20ರಲ್ಲಿ ಹೂಡಿಕೆ ಮಾಡಿ 50ರಲ್ಲಿ ಅನುಭವಿಸಿ

Team Udayavani, Jan 27, 2020, 5:17 AM IST

ಇಂದಿನ ಯುವ ಜನತೆ ಕೈಯಲ್ಲಿ ಹಣ ಇದ್ದರೆ ಸಾಕು ಖರ್ಚು ಮಾಡುವ ನಾನಾ ಮಾರ್ಗಗಳನ್ನು ಹುಡುಕುತ್ತಾರೆಯೇ ಹೊರತು ಭವಿಷ್ಯದಲ್ಲಿ ಅವುಗಳ ಉಪಯೋಗದ ಬಗ್ಗೆ ಕಿಂಚಿತ್ತೂ¤ ಯೋಚಿಸುವುದಿಲ್ಲ. 20ನೇ ವಯಸ್ಸಿ ನಲ್ಲೇ ಹೂಡಿಕೆ ಆರಂಭಿಸಿದರೆ 50 ವಯಸ್ಸಿಗೆ ಚಿಂತೆಯಿಲ್ಲದೆ ಬದುಕಬಹುದು ಎಂಬ ಸಣ್ಣ ಲೆಕ್ಕಾಚಾರ ಮನದಲ್ಲಿದ್ದರೇ ಇಂದಿನ ಯುವ ಜನಾಂಗ ಹೂಡಿಕೆ, ಉಳಿತಾಯದ ಕಡೆ ಮುಖ ಮಾಡಬಹುದೇನೋ.

ಐಆರ್‌ಎ ಆರಂಭಿಸಿ
ಒಂದು ವೇಳೆ ನೀವು ಉದ್ಯೋಗದಲ್ಲಿದ್ದರೇ ನಿಮ್ಮ ಕಂಪೆನಿಯಲ್ಲಿ ವೈಯಕ್ತಿಕ ನಿವೃತ್ತಿ ಖಾತೆ (ಐಆರ್‌ಎ)/ ತೆರಿಗೆ ಅನೂಕೂಲ ನಿವೃತ್ತಿ ಯೋಜ ನೆಗಳು ಇರುತ್ತವೆ. ಅದರಲ್ಲಿ ತತ್‌ಕ್ಷಣ ನಿಮ್ಮ ಹೆಸರಿನಲ್ಲಿ ಖಾತೆ ತೆರೆಯಿರಿ. ನಿವೃತ್ತಿ ಯ ವೇಳೆ ತೆರಿಗೆ ಮುಂದುಲ್ಪಡುವುದು ಮಾತ್ರವಲ್ಲದೇ ನಿಮ್ಮ ಕೊಡುಗೆಯ ಕೆಲವು ಶೇಕಡಾವಾರಿಗೆ ಕಂಪೆನಿ ಕೂಡ ಕೊಡುಗೆಗಳನ್ನು ನೀಡುತ್ತದೆ.

ಆಕ್ರಮಣಕಾರಿಯಾಗಿರಿ
30 ಅಥವಾ 40ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆಗಿಂತ 25ನೇ ವಯಸ್ಸಿನಲ್ಲಿ ಮಾಡುವ ಹೂಡಿಕೆ ನಮ್ಯತೆಯನ್ನು ಹೊಂದಿರುತ್ತದೆ. ಬಹುಬೇಗನೆ ನಿಮ್ಮ ಹೂಡಿಕೆಯ ಆಯ್ಕೆ ಮೇಲೆ ಆಕ್ರಮಣಕಾರಿಯಾಗಿರುವಂತೆ ಮಾಡುತ್ತದೆ ಮತ್ತು ಯಾವುದಾದರೂ ಹೂಡಿಕೆ ನಷ್ಟದಿಂದ ಹೊರಬರಲು ಸಾಕಷ್ಟು ಸಮಯ ಗಳಿರುತ್ತವೆ.

ತುರ್ತು ನಿಧಿ
ವಿಮಾ ಪಾಲಿಸಿಗಳು ಆಪದ್ಬಾಂಧವನ ಹಾಗೇ ಕಾರ್ಯ ನಿರ್ವಹಿಸುತ್ತವೆ. ಇಂದಿನಿಂದ ಲೇ ವಿಮಾ ಪಾಲಿಸಿಗಳಲ್ಲಿ ಹೂಡಿಕೆ ಮಾಡಿ ಮುಂದೆ ಅನಾರೋಗ್ಯ, ಇತ್ಯಾದಿ ಸಮಸ್ಯೆ ಗಳು ಉಂಟಾದಾಗ ಅವುಗಳು ನಿಮ್ಮ ಕೈ ಹಿಡಿಯು ವುದರಲ್ಲಿ ಅನುಮಾನವಿಲ್ಲ. ನಿಮ್ಮ 6 ತಿಂಗಳ ನಿಗದಿತ ಆದಾಯಕ್ಕೆ ಸಮಾನವಾಗಿ ತುರ್ತು ನಿಧಿ ಇದ್ದರೆ ಒಳ್ಳೆಯದು.

