ಕ್ಷಮೆ ಕೇಳುತ್ತಿದ್ದೇನೆ..ಮನ್ನಿಸಿ ಬಿಡು!

Team Udayavani, Apr 15, 2019, 6:00 AM IST

“Sorry”, “Thank you ಪದ ಬಳಸಬೇಕು ಅಥವಾ ಇನ್ನೊಬ್ಬರಿಂದ ಪಡೆದ ಉಪಕಾರಕ್ಕೆ ಧನ್ಯವಾದ ಸಲ್ಲಿಸಬೇಕಾದ ಪರಿಸ್ಥಿತಿ ಎದುರಾದಾಗ ಮನಸ್ಸಿನಲ್ಲಿ ದೊಡ್ಡ ಮಟ್ಟದಲ್ಲಿ ಹೊಯ್ದಾಟವೇ ನಡೆಯುತ್ತದೆ. ಅದರಲ್ಲೂ ಧನ್ಯವಾದವನ್ನಾದರೂ ಹೇಳಿ ಬಿಡುತ್ತೇವೆ. ಆದರೆ Sorry ಕೇಳ್ಳೋದು ತುಂಬಾ ಕಷ್ಟವೆನಿಸುವುದುಂಟು. ಈ ಎರಡು ಪದಗಳು ಸಂಬಂಧಗಳನ್ನು ಗಟ್ಟಿಗೊಳಿಸುತ್ತದೆ, ಮಾತ್ರವಲ್ಲ. ಮುರಿಯುವ ಹಂತಕ್ಕೆ ತಲುಪಿದ ಸಂಬಂಧಗಳನ್ನು ಉಳಿಸುತ್ತದೆ. ಧನ್ಯವಾದವಾಗಿರಲಿ ಅಥವಾ ಕ್ಷಮಾಪಣೆಯೇ ಇರಲಿ ಕೇಳಲು ಸಮಯ, ಸಂದರ್ಭ ಎಂಬುದಿರುತ್ತದೆ. ವಿಳಂಬ ಮಾಡಿದರೆ ಆ ಪದಗಳು ಅರ್ಥವನ್ನೇ ಕಳೆದುಕೊಂಡು ಬಿಡಬಹುದೇನೋ?

6ನೇ ತರಗತಿಯಲ್ಲಿದ್ದಾಗ ನಡೆದ ಘಟನೆ. ಕ್ಲಾಸ್‌ ಲೀಡರ್‌ ಆಗಿದ್ದ ನನಗೆ ಟೀಚರ್‌ ಬರದೇ ಇದ್ದಾಗ ತರಗತಿಯ ಶಿಸ್ತು ಕಾಪಾಡುವ ಜವಾಬ್ದಾರಿ ಇತ್ತು. ಮಧ್ಯಾಹ್ನ ಒಬ್ಬರು ಉಪನ್ಯಾಸಕರು ತರಗತಿಗೆ ಬಂದಿರಲಿಲ್ಲ. ಹೀಗಾಗಿ ಸಹಪಾಠಿಗಳು ಮಾತು, ಹರಟೆಯಲ್ಲಿ ನಿರತರಾಗಿದ್ದರು. ನಾನು ಎಷ್ಟು ಹೇಳಿದರೂ ಯಾರೂ ಕೇಳಲಿಲ್ಲ. ನನ್ನ ಗೆಳತಿ ಮಾತ್ರ ತನ್ನಷ್ಟಕ್ಕೇ ಪುಸ್ತಕ ತೆರೆದು ಓದುತ್ತಿದ್ದಳು. ನಮ್ಮ ತರಗತಿಯ ಗಲಾಟೆ ಕೇಳಿ ಗಣಿತ ಮೇಷ್ಟ್ರು ಬಂದು ನನ್ನಲ್ಲಿ ಯಾರು ಗಲಾಟೆ ಮಾಡಿದ್ದು, ಯಾರು ಮಾತನಾಡುತ್ತಿದ್ದದ್ದು ಎಂದು ಪ್ರಶ್ನಿಸಿದರು. ಕೂಡಲೇ ನನಗೆ ಏನು ಹೇಳಬೇಕೆಂದು ತೋರದೆ ಎಲ್ಲರೂ ಮಾತನಾಡುತ್ತಿದ್ದರು ಎಂದು ಬಿಟ್ಟೆ. ಹೀಗಾಗಿ ಎಲ್ಲರ ಕೈಗೂ ಬೆತ್ತದ ಏಟು ಜತೆಗೆ ಒಂದು ಕಷ್ಟಕರವಾದ ಗಣಿತದ ಲೆಕ್ಕವನ್ನು ಬಿಡಿಸಲು ಸೂಚಿಸಿದರು. ಇದರಿಂದ ಬೇಸರಗೊಂಡ ನನ್ನ ಗೆಳತಿ ನಾನು ಮಾಡದ ತಪ್ಪಿಗೆ ನನಗೂ ಶಿಕ್ಷೆ ಕೊಡಿಸಿದೆ ಎಂದು ಮುನಿಸಿಕೊಂಡಳು. ನನಗೆ ಏನು ಮಾಡಬೇಕು ಎಂದು ತೋರಲಿಲ್ಲ. ಮತ್ತೆ ಅವಳು ನನ್ನಲ್ಲಿ ಮಾತನಾಡಲೇ ಇಲ್ಲ. ನಾನು ತುಂಬಾ ಬಾರಿ ಅವಳಲ್ಲಿ ಕ್ಷಮೆ ಕೇಳಬೇಕು ಎಂದುಕೊಂಡೆ. ಆದರೆ ಅದಕ್ಕೆ ಅವಳು ಅವಕಾಶ ಕೊಡಲಿಲ್ಲ. ನಾನೂ ಅವಕಾಶ ಸೃಷ್ಟಿಸಿಕೊಳ್ಳಲಿಲ್ಲ. ಕೆಲವು ದಿನಗಳ ಅನಂತರ ಆಟವಾಡುತ್ತಿದ್ದಾಗ ಬಿದ್ದು ಪೆಟ್ಟು ಮಾಡಿಕೊಂಡ ನನ್ನನ್ನು ಅವಳೇ ಮುಂದೆ ಬಂದು ಉಪಚರಿಸಿ, ಹೊರಟು ಹೋದಳು. ಅವಳ ಆ ನಿಸ್ವಾರ್ಥ ಭಾವಕ್ಕೆ ದಂಗಾಗಿ ಹೋದ ನನಗೆ ಆ ಕ್ಷಣದಲ್ಲಿ ಅವಳಿಗೆ ಧನ್ಯವಾದ ಹೇಳಲೂ ತೋಚಲಿಲ್ಲ. ಹೀಗಾಗಿ ನನ್ನ ಕ್ಷಮೆಯಾಗಲಿ, ಧನ್ಯವಾದವಾಗಲಿ ಅವಳನ್ನು ತಲುಪಲೇ ಇಲ್ಲ. ಬಾಲ್ಯದಿಂದಲೂ ಆತ್ಮೀಯರಾಗಿದ್ದ ನಾವು ಬದುಕಿನ ಹಾದಿಯಲ್ಲಿ ದೂರವಾದೆವು.

