್ಲಿ ಇದ್ದು, ಹನಿಮೂನ್‌ ಸಂಭ್ರಮದ ದಂಪತಿಗೆ ಸೊಗಸಾದ ಅನುಭವವನ್ನು ಇದು ಕಟ್ಟಿಕೊಡುತ್ತದೆ. ನವಿರಾದ ಅರಣ್ಯದ ಗಿಡ ಮರಗಳು ಮನದಲ್ಲಿ ಶೃಂಗಾರ ರಸ ಉಕ್ಕಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.

ಉದ್ಮಲ್‌ ಪೇಟ್‌
ಉದ್ಮಲ್‌ಪೇಟ್‌ ಪ್ರವಾಸಿಗರ ಕಣ್ಮಣಿಯಾಗಿದೆ. ತಮಿಳು ನಾಡಿನಲ್ಲಿ ಊಟಿ ಬಳಿಕ ಇರುವ ಮತ್ತೂಂದು ಈ ತಾಣ ಹೆಚ್ಚು ಸುದ್ದಿ ಪಡೆಯಲಿಲ್ಲ. ಆದರೆ ಊಟಿಗಿಂತ ಯಾವು ದರಲ್ಲಿಯೂ ಹಿಂದೆ ಇಲ್ಲ. ಮುಂಜಾನೆ ಮಂಜಿನಲ್ಲಿ ಸುತ್ತುವುದೇ ಒಂದು ಸೊಬಗು. ವಿಹಾರಕ್ಕೆ ಬೇಕಾದ ಅನೇಕ ತಾಣಗಳು ಇಲ್ಲಿವೆ. ಮುಂಜಾನೆ ಜಿನುಗೋ ಮಂಜಿನ ಹನಿಯ ನಡುವೆ ಸಣ್ಣಗೆ ನಡಗುತ್ತಾ ಸಂಗಾತಿಯೊಡನೆ ಸುತ್ತಾಡಲು ಈ ಸ್ಥಳ ಉತ್ತಮ ವಾಗಿದೆ. ಊಟಿಯಿಂದ 20 ಕಿ.ಮೀ ದೂರದಲ್ಲಿರುವ ಕುಕ ನೂರಿಗೆ ಸಣ್ಣ ರೈಲಿನಲ್ಲಿ ಹೋಗಿ ಬರಬೇಕು. ಆ ಅನುಭವವೇ ಅನನ್ಯ. ನೀಲಗಿರಿ ಬೆಟ್ಟದ ಸೌಂದರ್ಯವನ್ನು ಕಣ್ತುಂಬಿ ಕೊಳ್ಳಲು ಈ ರೈಲಿನಲ್ಲಿ ಹೋಗಬೇಕು.

ಬ್ಯಾಂಕಾಕ್‌
ಥಾಯ್ಲೆಂಡಿನ ರಾಜಧಾನಿ ಬ್ಯಾಂಕಾಕ್‌ ಇತ್ತೀಚಿನ ವರ್ಷಗಳಲ್ಲಿ ಮದುವೆಯಾದ ಹೊಸಜೋಡಿಗಳ ಅತ್ಯಂತ ಫೇವರಿಟ್‌ ಹನಿಮೂನ್‌ ತಾಣವಾಗಿದೆ. ಅಲ್ಲಿನ ಫ‌ುಕೆಟ್‌, ಕೋಹ್‌ ಸಮುಯ್‌ ಸುಂದರವಾದ ಜಾಗವಾಗಿದೆ. ಸ್ಪಟಿಕದಷ್ಟು ಸ್ವತ್ಛವಾದ ನೀರು ಅಲ್ಲಿದೆ. ಅಲ್ಲಿನ ಆದರಾತಿಥ್ಯ ಹೊಸ ಜೋಡಿಗಳಿಗೆ ಅಚ್ಚಳಿಯದ ಹೊಸ ಅನುಭವ ನೀಡುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

  • ದೀವಿ ಹಲಸು. ಎಲ್ಲ ಉಷ್ಣ ವಲಯ ಪ್ರದೇಶಗಳಲ್ಲಿ ಬೆಳೆಯುವ ಬೆಳೆಯಿದು. ಮಲಯ ದ್ವೀಪ ಸಮೂಹಗಳ ಮೂಲ ಆಗಿದ್ದು, ಭಾರತದ ನಾನಾ ಭಾಗದಲ್ಲಿ ಇದನ್ನು ಕಾಣಬಹುದು. ವಿವಿಧ ಖಾದ್ಯ...

  • ಹೇರಳ ಆರೋಗ್ಯವರ್ಧಕ ಗುಣಗಳಿರುವ ದಾಳಿಂಬೆಯನ್ನು ಉಪಬೆಳೆಯಾಗಿ ಕೃಷಿ ಮಾಡಬಹುದು. ಮೂಲತಃ ಇರಾನ್‌ ದೇಶಕ್ಕೆ ಸೇರಿರುವ ದಾಳಿಂಬೆಯನ್ನು ಭಾರತದಲ್ಲೂ ಹಲವಾರು ವರ್ಷಗಳಿಂದ...

  • ಕೈಕಾಲುಗಳು ಸಣ್ಣದಾಗಿ, ಹೊಟ್ಟೆ ದೊಡ್ಡದಾಗಿ, ಅದರ ಮೈಮೇಲಿನ ಕೂದಲು ನುಣುಪು ಕಳೆದುಕೊಂಡು ಒರಟಾಗಿ ಕಾಣಿಸತೊಡಗಿದರೆ, ಆ ದನ ತೀವ್ರ ಅಪೌಷ್ಟಿಕತೆಯಿಂದ ಬಳಲುತ್ತಿದೆ...

  • "ಅರೇ ಇದೇನಿದು?'ಎಂದು ಯೋಚಿಸಿದ್ದೀರಾ?ತುಂಬಾ ಸರಳ. ಮನೆ ಸುತ್ತ ಮುತ್ತ ಜಾಗದಲ್ಲಿ ಗಿಡಗಳನ್ನು ಬೆಳೆಸಿದರಾಯಿತು. ಮನೆ ಚಿಕ್ಕದು, ಅಂಗಳ ಇಲ್ಲದಿದ್ದರೂ ಚಿಂತೆ ಇಲ್ಲ....

  • ಸಾಮಾನ್ಯವಾಗಿ ಎಲ್ಲರೂ ಮನೆಯ ಅಂದವನ್ನು ಹೆಚ್ಚಿಸಲು, ಸುಂದರವಾಗಿ ಕಾಣಲು ಬಯಸುತ್ತಾರೆ. ಸೋಫಾ, ಲೈಟ್ಸ್‌, ಇನ್ನಿತರ ಅಲಂಕಾರಿಕ ವಸ್ತುಗಳಿಂದ ಮನೆಯನ್ನು ವಿನ್ಯಾಸಗೊಳಿಸುತ್ತೇವೆ....

ಹೊಸ ಸೇರ್ಪಡೆ