ನಂಬಿಕಸ್ಥ ಹೂಡಿಕೆ
ಹೂಡಿಕೆ ಮಾಡುವ ಸಂದರ್ಭದಲ್ಲಿ ನಂಬಿ ಕಸ್ಥ ಸಂಸ್ಥೆಗಳ ಮೇಲೆ ಹೂಡಿಕೆ ಮಾಡಬೇಕು. ತಪ್ಪಿದಲ್ಲಿ ಬಹಳಷ್ಟು ನಷ್ಟ ಅನುಭವಿಸಬೇಕಾ ಗುತ್ತದೆ. ಹೂಡಿಕೆ ಮಾಡುವ ಮುನ್ನ ಅನೇಕ ಕಡೆಗಳಲ್ಲಿ ವಿಚಾರಿಸಿ, ಅನೇಕ ವೆಬ್‌ಸೈಟ್‌ಗಳಲ್ಲಿ ಹುಡುಕಾಡಿ ಸರಿ ನಿರ್ಧಾರಕ್ಕೆ ಬರುವುದು ಉಳ್ಳೆಯದು.

ಉತ್ತಮ ಅಭ್ಯಾಸವಿರಲಿ
ಹಣ ಉಳಿಸುವುದು ಎಂದರೆ ಗುರಿ ನಿರ್ಧರಿ ಸುವುದು ಮತ್ತು ಆ ಗುರಿಯನ್ನು ತಲುಪಲು ನಿರಂತರವಾಗಿ ಶಿಸ್ತಿನಿಂದಿರುವುದು. ಹೂಡಿಕೆ ಯೋಜನೆಗೆ ಈ ಅಭ್ಯಾಸಗಳು ಅತೀ ಮುಖ್ಯ ನಮ್ಮ ಮುಂದಿನ ಆವಶ್ಯಕತೆಗಳಿಗಾಗಿ ಇಂದು ಉಳಿತಾಯವನ್ನು ಮಾಡಲೇಬೇಕು. 30-40 ವಯಸ್ಸಿನಲ್ಲಿ ಹೂಡಿಕೆ ಆರಂಭಿಸಿ ದಾಗ ಸಿಗುವ ಮೊತ್ತಗಿಂತ 25ನೇ ವಯಸ್ಸಿನಲ್ಲಿ ಆರಂಭಿ ಸುವ ಹೂಡಿಕೆಯಲ್ಲಿ ಲಭಿಸುವ ಲಾಭ ಅಧಿಕ. ಹೀಗಾಗಿ ಇಂದೇ ಹೂಡಿಕೆ/ ಉಳಿತಾಯದ ಕುರಿತು ಯೋಜನೆ ರೂಪಿಸಿಕೊಳ್ಳಿ.

25ರಲ್ಲೇ ಹೂಡಿಕೆ
ಮಾಡುವುದು ಹೇಗೆ? 25ನೇ ವಯಸ್ಸಿನಲ್ಲಿ ಹೂಡಿಕೆ ಮಾಡಲು ಯಾವುದೇ ಜಾದೂ, ಟ್ರಿಕ್‌ಗಳ ಆವಶ್ಯಕತೆ ಇಲ್ಲ. ಇದಕ್ಕೆ ಬೇಕಾ ಗಿರುವುದು ಉತ್ತಮ ಹೂಡಿಕೆ ಯೋಜನೆ ಮತ್ತು ಹೂಡಿಕೆಯನ್ನು ನಿಯಮಿತವಾಗಿ ಮಾಡುತ್ತಿರುವುದು. ಉಳಿತಾಯ ಗರಿಷ್ಠಗೊ ಳಿಸಿ ಹೂಡಿಕೆಯನ್ನು ಆಯ್ಕೆ ಮಾಡಿಕೊಳ್ಳುವ ಸಾಮರ್ಥ್ಯ. ಕೊನೆಯದಾಗಿ ಸಮಯ. ಸೂಕ್ತ ಹಣಕಾಸಿನ ಉಳಿತಾಯಕ್ಕೆ ಒಂದೊಳ್ಳೆ ಹಣ ಕಾಸಿನ ಯೋಜನೆ ಸಹಾಯಕವಾಗುತ್ತದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