ಎಷ್ಟೋ ಬಾರಿ ಅನ್ನಿಸುವುದಿದೆ ನಾನು ಕ್ಷಮೆ ಕೇಳಿ ಅಥವಾ ಧನ್ಯವಾದ ಹೇಳಿದ್ದರೆ ಗೆಳತಿ ಇನ್ನೂ ಜತೆಗೆ ಉಳಿದಿಯುತ್ತಿದ್ದಳೇನೋ..? ಇರಲಿ, ಇಲ್ಲಿಂದಲೇ ಅವಳ ತಪ್ಪಲ್ಲದ ತಪ್ಪಿಗೆ ಶಿಕ್ಷೆ ಕೊಡಿಸಿದ್ದಕ್ಕೆ ಕ್ಷಮೆ ಹಾಗೂ ಗಾಯಗೊಂಡ ನನಗೆ ಮಾನವೀಯ ನೆಲೆಯಲ್ಲಿ ಉಪಚರಿಸಿದ್ದಕ್ಕೆ ಧನ್ಯವಾದಗಳು.

– ವಿದ್ಯಾ ಕೆ. ಇರ್ವತ್ತೂರು


ಈ ವಿಭಾಗದಿಂದ ಇನ್ನಷ್ಟು

 • ನಗರ ವ್ಯಾಪ್ತಿಯ ನಾಗರಿಕ ಸಮಸ್ಯೆಗಳ ನಿಮ್ಮ ದನಿಗೆ ನಮ್ಮ ದನಿ ಸೇರಿಸುವ ಪ್ರಯತ್ನ ಈ ಸುದಿನ ಜನದನಿ. ಓದುಗರು ತಮ್ಮ ಪ್ರದೇಶದ ರಸ್ತೆ, ನೀರು, ಸ್ವತ್ಛತೆ, ನೈರ್ಮಲ್ಯ,...

 • ಒಂದೂರಿನಲ್ಲಿ ಒಬ್ಬ ವ್ಯಕ್ತಿಯಿದ್ದ. ಸರಿಸುಮಾರು 70 ವರ್ಷವಾಗಿರಬಹುದು. ಸದಾ ಖುಷಿ ಖುಷಿಯಲ್ಲಿರುತ್ತಿದ್ದ. ಅವನನ್ನು ಕಂಡವರಿಗೆಲ್ಲಾ ಅಚ್ಚರಿ. ಹೇಗೆ ಈತ ಸದಾ ನಗುತ್ತಿರುತ್ತಾನೆ? ಈ...

 • ಆಸ್ಟ್ರೇಲಿಯದ ಒಂದು ವಿಶ್ವ ವಿದ್ಯಾನಿಲಯದಲ್ಲಿ ಕೆಲವು ವರ್ಷಗಳ ಹಿಂದೆ ನಡೆದ ಒಂದು ಸಂಶೋಧನೆ ಕುತೂಹಲಕಾರಿಯಾಗಿದೆ. ಮನಸ್ಸಿನ ಒತ್ತಡ ವನ್ನು ಕಡಿಮೆ ಮಾಡಿಕೊಳ್ಳು...

 • ನಿಜಕ್ಕೂ ಬದುಕು ಬಂಗಾರ.ಬಂಗಾರವೂ ತನ್ನ ಹೊಳಪು ಕಳೆದುಕೊಳ್ಳುವು ದುಂಟು.ಹಾಗೆಯೇ ನೇತ್ಯಾತ್ಮಕ ಆಲೋಚನೆಗಳಿಂದ ನಮ್ಮ ಬದುಕೂ ಹೊಳಪು ಕಳೆದುಕೊಳ್ಳುತ್ತದೆ. ಆಗ...

 • ರಾತ್ರಿ ಬಸ್‌ನಲ್ಲಿ ಬೆಂಗಳೂರಿಗೆ ಹೊರಟಿದ್ದೆ. ಆರಂಭದಲ್ಲಿ ಪಯಣ ಸುಖಕರವಾಗಿತ್ತು. ಬಸ್‌ ಯಾವಾಗ ಸುಳ್ಯ ದಾಟಿತೋ ಆಗ ಚಳಿ ಶುರುವಾಗತೊಡಗಿತು. ಹೊರಡುವ ಗಡಿಬಿಡಿಯಲ್ಲಿ...

ಹೊಸ ಸೇರ್ಪಡೆ

 • ಮಂಗಳೂರು : ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಗುರುವಾರ ಬಿರುಸಿನ ಮತ್ತು ಶಾಂತಿಯುತ ಮತದಾನವಾಗಿದ್ದು, ಒಟ್ಟು ಶೇ.77.78ರಷ್ಟು ಪ್ರಮಾಣದ ಮತದಾನವಾಗಿದೆ. 2014ಕ್ಕೆ...

 • ಚಿಕ್ಕಮಗಳೂರು: ಮತ ಚಲಾಯಿಸದೆ ಮೋಜು ಮಸ್ತಿಗಾಗಿ ಜಿಲ್ಲೆಗೆ ಆಗಮಿಸಿದ್ದ ಪ್ರವಾಸಿಗರಿಗೆ ಜಿಲ್ಲಾ ಪತ್ರಕರ್ತರ ಸಂಘ ಗುರುವಾರ ಹಾರ ಹಾಕಿ, ಶಹಬ್ಟಾಸ್‌ ಗಿರಿ ನೀಡಿ...

 • ಕೋಟ: ಕೋಟ ಹೋಬಳಿಯ ಕೋಟತಟ್ಟು, ಪಾರಂಪಳ್ಳಿಗುಡ್ಡಿಶಾಲೆ, ಕಾವಡಿ, ಗುಂಡ್ಮಿ ಮತಕೇಂದ್ರದಲ್ಲಿ ಮತಯಂತ್ರದಲ್ಲಿ ದೋಷ ಉಂಟಾಗಿ ಮತಚಲಾವಣೆಗೆ ಸ್ವಲ್ಪ ಸಮಸ್ಯೆ ಯಾಯಿತು. ಕೋಟತಟ್ಟು...

 • ಕಲಬುರಗಿ: ಕಲಬುರಗಿ ಲೋಕಸಭಾ ಕ್ಷೇತ್ರದ ಎಂಟು ವಿಧಾನಸಭೆ ಕ್ಷೇತ್ರಗಳಲ್ಲಿ ಅತಿ ಹೆಚ್ಚು ಮತದಾರರಿರುವ ಹಾಗೂ ಅಲ್ಪಸಂಖ್ಯಾತರೆ ಹೆಚ್ಚಿರುವ ಕಲಬುರಗಿ ಉತ್ತರ ಕ್ಷೇತ್ರದಲ್ಲಿ...

 • ಕುಷ್ಟಗಿ: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರವಾಗಿ ಸಚಿವ ಡಿ.ಕೆ.ಶಿವಕುಮಾರ್‌ ಅವರ ನಿಲುವಿಗೆ ನಮ್ಮ ಸಂಪೂರ್ಣ ಸಮ್ಮತಿ ಇದೆ ಎಂದು ಶಾಸಕ ಅಮರೇಗೌಡ ಪಾಟೀಲ ಬಯ್ನಾಪುರ...

 • ದಾವಣಗೆರೆ: ಪ್ರತಿ ವರ್ಷದಂತೆ ಈ ವರ್ಷವೂ ಮಾಜಿ ಸಚಿವ ಎಸ್‌.ಎಸ್‌.ಮಲ್ಲಿಕಾರ್ಜುನ್‌ ಹಳೇಪೇಟೆ ಶ್ರೀ ವೀರಭದ್ರೇಶ್ವರ ಕೆಂಡ ಹಾಯುವ ಮೂಲಕ ಗಮನ ಸೆಳೆದರು. ಹಳೇಪೇಟೆ...